ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಟುವಟಿಕೆಗಳು ಚುಟುಕಾದಾಗ-೪

ಚಟುವಟಿಕೆಗಳು ಚುಟುಕಾದಾಗ, ಕಿರು ಪರೀಕ್ಷೆ ಒಮ್ಮೆಗೆ ಮುಗಿದಾಗ,
ಭಾವನೆಗಳ ಹಾರಾಟ ಪ್ರಾರಂಭವಾದಾಗ, ಪುಟ್ಟ ಪುಟ್ಟ ಕವನಗಳು ಹೊರಬರುತ್ತವೆ :)

ನೀ.. ಚಂದಿರ
*********

ಸುಂದರವಾದ ಸಂಜೆಗೆ,
ರಂಗೇರಿಸುವ ಆದಿತ್ಯ.
ಕಲರವದ ಕೊಳಕ್ಕೆ,
ನಗುಮೊಗದ ಕಮಲ.
ಬೆಳದಿಂಗಳ ರಾತ್ರಿಗೆ,
ದೀಪದಂತೆ ನಕ್ಷತ್ರ.

ಮಜ್ಜಿಗೆ ರಾಮಾಯಣ

ಬಾಲ್ಯದಲ್ಲಿ ನಾನು ಕೇಳಿದ ಕುತೂಹಕರ ಪದ್ಯಗಳಲ್ಲಿ ಎರಡು ಪದ್ಯಗಳನ್ನು ಇಲ್ಲಿ ಬರೆಯುತ್ತಿದ್ದೇನೆ.

ಇವುಗಳ ರಚನೆಯ ಹಿಂದೆ ಒಂದು ಕಥೆ ಇದೆ ಎನ್ನುತ್ತಾರೆ.

ಒಮ್ಮೆ ದಾಸರೊಬ್ಬರು ಭಿಕ್ಷೆಗಾಗಿ ಒಮ್ದು ಅಜ್ಜಿಯ ಮನೆಗೆ ಹೋಗುತ್ತಾರೆ. ಆಕೆ ಭಿಕ್ಷೆ ಏನೂ ಇಲ್ಲವೆನ್ನುತ್ತಾಳೆ. ಕೊನೆಗೆ ಹೋಗಲಿ ಸ್ವಲ್ಪ ಮಜ್ಜಿಗೆಯಿದೆ ಕೊಡಲೇ ಎನ್ನುತ್ತಾಳೆ. ದಾಸರು ಆಗಲಿ ಎನ್ನುತ್ತಾರೆ. ಅರೆಲೋಟದಷ್ಟಿದ್ದ ಮಜ್ಜಿಗೆಯನ್ನು ಕೊಡಬೇಕಾದರೆ ನೀನು ರಾಮಾಯಣವನ್ನೋ, ಭಾಗವತವನ್ನೋ ಇಲ್ಲ ಮಹಾಭಾರತವನ್ನೋ ಹೇಳಬೇಕು ಎನ್ನುತ್ತಾಳೆ. ಆಗ ದಾಸರು ಈ ಕೆಳಗಿನ ನಾಲ್ಕು ಸಾಲುಗಳ ರಾಮಾಯಣ ವಾಚನವನ್ನು ಮಾಡುತ್ತಾರೆ. ಅವಳ ಅರೆಲೋಟಮಜ್ಜಿಗೆಯಷ್ಟೇ ಪುಟ್ಟದಾದ ರಾಮಾಯಣ-ಮಜ್ಜಿಗೆ ರಾಮಾಯಣ!

ಇಂತಹುದೇ ಸಂಕ್ಷಿಪ್ತ ಮಹಾಭಾರತ ಹಾಗೂ ಭಾಗವತಗಳಿವೆಯಂತೆ. ಭಾಗವತವನ್ನು ಇಲ್ಲಿ ಕೊಟ್ಟಿದ್ದೇನೆ. ಮಹಾಭಾರತ ಇದ್ದರೆ, ಅದನ್ನು ತಿಳಿದವರು ದಯವಿಟ್ಟು ಇಲ್ಲಿ ಬರೆದು ತಿಳಿಸಿ.

