ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಐಐಎಂ, ಐಐಟಿ ಇವುಗಳ ಖ್ಯಾತಿಗೆ ಕಾರಣಗಳೇನು?

ಭಾರತದ ಅತೀ ಶ್ರೇಷ್ಠ, ಉಚ್ಚ ಶಿಕ್ಷಣದ ದೇಗುಲಗಳೆಂದು ಕರೆಯಲ್ಪಡುವ IIM, IIT ಇವುಗಳ ಖ್ಯಾತಿಗೆ ಕಾರಣಗಳೇನು?

ಅವುಗಳಲ್ಲಿರುವ ಪ್ರೊಫೆಸರ್ ಗಳೇ, ಅಲ್ಲಿನ ಸಿಲೆಬಸ್ಸೇ, ಅಥವಾ ಅಲ್ಲಿನ infrastructureರೇ, ಏನೀ ಗುಟ್ಟು?

ಮುಂದಿನ ವರ್ಷ ತ್ರಿಶೂರ್‍ ಪೂರಂ ನೋಡೋಕೆ ಮರೆಯೋಲ್ಲ ತಾನೆ !

ಇವತ್ತು ಮಧ್ಯಾಹ್ನ ನಂಗೊಂದು ಅಚ್ಚರಿ ಕಾದಿತ್ತು. ಸುದ್ದಿ ವಾಹಿನಿಯ ವರದಿಗಾರನಲ್ವೇ ! ಬೆಂಗಳೂರಿನ ಮಿಥಿಕ್ ಸೊಸೈಟಿಯ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭ ಇತ್ತು ನೋಡಿ. ವರದಿ ಮಾಡೋದಕ್ಕೆ ಹೋಗಿದ್ದೆ. ಮಧ್ಯಾಹ್ನ ಒಂದು ಗಂಟೆ ಬುಲೆಟಿನ್‌ಗೆ ಸುದ್ದಿಕೊಡಬೇಕು ಅನ್ನೋ ದಾವಂತದಲ್ಲಿದ್ದೆ. ಕಚೇರಿಯಲ್ಲಿ ಹಿರಿಯ ಸಹೋದ್ಯೋಗಿ ಒಬ್ಬರು ಇನ್ನೊಬ್ಬ ಸಹೋದ್ಯೋಗಿಗೆ ಪೋರಂ ಅಲ್ಲ ಪೂರಂ ಅಂತ ತಿದ್ದಿಕೊಳ್ಳಿ ಅಂತ ಹೇಳೋದು ಕೇಳ್ಸಿತ್ತು. ಅಷ್ಟೇ ಸಾಕಾಯ್ತು. ನನ್ನ ಕಿವಿ ಚುರುಕಾಯ್ತು. ಸರ್‍ ಅದು ತ್ರಿಶೂರ್‍ ಪೂರಂ ಅಂದೆ. ಅಷ್ಟೇ ಸಾಕಾಯ್ತು. ಅವರಿಗೆ ಕೂಡಲೇ ಹೇಯ್‌ ನೀನೀಗ್ಲೇ ಲೈವ್ ಚಾಟ್‌ಗೆ ನಿಲ್‌ಬೇಕು ಅನ್ನೋದೆ !
ಇನ್ನು ಹತ್ತು ನಿಮಿಷ ಸಮಯ ಅವಕಾಶವಿದೆ. ನನ್‌ ಬಳಿ ಪೂರಂ ಉತ್ಸವದ ಮಾಹಿತಿ ಅಷ್ಟೊಂದಿಲ್ಲ ಸಾರ್‍ ಅಂದೆ.. ಕೇರಳದ ಏಷ್ಯಾನೆಟ್ ವರದಿಗಾರನಿಗೆ ಫೋನ್ ಮಾಡಿ ತಿಳ್ಕೊಳ್ಳಿ ಅಂದ್ರು. ಅಷ್ಟೇ ! ಒಂದು ಗಂಟೆ ಹತ್ತು ನಿಮಿಷಕ್ಕೆ ಶುರುವಾಗಿ ಬಿಟ್ಟಿತ್ತು. ತ್ರಿಶೂರ್‍ ಪೂರಂ ಉತ್ಸವದ ಬಗ್ಗೆ ನನ್ನ ವಿವರಣೆ.

ಮಾವಿನ ಮರದಲ್ಲಿ ಏನಿರುತ್ತೆ?

ಇಷ್ಟೊಂದು ದೊಡ್ಡ ಮಾವಿನ ಮರದಲ್ಲಿ ಹಣ್ಣಾಗಿರೋದು ಯಾವ್ದು ಅಂತ ನಮಗ್ಯಾಗೆ ಗೊತ್ತಾಗ್ಬೇಕು :(

mango_tree

ನೇಗಲಾಲ, ಕೊರಟಗೆರೆ ತಾಲ್ಲೂಕು ಬಳಿ ಕಂಡ ಮಾವಿನ ಮರ

ಹೀಗೆರಡು ಬಲಾತ್ಕಾರದ ಕತೆಗಳು - ಹುಡುಗರ ಮೇಲೆ ಹುಡುಗಿಯರಿಂದ.

