ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೆನಪುಗಳ ಮಾತು ಮಧುರ...... !

ಈಗ್ಗೆ ಸುಮಾರು ವರ್ಷಗಳ ಹಿಂದಿನ ಮಾತು... ನಾನಾಗ ಹೈಸ್ಕೂಲಿನಲ್ಲಿದ್ದೆ... ಕರ್ಮವೀರ ಅನ್ನುವ ಮ್ಯಾಗಜೀನ್ ಮತ್ತೆ ಪ್ರಾರಂಭವಾಗಿ ಅದರ ಕಂಪನ್ನು ಸೂಸಲಿಕ್ಕೆ ಶುರು ಮಾಡಿತ್ತು.. ( ತುಂಬಾ ವರ್ಷಗಳ ಹಿಂದಿನ ಪತ್ರಿಕೆ ಕಾರಣಾಂತರಗಳಿಂದ ಕೆಲ ವರ್ಷನಿಂತು ಹೋಗಿತ್ತು. ) ನಾನಾಗಷ್ಟೇ ಕವನಗಳನ್ನು ಬರೆಯೋಕೆ ಆರಂಭಿಸಿದ್ದೆ. ಅದರಲ್ಲಿ ಅನೇಕರು ತಮ್ಮ ಕವನಗಳನ್ನು ಬರೀತಿದ್ದರು.

ಮಳೆಯ ನೆಪದಲ್ಲಿ ನನ್ನೊಳಗಿನ ರೂಪ ಬಂದಿದ್ದಳು

ಮೊನ್ನೆ ರಾತ್ರಿ ಜಿಟ ಪಟಿ ಮಳೆ ಶುರುವಾಯ್ತು. ಒಂಥರಾ ಒಳ್ಳೇ ವೆದರ್. ಕೂಲ್ ಆಗಿ ತುಂಬಾ ಹಿತ ಆಗ್ತಿತ್ತು
"ಮೇಡಮ್ ಮಳೆ ಬರ್ತಿದೆ ಹೇಗೆ ಹೋಗ್ತೀರಾ . ಮಳೆ ನಿಂತ ಮೇಲೆ ಹೋಗಿ" ಎಂದ ರವಿ.
ಮಳೆ ಧಾರಾಕಾರವಾಗಿ ಏನೂ ಸುರೀತಿರಲಿಲ್ಲ . ಹನಿ ಹನಿ ಮಳೆಯಲ್ಲಿ ತೋಯುವ ಆಸೆ ನಂಗೆ
ಅವನ ಮಾತು ಕೇಳದೆ ಸ್ಕೂಟಿ ಶುರು ಮಾಡಿ ಹೊರಟೆ.

ಜೀವನವನ್ನು ಒ೦ದು ಪ್ರಶ್ನೆ ಆಗಿಸದಿರಿ

ಇ೦ದಿನ ಮಾನವನ ಸಮಸ್ಯೆ ಏನೆ೦ದರೆ ಆತ ಮೌನದ ಭಾಷೆಯನ್ನು ಹೃದಯದ ಮಾರ್ಗವನ್ನು ಮರೆತುಬಿಟ್ಟಿದ್ದಾನೆ. ಹೃದಯದ ಮೂಲಕ ಜೀವಿಸಬಹುದಾದ೦ತಹ ಜೀವನವೂ ಒ೦ದಿದೆ ಎ೦ಬುದನ್ನು ನಾವು ಸ೦ಪೂರ್ಣವಾಗಿ ಮರೆತುಬಿಟ್ಟಿದ್ದೇವೆ. ನಾವು ಸ೦ಪೂರ್ಣವಾಗಿ ಬುದ್ಧಿಯಲ್ಲಿ ನೆಲೆಸಿಬಿಟ್ಟಿದ್ದೇವೆ ಹಾಗೂ ಈ ನೆಲೆಸುವಿಕೆಯಿ೦ದ ಪ್ರೇಮ ನಮಗೆ ಅರ್ಥವೇ ಆಗದು.

ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!! (ದ. ರಾ. ಬೇಂದ್ರೆಯವರ ಘಮ ಘಮಿಸುವ ಕವನ)

ಘಮ ಘಮ ಘಮಾಡುಸ್ತಾವ ಮಲ್ಲಿಗಿ
ನೀ ಹೊರಟ್ಟಿದ್ದೀಗ ಎಲ್ಲಿಗಿ
ನೀ ಹೊರಟ್ಟಿದ್ದೀಗ ಎಲ್ಲಿಗಿ ||ಘಮ ಘಮ||

ತುಳಕ್ಯಾಡುತಾವ ತೂಕಡಿಕಿ
ಎವಿ ಅಪ್ಪುತ್ತಾವ ಕಣ್ ದುಡುಕಿ
ಕನಸು ತೇಲಿ ಬರುತಾವ ಹುಡುಕಿ
ನೀ ಹೊರಟ್ಟಿದ್ದೀಗ ಎಲ್ಲಿಗಿ
ನೀ ಹೊರಟ್ಟಿದ್ದೀಗ ಎಲ್ಲಿಗಿ ||ಘಮ ಘಮ||

ಚಿಕ್ಕಿ ತೋರುಸ್ತಾವ ಚಾಚಿ ಬೆರಳ
ಚಂದ್ರಾಮ ಕನ್ನಡಿ ಹರಳ
ಮನಸೋತು ಆಯಿತು ಮರುಳ

ಅಣ್ಣಾ... ಅಣ್ಣಾ.... ಕವಣೆ ಎಲ್ಲಿ?

ಮನೆಯ ಮುಂದೆ ದೊಡ್ಡ ಮಾವಿನ ಮರ. ಮರ ತುಂಬಾ ಮಾವಿನ ಕಾಯಿ. ಬೇಸಿಗೆಕಾಲದ ರಜೆ ಬಂತೆಂದರೆ ಮಾವಿನ ಮಿಡಿ ಉಪ್ಪು ಬೆರೆಸಿ ತಿನ್ನುವುದು, ಉಪ್ಪಿನಕಾಯಿ ಮಾಡುವುದು ಗೌಜಿಯೇ ಗೌಜಿ. ನಮ್ಮ ಮನೆಯಲ್ಲಿ ನಾಲ್ಕೈದು ತರದ ಮಾವಿನ ಮರ ಇದ್ದರೂ ಮನೆ ಮುಂದಿರುವ ಗೋವಾ ಮಾವು ಎಂದರೆ ತುಂಬಾ ಇಷ್ಟ. ಬೆಳಿಗ್ಗೆ ಎದ್ದಾಗ ಅಂಗಳದಲ್ಲಿ ಅದೆಷ್ಟೋ ಮಾವಿನ ಮಿಡಿ ಉದುರಿರುವುದನ್ನು ಕಾಣಬಹುದು.

ಪ್ಯಾನಿಂಗ್ - ನನ್ನ ಪ್ರಯತ್ನ

ಪಾಲಚಂದ್ರ ಬರೆದ ಪ್ಯಾನಿಂಗ್ ಮಾಹಿತಿ ಉಪಯುಕ್ತವಾಗಿತ್ತು. 

ಅದನ್ನು ಪ್ರಯತ್ನಿಸಲು ಇಂದು ಅವಕಾಶ ಸಿಕ್ಕಿತು.

ಪ್ಯಾನಿಂಗ್ ಮಾಹಿತಿಯನ್ನು ಓದಿ ಪ್ರಾಕ್ಟಿಕಲ್ ಆಗಿ ಪ್ರಯತ್ನ ಪಟ್ಟಿರುವೆ.  

ಪ್ಯಾನಿಂಗ್ ೧

ಮೇಲಿನ ಚಿತ್ರ ಸೆರೆಹಿಡಿದದ್ದು ಮ್ಯಾನುಅಲ್ ಮೋಡ್ ಅಲ್ಲಿ

ISO 80

Exposure 1/200 

F 8.0 

ಮತದಾರರ ಗುರುತಿನ ಚೀಟಿ

ನಾವು ಮನೆ ಬದಲಾಯಿಸಿದ್ದರಿಂದ, ನಮ್ಮ ಮತದಾರರ ಗುರುತಿನ ಚೀಟಿಯಲ್ಲಿ, ತಿದ್ದುಪಡಿ ಮಾಡಬೇಕಿತ್ತು. ಅದೂ ಅಲ್ಲದೆ ಅದರಲ್ಲಿ ತುಂಬಾ ತಪ್ಪುಗಳಿದ್ದವು. ಎಲ್ಲವನ್ನೂ ಒಟ್ಟಿಗೆ ಸರಿಪಡಿಸಬಹುದೆಂದುಕೊಂಡಿದ್ದೆವು. ಅದಕ್ಕಾಗೆ ಅವಶ್ಯಕವಾದ ಅರ್ಜಿಗಳನ್ನು ತುಂಬಿದೆವು.