೨ ಗಜಲ್ ಗಳು

ಗಜಲ್ - ೧
ಮಾತುಗಳಿಗೆ ಅರ್ಥವೇ ಇಲ್ಲದಾಗ ಏನೆಂದು ತಿಳಿಯಬೇಕು
ಮೌನಕ್ಕೆ ಶಕ್ತಿಯೇ ಇಲ್ಲದಾಗ ಏನೆಂದು ತಿಳಿಯಬೇಕು

ಬಂಧುತ್ವಕ್ಕೆ ಒಲವೇ ಇಲ್ಲದಾಗ ಏನೆಂದು ತಿಳಿಯಬೇಕು
ಪ್ರೇಮಕ್ಕೆ ಹೃದಯವೇ ಇಲ್ಲದಾಗ ಏನೆಂದು ತಿಳಿಯಬೇಕು

ದ್ವೇಷಕ್ಕೆ ಕಿಚ್ಚೇ ಇಲ್ಲದಾಗ ಏನೆಂದು ತಿಳಿಯಬೇಕು
ರೋಶಕ್ಕೆ ಶೌರ್ಯವೇ ಇಲ್ಲದಾಗ ಏನೆಂದು ತಿಳಿಯಬೇಕು

ಸಂತಾಪಕೀಯ: ಕೈ ತಪ್ಪಿದ ಪ್ರಧಾನಿ ಪಟ್ಟ ಹಾಗೂ ನಮ್ಮ ನಾಪತ್ತೆ ಪ್ರಸಂಗ!

‘ಒಮ್ಮೆ ನಮ್ಮನ್ನು ಗೆಲ್ಲಿಸಿ ನೋಡಿ ನಿಮ್ಮ ಊರಿನ ರಸ್ತೆಗಳು ಹೇಮಾ ಮಾಲಿನಿಯ ಕೆನ್ನೆಯ ಥರ ಆಗುತ್ತವೆ, ನಿಮ್ಮ ಊರು ಸಿಂಗಾಪುರವಾಗುತ್ತದೆ’ ಎನ್ನುವ ರಾಜಕಾರಣಿಗಳ ಆಶ್ವಾಸನೆಯಂತೆ, ‘ಇನ್ನು ಮುಂದೆ ಸ್ವಮೇಕ್ ಸಿನೆಮಾಗಳನ್ನೇ ಮಾಡುತ್ತೇವೆ, ನಮ್ಮ ರಾಜ್ಯದ ನಟ ನಟಿಯರನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ, ವಿದೇಶಿ ಲೊಕೇಶನ್ನು, ಪರಭಾಷಾ ಗಾಯಕಿಯರಿಗೆ ಹಣ ಸುರಿಯದೆ ಎಲ್ಲವನ

ಜನ ಮರುಳೋ ಜಾತ್ರೆ ಮರುಳೋ!

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ನೀಡಿರುವ ಹೇಳಿಕೆ "Say no to Bangalore and yes to Buffello" ಭಾರತದಲ್ಲಿ ಅದರಲ್ಲೂ ಬೆಂಗಳೂರಿನ ಐಟಿ ಉದ್ಯಮದಲ್ಲಿ ಸಂಚಲನವನ್ನೇ ಮೂಡಿಸಿದೆ .
ಇದೇನು ಒಬಾಮ ಏಕಾ ಏಕಿ ಸಿಡಿಸಿದ ಬಾಂಬ್ ಅಲ್ಲ . ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದಾಗಲೇ ಒಬಾಮ ಹೊರಗುತ್ತಿಗೆ ವಿರುಧ್ಧ ಸತತ ವಾಗಿ ಟೀಕಿಸುತ್ತಲೇ ಇದ್ದರು . ಆಗೆಲ್ಲ ನಾವು ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.
ಒಮ್ಮೆ ನೆನಪು ಮಾಡಿಕೊಳ್ಳಿ.
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣಾ ಪ್ರಚಾರ ಉತ್ತುಂಗದಲ್ಲಿದ್ದಾಗ ನಮ್ಮ ಮಾಧ್ಯಮಗಳು ವರ್ತಿಸಿದ ರೀತಿಯನ್ನು. ಒಬಾಮ ಸೀನಿದರು ಸುದ್ದಿಯೇ ಹೂ... ಬಿಟ್ಟರೂ ಸುದ್ದಿಯೇ. ಖಾಸಗಿ ಪ್ರಸಾರಕ್ಕಾಗಿ ಇರುವ ಪತ್ರಿಕೆ ಗಳಿಂದ ಹಿಡಿದು ರಾಜ್ಯ - ರಾಷ್ಟ್ರ ಮಟ್ಟದ ಪತ್ರಿಕೆಗಳು ಎನ್ನಿಸಿಕೊಂಡವು ಪ್ರತಿದಿನ ಮುಖಪುಟದಲ್ಲಿ ಒಬಾಮ ಸುದ್ದಿ ಪ್ರಕಟಿಸಿ. ಟಿವಿ ಚಾನೆಲ್ ನವರದ್ದು ಬೇರೆಯೇ ಕಥೆ. ಅವರು ಮುಖಕ್ಕೆ ಎರಡು ಇಂಚು ಬಣ್ಣ ಬಳಿದುಕೊಂಡು ರಾಯ್ಟರ , ಎಪಿ ನಂಥ ಸುದ್ದಿಸಂಸ್ಥೆ ಗಳು ಕಳಿಸಿದ ಕ್ಲಿಪ್ಪಿಂಗ್ ಗಳನ್ನೇ ಕಣ್ಣಿಗೊತ್ತಿಕೊಂಡು ತಮ್ಮದೇ ಮನೆಯ ಸುದ್ದಿಯೇನೋ ಎಂಬಂತೆ ಪ್ರಚಾರ ಮಾಡಿ ಕೃತಾರ್ಥರಾದರು.

