ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ರಜೆ ಹಾಕಿ ಎಲ್ಲಿಗೆ ಹೋಗಲಿ?

ಅದೊ೦ದು ಬೇಸಗೆ ಕಾಲ. ಅಮೇರಿಕಾದ ಮಹಾನ್ ವಿಜ್ಞಾನಿ ಥಾಮಸ್ ಆಲ್ವ ಎಡಿಸನ್ ತನ್ನ ಬಿಡುವಿಲ್ಲದ ಕೆಲಸದಿ೦ದ ಹಿ೦ತಿರುಗಿದ. ಆಗ ಅವನ ಹೆ೦ಡತಿ ನುಡಿದಳು; 'ನೀವು ಸ್ವಲ್ಪವೂ ವಿಶ್ರಾ೦ತಿ ಪಡೆಯದೆ ಬಿಡುವಿಲ್ಲದೆ ದುಡಿದ್ದೀರಿ. ಈಗ ನೀವು ರಜೆಯನ್ನು ತೆಗೆದುಕೊಳ್ಳಲೇ ಬೇಕು.'
'ಸರಿ, ಎಲ್ಲಿಗೆ ಹೋಗಲಿ ನಾನು ರಜೆ ಹಾಕಿ?' ಎಡಿಸನ್ ಪ್ರಶ್ನಿಸಿದ.

ಇನ್ನೊಂದಿಷ್ಟು ಗಾದೆಗಳು

ಪಥ್ಯ ಹಾಕುವವನ ಬೆರಳು ಕಚ್ಚಿದ ಹಾಗೆ.

ಪಡಿಗೆ ಬಂದವನಿಗೆ ಕಡಿ ಅಕ್ಕಿ ಆಗದೇ.

ಪರಡಿಯ ರುಚಿ ಕರಡಿಗೆ ತಿಳದೀತೇ.

ಪರರೊಡವೆಯ ಬಯಸಬಾರದು.

ಪಾಪ ಪ್ರಕಟ ಪುಣ್ಯ ಗೋಪ್ಯ.

ಪಾಪಿಗೆ ಪರಮಾಯು ಲೋಭಿಗೆ ಚಿರಾಯು .

ಪಾಪಿಯ ದೇವರೆಂದು ಪಾಪೊಸಿನಿಂದ ಬಡಿಯಬಾರದು.

ಪಾಪಿ ಹೋದಲ್ಲಿ ಪಾತಾಳ.

ಬಂದ ದಿವಸ ನೆಂಟ, ಮರು ದಿವಸ ಬಂಟ, ಮೂರನೇ ದಿವಸ ಕಂಟ.

ನಿತ್ಯ ಹೋದರೆ ನುಚ್ಚಿಗೆ ಸಮ.

ಈ ಕಂಪ್ಯೂಟ್ರಾಟಗಳು ಹೇಗಿದೆ?

http://v4vijayakumar.googlepages.com/

ಮೇಲ್ಕೊಟ್ಟಿರೋದು ನನ್ನ ಪ್ರೋಗ್ರಾಮರ್ ಗೆಳೆಯನೊಬ್ಬನ ವೆಬ್ಪೇಜು. :) ನಾನು ಕಂಡಿರೋ (ಕೆಲವೇ) ಕೆಲವು ನಿಜವಾದ ಪ್ರೋಗ್ರಾಮರ್ಗಳಲ್ಲಿ ಈ‌ ನನ್ನ ಸ್ನೇಹಿತನೂ ಒಬ್ಬ.

ಗಡ್ಡ

ಸ್ಲೀಪರ್ ಕೋಚಿನ
ಅರ್ಧ ತೆರೆದ ಕಿಟಕಿಯಲ್ಲಿ
ಬಿಕ್ಕಳಿಸುವ ನಕ್ಷತ್ರಗಳು ಬಸ್ಸಿನಷ್ಟೇ
ವೇಗವಾಗಿ ಬರುತ್ತಿವೆ..

