ಟೆಕ್ ಸುದ್ದಿ - ನಿಮಗಿದು ಗೊತ್ತೇ? - ೨

ಟೆಕ್ ಸುದ್ದಿ - ನಿಮಗಿದು ಗೊತ್ತೇ? - ೨

ಓಪನ್ ಆಫೀಸ್ ಗೆ ಮೇಕಪ್ ಮಾಡ್ತಾರಂತೆ

 ಹೌದು ಓಪನ್ ಆಫೀಸ್ ಸಮುದಾಯದ ಸದಸ್ಯರು ಈಗಾಗ್ಲೇ ಸ್ವಲ್ಪ ಮೇಕಪ್ ಹಚ್ಚೋಣ, ಅದು ಹೇಗಿರ್ಬೇಕು ಅಂತ ರಿಪೋರ್ಟ್ ಕೂಡ ರೆಡಿ ಮಾಡ್ಕೊಂಡು ಅದನ್ನೆಲ್ಲಾ OpenOffice.org ನಲ್ಲಿ ಪೇರಿಸ್ಲಿಕ್ಕೆ ಶುರುಮಾಡಿದ್ದಾರೆ. 

ಉಪಯೋಗಿಸೋ ನಮ್ಮ ನಿಮ್ಮಂತವರಿಗೆ ಓಪನ್ ಆಫೀಸ್ ಸುಂದರವಾಗಿ ಕಾಣೋದರ ಜೊತೆ, ಸುಲಭವಾಗಿರಬೇಕು ಅನ್ನೋದೇ ಈ ಯೋಜನೆಯ ಉದ್ದೇಶ. ಈಗಾಗಲೇ ಬಂದಿರೋ ಡಿಸೈನ್ ಗಳಲ್ಲಿ  FLUX UI ಅನ್ನೋದಂತು ಈಗಾಗಲೇ ಸನ್ ಮೈಕ್ರೋ ಸಿಸ್ಟಂ ಸಮುದಾಯದ ಆವಿಷ್ಕರಣೆಯ ಬಹುಮಾನ ಕಾರ್ಯಕ್ರಮದಲ್ಲಿ ಗೆದ್ದಿದೆ ಕೂಡ.  ನಿಮಗೆ ಕೂಡ ಇದರಲ್ಲಿ (UI Design ನಲ್ಲಿ)  ಆಸಕ್ತಿ ಇದ್ದರೆ ನೀವೂ ಇದರಲ್ಲಿ ಭಾಗವಹಿಸಬಹುದು. ನಿಮ್ಮ ತಲೆಯಲ್ಲಿ ಹೊಳೆಯುವ ಎಲ್ಲ ಐಡಿಯಾಗಳನ್ನು ಓಪನ್ ಆಫೀಸ್ ಸಮುದಾಯದ ಜೊತೆ ಹಂಚಿಕೊಳ್ಳಬಹುದು. ನಿಮ್ಮ ಗೆಳೆಯರಿಗ್ಯಾರಿಗಾದರೂ ಇದರ ಬಗ್ಗೆ ಆಸಕ್ತಿ ಇದ್ದರೆ ಅವರಿಗೂ ತಿಳಿಸಿ.

ಸ್ಲ್ಯಾಷ್ ಡಾಟ್ ನಲ್ಲಿ ಇದರ ಬಗ್ಗೆ ನೆಡೆಯುತ್ತಿರೋ ಚರ್ಚೆಯನ್ನೊಮ್ಮೆ ಗಮನಿಸಿ.

ಇದೆಲ್ಲಾ ಇರಲಿ, ಇನ್ನೊಂದ್ ವಿಷಯ ಗೊತ್ತಾ?

