ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯಶಸ್ಸು

ಯಶಸ್ಸಿಗೆ ಮೂರು ಮುಖ್ಯ ಸೂತ್ರಗಳು

೧. ಇತರರಿಗಿಂತ ಹೆಚ್ಚಿಗೆ ತಿಳಿದುಕೋ
೨. ಇತರರಿಗಿಂತ ಹೆಚ್ಚಿಗೆ ಕೆಲಸ ಮಾಡು
೩. ಇತರರಿಗಿಂತ ಕಡಿಮೆ ನಿರೀಕ್ಷಿಸು

ಅಡ್ವಾನಿಯ ಬಿಲಿಯಕ್ಕೆ ಎಷ್ಟು ಸೊನ್ನೆಗಳು ?

ಈಗ ದಿನ ಬೆಳಗಾದರೆ ಪತ್ರಿಕೆಯಲ್ಲಿ ಬಿಲಿಯಗಟ್ಟಲೆ ಡಾಲರ್ ಸ್ವಿಸ್ ಬಾಂಕಿನಿಂದ ತರುವ ವಿಚಾರ ಕಾಣುವುದು. ಕಮಲ ಪಕ್ಷದ ಅಡ್ವಾನಿ ಪ್ರದಾನಿಯಾದರೆ ಹಣ ತರಲು ಮರುದಿನವೇ ವಿಮಾನ ಹತ್ತುತ್ತಾರೆ. ಮುಂದೊಂದು ದಿನ ಕೈ ಪಕ್ಷದ ವತಿಯಿಂದ ಪ್ರದಾನಿ ಆಗಲಿರುವ ರಾಹುಲರೂ ಈಗ ಅಡ್ವಾನಿ ಜತೆ ಈ ಸ್ವಿಸ್ ಹಣದ ಬಗ್ಗೆ ಪ್ರತಿಕ್ರಿಯಿಸುತ್ತಿದಾರೆ. ನನಗಂತೂ ಬಿಲಿಯಕ್ಕೆಷ್ಟು ಸೊನ್ನೆ ಎನ್ನುವುದು ಇತ್ತೀಚಿನ ವರೆಗೂ ಗೊತ್ತಿರಲಿಲ್ಲ. ಜತೆಗೊಂದು ಗೊಂದಲ.

ಒಮ್ಮೆ ಒಬ್ಬ ಅಮೇರಿಕದ ಬಹು ದೊಡ್ಡ ಶ್ರೀಮಂತ ಸ್ವಿಸ್ ಬಾಂಕಿಗೆ ಹೋಗಿ ಒಂದು ಬಿಲಿಯ ಸ್ವಿಸ್ ಫ್ರಾಂಕ್ ಕೊಡಿ ಎಂದನಂತೆ. ದಾಖಲೆಗಳ ಪರಿಶೀಲಿಸಿ ನಿಮ್ಮ ಖಾತೆಯಲ್ಲಿ ಅಷ್ಟು ಹಣವಿಲ್ಲ, ಕ್ಷಮಿಸಿ ಎಂದು ಕಾರಕೂನ ಹೇಳಲು ಅದು ಹೇಗೆ ಸಾದ್ಯ ಕೆಲವು ಬಿಲಿಯ ಉಂಟೆಂದು ನನ್ನ ಖಾತೆ ಪುಸ್ತಕ ಹೇಳುತ್ತದೆ ಎಂದನಂತೆ. ಇಬ್ಬರೂ ಹೇಳಿದ್ದು ಸರಿ. ಕಾರಣ ಈ ಬರಹದ ಕೊನೆಯಲ್ಲಿದೆ.

1400 ಬಿಲಿಯ ಡಾಲರ್ ಹಣ ಸ್ವಿಸ್ ಬಾಂಕಿನಲ್ಲಿರುವ ಕಾರಣ ನಾವು ಇನ್ನು ಅಡ್ವಾನಿಯವರ ರಾಮ ರಾಜ್ಯದಲ್ಲಿ ಹೊಸ ತೇರಿಗೆ ಕಟ್ಟಬೇಕಾಗಿಯೇ ಇರುವುದಿಲ್ಲ. 40 ವರ್ಷ ಸರಕಾರ ನಡೆಸುವಷ್ಟು ಹಣ ಅಲ್ಲಿ ಕೊಳೆಯುತ್ತಿದೆಯಂತೆ ಎನ್ನುವಂತಹ ರಂಗು ರಂಗಿನ ಮಾತು ಕೇಳುತ್ತೇವೆ. ಒಂದು ಅವಧಿ ಪೂರ್ತಿ ಉಪ ಪ್ರದಾನಿಯಾಗಿದ್ದ ಅಡ್ವಾನಿಗೆ ಅರುವತ್ತು ನಾಲ್ಕು ಕೋಟಿ ಬೋಫೋರ್ಸ್ ಲಂಚದ ಹಣದ ಜಾಡು ಹಿಡಿಯುವುದು ಸಾದ್ಯವಾಗಲಿಲ್ಲ ಎನ್ನುವ ವಿಚಾರ ಈಗ ನೆನಪಿಸಿಕೊಳ್ಳಲು ಈಗ ಸಕಾಲ.

