ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಈ ಸೋಲು ಮುಂದಿನ ನಿನ್ನ ಗೆಲುವಿಗೆ ದಾರಿ...!!!

ಇಂದಿನ ಈ ಸೋಲು ಮುಂದಿನ ನಿನ್ನ ಗೆಲುವಿಗೆ ದಾರಿ

ಒಮ್ಮೆಲೇ ನಕ್ಷತ್ರಗಳ ಹಿಡಿಯಬಾರದು ಆಕಾಶಕ್ಕೆ ಹಾರಿ

ಸೋಲಿನ ರುಚಿ ಉಂಡವಗೆ ಗೆಲುವಿನ ರುಚಿ ಸಹನೀಯ

ಒಮ್ಮೆ ಗೆದ್ದರೆ ಮತ್ತೆ ಸೋಲುಂಬುದದೆಷ್ಟು ಅಸಹನೀಯ

ಪಕ್ಷ ಮತ ಜಾತಿ ರಾಜಕೀಯದಿಂದ ಇರಬೇಕು ದೂರ

ಆಗ ನೀ ಆಗುವೆ ಜನರ ಹೃದಯಗಳನೇ ಗೆಲ್ಲುವ ಶೂರ

ಶಾಶ್ವತ ಅಲ್ಲ ಗೆಲುವು ಬುದ್ಧಿವಂತಿಕೆಯಿಂದ ಜನರ ಗೆದ್ದರೆ

ಸೈಕಲ್ ಪಯಣ

ಅವನು ಹೊಸದಾಗಿ ಸೈಕಲ್ ತಗೊಂಡಿದ್ದ . ಹೊಸ ಸೈಕಲ್ ನಲ್ಲಿ ಎಲ್ಲರ ಮುಂದೆ shine ಮಾಡಬೇಕೆಂದು ಒಂದು ರೌಂಡ್ ಹೊರಟ. ಸೈಕಲ್ ನ ಮೇಲಿನ ಗಮನಕ್ಕಿಂತ ಅವನ ಗಮನ ಸುತ್ತ ಮುತ್ತ ಇರುವ ಜನರ ಮೇಲಿತ್ತು. ಎಲ್ಲರೂ ನನ್ನನ್ನೇ ನೋಡುತ್ತಿದ್ದಾರ ಎಂಬ ಆಲೋಚನೆ ಯಲ್ಲೇ ಇದ್ದ. ಆದರೆ ಅಲ್ಲಿ ಯಾರೂ ಅವನನ್ನು ನೋಡ್ತಾ ಇರ್ಲಿಲ್ಲ. ಅವ್ನಿಗೆ ಬೇಸರ ತರಿಸಿತ್ತಾದರು.

ನನ್ನೊಳಗಿನ ಬರಹಗಾರ ರೂಪಗೊಂಡಿದ್ದು (ಕೊನೆಯ ಭಾಗ)

ನಾನು ತೆಗೆದುಕೊಂಡ ಇಂಗ್ಲೀಷ ಸಾಹಿತ್ಯದ ಓದು ಒಂದು ಹೊಸ ಪ್ರಪಂಚವನ್ನೇ ತೆರೆದಿಟ್ಟಿತು. ಇಂಗ್ಲೀಷ ಕವನಗಳು, ಕಾದಂಬರಿಗಳು ನಾನು ಕೇಳಿರದ ಕಂಡಿರದ ಲೋಕವನ್ನು ಪರಿಚಯಿಸಿದವು. ಅಲ್ಲದೆ ಆಧುನಿಕ ಕನ್ನಡ ಸಾಹಿತ್ಯದ ಕೆಲವು ಮಹತ್ವದ ಕೃತಿಗಳು ಇಂಗ್ಲೀಷ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿವೆ ಎನ್ನುವ ಸತ್ಯ ಗೊತ್ತಾಯಿತು.

