ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಿಗುರು ಗ್ನು/ಲಿನಕ್ಸ್ ಪ್ರಿಯರಿಗೆ - ಚಿತ್ರಪಟಗಳು

ಟೆಕ್ ಸಂಪದ ತಂಡ ಹೊರತಂದ ಚಿಗುರು ಗ್ನು/ಲಿನಕ್ಸ್ ಬಳಸುತ್ತಿದ್ದೀರಾ? ಹೊಸ ವಾಲ್ಪೇಪರ್ ಹುಡುಕುತ್ತಿರಬೇಕಲ್ಲಾ? ನಿಮಗೆಂದೇ ಕೆಲವು ವಾಲ್ಪೇಪರ್ ತಂದಿದ್ದೇವೆ. 

ಇದರ ಜೊತೆ ಒಂದು ಸ್ವರ್ಧೆ ಇದ್ದರೆ ಚೆಂದ ಅಲ್ಲವೇ?

-> ಈ ವಾಲ್ಪೇಪರ್ಗಳಿಗೊಂದು ಶೀರ್ಷಿಕೆ ಕೊಡಿ.

ಕವನ

ಈ ಕವನ ಪೂರ್ತಿಯಾಗಿ ನನಗೆ ಜ್ಞಾಪಕವಿಲ್ಲದಿದ್ದರೂ, ಆ ಅತ್ತ್ಯುತ್ತಮ ಸಾಲುಗಳನ್ನು ನಾನು ಎಂದಿಗೂ ಮರೆಯಲಾರೆ.
ಈ ಕವನದ ಈ ತುಣುಕುಗಳನ್ನು ನಿಮಗಾಗಿ ಇಲ್ಲಿ ಬರೆಯುತ್ತಿದ್ದೇನೆ.

"ಕೂಸುಗಳಿಗೆ ಹಾಲು ಇಲ್ಲ ಪಶುಬಲಿಯೇ ನಡೆದಿದೆ
ಕಾಳು ಇದೆ ಕೂಳು ಇಲ್ಲ ಹಣದ ಹುಚ್ಚು ಹಿಡಿದಿದೆ
ಎಲ್ಲ ಇದೆ ಎಲ್ಲೆ ಇಲ್ಲ ಇಲ್ಲೇ ಸುತ್ತು ಮುತ್ತಿದೆ

ಸದಸ್ಯರ ಗಮನಕ್ಕೆ: ಲೇಖನಗಳ ನಕಲು ಮಾಡ ಕೂಡದು

ಇತ್ತೀಚೆಗೆ ಸದಸ್ಯರೊಬ್ಬರು ಬೇರೊಂದು ಕನ್ನಡ ವೆಬ್ಸೈಟಿನಿಂದ ಬೇರೆ ಲೇಖಕರು ಬರೆದ ಲೇಖನಗಳನ್ನು ಕಾಪಿ ಮಾಡಿ ಸಂಪದಕ್ಕೆ ಹಾಕುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸಂಪದದ ಸಮುದಾಯಕ್ಕೆ ಕೆಟ್ಟ ಹೆಸರು ತರಬಹುದಾದ ಕೆಲಸ ಇದು. ಹೀಗೆ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈಗಿನಂತೆ ashok14 ಎಂಬ ಐಡಿಯನ್ನು ಹಾಗೂ ಆ ಐಡಿಯಿಂದ ಸೇರಿಸಿದ ಎಲ್ಲ ಲೇಖನಗಳನ್ನೂ 'ಸಂಪದ'ದಿಂದ ತೆಗೆದುಹಾಕಲಾಗಿದೆ. ಹೀಗೆ plagiarism ಮಾಡುತ್ತಿರುವುದು ಕಂಡುಬಂದಲ್ಲಿ ಸದಸ್ಯರು, ಓದುಗರು ತಪ್ಪದೆ [:contact|ನಿರ್ವಾಹಕ ತಂಡದ ಗಮನಕ್ಕೆ ತನ್ನಿ].

