ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶಂಕರ ರಾಮಾನುಜ ’ಸಹಜನ್ಮ’ಯೋಗ!

ಶಂಕರ ಜಯಂತಿ ಮತ್ತು ರಾಮಾನುಜಾಚಾರ್ಯರ ತಿರುನಕ್ಷತ್ರ (ಜಯಂತಿ) ಎರಡೂ ಒಂದೇ ದಿನ ಆಗಿರುವುದೊಂದು ಯೋಗ!

ಭಗವದ್ದರ್ಶನದ ತಪದಲ್ಲಿ ಭಿನ್ನ ಮಾರ್ಗಗಳನ್ನು ಅವಲಂಬಿಸಿದ ಆಚಾರ್ಯದ್ವಯರ ಜನ್ಮದಿನವು ಒಂದಾಗಿ ಬಂದಿರುವುದು ಪ್ರಕೃತಿಯು ನಮಗೆ ಒಂದುಗೂಡಿ ನಡೆಯುವಂತೆ ನೀಡಿರುವ ಸಂದೇಶವೆಂದೇ ಭಾವಿಸಬಹುದು.

ಜರ್ದಾರಿ-ಒಬಾಮಾ ಸಂವಾದ!!!

ಜರ್ದಾರಿ: ಒಸಾಮ-ಬಿನ್-ಲಾಡೆನ್ ಜೀವಂತವಾಗಿಲ್ಲ
ಒಬಾಮಾ: ನಾವು ಇದನ್ನು ನಂಬೋಲ್ಲ

ಜರ್ದಾರಿ: ನಿಜವಾಗಿಯೂ ಆತ ಜೀವಂತವಾಗಿಲ್ಲ
ಒಬಾಮಾ: ನಿಜವಾಗಿಯೂ ನಾವು ಇದನ್ನು ನಂಬೋಲ್ಲ

ಜರ್ದಾರಿ: ಒಸಾಮ ಸತ್ತು ತಿಂಗಳುಗಳೇ ಆಗಿವೆ
ಒಬಾಮಾ: ಒಸಾಮ ಸತ್ತ ಸುದ್ದಿ ನಮಗೆ ದೊರೆತೇ ಇಲ್ಲ

ಜರ್ದಾರಿ: ಒಸಮಾ ಸಾವಿನ ಸುದ್ದಿ ನಿಜಕ್ಕೂ ನಂಬಲರ್ಹ

ಹೀಗೊ೦ದು ಮಗು ಮತ್ತದರ ಸಮಸ್ಯೆ ಪರಿಹಾರ

’ಅಮ್ಮಾ,ನಾನು ಗೊ೦ಬೆನ ಒದೀಬೇಕು , ತಕ್ಕೊದು’ಒ೦ದೇ ಸಮನೆ ಅಳುತ್ತಿದ ಚ೦ದು .ಕಣ್ಣಲ್ಲಿ ಒ೦ದು ಹನಿ ನೀರಿಲ್ಲ್ಸ ಮೂಗುಜ್ಜಿಕೊ೦ಡು ತಾರಕದಲ್ಲಿ ಅಳುತ್ತಿದ್ದ.ನಾನು ಹತ್ತಿರ ಹೋಗಿ "ಗೊ೦ಬೆ ಇರೋದು ಆಡಕ್ಕಲ್ವಾ ?ಒಡೀಬಾರ್ದು , ಆಡಿಕೊಳ್ತೀಯಾ ಕೊಡ್ತೀನಿ" ಎ೦ದೆ.ಅಳು ನಿಲ್ಲಿಸಿ ’ಹೂ೦’ ಎ೦ದವನು ಕೊಟ್ಟ ಮರುಕ್ಷಣವೇ ಚೂರುಮಾಡಿದ್ದ.ಮತ್ತು ಅದನ್ನು ನೋಡಿ ಕೇಕೆ ಹಾಕಿ ನಗುತ್ತ

"ಗೆಳತಿ.. ಎಚ್ಚರ" -ಕವನ

ಗೆಳತಿ.. ಎಚ್ಚರ
**************

ಟೀನ್ ವಯಸೆಂದು
ಬಣ್ಣದ ಚಿಟ್ಟೆಯೆಂದು
ಚೆಲ್ಲಾಡದಿರು..
ಸ್ನೇಹಿತರು ಬೇಕೆಂದು
ಹೊಸ ಸಂಬಂಧವೆಂದು
ಮರುಳಾಗದಿರು..

ಮಾತುಗಳು ಸಮಯವ
ಮೀರದಿರಲಿ..
ಭಾವನೆಗಳು ಏಕಾಗ್ರತೆಯ
ಕಲಕದಿರಲಿ..

ಸಿಡಿಕೋಪವ ಹಿರಿಯರಲಿ
ತೋರದಿರು...
ಹೆತ್ತವರ ಲಕ್ಷ್ಮಣ ರೇಖೆಯ
ದಾಟದಿರು...