 ಸನ್(SUN) ಮೈಕ್ರೋ ಸಿಸ್ಟಂ ಅನ್ನ ಆರೇಕಲ್(Oracle) ಕಂಪನಿ ಕೊಂಡು ಕೊಂಡಿದೆ. ೭ಬಿಲಿಯನ್ ಗೂ ಹೆಚ್ಚು ಹಣ ಕೊಟ್ಟು. ಕಳೆದ ವರ್ಷವಷ್ಟೇ ಸನ್ ಮೈಕ್ರೋ ಸಿಸ್ಟಂ MySQL ಅನ್ನೋ ಕಂಪನಿಯನ್ನು ಕೊಂಡಿತ್ತು ಗೊತ್ತಿರಬೇಕಲ್ವಾ? ಸ್ವತಂತ್ರ ತಂತ್ರಾಂಶ ವನ್ನ ಅದಕ್ಕೆ ಸಂಬಂದ ಪಟ್ಟ ಸೇವೆಯನ್ನು ಕೊಡುತ್ತಿದ್ದ ಡೇಟಾಬೇಸ್ ಕಂಪನಿಯನ್ನು ಇಷ್ಟು ದೊಡ್ಡ ಮೊತ್ತ ಕೊಟ್ಟು ಕೊಂಡದ್ದು ಅನೇಕರ ಹುಬ್ಬೇರಿಸಿತ್ತು. ಆದರೆ, ಸನ್ ನ ಆಂತರಿಕ ಹಣಕಾಸು ತೊಂದರೆಗಳಿಂದ ಇಡೀ ಕಂಪೆನಿಯೇ ಇತರರ ಪಾಲಾಗಿದೆ. ಇದರೊಂದಿಗೆ MySQL ನ ಪಾಡು ಏನಾಗಬಹುದೆಂದು ಜನ ಇನ್ನೂ ಬಹಳಷ್ಟು ಮಾತಾಡಿಕೊಳ್ತಿದ್ದಾರೆ. ಅದೇನೇ ಇದ್ದರೂ Oracle ಸ್ವತಂತ್ರ ತಂತ್ರಾಂಶಗಳ ಸುತ್ತ ಸನ್ ಮೈಕ್ರೋ ಸಿಸ್ಟಂ ಹಾಕಿರುವ ಪಾಲಿಸಿಗಳನ್ನೇನೂ ಬದಲು ಮಾಡುವ ಸಾಧ್ಯತೆಗಳಿಲ್ಲ ಎಂದೇಳುವ ಆಶಾವಾದದ ಮಾತುಗಳೂ ಕೇಳಿಬರ್ತಿವೆ. 

 ತನ್ನದೇ ಕೋಟ್ಯಾಂತರ ಬೆಲೆ ಬಾಳುವ ಡೇಟಾಬೇಸ್ ಇರಬೇಕಾದ್ರೆ,  ಸ್ವತಂತ್ರ ತಂತ್ರಾಂಶವಾದ MySQL ಅನ್ನು ಉಳೀಲಿಕ್ಕೆ ಆರೇಕಲ್ ಬಿಟ್ಟೀತೇ ಅನ್ನೋದು ದೊಡ್ಡ ಪ್ರಶ್ನೆಯೇ. ಅದನ್ನು ಕಾದು ನೋಡ ಬೇಕಿದೆ.

MySQL ಇಂಟರ್ನೆಟ್ ನ ಅನೇಕ ದೊಡ್ಡದೊಡ್ಡ ವೆಬ್ಸೈಟ್ ಗಳ backbone ಅಂದ್ರೆ ಆಧಾರವಾಗಿದೆ ಅಂದ್ರೆ ತಪ್ಪಾಗ್ಲಿಕ್ಕಿಲ್ಲ. ಇವತ್ತಿಗೂ ದಿನಕ್ಕೆ ೭೦೦೦೦ ಮಂದಿ ಇದನ್ನು ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡ್ಕೊಳ್ತಿದ್ದಾರೆ ಅಂತ ಸುದ್ದಿ. 

ಕೊನೆ ಹನಿ:-

ಅದ್ಸರಿ, ಇದನ್ನೆಲ್ಲಾ ನಿಮಗೆ ಹೇಳೋಣ ಅಂತ ಬ್ಲಾಗ್ ಬರೀಲಿಕ್ಕೆ ಕುಂತಾಗ, ಓಪನ್ ಆಫೀಸ್ ವೆಬ್ ಸೈಟ್ ಓಪನ್ನೇ ಆಗ್ಲಿಲ್ಲ. ಏನಪ್ಪಾ ಇದು ಆರೇಕಲ್ ಈಗಾಗ್ಲೇ ಸನ್ ಮೈಕ್ರೋ ಸಿಸ್ಟಂ ನ ಎಲ್ಲ ಸ್ವತಂತ್ರ ತಂತ್ರಾಂಶಗಳ ಮೇಲೆ ತನ್ನ ಕೆಂಗಣ್ಣು ಬಿಟ್ಟಿತೇ ಅಂದುಕೊಂಡಿದ್ದೆ. 

ಅಂದಾಗೆ ಗೊತ್ತಿರಬೇಕಲ್ಲ, MySQL ಜೊತೆ ಈಗ ಓಪನ್ ಆಫೀಸ್ ಕೂಡ  ಆರೇಕಲ್ ಗೆ ಸೇರಿದ್ದು. 

 

ಓಪನ್ ಆಫೀಸ್,  MySQL ಮತ್ತು ವಿಕಿ

Rating
No votes yet