ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮರಗಳನ್ನು ಉಳಿಸಿ ವಿಡಿಯೋ ನೋಡಿ.....

ಕಳೆದ ಹಲವಾರು ದಿನಗಳಿಂದ ಲಾಲ್ ಬಾಗ್ ಮತ್ತು ನಂದಾ ರೋಡ್ ನಲ್ಲಿ ಮೆಟ್ರೊ ಕಾಮಗಾರಿಯ ವಿರುದ್ದ "ಹಸಿರು ಉಸಿರು" ಕಾರ್ಯಕರ್ತರು ಹಾಗೂ ಹಲವಾರು ಸ್ವಯಂಸೇವಾ ಸಂಸ್ಥೆಯವರು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಈ ಪ್ರತಿಭಟನೆಗೆ ಹಲವಾರು ಸ್ವಯಂಸೇವಕರು, ನಾಗರೀಕರು, ಹಾಗೂ ಮಾದ್ಯಮದವರು ಉತ್ತಮ ಪ್ರತಿಕ್ರಿಯೆಯನ್ನುಸಹ ನೀಡಿ ಸಹಕಾರವನ್ನು ನೀಡಿದ್ದಾರೆ.

ಕಲ್ಪನಾ ವಿಲಾಸ

ನನ್ನ ಕಲ್ಪನೆ ಹರಿಬಿಡುವನಿದ್ದೇನೆ ನಾನು ಜ್ಯೋತಿಷಿ ಅಲ್ಲ ಆದರೂ ಮೇ ೧೭ ರಂದು ಪತ್ರಿಕೆಗಳ ಹೆಡ್ ಲೈನ್ ಏನಿರುತ್ತೆ
ಗೊತ್ತಿಲ್ಲ ಕಲ್ಪನೆ ಸಹ ಮಾಡಲಾಗುತ್ತಿಲ್ಲ ಏಕೆಂದರೆ ರಾಜಕೀಯ ಹಾಗೆ ತಾನೇ...! ಇರಲಿ ನಾನು ನಮ್ಮ ನೇತಾರರ ಪ್ರತಿಕ್ರಿಯೆ ಹೇಗಿರಬಹುದು ನಾ ಸಂದರ್ಶನ ಮಾಡಿದೆ ಅವರ ಹೇಳಿಕೆ ಹೀಗಿವೆ....!

ನೆನಪಾಗುವೆ ನೀನು.....

ಹೊ೦ಬೆಳಕ ಕ೦ಬಳದಿ ಮಿ೦ದು ಮಡಿಯಾಗಿ
ಹೂವು ಹಸಿರುಗಳ ಸೀರೆ ಸುತ್ತಿದ ಸಿರಿ ನೀರೆಯಾಗಿ
ಹೊಳೆವ ರಶ್ಮಿಯ ಸಿ೦ಚನದೆ ನೆನೆದು ಮೄದುವಾಗಿ
ಹಕ್ಕಿಗಳು ಹಾಡಿದ ಶಕುನ ಗಾನದೆ ನಲಿದವಳಾಗಿ
ನಸುಕಿನಲಿ ನಾಚುತ್ತ ಭೂರಮೆಯು ಅರಳಿರಲು
ನೆನಪಾಗುವೆ ನೀನು.......

ಮೊದಲ ಮಳೆಗೆ ಇಳೆಯು ನೆನೆಯೆ ಹಾರಿ ಬ೦ದ ವಾಸನೆ
ಮೋಡ ಕರಗಿ ಧಾರೆ ಇಳಿದು ಬರಲು ನೂರಾರು ಭಾವನೆ

ಟೆಕ್ ಸುದ್ದಿ - ನಿಮಗಿದು ಗೊತ್ತೇ? - ೨

ಓಪನ್ ಆಫೀಸ್ ಗೆ ಮೇಕಪ್ ಮಾಡ್ತಾರಂತೆ

 ಹೌದು ಓಪನ್ ಆಫೀಸ್ ಸಮುದಾಯದ ಸದಸ್ಯರು ಈಗಾಗ್ಲೇ ಸ್ವಲ್ಪ ಮೇಕಪ್ ಹಚ್ಚೋಣ, ಅದು ಹೇಗಿರ್ಬೇಕು ಅಂತ ರಿಪೋರ್ಟ್ ಕೂಡ ರೆಡಿ ಮಾಡ್ಕೊಂಡು ಅದನ್ನೆಲ್ಲಾ OpenOffice.org ನಲ್ಲಿ ಪೇರಿಸ್ಲಿಕ್ಕೆ ಶುರುಮಾಡಿದ್ದಾರೆ. 

ಪಾಡ್ಕಾಸ್ಟ್ : ನೇತ್ರದಾನ - ಹೇಗೆ? ಯಾವಾಗ? ಎಲ್ಲಿ?

