ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಡಿ ವಿ ಜಿ ದೃಷ್ಟಿಯಲ್ಲಿ ಮಹಾಚುನಾವಣೆ

ದಾರ್ಶನಿಕ ಕವಿ ಡಿ ವಿ ಜಿ ಅವರು ಮಹಾಚುನಾವಣೆಯ ಬಗ್ಗೆ ಕೆಲವು ಸೊಗಸಾದ ಪದ್ಯಗಳನ್ನು ಬರೆದಿದ್ದಾರೆಂದರೆ ಹಲವರಿಗೆ ಆಶ್ಚರ್ಯವಾಗಬಹುದು. ಆ ಪದ್ಯಗಳನ್ನು ಓದಿದಾಗ ನಮಗೆ, ’ಡಿ ವಿ ಜಿ ಕಾಲಕ್ಕೂ ಇಂದಿಗೂ ದೇಶದ ರಾಜಕೀಯ ಪರಿಸ್ಥಿತಿಯಲ್ಲಿ ವ್ಯತ್ಯಾಸವೇನಿಲ್ಲ’, ಎಂಬ ಸತ್ಯದ ಅರಿವು ಉಂಟಾಗುತ್ತದೆ. ೧೯೬೫ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಎಂಥ ನಿಂತ ನೀರೆಂಬುದು ನಮಗೆ ವೇದ್ಯವಾಗುತ್ತದೆ!

ಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. ದಿನೇದಿನೇ ಕೊಳಕು ಹೆಚ್ಚಾಗುತ್ತಿದೆ ಅಷ್ಟೆ.

ಅಂದು ಡಿ ವಿ ಜಿ ಬರೆದ ಪದ್ಯಗಳು ಇಂದಿಗೂ ಹೇಗೆ ಪ್ರಸ್ತುತವೆನಿಸುತ್ತವೆಂಬುದನ್ನು ಕೆಲ ಉದಾಹರಣೆಗಳ ಮೂಲಕ ನೋಡೋಣ.

ಮಹಾಚುನಾವಣೆಯನ್ನು ಡಿ ವಿ ಜಿ ಅವರು ’ವರಣ ಪ್ರಸ್ತ’ ಎಂದು ಕರೆಯುತ್ತಾರೆ. ’(ಜನಪ್ರತಿನಿಧಿಗಳನ್ನು) ಆರಿಸುವ ಶುಭ ಸಮಾರಂಭ’ ಎಂದು ಇದರರ್ಥ. ’ವರಣ ಪ್ರಸ್ತ’ ಎಂಬ ಶೀರ್ಷಿಕೆಯ ಪದ್ಯದಲ್ಲಿ ಡಿ ವಿ ಜಿ ಹೇಳುತ್ತಾರೆ:

ಏನು ಜಾತ್ರೆಯದು? ಏನಾ ಪ್ರಸ್ತವೊ!
ವೋಟಿನ ಹಾರಾಟಾ,
ಮಗುವೇ, ವೋಟಿನ ಹಾರಾಟಾ.
ನಾನು ತಾನೆನುತ್ತಿರುವಾ ಪ್ರತಿನಿಧಿ
ಪೋಟಿಯ ಮೇಲಾಟಾ,
ಮಗುವೇ, ಮೇಲುಪೋಟಿಯಾಟಾ.

ತಿಪ್ಟೂರ್ ತೆಂಗಿನ್ಕಾಯಿ

{ತೇಜಸ್ವಿಯವರ ಅಲೆಮಾರಿಯ ಅಂಡಮಾನ್ ಪುಸ್ತಕವನ್ನು ನನ್ನ ಹೆಂಡತಿ ಈಗ ಓದುತ್ತಿದ್ದಾಳೆ. ಆದ್ದರಿಂದ ಅದು ಈಗ ಮನೆಯಲ್ಲಿ ಎಲ್ಲೆಂದರಲ್ಲಿ ಕಾಣಸಿಗುತ್ತದೆ. ಇಂದು ಬಳಿಗ್ಗೆ ಕಾಫಿ ಕುಡಿಯುತ್ತ ಸುಮ್ಮನೆ ಅದರ ಒಂದು ಪುಟವನ್ನು ತಿರುಗಿಸಿದೆ. ಆ ಪುಟದಲ್ಲಿ, ಶಾಮಣ್ಣನವರ ತೋಟದ ಪಕ್ಕದಲ್ಲಿ ಏತನೀರಾವರಿ ಪಂಪಿನ ಪ್ರಾರಂಭೊತ್ಸವದ ಸಂದರ್ಭದಲ್ಲಿ ನಡೆದ ಒಂದು ಘಟನೆಯಿತ್ತು.

