ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹದಿಮೂರು ಸಾವಿರದೆಡೆಗೆ

ಕಾಲಚಕ್ರದ ಜೊತೆಗೆ ಮತ್ತಾರು ಚಕ್ರಗಳು
ಕರೆದೊಯ್ಯುತ್ತಿದ್ದವುನನ್ನ ಕಾರ್ಯಕ್ಷೇತ್ರದೆಡೆಗೆ
ವರ್ಷಾನುವರ್ಷ ಬೆಂಬಿಡದ ತ್ರಿವಿಕ್ರಮನಂತೆ
ಬಿದ್ದಿದ್ದೆ ನಾನದರ ಹಿಂದೆ.

ಗೊತ್ತೂ ಗೊತ್ತಿಲ್ಲದೆ ಬಿದ್ದ ಕನಸು
ನಾಲ್ಕು ಚಕ್ರದ ಆಸೆ
ವ್ಯಯಿಸಿದ ನಂತರ ಝಣ ಝಣ ಕಾಂಚಾಣ
ಆದೆ ನಾನದರ ಯಜಮಾನ.

ಮೊದಲ ತಿಂಗಳೇ ಆಯ್ತು ನನ್ನ ರಥಕ್ಕೆ
ಮಂಗಳಾರತಿ..

ನನ್ನೀ ವಿರಹ

ನಿನ್ನೆ ಮೊನ್ನೆಯವರೆಗೂ
ನಿನ್ನಲ್ಲೇ ನಾನು ಎನ್ನುತಿದ್ದ
ನೀನು ಇಂದೇಕೆ ಹೀಗಾಗಿರುವೆ ,
ನೀನು ಅಲ್ಲೇ , ನಾನು ಇಲ್ಲೇ
ಅನ್ನುತ್ತಿರುವೆಯಲ್ಲ

ರಿಂಗಾದೊಡನೆ ನನ್ನದೇ
ಕರೆ ಏನೋ ಎಂದು
ಸ್ವೀಕರಿಸುತಿದ್ದ ಆ ನಿನ್ನ ಮೊಬೈಲ್
ಕರೆ ಮಾಡಿದೊಡನೆಯೇ ಸ್ವೀಕರಿಸುತ್ತಿಲ್ಲ
ಎಂಬ ಹೇಳಿಕೆ ಕೊಡುತ್ತಿಹುದಲ್ಲ

ವಾರಕ್ಕೊಂದು ನೆವ ಹೇಳಿ
ನನ್ನಲ್ಲಿಗೆ ಬರುತಿದ್ದ ನೀನು

ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...?

ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ
ಅದಕಾಗಿ ಗೆಳೆಯನಿಗಿತ್ತಳೇ ಬಿಡುಗಡೆಯ ಬಹುಮಾನ

ಎರಡು ದಶಕಗಳ ಹಿಂದೆ ತಿಂದರು ಯಾರೋ ಲಂಚ
ಅಲ್ಲಿಂದ ಇಲ್ಲೀವರೆಗೂ ಪರಿಸ್ಥಿತಿ ಬದಲಾಗಿಲ್ಲ ಕೊಂಚ

ಲಂಚ ಪಡೆದವರ ಹಿಡಿಯುವ ಇಚ್ಛಾಶಕ್ತಿ ಇದ್ದಂತಿಲ್ಲ
ಆದರೆ ಅದಕೆ ಮುಕ್ತಾಯ ಹಾಡಲು ಮನಸ್ಸೂ ಇಲ್ಲ

ಬೋಫೋರ್ಸ್ ಬೇತಾಲದ ಬೆನ್ನು ಹತ್ತಿದ ವಿಪಿ ಸಿಂಗ

ಸ್ನೇಹ ಸ೦ಬ೦ಧ

"ರಘು, ಹರಿಯ ಜೊತೆ ಶಾ೦ತಿಯ ಮದುವೆ ಬೇಡ ಆಯ್ತಾ? ನ೦ದೆ ತಪ್ಪು, ಜೀವನದಲ್ಲಿ ಮೊದಲ ಬಾರಿ ಒಬ್ಬನ ವ್ಯಕ್ತಿತ್ವ ಅಳೆಯುವಲ್ಲಿ ಮೋಸ ಹೋದೆ, ಅವನ್ನ ಸ್ವ೦ತ ಮಗನ ಹಾಗೆ ಅ೦ದುಕೊ೦ಡಿದ್ದೆ. ಮಾತಿನಲ್ಲಿಯೆ ಮೊಡಿಮಾಡೋ ಮೋಸಗಾರ ಕಣ್ರಿ, ಅವನ ಕಲ್ಯಾಣಗುಣ ಮದುವೆಗೆ ಮೊದಲೇ ಗೊತ್ತಾಗಿ ಒಳ್ಳೇದೆ ಆಯ್ತು. ನಿಮ್ಮ ಮಗಳ ಭವಿಷ್ಯ ಹಾಳಾಗೋದು ತಪ್ಪಿತು.