ಪಕ್ಕದ ಕರೀ ಟೀ-ಶರ್ಟಿನ,
ಇನ್ನೂ ಗಡ್ಡ ಸರಿಯಾಗಿ ಬರದ
ಮುಖದ
ಮೇಲೆ ಗುಮಾನಿ
ನನ್ನ
ಜೀನ್ಸ್ ಪ್ಯಾಂಟಿನ ಜೇಬಲ್ಲಿದ್ದ ಪರ್ಸ್
ಅಂಗಿ ಕಿಸೆಗೆ ಬರುವಷ್ಟು

ಗ್ರಾಚಾರ!

ಬಹುಶಃ ಸೋಮ್ವಾರ ನಂಗೆ ಗ್ರಾಚಾರ ಕಾದಿದೆ. :D
ಏನ್ಕರ್ಮಾನೋ! ಕೆಟ್ಕೊಳ್ಕ್ಸುದ್ದಿಗಳು ಬರ್ತಿವೆ/ನಡೀತಿವೆ ಸುತ್ಲೂ.

/*‌ ಇತ್ತೀಚ್ಗಂತೂ ಕೆಲ್ಸ್ವೋ ಕೆಲ್ಸಾ. ದಿನಾ ಹನ್ನಂದ್ಗಂಟೆ ಸಾಲದ್ದಂತಾ ಶನ್ವಾರ/ಭಾನ್ವಾರ ಕೂಡಾ. ಒಂದೆರ್ಡ್ಸಾಲು ಗೀಚೋಕ್ಕೂ ಪುರ್ಸೊತ್ತಿಲ್ಲ್ವೇ! :'( */

ಚೆಲುವೀ...!

ಚೆಲುವೀ..

ಚೆಲುವೀ ಕಡು ಚೆಲುವೀ..
ಗುಡ ಗುಡನೆ ಮತ್ತ~ ನೀ ಯಾಕ ಓಡುವೀ..
ಚೆಲುವೀ...

ಗ೦ಡನೂ ನಾ ಹೌದಾ..
ಪು೦ಡಾನೂ ನಾ ಹೌದಾ..
ಚ೦ಡೀಯಾ ಮಾಡಿದರ ~
ಪ್ರಚ೦ಡ ಆಗತೇನಾ..
ಚೆಲುವೀ..

ಗುದಿಸಲು ಮನಿ ಎ೦ದು
ಶಿಡಿ ಷಿಡಿ ಮಾದ್ಬ್ಯಾಡಾ..
ಮಾಳಿಗಿ ಮನಿಯೊ೦ದ
ಬಾಡಿಗೆ ಹಿಡಿದೇನಾ...
ಚೆಲುವೀ..

ಬಡತಾನ ಇರಲ್ಯಾಕ
ಬಡವರು ನಾವಲ್ಲಾ..
ಬಡಬಡಿಸಿ ಜೀವ
ಬರಡು ಮಾಡಬ್ಯಾಡಾ..
ಚೆಲುವೀ..

ಚಟುವಟಿಕೆಗಳು ಚುಟುಕಾದಾಗ-೩

ನನ್ನ ಚಟುವಟಿಕೆಗಳು "ಚುಟುಕು" ಆದಾಗ... ಬರೆಯುವ ಎನ್ನೋ ಹಂಬಲವುಂಟಾದಾಗ...
ಈ ಪುಟ್ಟ ಪುಟ್ಟ ಕವನಗಳು ಹೊರಬರುತ್ತದೆ... :)

ಮಳೆ
*********

ಮಳೆ ಬಾರದಿದ್ದರೆ ಕೊರಗುವರು ಜನ
ಬ೦ದರೂ ಕೊರಗುವುದು ಹಲವರ ಮನ,
ವರ್ಷವಿಡೀ ಬಂದರೂ ಕಷ್ಟ,
ವರ್ಷಕ್ಕೊಮ್ಮೆ ಬಾರದಿದ್ದರೂ ನಷ್ಟ,
ಇದನ್ನು ಹಿಡಿತದಲ್ಲಿಡಲಾಗದು ನಮ್ಮಿಂದ,
ಏಕೆ೦ದರೆ ಈ ವರ ಬ೦ದಿದೆ ಪ್ರಕೃತಿಯಿಂದ.