ಪಲ್ಲವಿ ನಿನ್ನ ಹುಟ್ಟು ಹಬ್ಬದ೦ದು....

ಪಲ್ಲವಿಸಿದ ಸೊ೦ಪು ಬನದ೦ತೆ...
ಸಿರಿ ಸೊಬಗಿನ ಸು೦ದರ ಮೊಗವನು...
ಹೊತ್ತಿರುವೆ !! (ನಿನ್ನಮ್ಮನ ಕೊಡುಗೆ!!)

ನಿರೀಕ್ಷೆ ನಿರಾಸೆಯ ಜೂಟಾಟದಲಿ...
ಸೋತಗಲು, ಗೆದ್ದಾಗಲು
ಬಿದ್ದಾಗಲು, ಎದ್ದಾಗಲು
ಕುಗ್ಗದೆ, ಹಿಗ್ಗದೆ ನಗುತಿರುವೆ!! (ನಿನ್ನ ದೈವವ ನ೦ಬಿ!!)

ನೋವಿನಲು ನಲಿವಿನಲು
ಜತೆ ಇರುವ ನನ್ನ೦ತವರನು ಪ್ರೀತಿಸಿ, ಪೋಷಿಸಿ...

ಪೂರ್ಣಯ್ಯನ ಛತ್ರ

ಥಟ್ ಅ೦ತ ಹೇಳಿ ಕಾರ್ಯಕ್ರಮದಲ್ಲಿ ನನಗೆ ನೆನಪಿರುವ೦ತೆ ಪೂರ್ಣಯ್ಯನ ಛತ್ರ ಎ೦ಬ ನುಡಿಗಟ್ಟಿಗೆ ನಾಸೋ ಅವರು ಕೊಟ್ಟ ಅರ್ಥ ಹೀಗಿತ್ತು "ಯಾರು ಬೇಕಾದರೂ ಹೇಳದೇ ಕೇಳದೇ ಬ೦ದು ಬಿಟ್ಟಿಯಾಗಿ ಉಪಯೋಗಿಸಿಕೊಳ್ಳುವ ಛತ್ರ" ಎ೦ದು. ಅ೦ತಹ ಒ೦ದು ಸನ್ನಿವೇಶವನ್ನು ಕಣ್ಣಾರೆ ಕ೦ಡ ನಾನು ಅದರ ಅನುಭವವನ್ನು ಇಲ್ಲಿ ಹ೦ಚಿಕೊ೦ಡಿದ್ದೇನೆ.

ನನ್ನೊಳಗೆ ನೀನಿರಲು......

ನನ್ನೊಳಗೆ ನೀನಿರಲು......
ಪ್ರಜ್ವಲಿಸದೆ ಇರೆನು ನಾನು....
ಕೋಟಿ ಸೂರ್ಯರ ಬೆಳಕ ತು೦ಬಿಕೊ೦ಡು......
ಶಾ೦ತ ಪ್ರಣತೆಯಾಗಿ..........

ನನ್ನೊಳಗೆ ನೀನಿರಲು...
ಹೊಮ್ಮದೆ ಇರೆನು ನಾನು....
ಕೋಟಿ ಕ್ರಿಷ್ಣರ ಉಸಿರ ತು೦ಬಿಕೊ೦ಡು....
ಮೋಹನ ಮುರಳಿಯ ದನಿಯಾಗಿ......

ನೀ ಹರಿಯುತಿರೆ ನನ್ನೊಳಗೆ....
ಚಿಮ್ಮದೆ ಇರೆನು ನಾನು...
ಕೋಟಿ ಜೀವಕೆ ತ೦ಪ ತು೦ಬಿಕೊ೦ಡು....
ಜೀವ ಜಲವಾಗಿ...

ಮತದಾನ ನಿರಾಶೆ! ಮತದಾರರ ಹತಾಶೆ!

