ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಾಹಿತಿ ಬೇಕಿದೆ!

ನನ್ನ ಲೇಖನವೊದಕ್ಕೆ ಈ ಕೆಳಗಿನ ಮಾಹಿತಿ ಬೇಕಿದೆ.

೧. ಅಂತರ್ಜಾಲದಲ್ಲಿ ಕನ್ನಡದ ತಾಣಗಳು ಎಷ್ಟಿವೆ? ಎಷ್ಟು ಕನ್ನಡ ಬ್ಲಾಗ್ ಗಳಿವೆ?

೨. ಆರೋಗ್ಯ ಸಂಬಂಧಿತ ತಾಣಗಳು ಹಾಗೂ ಬ್ಲಾಗ್ ಗಳು ಎಷ್ಟಿವೆ? 

ಈ ಬಗ್ಗೆ ತಿಳಿದವರು ದಯವಿಟ್ಟು ಮಾಹಿತಿಯನ್ನು ನೀಡಿ.

ನನ್ನಿ

ನಾಸೋ

ಪ್ರಶ್ನೆ ಕೇಳುತ್ತಾರೋ ಅಥವಾ ಪ್ರಶ್ಣೆ ಕೇಳುತ್ತಾರೋ...?

ನಾನು ತಿಳಿದ ಪ್ರಕಾರ ಹಾಗೂ ಕೇಳಿಸಿಕೊಂಡ ಪ್ರಕಾರ, ನಮ್ಮಲ್ಲಿ ಹೆಚ್ಚಿನೆಲ್ಲ ಮಂದಿ "ಪ್ರಶ್ನೆ"ಯನ್ನು "ಪ್ರಶ್ಣೆ" ಯೆಂದೇ ಉಚ್ಚಾರ ಮಾಡುತ್ತೇವೆ.
ಇದು ನಿಜವಲ್ಲವೇ? ಇದು ಯಾಕೆ ಹೀಗೆ?

ಮಗಳ ಪ್ರಶ್ನೆ..

ಹಿಂಗ್ಯಾಕ ನಮ್ಮ ದೇಶದಾಗ ? ೮ ವರ್ಷದ ಮಗಳು ಕೇಳಿದ್ಲು ಆಫೀಸ ಮುಗಿಸಿ ಟಿವಿ ಹಚ್ಚಿದಾಗ ಚಾನಲ್ ನವರು ಕಸಬ್ ನ ಡಿಮಾಂಡ್ ಬಗ್ಗೆ ಹೇಳುತ್ತಿದ್ದರು. ಓದಲು ಪಾಕಿಸ್ತಾನಿ ಪತ್ರಿಕೆ ಬೇಕಂತೆ ಅವನಿಗೆ ಕೊಡೋಣ ಆದರೆ ನಾಳೆ ಮಲ್ಲಿಕಾ ಶೇರಾವತ್ ಬೇಕು ಎಂದು ಹಟ ಹಿಡಿದರೆ ಏನು ಮಾಡೋದು....ಇಷ್ಟಕ್ಕೂ ಅವ ನಮ್ಮ ಅತಿಥಿ ಅಲ್ಲ ಬಂಧು ಮೊದಲೇ ಅಲ್ಲ.

ಸರಕಾರ ಟೀಕಿಸುವ ಹಕ್ಕು ಸಿಕ್ಕಿತು!

ಸರಕಾರ ಟೀಕಿಸುವ ಹಕ್ಕು ಸಿಕ್ಕಿತು!

ಬೆಳಗ್ಗೆ ಮಿಂದು ಮಡಿಯಾಗಿ ಮತಗಟ್ಟೆಗೆ ತೆರಳಿ,ಖಾಲಿಯಾಗಿದ್ದ ಮತಗಟ್ಟೆಗೆ ನೆರವಾಗಿ ನುಗ್ಗಿ ಮತದಾನ ಮಾಡಿ ಕೃತಾರ್ಥನಾದೆ.
ನನ್ನ ಮತದಾನ ನಿಜವಾಗಲು ಮತದಾನವೇ ಅನ್ನುವುದನ್ನು ಗಮನಿಸಿ.   ಅದಕ್ಕೆ ಯಾವ ಬೆಲೆಯೂ ಸಿಕ್ಕಿಲ್ಲ.

’ಕಾರ್ಮಿಕ ದಿನ’ ಎಂಬ ಅಸಂಬದ್ಧ ಆಚರಣೆ!

ಮೇ ೧, ಕಾರ್ಮಿಕ ದಿನ.