ಇತಿಹಾಸದಲ್ಲಿ ಕರಗಿಹೋದ ಬೀಗರ ಹಾಡುಗಳು

ಮದುವೆ ನಮ್ಮ ಬದುಕಿನಲ್ಲಿ ಒಂದು ಪ್ರಮುಖ ಘಟ್ಟ.

ಮೊದಲು ಮದುವೆಗಳು ೯ ದಿನಗಳ ಕಾಲ ನಡೆಯುತ್ತಿದ್ದವಂತೆ. ನಂತರ ಏಳು ದಿನಗಳು, ಐದು ದಿನಗಳು, ಮೂರು ದಿನಗಳಿಗೆ ಇಳಿದು ಈಗ ಮದುವೆಯ ಹಿಂದಿನ ದಿನದ ಆರತಕ್ಷತೆ ಹಾಗೂ ಮರುದಿನ ಮಾಂಗಲ್ಯಧಾರಣೆಗೆ ಮದುವಯು ಮುಗಿದುಹೋಗುತ್ತದೆ. ಆರತಕ್ಷತೆಯೇ ಇಲ್ಲದೆ ಸಂಕ್ಷಿಪ್ತವಾಗಿ ಒಂದು ದಿನದ ಮದುವೆಯನ್ನು ಮಾಡುವುದುಂಟು. ಆರ್ಯ ಸಮಾಜದಲ್ಲಿ ಮದುವೆಯೆನ್ನುವುದು ಹೆಚ್ಚೆಂದರೆ ಅರ್ಧ ದಿನದ ಸಮಾರಂಭ. ಮಂತ್ರಮಾಗಲ್ಯ ವಿವಾಹವು ಅರ್ಧ ಗಂಟೆಯಲ್ಲಿ ಮುಗಿಯುತ್ತದೆ. 

ಒಂದು ಕ್ಷಣ ಆಲೋಚಿಸೋಣ. ಒಂಬತ್ತು ದಿನಗಳ ಮದುವ ಹೇಗೆ ನಡೆಯುತ್ತಿದ್ದಿರಬಹುದು? ಅಂತಹ ಮದುವೆಯನ್ನು ಯಾರಾದರೂ ಮಾಡಿಕೊಂಡವರು ಇಂದು ಬದುಕದ್ದಾರೆಯೆ? ಅಥವ ಅಂತಹ ಮದುವೆಯನ್ನು ನೋಡಿದವರು ಇದ್ದರೆಯೆ? ಅವರಿಂದ ಆ ಒಂಬತ್ತು ದಿನಗಳ ಮದುವೆಯ ವಿವರವನ್ನು ಕೇಳುವ ಕುತೂಹಲ ನನಗಿದೆ.

ಮಳೆ

ಬಾನಲ್ಲಿ ಗುಡುಗಿದನು ಮೇಘರಾಜ
ಭೂಮಿಯ ಜೊತೆ ಮಾತನಾಡಬಯಸಿ
ಹುಡುಗಾಟದ ಹುಡುಗಿಯವಳು ಮರುನುಡಿಯಲಿಲ್ಲ
ಕೇಳಲೇ ಇಲ್ಲವೆಂಬಂತೆ ನಟಿಸಿ

ಮಲಗಿರುವಳೇನೋ ಎಚ್ಚರಗೊಳಿಸೋಣವೆಂದು
ಕಳುಹಿಸಿದನವ ಮಿಂಚೆಂಬ ಬೆಳಕು
ಆದರೆ ಅದೂ ನೀಡಲಿಲ್ಲ
ಭೂಮಿಯ ನಟನೆಗೆ ಯಾವುದೇ ತೊಡಕು

ಗಾಢ ನಿದ್ರೆಯಿಂದ ಎಚ್ಚೆತ್ತುಕೊಳ್ಳಲಿ
ಎಂದು ಸುರಿಸಿದ ವರ್ಷಧಾರೆ