ನನ್ನ ಭಯ ನಿಜವಾಗಿದೆ. ಕರ್ನಾಟಕದಲ್ಲಿ ಮೊದಲ ಸುತ್ತಿನ ಮತದಾನದ ಪ್ರಮಾಣ ಅತ್ಯಂತ ಕಳಪೆಯಾಗಿದೆ. ಹೀಗಾಗುವುದೆಂಬ ಕಳವಳ ವ್ಯಕ್ತಪಡಿಸಿ ಮತ್ತು ಹೀಗಾಗಬಾರದೆಂಬ ಕಳಕಳಿ ಹೊಂದಿ ನಾನು ಈ ಜಾಲತಾಣವೂ ಸೇರಿದಂತೆ ಹಲವು ಜಾಲತಾಣಗಳಿಗೆ ಹಾಗೂ ಪತ್ರಿಕೆಗಳಿಗೆ ಲೇಖನಗಳನ್ನು ಬರೆದೆ.

ನಯಸೇನನ ಧರ್ಮಾಮೃತದೊಳಗೆ ಹೋಲಿಕೆ,ಉಪಮೆಗಳ ಸರಪಳಿಗಳು

ನಯಸೇನನ ಧರ್ಮಾಮೃತದೊಳಗೆ ಹೋಲಿಕೆ,ಉಪಮೆಗಳ ಸರಪಳಿಗಳು

ನಯಸೇನನ ದರ್ಮಾಮ್ರತ ಜೈನರ ಮೇರು ಕ್ರುತಿಗಳಲ್ಲೊ೦ದು. ಕವಿಯ ಕಾಲ ನಿಖರವಾಗಿ ತಿಳಿದಿಲ್ಲ.ಬಿ.ಬಿ ಮಹಿಷವಾಡಿಯವರ ಪ್ರಕಾರ ಕ್ರಿ.ಶ ೧೦೨೦ ಇರಬಹುದು.ತನ್ನ ಧರ್ಮಾಮ್ರತವನ್ನು ಮುಳಗು೦ದದಲ್ಲಿ

ವರನಟನಿಗೆ ನಮನ....

ಇಂದು ವರನಟ ಡಾ||ರಾಜಾಣ್ಣ ಹುಟ್ಟಿದ ದಿನ.... ಸರಿಯಾಗಿ 80 ವರ್ಷ ಇಂದು ಅವರಿಗೆ... ( ಅವರು ಎಂದೆಂದಿಗೂ ಅಮರ ಕನ್ನಡಿಗರಿಗೆ). ಕರ್ನಾಟಕದ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿ ಏರಿದ ಎತ್ತರ... ಹುಂ... ಯಾರು ಮುಟ್ಟಲು ಸಾದ್ಯವಿಲ್ಲ...

ಏಕೆ ಹೀಗೆ ನಮ್ಮ ನಡುವೆ ??

ಮೇಘಮಾಲೆ ಮರೆಯಲಿಣುಕಿ ನಸುನಗುವ ಚ೦ದ್ರನ೦ತೆ
ಆಗಸದಿ ಲಕಲಕಿಸುವ ಶ್ವೇತಶುಭ್ರ ತಾರೆಯ೦ತೆ
ರೆಕ್ಕೆಬಿಚ್ಚಿ ಗರಿಗೆದರಿ ಹಾರುತಿರುವ ಹಕ್ಕಿಯ೦ತೆ
ಏಕೆ ನನಗೆ ನಿಲುಕದಾದೆ ಗಗನ ಕುಸುಮದ೦ತೆ

ಜಗದಗಲ ಸುತ್ತಿಬ೦ದೆ ನಿನ್ನ ಒಲವ ಪಡೆಯಲೆ೦ದೇ
ನೋವ ನಲಿವ ಮರೆತು ನಿನ್ನ ಸನ್ನಿಧಾನ ಸೇರಲೆ೦ದೇ
ನೂರೆ೦ಟು ಕಾಮನೆಗಳ ಮರೆತ ದಿವ್ಯಸ೦ತನ೦ತೆ