ನೀವು ಕೇಳದಿರಿ

ನೀವು ಕೇಳದಿರಿ

ಬರಹ

’ಸುಧಾ’ದಲ್ಲಿ ’ನೀವು ಕೇಳಿದಿರಿ’.
’ಸಂಪದ’ದಲ್ಲಿ ’ನೀವು ಕೇಳದಿರಿ’.

ನನ್ನ ಪ್ರಶ್ನೆಗೆ ನಾನೇ ಉತ್ತರಿಸುತ್ತೇನೆ ಆಗಾಗ(!)
ನಿಮಗೋ, ಓದಿ ತಲೆಚಿಟ್ಟು ಹಿಡಿಸಿಕೊಳ್ಳುವ ಯೋಗ!

--೦--

* ಕರ್ನಾಟಕದಲ್ಲಿ ಎರಡನೇ ಹಂತದ ಮತದಾನದ ಪ್ರಮಾಣದಲ್ಲಿ ಸುಧಾರಣೆ ಆಗಿದೆ!

- ಕೆಟ್ಟಮೇಲೆ ಬುದ್ಧಿ ಬಂತು!

+++

* ಮತದಾನದ ಗುರುತಿನ ಶಾಯಿಯನ್ನು ಯಡಿಯೂರಪ್ಪ ಬಲಗೈ ಬೆರಳಿಗೆ ಹಚ್ಚಿಸಿಕೊಂಡದ್ದು ಯಾಕೆ?

- ತಾನು ಬಲಪಂಥೀಯ ಎಂದು ಕ್ಯಾಮೆರಾಗಳೆದುರು ಸಾರಿ ತೋರಿಸಲಿಕ್ಕೆ.

+++

* ಕರ್ನಾಟಕದಲ್ಲಿ ಈ ಚುನಾವಣೆಯಲ್ಲಿ ಯಾರ್‍ಯಾರಿಗೆ ಎಷ್ಟೆಷ್ಟು ಸೀಟು ಬರಬಹುದು?

- ಎಲ್ಲರಿಗೂ ಒಟ್ಟು ಸೇರಿ ಇಪ್ಪತ್ತೆಂಟು.

+++

* ರೇಜಸ್ವಿನಿಮೇಲೆ ಶೂ ಎಸೆದರೆ?

- ’ಶೂ’ರ್ಪನಖಿ ಆಗುತ್ತಾರೆ.

+++

* ರಾಹುಲ್ ಗಾಂಧಿ ಮುಂದಿನ ಪ್ರಧಾನಿಯೆ?

- ಆಗುವುದಾದರೆ ಆತ ಮುಂದಿನ ಪ್ರಧಾನಿಯೇ ಆಗುತ್ತಾನೆ. ಮನಮೋಹನ್ ಸಿಂಗರಂತೆ ಮೇಡಂ ಹಿಂದಿನ ಪ್ರಧಾನಿ ಆಗುಳಿಯುವುದಿಲ್ಲ.

+++

* ಒಟ್ಟಾವಿಯೋ ಕ್ವಟ್ರೋಚಿಯನ್ನು ಸಿಬಿಐ ’ಕೈ’ಬಿಟ್ಟಂತೇನಾ?

- ದೇಶದ ಪ್ರಜೆಗಳಿಗೆ ಇವರೆಲ್ಲ ಸೇರಿ ’ಕೈ’ ಕ್ವಟ್ರೋ ಛಿ!
ಪ್ರಕರಣ ಒಟ್ಟಾವಿಯೋ!

+++

* ಚೀರ್ ಗರ್ಲ್‌ಗೆ ಕನ್ನಡದಲ್ಲಿ ಏನಂತಾರೆ?
- ಚೀರ್‌ತಾರೆ.

+++

* ಭಾರತಕ್ಕೆ ಹಂದಿ ಜ್ವರ ಕಾಡದಿರಲು ಏನು ಕ್ರಮ ಕೈಕೊಳ್ಳಬೇಕು?

- ವರಾಹವು ಶ್ರೀಮನ್ನಾರಾಯಣನ ಅವತಾರವಾದ್ದರಿಂದ ವರಾಹಪೂಜೆ, ವರಾಹಹೋಮ, ವರಹದಾನ ಮೊದಲಾದ ಆಚರಣೆಗಳನ್ನು ಕೈಕೊಳ್ಳಬೇಕೆಂದು ದೈವಅಜ್ಞ ರಾಮಯಾಜಿ ಹೇಳುತ್ತಾರೆ.