ಹನಿಗವನದ ಅಣಿಮುತ್ತುಗಳು-1

ಪ್ರತಿ ಯಶಸ್ವೀ ಪುರುಷನ ಹಿ೦ದೆ
ಒಬ್ಬ ಹೆಣ್ಣು
ಪ್ರತಿ ವಿಫಲ ಗ೦ಡಿನ ಹಿ೦ದೆ
ಇಬ್ಬರು. ಅಥವಾ ಹೆಚ್ಚು

***
ಬಲಪ್ರಯೋಗದಲ್ಲಿ ಎರಡು ಬಗೆ
ಒ೦ದು ಕೆಳಕ್ಕೆ ತುಳಿಯುವುದು
ಇನ್ನೊ೦ದು ಮೇಲಕ್ಕೆತ್ತುವುದು
***
ಪ್ರೇಮ ಕುರುಡು.
ಮದುವೆ
ಕಣ್ಣು ತೆರೆಸುತ್ತದೆ!

****
ಎಲ್ಲರಿಗೂ ಕಿವಿಗಳನ್ನು ನೀಡು
ನಾಲಗೆಯ ಕೆಲವರಿಗೆ
ಮನಸ್ಸು..
ಯಾರಿಗೂ ಬೇಡ!

***
ಕಲಿಯಬೇಕಾಗಿರುವುದು

ತೊತ್ತೋಚಾನ್ ಎಂಬ ಒಳ್ಳೇ ಪುಸ್ತಕ ಡಿಜಿಟಲ್ ಲೈಬ್ರರಿಯಲ್ಲಿ

ತೊತ್ತೋ ಚಾನ್ ಎಂಬ ಪುಸ್ತಕ ಬಹಳ ಒಳ್ಳೇ ಪುಸ್ತಕ . ಈ ಪುಸ್ತಕದ ಬಗ್ಗೆ
http://pusthakapreethi.wordpress.com/2009/04/21/%E0%B2%88-%E0%B2%B6%E0%B2%BE%E0%B2%B2%E0%B3%86-%E0%B2%A8%E0%B2%A8%E0%B2%97%E0%B3%86-%E0%B2%87%E0%B2%B7%E0%B3%8D%E0%B2%9F%E0%B2%B5%E0%B2%BE%E0%B2%AF%E0%B2%BF%E0%B2%A4%E0%B3%81/
ಎಂಬಲ್ಲಿ ಬರೆದಿದ್ದಾರೆ .

ಈ ಪುಸ್ತಕ ಡಿಜಿಟಲ್ ಲೈಬ್ರರಿಯಲ್ಲಿ ಇಲ್ಲಿದೆ . ಆನ್ಲೈನ್ ಓದಿರಿ / ಇಳಿಸಿಕೊಂಡು ಓದಿ

ಆರದ ಗಾಯ

ಕೊಡಲಿಯೇಟು ಬಿದ್ದರೂ
ಮರವು ಚಿಗುರಬಹುದು;
ಅಂಬಿನೇಟು ಬಿದ್ದ ಮೇಲೂ
ಗಾಯ ಮಾಯಬಹುದು;

ಕೆಡುಕರ ಕಹಿ ನುಡಿಯ
ಘೋರ ಮಾತಿನೇಟು
ಬಿದ್ದರೆಂದೂ ಮಾಯದು
ಮನಕೆ ಆದ ಏಟು.