ಮನ್ನಾ ಡೇ.. ಹ್ಯಾಪಿ ಬರ್ಥ್ ಡೆ

"ಲಾಗಾ ಚುನರೀ ಮೆ ದಾಗ ಛುಪಾವೂಂ ಕೈಸೆ".., "ಫೂಲ್ ಗೇಂದವಾ ನ ಮಾರೋ, ನ ಮಾರೋ, ಲಗತ ಕರಜವಾ ಮೇಂ ಚೋಟ್".., "ಆಯೋ ಕಹಾಂ ಸೆ ಘನಶ್ಯಾಮ".., "ತುಮ್ ಬಿನ ಜೀವನ ಕೈಸಾ ಜೀವನ್".., "ಅಜಹುಂ ನ ಆಯೆ ಬಾಲಮಾ, ಸಾವನ ಬೀತಾ ಜಾಯೆ.." ಮುಂತಾದ ಶಾಸ್ತ್ರೀಯ ರಾಗ ಆಧಾರಿತ ರತ್ನಗಳನ್ನೂ, "ಏ ಮೇರಿ ಜೊಹರ ಜಬೀಂ".., "ಯಾರೀ ಹೈ ಇಮಾನ ಮೇರಾ ಯಾರ ಮೇರಿ ಜಿಂದಗೀ".., "ಯೆ ಇಶ್ಕ ಇಶ್ಕ ಹೈ".. ಮುಂತಾದ ಅದ್ಭುತ ಕವ್ವಾಲಿಗಳನ್ನೂ, "ಯೆ ರಾತ್ ಭೀಗಿ ಭೀಗಿ".., "ಪ್ಯಾರ ಹುವಾ ಇಕರಾರ್ ಹುವಾ ಹೈ".., "ಆಜಾ ಸನಮ್ ಮಧುರ ಚಾಂದನೀ ಮೆ ಹಂ..", ಮುಂತಾದ ಮಧುರ ರೋಮ್ಯಾಂಟಿಕ್ ಗೀತೆಗಳನ್ನೂ ನಾವೆಂದಾದರೂ ಮರೆಯಲು ಸಾಧ್ಯವೇ??

 

ಇಂತಹ ಸಾವಿರಾರು ಹಾಡುಗಳನ್ನು ಹಾಡಿದ ಸ್ವರ ಮಾಂತ್ರಿಕ ಪದ್ಮಭೂಷಣ ಪ್ರಬೋಧ ಚಂದ್ರ ಡೇ ಎ.ಕೆ.ಎ ಮನ್ನಾ ಡೆ, ಇಂದು ತಮ್ಮ ತೊಂಬತ್ತನೇ ಜನ್ಮದಿನವನ್ನು ಆಚರಿಸುತ್ತಿದ್ದಾರೆ.

ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ

ತನ್ನ ೧೭ರ ಹರೆಯದಲ್ಲೇ ರಾಜ್ಯ ತಂಡಕ್ಕೆ ಆಡುವ ಮೂಲಕ ರಣಜಿಗೆ ಪಾದಾರ್ಪಣೆ ಮಾಡಿದವರು ರಾಬಿನ್ ಉತ್ತಪ್ಪ. ಫರೀದಾಬಾದಿನಲ್ಲಿ ಹರ್ಯಾನ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ೩೨ ಎಸೆತಗಳನ್ನು ಎದುರಿಸಿ ೪೦ ಓಟಗಳನ್ನು ಗಳಿಸಿದರು. ಈಗಲೂ ಅದೇ ರೀತಿಯಲ್ಲಿ ಆಡುತ್ತಿದ್ದಾರೆ. ರಾಬಿನ್ ಒಬ್ಬ ಶಾಟ್-ಲೆಸ್ ವಂಡರ್. ಈತನಲ್ಲಿರುವುದೇ ನಾಲ್ಕೈದು ರೀತಿಯ ಹೊಡೆತಗಳು. ಅದನ್ನೇ ಬಂಡವಾಳ ಮಾಡಿಕೊಂಡು ಈವರೆಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರು. ಆದರೆ ಇನ್ನು ಮುಂದೆ ತನ್ನ ಆಟವನ್ನು ಗಣನೀಯವಾಗಿ ಸುಧಾರಿಸದಿದ್ದರೆ, ಕ್ರಿಕೆಟಿಗನೊಬ್ಬನಿಗೆ ’ಬ್ರೆಡ್ ಎಂಡ್ ಬಟರ್’ ಎನ್ನುವ ಹೊಡೆತಗಳನ್ನು ತನ್ನ ಆಟದಲ್ಲಿ ಅಳವಡಿಸಕೊಳ್ಳದಿದ್ದರೆ ದೇಶೀಯ ಕ್ರಿಕೆಟ್ ಪಂದ್ಯಗಳಲ್ಲೇ ಜೀವನ ಕಳೆಯುವ ಸಾಧ್ಯತೆಗಳಿವೆ.

ರಾಜ್ಯ ತಂಡಕ್ಕೆ ಅರುಣ್ ಕುಮಾರ್ ನಂತರ ಒಬ್ಬ ಸಮರ್ಥ ಆರಂಭಿಕ ಆಟಗಾರನಾಗಿ ದೊರಕಿದವರು ರಾಬಿನ್. ಆಟದ ಶೈಲಿ ವೇಗವಾಗಿ ರನ್ ಗಳಿಸುವುದು. ಬೌಂಡರಿ ಮತ್ತು ಸಿಕ್ಸರ್ ಬಾರಿಸುವುದೇ ರನ್ ಗಳಿಸಲು ಇರುವ ಏಕೈಕ ದಾರಿ ಎಂಬ ಮನೋಭಾವ. ರಾಜ್ಯಕ್ಕೆ ಆಡಿದ ಆರಂಭದ ದಿನಗಳಲ್ಲಿ ’ಬೌಲರ್ಸ್ ಅಸ್ಸಾಸಿನ್’ ಎಂಬ ಹೆಸರು ಉತ್ತಪ್ಪನಿಗಿತ್ತು. ಈಗೀಗ ರಾಬಿನ್ ಆಡುತ್ತಿರುವ ಪರಿ ನೋಡಿದರೆ ಇದೇ ಬೌಲರುಗಳು ’ರಾಬಿನ್ಸ್ ಅಸ್ಸಾಸಿನ್ಸ್’ಗಳಾಗಿದ್ದಾರೆ ಎನ್ನಬಹುದೇನೋ.

ನೀವು ಕೇಳದಿರಿ

’ಸುಧಾ’ದಲ್ಲಿ ’ನೀವು ಕೇಳಿದಿರಿ’.
’ಸಂಪದ’ದಲ್ಲಿ ’ನೀವು ಕೇಳದಿರಿ’.

ನನ್ನ ಪ್ರಶ್ನೆಗೆ ನಾನೇ ಉತ್ತರಿಸುತ್ತೇನೆ ಆಗಾಗ(!)
ನಿಮಗೋ, ಓದಿ ತಲೆಚಿಟ್ಟು ಹಿಡಿಸಿಕೊಳ್ಳುವ ಯೋಗ!

--೦--

* ಕರ್ನಾಟಕದಲ್ಲಿ ಎರಡನೇ ಹಂತದ ಮತದಾನದ ಪ್ರಮಾಣದಲ್ಲಿ ಸುಧಾರಣೆ ಆಗಿದೆ!

- ಕೆಟ್ಟಮೇಲೆ ಬುದ್ಧಿ ಬಂತು!

+++

"ಅಭಿವೃದ್ಧಿ" ನಮ್ಮ ಸಮಸ್ಯೆಗಳನ್ನು ನಿವಾರಿಸುತ್ತಿದೆಯೆ?