ಮನಸ್ಸು ತುಂಬಾ ಬೇಸರದಲ್ಲಿದೆ

ಇತ್ತಿಚೆಗೆ ಯಾಕೋ ತುಂಬಾ ಬೇಸರವಾಗ್ತಾ ಇದೆ ಯಾಕೆ ಅಂತ ಯೋಚನೆ ಮಾಡ್ತ ಇದ್ದಾಗ ಗೊತ್ತಾಯ್ತು. ಯಾಕೆ ಬೇಸರ ಅಂತಿರಾ ಸಂಪದದ ಕೆಲವು ಗೆಳೆಯರು ನಾಪತ್ತೆಯಾಗಿದ್ದಾರೆ. ಉದಾ: ಅರವಿಂದ್, ಸುಪ್ರಿತ್, ಇಂಚರಾ, ಗೌಡ ಹೀಗೆ ಹಲವಾರು ಜನ ಇದರ ಜೊತೆಗೆ ಅವರ ಬರಹಗಳು ನೋಡಿ ಸಹ ಸಾಕಷ್ಟು ದಿನಗಳಾದವು.

ಕಮಲದ ತೆಕ್ಕೆಗೆ ಬಂಗಾರಪ್ಪ...!!!???

ಮುದುಕನಾದ ಮೇಲೆ ಸೈಕಲ್ ಬಿಡುವ ದುಸ್ಸಾಹಸ ತಪ್ಪು
ಕೊನೆಗಾಲದಲಿ ಕೈಯ ಆಸರೆ ಸಿಕ್ಕರೆ ಮನಸಾರೆ ಒಪ್ಪು

ಇಂದು ಒಂದಾದರೂ ಹಿಂದೆ ನಿಮ್ಮದು ಒಡೆದ ಮನೆ-ಮನ
ರಾಘವೇಂದ್ರ ಹಾಗಲ್ಲ ಒಪ್ಪಿಸಿದ್ದಾನೆ ಅಪ್ಪನಿಗೇ ತನು ಮನ

ಮಗನಲ್ಲಿ ನೆಪಮಾತ್ರ ಯುದ್ಧ ಯಡ್ಯೂರಪ್ಪನವರದೇ ಅಲ್ಲಿ
ಸೋಲುಂಡರೆ ಮಾತ್ರ ಯಾರ ಶೋಭೆಯೂ ಉಳಿಯದಲ್ಲಿ

ಮೌನದ ಮೊರೆ ಹೋಗುತ್ತಾ ಎಲ್ಲರಿಗೂ ಒಂದು ವಿದಾಯ

ಹುಡುಕಾಟದಲ್ಲೇ ಅಲೆದಾಟವೇ ?
ಅಲೆಯುವಾಗಿನ ಹುಡುಕಾಟವೇ?
ಹುಡುಕುವಿಕೆಯಲ್ಲಿನ ಆನಂದವೇ.?
ಕಾಣದ ರಹಸ್ಯವ ಒಡೆವ ಆಸೆಯೇ?

ತಿಳಿ ತಿಳಿದು ತಳ ಕಾಣದಾ ಕುರುಡೇ?
ಕುದಿ ಕುದಿದು ತುದಿ ಕಾಣುವ ಮರುಳೇ?

ಕಣ್ ಕಂಡದ್ದು ಮನಗಾಣುವುದಿಲ್ಲವೆಂಬ ಭ್ರಮೆಯೇ?
ಮನಗಂಡಿದ್ದು ಕಣ್ ಕಾಣುವುದಿಲ್ಲವೆಂಬುದು ಸತ್ಯವೇ?

ಕಂಡದ್ದೆಲ್ಲಾ ಹೇಳಲಾಗದ ದುಗುಡವೋ

ಮತದಾರರಿಗೆ ಕೆಲವು ಪ್ರಶ್ನೆಗಳು

ರಾಜ್ಯದಲ್ಲಿ ಇದೇ ೩೦ರಂದು ನಡೆಯಲಿರುವ ಎರಡನೇ ಹಂತದ ಮತದಾನದ ದಿನ ಮತ ನೀಡದಿರಲು ಯೋಚಿಸುತ್ತಿರುವ ವಿದ್ಯಾವಂತ ಮತದಾರರು ‍ಯಾರಿದ್ದೀರಿ ಅವರೆಲ್ಲರಲ್ಲಿ ನನ್ನ ಕೆಲವು ಪ್ರಶ್ನೆಗಳು:

ಜಾಣೆ!

ಸಖೀ,
ಊರ
ಬಾವಿಯಿಂದ
ನೀರ ಸೇದಿ,
ಕೊಡವನೇರಿಸಿ
ಸೊಂಟದ ಮೇಲೆ,
ಬಳುಕುತ್ತಾ
ಬರುತ್ತಿದ್ದ ನೀರೆಯ
ಕಂಡು ಆತ:
"ಆಹಾ ಆ
ಕೊಡದ ಭಾಗ್ಯವೇ,
ನಾನಾದರೂ
ಆ ಕೊಡವಾಗಿದ್ದಿದ್ದರೇ.."
ಎಂದೆನ್ನಲು,
ಆ ಜಾಣೆ:
"ಈ ಕೊಡವ
ನೆಲಕ್ಕಪ್ಪಳಿಸಿ
ದಿನವೂ
ನೀ ಕೊಡುವ
ಕಿರುಕುಳದಿಂದ
ಎಂದೋ
ತಪ್ಪಿಸಿ ಕೊಳ್ಳುತ್ತಿದ್ದೆ"
ಎನ್ನಬೇಕೆ?!