 

ಸಂಸ್ಕೃತ ಮೂಲ:

ಸಂರೋಹತಿ ಶರೈರ್ವಿದ್ಧಂ ವರಂ ಪರಶುನಾ ಹತಂ |
ವಾಚಾ ದುರುಕ್ತಂ ಭೀಭತ್ಸಂ ನ ಸಂರೋಹತಿ ವಾಕ್‍ಕ್ಷತಮ್ ||

-ಹಂಸಾನಂದಿ

 

ಎಳು ಬೇಂಗಳೂರು ಎಳು

ಜಾಗೊ ರೆ ಜಾಗೊ
ಎಷ್ಟೆ ಬೊಬ್ಬೆ ಹೊಡೆದುಕೊಂಡರು ಬೇಂಗಳೂರಾಗ ಬರೀ 50% ವೊಟಿಂಗ ಅಯೀತು
ಬೇಂಗಳೂರ್ ದಕ್ಷಿಣ ಎಲ್ಲಾ ಕಲತವರ ಇರೋದು ಆದರೆ ವೊಟಿಂಗ 50%
ಬೇಂಗಳೂರ್ ಉತ್ತರಾ ಎಲ್ಲಾ ಕಲತವರ ಇರೋದು ಆದರೆ ವೊಟಿಂಗ 45%
ಬೇಂಗಳೂರ್ ಕೆಂದ್ರ ಎಲ್ಲಾ ಕಲತವರ ಇರೋದು ಆದರೆ ವೊಟಿಂಗ 45%
ಬೇಂಗಳೂರ್ ಹಳ್ಳೀಗಾಡು ಎಲ್ಲಾ ಕಲತವರ ಇಲ್ಲಾ ಆದರೆ ವೊಟಿಂಗ 65%
ಇದರ ಅರ್ಥ ಎನು?

'ಸಾವಿರದ ಶರಣ' ರಾಜ್ ನೆನಪಿಗೆ ನುಡಿ ನಮನ

ಇಪ್ಪತ್ತನೇ ಶತಮಾನದ ಭಾಷೆಯೆಂದೇ ಜನಪ್ರಿಯವಾದ ಸಿನಿಮಾದೊಂದಿಗೆ ಮನುಷ್ಯ ತನ್ನನ್ನು ಯಾವ ರೀತಿಯಲ್ಲಿ ಗುರುತಿಸಿಕೊಂಡಿದ್ದಾನೆಂದರೆ, ತಾನು ಮೊದಲು ನೋಡಿದ ಚಿತ್ರ, ನನ್ನ ಗೆಳೆಯನೊಂದಿಗೆ, ಗೆಳತಿಯೊಂದಿಗೆ, ಪ್ರೇಯಸಿಯೊಂದಿಗೆ, ಮದುವೆಯಾದ ನಂತರ ನೋಡಿದ್ದು, ನನ್ನ ಮಗನೊಂದಿಗೆ ನೋಡಿದ ಮೊದಲ ಚಿತ್ರ ಹೀಗೆ...ಜೀವನದ ಪ್ರತಿಯೊಂದು ಅಮೂಲ್ಯ ಕ್ಷಣವನ್ನೂ ಸಿನಿಮಾದೊಂದಿಗೆ ಬೆಸೆಯುವಷ್ಟು. ಹಾಗಾಗಿ, ಸಿನಿಮಾ ಎಂದಾಕ್ಷಣ ನನ್ನ ಕಣ್ಣ ಮುಂದೆ ಮೊದಲಿಗೆ ಕಾಣಿಸಿಕೊಳ್ಳುವುದು ಡಾ.ರಾಜ್ ಕುಮಾರ್. ಅವರಿಲ್ಲದ ಸಿನಿಮಾ ಪ್ರಪಂಚವನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಇಂದು ರಾಜ್ ಕುಮಾರ್ 80ನೇ ಹುಟ್ಟುಹಬ್ಬ. ಆದರೆ, ಅವರು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲ, ನಿಜ. ಆದರೆ, ಕನ್ನಡ ಚಿತ್ರ ರಸಿಕರ ಮನದಾಳದಲ್ಲಿ ಸದಾ ಕಾಲ ಜೀವಂತವಾಗಿರುತ್ತಾರೆ. ಕನ್ನಡ ನಾಡು ನುಡಿ ಸಂಸ್ಕೃತಿ ಜೀವಂತವಾಗಿರುವವರೆಗೂ ಚಿರಂಜೀವಿಯಾಗಿರುತ್ತಾರೆ. ಆ ಚಿರಂಜೀವಿ ರಾಜ್ ಕುಮಾರನಿಗೆ ನನ್ನ ಈ ನುಡಿ ನಮನ.

