ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೆಳೆತನ

ಬಲವುಳ್ಳವರ ಗೆಳೆತನವೋ
ಬಲವಿರುವವರಿಗೇ ಮೀಸಲು;
ದೀಪವಾರಿಸುವ ಗಾಳಿರಾಯ
ಕಾಳ್ಗಿಚ್ಚನು ಪುಟಗೊಳಿಸುವನು!

ಸಂಸ್ಕೃತ ಮೂಲ:

ಬಲಿನೋ ಬಲಿನಃ ಸ್ನಿಹ್ಯಂತ್ಯಬಲಂ ತು ನ ಗೃಹ್ಣತೇ|
ದಾವಂ ದೀಪಯತೇ ಚಂಡೋ ದೀಪಂ ವ್ಯಾಹತಿ ಮಾರುತಃ ||

-ಹಂಸಾನಂದಿ

ನಕಾರಾತ್ಮಕ ಮತದ ಬಗೆಗೆ ದಿಕ್ಕು ತಪ್ಪಿಸುವ ಪತ್ರಿಕಾ ವರದಿ

ಇಂದಿನ ವಿಜಯ ಕರ್ನಾಟಕದಲ್ಲಿ ನಕಾರಾತ್ಮಕ ಮತಗಳೂ ಗಣನೆಗೆ ಎಂದು ಓದಿ ತುಂಬಾ ಕುಶಿಯಾಯಿತು. ಎಲ್ಲವೂ ನನ್ನ ಅನಿಸಿಕೆಗೆ ಅನುಗುಣವಾಗಿಯೇ ಇದೆ. ರಾಜಕಾರಣಿಗಳಿಗೆ ಸ್ವಲ್ಪವಾದರೂ ಬಿಸಿ ಮುಟ್ಟಿಸಲು ಸಾದ್ಯ ಅಂದುಕೊಂಡೆ. ಓದುತ್ತಾ ಹೋದಂತೆ ಇವರೆಲ್ಲೋ ದಾರಿ ತಪ್ಪಿದ್ದಾರೆ ಅನ್ನುವ ವಿಚಾರ ಸ್ಪಷ್ಟವಾಯಿತು. ಆದರೂ ತಿರುಳೆಷ್ಟು ಅರಿಯಲು ಆಂಗ್ಲ ಪತ್ರಿಕೆ ಬಿಡಿಸಿದೆ.

ವೆನಿಲ್ಲಾ ಮತ್ತು ಮೆಹೆಂದಿ ಚಿತ್ರಗಳು

ಅರವಿಂದ್ ರವರೆ , ನಿಮ್ಮ ವೆನಿಲ್ಲಾ ಲೇಕನ ನೋಡಿದೆ .ನನ್ನಲ್ಲೂ ಒಂದೆರಡು ಚಿತ್ರಗಳಿವೆ ನೋಡಿ . ಮೊನ್ನೆ ಊರಿಗೆ ಹೋದಾಗ ತೆಗೆದದ್ದು .

ವೆನಿಲ್ಲಾ ಹೂವು

ವೆನಿಲ್ಲಾ ಹೂವು

ನನ್ನ ಮನದಾಳದ ಮಾತು ಅ ನನ್ನ ಗುರುವಿಗೆ - ಭಾಗ 3

ನನ್ನ ಪ್ರೀತಿಯ ಅರಿವಿದ್ದೂ ನಟಿಸುತ್ತಿರುವೆಯೋ
ಅರಿವಿಲ್ಲದೆ ನಟಿಸುತ್ತಿರುವೆಯೋ
ನಾ ಕಾಣೇ ....
ಏನೂ ಅರಿಯದ ಮುಗ್ದ ಮಗುವಿಗೆ ಹೊಲಿಸಲೋ
ತಿಳಿದು ನಟಿಸುವ ರಂಗ ನಾಯಕಿಗೆ ಹೊಲಿಸಲೋ
ನಾ ಅರಿಯೇ ....

ಸಿಹಿ!

ಜಗತ್ತಿನ ಸಿಹಿವಸ್ತುವಿನ

ಸ್ಪರ್ಧೆಯಲಿ

ಜೇನು, ಸಕ್ಕರೆ , ಬೆಲ್ಲ

ಎಲ್ಲ ಸೇರಿ ಕೂಡ ಗೆಲ್ಲಲಾಗಲಿಲ್ಲ

ತಾನೇ ಗೆಲ್ಲುವುದೆಂಬ ಜಂಭ ಹೊತ್ತಿದ್ದ

ಕಬ್ಬಿನದೂ ಮುರಿಯಿತು ಕಟಿಯು

ಗೆದ್ದಿದ್ದು ನನ್ನವಳ ತುಟಿಯು!

ಹನಿಗವನ

ಸೈಕಲ್ ಹೊಡೆಯಲಾಗದೆ ಬಂಗಾರಪ್ಪ
ಕೈ ಹಿಡಿದು ಮತ್ತೆ ಚುನಾವಣೆಗೆ ನಿಂತರಪ್ಪ
ಮಗನನ್ನೇ ಎದುರಾಳಿ ಮಾಡಿದರು ಯಡಿಯೂರಪ್ಪ
ಇವರೋಲು ಹಿತವರು ಯಾರೆಂದು ನೀ ಹೇಳು ಮತದಾರಪ್ಪ

----------------------------------------------------------------------
ಅಧಿಕಾರದ ಆಸೆ ಮತ್ತು ಹಂಬಲ
ಇದಕ್ಕಾಗಿ ನಡೆಯಿತು ಆಪರೇಷನ್ ಕಮಲ
ಪರಿಣಾಮ ಕಮಲ ಸಬಲ ಉಳಿದವರೆಲ್ಲ ದುರ್ಬಲ

- Vರ ( Venkatesha ರಂಗಯ್ಯ )

ಒಂದು ಕಾಲದಲ್ಲಿ....

ಮಗನೆ, ಒಂದು ಕಾಲದಲ್ಲಿ
ಜನ ಮನಬಿಚ್ಚಿ ನಗುತ್ತಿದ್ದರು
ಅದು ಅವರ ಕಂಗಳಲ್ಲಿ ಹೊಳೆಯುತ್ತಿತ್ತು.
ಆದರೀಗ ಬರಿ ಹಲ್ಲುಬೀರಿ ನಗುತ್ತಾರೆ
ಹಾಗೆ ನಗುವಾಗ ಅವರ ಶೀತಲ ಕಂಗಳು
ನನ್ನ ನೆರಳ ಹಿಂದೆ ಏನನ್ನೋ ಹುಡುಕುತ್ತಿರುತ್ತವೆ.

ನಿಜಕ್ಕೂ ಒಂದು ಕಾಲವಿತ್ತು
ಅಲ್ಲಿ ಜನ ಮನಃಪೂರ್ವಕವಾಗಿ ಕೈ ಕುಲುಕುತ್ತಿದ್ದರು.
ಆದರೀಗ ಅದು ಕಾಣೆಯಾಗಿದೆ ಮಗನೆ.