ಇದು ನಮ್ಮದಲ್ಲ. ಆದರೆ ನಮ್ಮದೆಂದು ಒಪ್ಪಿಕೊಂಡು-ಅಪ್ಪಿಕೊಂಡು ಪ್ರತಿ ವರ್ಷ ಆಚರಿಸುತ್ತಿದ್ದೇವೆ!

ಮಕ್ಕಳು ನೋಡಬಾರದ ಚಾನಲ್ !

ಒಂಬತ್ತು ಘಂಟೆಗೆ ಮಲಗಿಕೊಂಡೆ. ಚೆನ್ನಾಗಿ ನಿದ್ದೆ ಬಂದಿತ್ತು. ಏನು ಮಾಡಲಿ, ಟಾಯ್ಲೆಟ್ಟಿಗೆ ಅರ್ಜಂಟ್ ಆಗಿ ಎಚ್ಚರಿಕೆ ಆಯ್ತು. ನನಗೆ ಹೆದರಿಕೆ ಆಗದಿರಲಿ ಅಂತ ಅಮ್ಮ ಹಾಕಿದ್ದ ಸಣ್ಣ ದೀಪ ಉರಿಯುತ್ತಿತ್ತು. ಆದರೂ ಒಬ್ಬನಿಗೇ ಹೋಗಲು ಭಯ. ಮೆಲ್ಲಗೆ ಎದ್ದು ಬಂದು ’ಅಮ್ಮಾ’ ಎಂದು ಕೂಗುತ್ತ ಮಹಡಿ ಮೆಟ್ಟಿಲು ಇಳಿದೆ.

ಅಪ್ಪ ಸೋಫಾದ ಮೇಲೆ ಕುಳಿತು Tom and Jerry ನೋಡುತ್ತಿದ್ದರು. ಅಮ್ಮ ’ಏನಾಯ್ತು’ ಎಂದು ಧಾವಿಸಿ ಬರುತ್ತ ಕೇಳಿದರು. ’ಟಾಯ್ಲೆಟ್’ಗೆ ಹೋಗಬೇಕು’ ಎಂದೆ. ’ನಡಿ’ ಎಂದು ಕರೆದುಕೊಂಡು ಮೆಟ್ಟಿಲನ್ನು ಹತ್ತುವಾಗಲೇ ಟೀವಿ ಇಂದ ಬರುತ್ತಿದ್ದ ಕಾರ್ಟೂನ್ ಚಾನೆಲ್’ನ ದನಿಯೇ ಬದಲಾಗಿತ್ತು. ಮನಸ್ಸಿನಲ್ಲೇ ನಕ್ಕೆ.

ಎಲ್ಲ ಆದ ಮೇಲೆ ನನ್ನನ್ನು ಮಲಗಿಸಿ ಅಮ್ಮ ಮತ್ತೆ ಕೆಳಗೆ ಹೋದರು. ಕಣ್ಣು ಮುಚ್ಚಿದ್ದರೂ ಸ್ವಲ್ಪ ಹೊತ್ತು ನಿದ್ದೆ ಬರಲಿಲ್ಲ. ನನಗೆ ಚೆನ್ನಾಗಿ ಗೊತ್ತು. ನಾನು ಎದ್ದು ಕೆಳಗೆ ಹೋಗುವ ಮೊದಲು ಅಪ್ಪ-ಅಮ್ಮ ಕಾರ್ಟೂನ್ ಚಾನಲ್ ನೋಡುತ್ತಿರಲಿಲ್ಲ. ಅವರು ನೋಡುತ್ತಿದ್ದ ಚಾನಲ್ ಬೇರೇನೋ. ನನಗೇನೂ ಗೊತ್ತಾಗೋಲ್ಲಾ ಅಂತ ಅಂದುಕೊಂಡಿದ್ದಾರೆ. ಅಲ್ರೀ, ನಾನೂ ದೊಡ್ಡವನಾಗಿದ್ದೀನಿ ಗೊತ್ತಾ. ಲಾಸ್ಟ್ ವೀಕ್ ನಂದು ಹುಟ್ಟುಹಬ್ಬದ ಪಾರ್ಟಿ ಇತ್ತು. ನನಗೆ ಈಗ ನಾಲ್ಕು ವರ್ಷ ಗೊತ್ತಾ !!!

ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಮದುವೆಯಾದರೆ ಏನಾಗುತ್ತೆ?

ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು
ಮದುವೆಯಾದರೆ ಏನಾಗುತ್ತೆ?
ಏನೂ ಆಗೊಲ್ಲ,
ಮುದ್ದಾದ ಎರಡು ಮಕ್ಕಳಾಗುತ್ತೆ!

--ಸವಿತಾ ನಾಗಭೂಷಣ