ಅವಿನಾಶ ಕಾಮತರ ಬರಹದಿಂದ ಸ್ಪೂರ್ತಿ ಪಡೆದು ನಾನು ಓದಿದ, ಕೇಳಿದ ಎರಡು ಕತೆಗಳನ್ನು ಹೇಳುತ್ತೇನೆ.
ಘಟನೆ ೧.

ಸುಮಾರು ೨೦-೨೫ ವರುಷ ಹಿಂದಿನ ಕತೆ.

ಬೆರಳ್‌ನ ತಿರುಳ್

ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮತದಾನದ ಗುರುತಿನ ಶಾಯಿಯನ್ನು ಕೆಲ ಗಣ್ಯರು ಬೇರೆ ಬೆರಳುಗಳಿಗೆ ಹಚ್ಚಿಸಿಕೊಂಡದ್ದಕ್ಕೆ ಕಾರಣಗಳನ್ನು ಈ ಕೆಳಗೆ ಬಯಲುಗೊಳಿಸಲಾಗಿದೆ. 

ಚಿತ್ರ ಕೃಪೆ: Deccan Herald

ನೀವು ಕೇಳದಿರಿ - 3

* ಕರ್ನಾಟಕದಲ್ಲಿ ಮತದಾನ ಮುಗಿದರೂ ಪಕ್ಷಗಳ ಪರಸ್ಪರ ಕೆಸರೆರಚಾಟ ನಿಂತಿಲ್ಲವಲ್ಲ ಗುರುವೇ!

- ಎಲ್ಲರ ಬಳಿಯೂ ಆ ಪಾಟಿ ಕೆಸರಿದೆಯಲ್ಲಾ, ಅದನ್ನು ಹೇಳು ಶಿಷ್ಯಾ!

+++

* ಪಕ್ಷಗಳ ಕೆಸರೆರಚಾಟದ ಬಗ್ಗೆ ರವಷ್ಟು ಕಮೆಂಟ್ ಮಾಡಿ ಗುರುವೇ.

- ಓಕೆ ಶಿಷ್ಯಾ, ಕೇಳು.
’ಕೈ ಕೆಸರಾದರೆ ಬಾಯ್ ಮೊಸರು’, ಎಂದು ನಂಬಿ ಕಾಂಗ್ರೆಸ್ ’ಕೈ’ ಕೆಸರು ಮಾಡಿಕೊಳ್ಳುತ್ತಿದೆ.

ಸಂಪದಿಗರಿಗೆ ಬೈ ಬೈ

ಸಂಪದಿಗರಿಗೆ,
ನಾನು ಊರಿಗೆ ಹೋಗ್ತಿದ್ದೀನ್ರೀ ಅಲ್ಲಲ್ಲ ಬರ್ತಿದ್ದೀನಿ ನಿಮ್ಮುನ್ನೆಲ್ಲಾ ಮಿಸ್ ಮಾಡ್ಕೋತೀನಿ. 30ದಿನ ನಿಮ್ಮಜತೆ ಮಾತಾಡಕ್ಕಾಗಲ್ಲ. ಏಕಂದ್ರೆ ನಾನು ಬೆಂಗ್ಳೂರಲ್ಲೇ ಇರ್ತೀನಿ. ಬರ್ಲಾ ಬೈ ಬೈ.

ಸೀತ ಆರ್. ಮೊರಬ್.

ನೀವು ಕೇಳದಿರಿ - 2

* ಕೇಳಿ-ಕೇಳಿದಿರಿ-ಕೇಳದಿರಿ ಇವುಗಳ ವ್ಯತ್ಯಾಸವೇನು?
- ಮೊದಲನೆಯದು ಬರೀ ’ಕೇಳಿ’. (ವಿವರಣೆ ಅನವಶ್ಯ) ( ’ಹಾಯ್’!)
ಎರಡನೆಯದು ’ಕೇಳಿ ದಿರಿ’ಸು (ಕ್ರೀಡೆಯ ದಿರಸು) (’ಸುಧಾ’).
ಮೂರನೆಯದು ’ಕೇಳದಿರಿ’ಸು (ಕೇಳದೇ ಇಡು!) (ಪಾಯಿಂಟ್ ಇಡು, ಬತ್ತಿ ಇಡು ಇತ್ಯಾದಿ).

+++

* ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಸಲ ಉಡುಪಿ ಜಿಲ್ಲೆಯೇ ಯಾಕೆ ಫಸ್ಟ್ ಬರುತ್ತದೆ?