ಕ್ಷೇತ್ರ ಪರಿಚಯ: ಕೊಲ್ಲೂರು

ಪರಶುರಾಮ ಸೃಷ್ಟಿಸಿದ ಕರ್ನಾಟಕ ಕರಾವಳಿಯ ಪ್ರದೇಶದ ಸಪ್ತಕ್ಷೇತ್ರಗಳಲ್ಲಿ ಒಂದು ಕೊಲ್ಲೂರು. ಕೊಡಚಾದ್ರಿ ಎಂದಾಗ ಹಲವರಿಗೆ ನೆನಪಾಗುವುದು ಚಾರಣ. ಕೊಡಚಾದ್ರಿ ಬೆಟ್ಟದಿಂದ ಪಶ್ಚಿಮ ದಿಕ್ಕಿನಲ್ಲಿ ಇಳಿದರೆ ಸಿಗುವುದು ಪವಿತ್ರ ಕ್ಷೇತ್ರ. ಅದುವೇ ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನ. ಕರ್ನಾಟಕದ ಪ್ರಸಿದ್ಧ ದೇವಿ ಕ್ಷೇತ್ರ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಿಂದ ಸುಮಾರು ೪೫ ಕಿ.ಮೀ ಅಂತರದಲ್ಲಿದೆ ಈ ಕ್ಷೇತ್ರ. ಹಾಗೆ ಕುಂದಾಪುರ ತಾಲೂಕಿನ ಬೈಂದೂರಿನಿಂದ ೩೦ ಕಿ.ಮೀ ಅಂತರದಲ್ಲಿದೆ. ಸೌಪರ್ಣಿಕಾ ನದಿ ಮತ್ತು ಪಶ್ಚಿಮ ಘಟ್ಟದ ಸಾಲುಗಳ ಬಳಿ ಇರುವ ಇತಿಹಾಸ ಪ್ರಸಿದ್ಧ ಕ್ಷೇತ್ರ. ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಅಂಧ್ರಪ್ರದೇಶ, ಕೇರಳ, ಗೋವಾ, ಮಹಾರಾಷ್ತ್ರದವರಿಗೂ ಈ ಕ್ಷೇತ್ರ ಬಹಳ ವಿಶೇಷ. ಮಳೆಗಾಲ, ಬೇಸಿಗೆಗಾಲ ಎಂಬ ಋತುಭೇದವಿಲ್ಲದೆ ಜನಸಾಗರದಿಂದ ತುಂಬಿ ತುಳುಕುತ್ತಿರುತ್ತದೆ. ಸುಪ್ರಸಿದ್ಧ ಗಾಯಕರಾದ ಯೇಸುದಾಸ್ ಅವರು ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬದಂದು ತಪ್ಪದೆ ಇಲ್ಲಿಗೆ ಬಂದು ಚಂಡಿಕೆಯಾಗ ನಡೆಸಿ ದೇವಿಯ ಆಶೀರ್ವಾದ ಪಡೆಯುತ್ತಾರೆ. ಅಲ್ಲದೇ ಸಂಗೀತ ಕಚೇರಿ ಕೂಡ ನೀಡುತ್ತಾರೆ

ರದ್ದಿ ಕಾಗದದೊಳಗೆ

ರದ್ದಿ ಕಾಗದದೊಳಗೆ
ಪ್ರೇಮಿಗಳಿಬ್ಬರ ಆತ್ಮಹತ್ಯೆ,
ಧನಿಕನೊಬ್ಬನ ದಾರುಣ ಹತ್ಯೆ.
ಸಿನಿಮಾ ನಟನೊಬ್ಬನ
ಕಚ್ಚೆಹರುಕುತನ,
ವೇಶ್ಯೆಯೊಬ್ಬಳ ಮಾನ ಹರಣ.
ದಿಬ್ಬಣಕೆ ಹೊರಟಿದ್ದ ಗಾಡಿ
ದಿಬ್ಬದಿ೦ದ ಬಿದ್ದು ಒ೦ದಿಷ್ಟು ಸಾವು.
ನಾಯಿಬಾಲ ನೆಟ್ಟಗಾಗಿರುವ ಸುದ್ದಿ.
ಬೂದಿ ಉದುರಿಸಿದ ಭಗವ೦ತ.
ಇವೇ ಮಾಮೂಲು ನ್ಯೂಸುಗಳು.
ರದ್ದಿ ಕಾಗದ ಬಲು ಘಾಟು,
ಅದರೊಳಗೆ ಉಪ್ಪಿಟ್ಟು ರವೆ

ರಾಜಕಾರಣಿ

ಓ ಇಂದಿನ ರಾಜಕಾರಣಿ,
ಆಗು ನೀ ಜಗಕೆ ಚಿಮಣಿ.
ನೀಡುತಿರು ಬೆಳಕ ಚಿಕ್ಕ ದೀಪವಾಗಿ,
ಸುಡದಿರು ಜಗವ ಬೆಂಕಿಯಾಗಿ. ||ಪ||

ಮರೆಯದಿರು ಸವೆಸಿ ಬಂದ ಹಾದಿಯನು,
ಮುಂದೆ ಹೋದಾಗ..
ಮರೆತರೆ ಯಾರೂ ಬರಲಾರರು
ನೀ ಸತ್ತಾಗ! || ೧ ||

ಕೈಲಾದಷ್ಟು ಮಾಡು
ಚುನಾಯಿಸಿದ ಜನಕೆ ಒಳ್ಳೇಯದ.
ಆಗ ಸುಮ್ಮನೆ ನೋಡು
ನಿನ್ನ ಜಗವೇ ಮೆಚ್ಚುವುದ. || ೨ ||

ಬಲಿಯಾಗಬೇಡ ಎಂದೂ ನೀ, ಭ್ರಷ್ಟಾಚಾರಕ್ಕೆ