ಅರ್ಥವಿಲ್ಲದ ಪ್ರಮೋಶನ್ ಪರೀಕ್ಷೆಯೂ ನಾನೂ

ಇಪ್ಪತ್ತ್ಮೂರಕ್ಕೆ ನಾನು ಒಂದು ಪ್ರಮೋಶನ್ ಪರೀಕ್ಷೆಗೆ ಹಾಜರಾಗಬೇಕು (ಆ ಬಗ್ಗೆ ಹಿಂದಿನ ಬ್ಲಾಗ್ http://sampada.net/blog/shreekantmishrikoti/25/04/2009/19549 ನಲ್ಲಿ ಬರ್ದಿದ್ದೀನಿ . )
ತಮಾಷೆ ಏನೆಂದರೆ ಈ ಪ್ರಮೋಶನ್ ಗೆ ಏನೂ ಅರ್ಥ ಇಲ್ಲದೆ ಇರೋದು . ಹೇಗಂತೀರಾ ಕೇಳಿ .

ನನ್ನ ಆದಾಯ / ಅನುಕೂಲತೆಗಳು ಹೆಚ್ಚುವದಿಲ್ಲ .
ನನ್ನ ಕೆಲ್ಸದ ರೀತಿಯಾಗಲೀ , ಸ್ಥಳವಾಗಲೀ ಬದಲಾಗುವದಿಲ್ಲ .

ಮಕ್ಕಳ ವ್ಯಾಕ್ಸಿನ್ಗಳು (ಲಸಿಕೆ) ಮಾಹಿತಿ- ಭಾಗ - ೩

ಮಕ್ಕಳ ವ್ಯಾಕ್ಸಿನ್ಗಳ ಮಾಹಿತಿ ಬಗ್ಗೆ ಮೊದಲು ೨-೩ ಬ್ಲಾಗ್ ಬರಹ ಬರೆದಿದ್ದೆ. ಇಂದಿನ NEJM (New England Journal of Medicine) - ಪ್ರತಿಷ್ಠಿತ ವೈದ್ಯಕೀಯ ಜರ್ನಲ್ ನಲ್ಲಿ ಇದರಬಗ್ಗೆ ಹೊಸದಾಗಿ ಬಂದಿರುವ ಸಂಶೋಧನೆ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳುವುದು ಸೂಕ್ತವೆನಿಸಿ ಇಲ್ಲಿ ಬರೆಯುತ್ತಿದ್ದೇನೆ. ಮಕ್ಕಳಿಗೆ ವ್ಯಾಕ್ಸಿನ್ಗಳನ್ನು ಹಾಕಿಸುವುದೇ ಬಹಳ ಲಾಭದಾಯಕ ( ಹಾಕಿಸದಿರುವುದಕ್ಕಿಂತ).

ಆರ್ಯಭಟ ಪ್ರಶಸ್ತಿ - ಕೃತಜ್ಞತೆಗಳು

ಸಂಪದಿಗರೆ!

ನನಗೆ ಆರ್ಯಭಟ ಪ್ರಶಸ್ತಿ ಬಂದ ಸಂದರ್ಭದಲ್ಲಿ ನೀವೆಲ್ಲರೂ ನನ್ನನ್ನು ಅಭಿನಂದಿಸಿದ್ದಿರಿ. ಅದಕ್ಕಾಗಿ ಕೃತಜ್ಞತೆಗಳು. ಕಾರ್ಯಕ್ರಮದ ಸಂಕ್ಷಿಪ್ತ ವರದಿ ಹಾಗೂ ಕೆಲವು ಚಿತ್ರಗಳನ್ನು ನೋಡಲು ಈ ಕೆಳಗಿನ ಕೊಂಡಿಯನ್ನು ಕ್ಲಿಕ್ ಮಾಡಿ.