(ವಿಕ್ರಾಂತ ಕರ್ನಾಟಕದ ಮೇ 8, 09 ರ ಸಂಚಿಕೆಗಾಗಿ ಕಳೆದ ಭಾನುವಾರ ಬರೆದದ್ದು.)

ನಮ್ಮಲ್ಲಿ ಒಂದಷ್ಟು ಪರಂಪರಾಗತ ಸಮಸ್ಯೆಗಳಿವೆ: ಅನಕ್ಷರತೆ, ಜಾತೀಯತೆ, ಬಡತನ, ಮೌಢ್ಯ, ಇತ್ಯಾದಿ. ನನ್ನ ತಲೆಮಾರು ನಂಬಿಕೊಂಡು ಬಂದ ಅಥವ ನಂಬಿದ ಮಾತು ಏನೆಂದರೆ, ವಿದ್ಯೆ ಮತ್ತು "ಆರ್ಥಿಕ ಅಭಿವೃದ್ಧಿ" ನಮ್ಮ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ ಮತ್ತು ಅವುಗಳನ್ನು ಇಲ್ಲವಾಗಿಸುತ್ತದೆ ಎನ್ನುವುದು. ಆದರೆ, ಕಳೆದ ಮಾರ್ಚ್ ತಿಂಗಳಿನಲ್ಲಿ ಸುಮಾರು ಮೂರು ವಾರಗಳ ಕಾಲ ಕರ್ನಾಟಕದ ಬೇರೆಬೇರೆ ಕಡೆ ಸುತ್ತಿದ ನನ್ನ ಅನುಭವಗಳ ಆಧಾರದ ಮೇಲೆ ಹೇಳುವುದಾದರೆ, ನನಗೆ ನಾನೂ ಸಹ ನಂಬಿಕೊಂಡೆ ಬಂದ ಈ ಮೇಲಿನ ಮಾತುಗಳ ಬಗ್ಗೆ ನಂಬಿಕೆ ಹೋಗಿದೆ. ಇದಕ್ಕೆ ಪೂರಕವಾಗಿ ನಾನು ಈ ಸಲದ ನನ್ನ ಪ್ರವಾಸದಲ್ಲಿ ಕಂಡ ಮೂರು ಪ್ರಮುಖ ಘಟನೆಗಳನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ. ಇವು ಆ ದಿನಗಳಲ್ಲಿ ನನ್ನನ್ನು ತೀವ್ರವಾಗಿ ತಟ್ಟಿದ, ನನ್ನ ಮಾತು ಮತ್ತು ಆಲೋಚನೆಗಳನ್ನು ಬಹುವಾಗಿ ಪ್ರಭಾವಿಸಿದ, ಖಿನ್ನತೆ ಮೂಡಿಸಿದ ಘಟನೆಗಳೂ ಹೌದು.

ಇನ್ನೂ ಎಷ್ಟು ದಿನ ನರಬಲಿ ಬೇಡುತ್ತದೆ ಈ ಕ್ರೂರ ಜಾತಿವ್ಯವಸ್ಥೆ?

ಮೊದಲನೆಯದು, ಬೆಂಗಳೂರಿನಿಂದ ಕೇವಲ 70 ಕಿ.ಮೀ. ದೂರದ ಊರಿನಲ್ಲಿ ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಡೆದಿರುವ ಘಟನೆ. ಅದು ಮಾಗಡಿ ತಾಲ್ಲೂಕಿನ ಒಂದು ಹಳ್ಳಿ. ರಾಮನಗರ ಮತ್ತು ಮಾಗಡಿ ಪಟ್ಟಣಗಳಿಂದ ಸುಮಾರು 20 ಕಿ.ಮೀ. ಅಂತರದಲ್ಲಿರುವ ಊರು. ಆ ಊರಿನಿಂದ ಬೆಂಗಳೂರಿಗೆ ಹೋಗಿ ಲಾಯರ್