ಉಬುಂಟು ೯.೦೪ - ಹೊಸ ಉಬುಂಟುವಿನಲ್ಲಿ ಹೊಸತು

ಉಬುಂಟುವಿನ ಹೊಸ ಆವೃತ್ತಿ ೯.೦೪ (Jaunty Jacklope) ಈಗ ಡೌನ್ಲೋಡ್ ಮಾಡ್ಕೊಳ್ಲಿಕ್ಕೆ ಲಭ್ಯವಿದೆ. ಹಳೆಯ ಆವೃತ್ತಿಯಲ್ಲಿ ಕಂಡು ಬಂದ ಅನೇಕ ದೋಷಗಳನ್ನು ಸರಿ ಪಡಿಸಿರುವುದೇ ಈ ಆವೃತ್ತಿಯ ವಿಶೇಷ.
ನಾನು ಈ ಆವೃತ್ತಿಯ ಟೆಸ್ಟ್ ರಿಲೀಸ್ ಅಲ್ಪಾ (Alpha) ಸ್ಥಿತಿ ಯಲ್ಲಿದ್ದಾಗಲಿಂದಲೂ ಉಪಯೋಗಿಸುತ್ತಾ ಬಂದಿದ್ದು. ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ.

* ಹತ್ತೇ ಸೆಕೆಂಡುಗಳಲ್ಲಿ ಬೂಟ್ ಆಗುತ್ತೆ. ಯೂಟೂಬ್ ಚೆಕ್ ಮಾಡಿ ಅಲ್ಲಿ ಆಗಲೇ ಅನೇಕ ವಿಡಿಯೋಗಳಿವೆ ಇದನ್ನು ತೋರಿಸಲಿಕ್ಕೆ.

* ನೋಟಿಫಿಕೇಶನ್, ಅಂದ್ರೆ ಚಾಟ್ ಇತ್ಯಾದಿ ಮಾಡುವಾಗ ಬರುವ ಸಂದೇಶಗಳನ್ನು ಸುಂದರವಾಗಿ ತೋರಿಸುವಂತೆ ಮಾಡಲಾಗಿದೆ. ಕೆಳಗೆ ಕೊಟ್ಟಿರುವ ಚಿತ್ರಗಳನ್ನು ನೋಡಿ. ನನ್ನ ಲ್ಯಾಪ್ಟಾಪ್ ನಲ್ಲಿ ಕಂಡು ಬಂದಂತಹವು.

ಬೇಸಗೆಯ ಕೆಲವು ಹೈಕುಗಳು

ಬಂದನಾ ಸೂರ್ಯ
ಉರಿಯ ಕಾರುವವ
ಬಡ ಹೊಟ್ಟೆಗೆ

ಬೆವರ ಹನಿ
ಬೆನ್ನ ತಳಕಿಳಿದು
ಹೇಳಲೊಂಥರಾ

ಕೆರೆ ತಳದಿ
ನರಳುತಿದೆ ಕಪ್ಪೆ
ಕೆಸರೊಣಗಿ

ಮನದಿ ನೋವು
ಉದುರಿದ ಕಂಬನಿ
ಚಿಪ್ಪಿನ ಮುತ್ತು

ಅವಳ ನಗೆ
ಗುಲ್ ಮೊಹರ್ ಹೂ
ವರುಷಕೊಮ್ಮೆ

ಬೇಸಗೆ ಬಂತು
ದಿನವೆಲ್ಲವೂ ಸೆಕೆ
ಅವಳೇ ತಂಪು

ಬೆವರಿಳಿದ
ಲಲನಾಮಣಿಗಳು
ಗಾಳಿಗೂ ಕೋಪ

ದಿನದ ಸೂರ್ಯ
ಮರೆಯಾಗಿ ಹೋದರೂ
ಭುವಿಗೆ ಸೆಕೆ

ಕೆಂಪಾದವೋ ಎಲ್ಲ ಕೆಂಪಾದವೋ॒॒॒॒॒॒॒॒॒॒॒.॒.

ಪ್ರತಿನಿತ್ಯ ಬೆಳಿಗ್ಗೆ ಲಘುವ್ಯಾಯಾಮವೆಂದು ವಾಯು ಸಂಚಾರಕ್ಕೆ ಹೊರಟಾಗ ದಾರಿಯಲ್ಲೆಲ್ಲ ಅರಳಿದ ಗುಲ್‌ಮೊಹರ್(ಮೇಫ್ಲವರ್) ಗಮನ ಸೆಳೆಯಿತು. ದಾರಿಯುದ್ದಕ್ಕೂ ತಲೆತುಂಬ ಹೂಮುಡಿದ ಮದುಮಗಳಿಂತಿರುವ ಗುಲ್‌ಮೊಹರ್ ಯಾರನ್ನೇ ಆಗಲಿ ಗಮನ ಸೆಳೆಯದೇ ಇರದು.