-ನಾಸೋ

www.yakshaprashne.org 

 

ಒಬ್ಬಂಟಿ

ಮೇಲೆ
ಶುಭ್ರ ನೀಲಾಕಾಶದಲ್ಲಿ ನೂರಾರು ತಾರೆಗಳ ಕೂಟ
ಕೆಳಗೆ
ಕೋಟಿಗಟ್ಟಲೇ ಜನಸಾಗರದ ಓಟ
ಆದರೂ
ಇಲ್ಲಿ ನಾನು ಒಬ್ಬಂಟಿ ಅಪರಿಚಿತೆ
ಯಾಕೆಂದರೆ
ನನಗೆ ಆಸೆಯೂ ಇಲ್ಲ ಅಧಿಕಾರವೂ ಇಲ್ಲ
ಅದರೊಂದಿಗಿರುವ
ಹಣವೂ ಇಲ್ಲ ಹಣಾಹಣಿಯೂ ಇಲ್ಲ
ಆದರೆ
ಇರುವುದು ಸ್ವಾಭಿಮಾನವೊಂದೆ
ಇದರೊಂದಿಗೆ
ನಾನಿದ್ದೇನೆ ನನ್ನ ಕನಸುಗಳಿವೆ

ಹೀಗೊಂದು ಮದುವೆ ಮಾತುಕತೆ!-ಎಲ್ಲರ ಕನ್ನಡದಲ್ಲಿ

ವರ್ಷದ ಹಿಂದೆ ಗೆಳೆಯ ಹನುಮಂತನ ಜೊತೆ ಅವನ ಮನೆಗೆ ಹೋಗಿದ್ದೆ, ಆಗ ಹನುಮಂತ್ ಮತ್ತು ಅವರ ತಂದೆ ನಡುವೆ ನಡೆದ ಮಾತುಕತೆ.(ಹನುಮಂತನ ತಂಗಿಯ ಮದುವೆ ಕುರಿತು)

***********************************************************************

ಶ್ರೀಮಂತಪ್ಪ:-ಹುಡುಗ ಬಿ ಎ ಓದಿದ್ದಾನೆ, ಮನೆಗೆ ಒಬ್ನೇ ಮಗಾ, ೨೦ ಎಕರೆ ಹೊಲ ಇದೆ, ರಾಧಾನ ಸಲುವಾಗಿ ಕೇಳುತಿದ್ದಾರೆ, ಏನ್ ಮಾಡೋದು?
ಹನುಮಂತ್ :- ವರದಕ್ಷಿಣೆ ಎಷ್ಟು ಕೇಳುತಿದ್ದಾನೆ?

(ಮರ್ಕಟ )ನನ್ನೀ ಮನಸ್ಸು

ತಣ್ಣನೆಯ ತಿಳಿ ಗಾಳಿ ಬೀಸುತ್ತಿತ್ತು , ಆಗಸದಲ್ಲಿ ಸೂರ್ಯ ನಿಧಾನವಾಗಿ ತನ್ನ ಮನೆಯತ್ತ ಹೆಜ್ಜೆಹಾಕತೊಡಗಿದ್ದ ,ಅವನಿಗೂ ಪಾಪ ಕತ್ತಲಾಗಿರಬೇಕು ಕೆಂಪು ಬಣ್ಣದ ಟಾರ್ಚ್ ಹಿಡಿದಿದ್ದ ಅನ್ನಿಸುತ್ತೆ ಅದಕ್ಕೇನೋ ಹೋಗೋ ದಾರಿಯಲೆಲ್ಲ ಕೆಮ್ಪನ್ನೇ ಚೆಲ್ಲಿದ ಹಾಗಿತ್ತು .

ಬದ್ಕಿದ್ದಾಗ್ಲೇ ಸಾಯೋದ್‍ ಹೇಗೆ?

ಸಾಯೋದ್ ಹೇಗಿರತ್ತೆ ಅನ್ನೋದ್ನ
ತಿಳಿಯೋದ್ ಕಷ್ಟ ಇಲ್ಲ;

ಕೇಡ್ಗಿತ್ತಿ ಹೆಂಡ್ತಿ; ಮೋಸ್ಗಾರ ಗೆಳೆಯ
ಮಾತ್ಗೆದುರಾಡೋ ಬಂಟ, ಇಲ್ವೇ
ಹಾವ್ ಹೊಕ್ಕ್ ಮನೇಲ್ವಾಸ;

ಇಷ್ಟ್ರಲ್ ಯಾವ್ದ್ ಒಂದು ಸಿಕ್ಕಿದ್ರೂ
ನಾವಿರುವಲ್ಲೇ ಗೊತ್ತಾಗತ್ತಲ್ಲ!  

ಸಂಸ್ಕೃತ ಮೂಲ  (ಗರುಡಪುರಾಣ ೧-೧೦೮-೨೫):