ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೇಳೋಣ ಹೂವಿಗೆ.....

ದುಂಬಿಯ ತಳಮಳವು ಹೂವಿಗೇಕೆ ತಿಳಿಯದು,
ದುಂಬಿಯ ತಳಮಳವು ಹೂವಿಗೇಕೆ ತಿಳಿಯದು....?
ಏಕೆ ಅದು ದುಂಬಿಯನ್ನು ಸುಮ್ಮನೆ ಕಾಡುತಿದೆ....
ಹೂ ಮ್ರದುವೆಂದೋ, ಇಲ್ಲಾ ದುಂಬಿಯನ್ನು ಸತಾಯಿಸಲೆಂದೋ,
ದುಂಬಿಯ ಕಂಡರೂ ಕಾಣದಂತೆ ಇದೆ...
ಆದರೂ ಹೂ ತಿಳಿಯದಿದ್ದರೆ ಏನಂತೆ, ಇದ್ದಾನಲ್ಲಾ ರುತುಗಳ ರಾಜ ವಸಂತ,
ಪ್ರೇಮಿಗಳ ಪಾಲಿಗೆ ಕಾಣದ ಸಂತ...

ಮನುಜ ಮತ - ವಿಶ್ವ ಮತ ಪ್ರತಿಪಾದಕನಾಗು!!!

ಈಗ ಅರ್ಧ ಘಂಟೆಗೆ ಮೊದಲು ನನಗೆ ತೀರ ಆತ್ಮೀಯರಾದ ಒಬ್ಬರಿಂದ ಈ ಸಂದೇಶ ಬಂತು:

"ನನಗೆ ಯಾರೂ ನಾಯಕರಿಲ್ಲ,
ಆದರೆ, ನಾ ನಿಂತ ಜನರ ಸಾಲಿನ ಮುಂಚೂಣಿಯಲ್ಲಿ ಆಡ್ವಾನಿಯ ಕಂಡೆ;
ನನಗೆ ಯಾವ ಪಕ್ಷವೂ ಇಲ್ಲ,
ಆದರೆ, ನನಗೆ ಜೈಕಾರ ಹಾಕುವವರ ಕೈಯಲ್ಲಿ ಬಿಜೆಪಿಯ ಧ್ವಜವ ಕಂಡೆ;
ನನಗೆ ಯಾವ ಮತವೂ ಇಲ್ಲ,
ಆದರೆ, ಕನಸಲ್ಲಿ ಶಿವ ಬಂದು ನಿನ್ನ ಧರ್ಮ ಯಾವುದು ಎಂದಾಗ ಹಿಂದೂ ಎಂದೆ;

ಹಾಡಿನ ಮೂಲಕ ಆತ್ಮವಿಶ್ವಾಸ ಗಳಿಸಿ !

1969 ರ ಸುಮಾರಿಗೆ ಒಂದು ಸಂಗೀತಮಯ ಚಿತ್ರ ಬಂದಿತ್ತು . ಇಡೀ ಜಗತ್ತನ್ನೇ ಹುಚ್ಚೆಬ್ಬಿಸಿತ್ತು . ಅದುವೇ "ಸೌಂಡ್ ಆಫ್ ಮ್ಯೂಸಿಕ್ ". ಸೀಡೀ , ಡೀವೀಡಿಗಳು ಪೇಟೆಯಲ್ಲಿ ಸಿಗುತ್ತವೆ .

ಈ ಅದ್ಭುತ ಸಿನೆಮಾ ಬಗ್ಗೆ ನನಗೆ ಹೇಗೆ ಗೊತ್ತಾಯ್ತು ಅಂತೀರಾ ? ಕಸ್ತೂರಿಯೊಳಗೆ ಒಂದ್ ವಿಷ್ಯ 'ಇದುವೆ ಜೀವ , ಇದು ಜೀವನ ' ಅಂಕಣದಡಿ ಬಂದಿತ್ತು .