ಕಣ್ಣಿಲ್ಲದ ಕಷ್ಟ ಕಣ್ಣಿರುವ ನಮಗೆ ಊಹಿಸುದು ಅಸಾಧ್ಯವೇ. ಚಿಕ್ಕಂದಿನಲ್ಲಿ ನಾವು ದಿನವಿಡೀ ಮೌನವಾಗಿರುವ ಒಂದು ಆಟ(?)ವಾಡುತ್ತಿದ್ದೆವು. ನೀವೊಮ್ಮೆ ಮಾಡಿನೋಡಿದರೆ ಗೊತ್ತಾಗಬಹುದು. ಇಡೀ ದಿನ ಬಿಡಿ, ಒಂದೆರಡು ಘಂಟೆ ಸುಮ್ಮನಿರುವುದು ಭಯಂಕರ ಕಷ್ಟ. ಕಣ್ಣು, ಕಿವಿ, ಮೂಗು, ಬಾಯಿಗಳೆಲ್ಲ ಸರಿಯಾಗಿದ್ದರೆ ಅದರಿಂದ ದೊಡ್ಡ ವರ ಬೇರೊಂದಿಲ್ಲ.
ಹೀಗಿರುವಾಗ, ನಮ್ಮ ನಂತರಕ್ಕೆ ಬೇರೊಬ್ಬರಿಗೆ ನಮ್ಮ ಕಣ್ಣು ಬೆಳಕಾಗಬಹುದಾದರೆ ಅದು ಹೇಗೆ? ಯಾವಾಗ? ತೆಗೆದುಕೊಳ್ಳಬೇಕಾದ ಕ್ರಮಗಳೇನು?
ಮೊನ್ನೆ ಆಕಸ್ಮಿಕವಾಗಿ ನನ್ನ ಸಂಬಂಧಿ ನೇತ್ರತಜ್ನರಾದ ಡಾ|ವಿಶ್ವನಾಥ ಭಟ್ ಕಾನಾವು ಅವರ ಜೊತೆ ನೇತ್ರದಾನದ ಬಗ್ಗೆ ನಾನು ಮತ್ತು ಭಾವ ಪ್ರವೀಣ ಶಂಕರ್ ಚರ್ಚಿಸುತ್ತಿದ್ದೆವು.

ಒಗಟಿನ ಜ್ವರ

ಆಫೀಸ್ನಾಗ್ ಕೆಲ್ಸ್ ಮುಗ್ಸಿ
ಮನೆಗ್ಬಂದು ಮೈಮುರ್ದು
ಸಂಪದದ್ದಗ್ ಪದವಾಡೋಣಾಂದ್ರೆ
ಬಂತ್ನೋಡ್ಪಾ ಜ್ವರ!

ಕಾಮೆಂಟಾಕಾಂಗಿಲ್ಲಾ
ಲೇಖನಬರ್ಯಾಂಗಿಲ್ಲ
ಪಟಬಿಡಿಸ್ಕ್ಲಿಕ್ಮೊದ್ಲೇ ಆಗಲ್ಲ
ಬ್ಲಾಗಂತೂ ಇನ್ನೂ ಇಲ್ವೇ ಇಲ್ಲ.

ಹೆದರ್ಬ್ಯಾಡ್ರಿ, ಹೆದರ್ಬ್ಯಾಡಿ
ಜ್ವರ ನನ್ಗೂ ಅಲ್ಲ
ನಮ್ಮೂರ್ನಲ್ ಎಮ್ಮಿಲ್ಲ
ಮತ್ತದಾರ್ಗದು ಜ್ವರಾಂತೇಳ್ಬಿಡಿ ನೋಡುವ...

Mothers' day

ಅಮೆರಿಕೆಯ NPR ರೇಡಿಯೋ ಬಾತ್ಮೀದಾರ ಸ್ಕಾಟ್ ಸಿಮೋನ್ ಮಾತೆಯರ ದಿನದಂದು ಬರೆದ ಪ್ರಬಂಧದ ಅನುವಾದ.

ನಾನಿರುವಲ್ಲಿ ದಿನವೂ ಮಾತೆಯರ ದಿನ.
ನನ್ನ ಪತ್ನಿ ಕೆಲಸಕ್ಕೆ ಹೋಗುವುದಿಲ್ಲ. ಆಕೆ ಪೂರ್ಣ ಸಮಯ ತಾಯಿ. ಬೆಳಗ್ಗಾದ ಕೂಡಲೇ ಮಮ್ಮ ಮಮ್ಮ ಎಂದು ಚೀರುವ ೨ ವರ್ಷದ ಮಗಳನ್ನು ಒಂದು ಕೈಯಲ್ಲಿ ಎತ್ತಿಕೊಂಡು ಮತ್ತೊಂದು ಕಾಯ್ಯಿಂದ ಹಾಲು ಕಾಯಿಸಲು ಅಡುಗೆ ಮನೆಗೆ ಹೋಗುತ್ತಾಳೆ.

ಅಯೊಡಿನ್ ಹೆಸರಿನ ಮಹಾದ್ರೋಹ!!!!

ಅಯೊಡಿನ್‍ಯುಕ್ತ ಉಪ್ಪಿನ ಬಗ್ಗೆ ಸಾಕಷ್ಟು ಪ್ರಚಾರ ನಡೆದಿದೆ. ಇದಕ್ಕೆ ಸರ್ಕಾರದ ಕುಮ್ಮಕ್ಕೂ ಸಾಕಷ್ಟಿದೆ. ಸರ್ಕಾರದ ಈ ಕುಮ್ಮಕ್ಕಿನ ಹಿಂದೆ ಅನೇಕ ದುಷ್ಟ ಕೈಗಳ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.