ಇದೇನು ಎಲ್ಲಿದೆ ಹೇಳಿ...

ಈ ಚಿತ್ರದಲ್ಲಿ ವಿಶಿಷ್ಟವಾದದ್ದೇನೋ ಇದೆ.
ಬಹುಷಃ ಇದು ಈ ಊರಲ್ಲಷ್ಟೇ ಕಾಣಸಿಗಬಹುದಾದುದು.
ಇದು ಕರ್ನಾಟಕದಲ್ಲೇ ಇದೆ.
ಇದು ಏನು?
ಇದು ಎಲ್ಲಿದೆ?
ಹೇಳಬಹುದೇ?

ಸ್ಪಟಿಕ ಎಸ್ಟೇಟ್ - 2

ರಾಮಮುರ್ತಿಗಾಗಲಿ, ಶಾರದಮ್ಮನಿಗಾಗಲಿ ಮಕ್ಕಳ ಭವಿಷ್ಯದ ಬಗ್ಗೆ ಯಾವ ಯೋಚನೆ ಇರಲಿಲ್ಲ ಅವರ ಮದುವೆಗೆ ಎಲ್ಲಾ ರೀತಿಯ ಹಣ, ಒಡವೆ ತಯಾರಿತ್ತು, ಗಂಡು ನೋಡಿ ಮಾಡುವುದೊಂದು ಬಾಕಿ.ಸುಮನ ..ಕವನ ಇಬ್ಬರು ತಂದೆ ತಾಯಿಯ ಆರೈಕೆಯಲ್ಲಿ ಅತಿ ಶಿಸ್ತಿನಿಂದ, ಪ್ರೀತಿಯಿಂದ ಬೆಳೆದಿದ್ದರು.ಮಕ್ಕಳ ಬೇಕು ಬೇಡಗಳಿಗೆ ಯಾವತ್ತು ತಲೆಯಾಡಿಸಿದವರಲ್ಲ.

ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಂತೆ!!!

ಯಾರೋ ಕೂಗಿದಂತಾಯ್ತು ಕುಮಾರನಿಗೆ
ಅಲ್ಲಿ ಹೊರಟಿತ್ತು ತೇಜಸ್ವಿನಿಯ ಮೆರವಣಿಗೆ

ಅತ್ತ ತೇಜಸ್ವಿನಿಯ ನಿದ್ದೆಗೂ ಭಂಗ ಬಂತು
ಯೋಗಿಯ ವಿಜಯ ಘೋಷ ಕೇಳಿ ಬಂತು

ಬಂಗಾರಪ್ಪ ತೂಕಡಿಸಿ ಬೆಚ್ಚಿ ಬಿದ್ದ ಕೂತಲ್ಲೇ
ರಾಘವೇಂದ್ರನ ಜಪ ಮಾಡುತ್ತಿದ್ದ ಹಗಲಲ್ಲೇ

ಸಾಂಗ್ಲಿಯಾನನ ಬಡಬಡಿಕೆ ಅರೆ ನಿದ್ರೆಯಲ್ಲಿ
ಗೋಪಿನಾಥಗೆ ಮಾತ್ರ ಗೊರಕೆ ನಿಶ್ಚಿಂತೆಯಲ್ಲಿ