ಕ್ಯೂಟ್ ಪಿಡಿಎಫ್ ತ೦ತ್ರಾ೦ಶವನ್ನು ಉಪಯೋಗಿಸಿ ಉಚಿತವಾಗಿ PDF ಕಡತಗಳನ್ನು ತಯಾರಿಸಿ

ಸಾಮಾನ್ಯವಾಗಿ ವಿದ್ಯುನ್ಮಾನ ಕಡತಗಳನ್ನು ಸುರಕ್ಷಿತವಾಗಿ ಮತ್ತು ವಿಶ್ವಾಸಾರ್ಹವಾಗಿ ಒ೦ದೆಡೆಯಿ೦ದ ಮತ್ತೊ೦ದೆಡೆಗೆ ಸಾಗಿಸಲು PDF ರೂಪ (format)ವನ್ನು ಉಪಯೋಗಿಸುವುದು ರೂಢಿಯಲ್ಲಿದೆ.ಈ PDF ಕಡತಗಳನ್ನು ನಿರ್ಮಿಸಲು ಈಗ ಕ್ಯೂಟ್ ಪಿಡಿಎಫ್ ಎ೦ಬ ತ೦ತ್ರಾ೦ಶ ಉಚಿತವಾಗಿ ಲಬ್ಧವಿದೆ.ಈ ತ೦ತ್ರಾ೦ಶ ಮುದ್ರಣಾ ಉಪವ್ಯವಸ್ಥೆಯಲ್ಲಿ ತನ್ನನ್ನು ಪ್ರತಿಷ್ಟಾಪಿಸಿಕೊ೦ಡು,ಮುದ್ರಣವನ್ನು ಮಾಡಬಲ್ಲ೦ತಹ ಯಾವುದೇ (ಉದಾ:ವರ್ಡ್,ಫೈರ್ ಫಾಕ್ಸ್ ಮು೦ತಾದ) ವಿ೦ಡೋಸ್ ಸೇವೆಗಳು ಉತ್ತಮ ಗುಣಮಟ್ಟದ PDF ರೂಪದ ಕಡತಗಳನ್ನು ಮುದ್ರಿಸಲು ಸಾಧ್ಯವಾಗಿಸುತ್ತದೆ.

ಈ ತ೦ತ್ರಾ೦ಶವನ್ನು ಇಲ್ಲಿ೦ದ ಇಳಿಸಿಕೊಳ್ಳಬಹುದು: http://www.cutepdf.com/download/CuteWriter.exe

ಸೂಚನೆ: ನಿಮ್ಮ ಕಡತ ಅಥವಾ ಮಾಹಿತಿಯನ್ನು PDF ರೂಪಕ್ಕೆ ಪರಿವರ್ತಿಸಲು, ಮುದ್ರಿಸುವಾಗ ನಿಮ್ಮ ಹಾಲಿ(default)ಮುದ್ರಕದ ಬದಲು "CutePDF Writer" ಎ೦ಬ ಮುದ್ರಕವನ್ನು ಆಯ್ಕೆ ಮಾಡಿಕೊಳ್ಳಿ.
-amg

ಮಗದೊಂದಿಷ್ಟು ತರಲೆ ಕವನಗಳು!

ಸಮಾನಾಭಿರುಚಿ

ನನಗೆ ಈ ಗಂಡಸರನ್ನು ಕಂಡರೆ ಆಗೋಲ್ಲ

ಪಾಷಾಣ ಹೃದಯಿಗಳು ಎಂದಳು ಹುಡುಗಿ

ನನಗೂ ಹೆಂಗಸರನ್ನು ಕಂಡರೆ ಹಿಡಿಸೋಲ್ಲ

ಕರುಣೆಯಿಲ್ಲದ ಕಲ್ಲುಗಳು ಎಂದ ಹುಡುಗ

ಅರೆ! ನಮ್ಮಿಬ್ಬರದು ಸಮಾನಾಭಿರುಚಿ!

ತಡ ಯಾಕೆ? ಆಗೋಣ ಈಗಲೇ ಜೋಡಿ!

 

ಸ್ವರ್ಗೀಯ ಗಾನ

ಪಾಡ್ ಕ್ಯಾಸ್ಟ್ ಬಗ್ಗೆ ಮಾಹಿತಿ ಬೇಕಿದೆ

ಪಾಡ್ ಕ್ಯಾಸ್ಟ್ ಆಧುನಿಕ ಮಾಹಿತಿ ಪ್ರಸಾರ ಮಾಧ್ಯಮ ಎಂದು ಕೇಳಿದ್ದೇನೆ. ಇದರ ಬಗ್ಗೆ ಮೂಲಭೂತ ಮಾಹಿತಿ ನನಗೆ ಬೇಕಿದೆ. ತಿಳಿದವರು ದಯವಿಟ್ಟು ತಿಳಿಸಿ.

-ನಾಸೋ

ಕೊಡಚಾದ್ರಿಯಲ್ಲಿ ಸೂರ್ಯೋದಯ‌

ನೀವು ಕೊಡಚಾದ್ರಿಗೇನಾದ್ರೂ ಹೋದರೆ ಅಲ್ಲಿನ ಪ್ರವಾಸಿ ಬಂಗಲೆಯಲ್ಲಿ ಉಳಿದುಕೊಂಡರೆ, ಮಾರನೇ ದಿನ ಸೂರ್ಯೋದಯ ನೋಡೋವುದನ್ನು ಮಾತ್ರ ಮರೆಯಬೇಡಿ. ಆ ಪ್ರವಾಸಿ ಬಂಗಲೆಯಿಂದ ಮೇಲೆ 2 ಕಿ.ಮೀ ನಡೆದುಕೊಂಡು ಹೋಗಬೇಕು, ಬೆಳಗ್ಗೆ 6ಕ್ಕೆ ಅಲ್ಲಿದ್ದರೆ ಒಳ್ಳೆಯದು. ನಿಮ್ಮ ಜೀವನದಲ್ಲಿ ಮರೆಯಲಾಗದಂತಹ ಅನುಭವವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.