ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೈ ಮುಕ್ಕೋತ ನಿ೦ತಾನ

ಕೈ ಮುಕ್ಕೋತ ನಿ೦ತಾನ
ನಿಮಗ ನೀರ್ ಕೊಡ್ತೇವು,
ಕರೆ೦ಟ್ ಕೊಡ್ತೇವು,
ಕಡಿಮೇಗೆ ಅಕ್ಕಿ ಬ್ಯಾಳಿ ಕೊಡ್ತೇವು
ಹೇಳಿಕೋತ ಹೊ೦ಟಾನ.
ಹಲ್ಲಿ ಗಿ೦ಜಿಕೋತ ನಿ೦ತಾನ.
ನದ್ಯಾಗ ನೀರಿಲ್ಲ ಅ೦ತ ಗೊತ್ತದಿ,
ಆದ್ರೂ ನಾವೂ ಅವಗ ಗೆಲ್ಲಿಸಬೇಕ೦ತ ಮಾಡೇವಿ
ಯಾಕ ಗೊತ್ತದೇನು? ಅವ ನಮಗ ರೊಕ್ಕ,ಬಟ್ಟೆ ಕೊಟ್ಟಾನ
(ಎಷ್ಟು , ಎ೦ಥದು ಅ೦ತ ಕೇಳ್ಬ್ಯಾಡ್ರಿ)
ನಮ್ಮ ಸ್ವಾಮಿಗೋಳು ಹೇಳ್ಯಾರ ,ನಮ್ಮ ಮ೦ದಿ

ಮನದಾಟ

subhashita1
ಸು-
ಸಂಸ್ಕೃತ ವ್ಯಾಕರಣದ ಮೇಷ್ಟ್ರು ‘ಮನಸ್ಸು’ ನಪುಂಸಕ
ವೆಂದ ಹಳೆಯ ಪಾಠದ ನೆನಪು ಮರುಕಳಿಸಿದ್ದೇ ಹುಂಬನಂತೆ
ಎಗ್ಗಿಲ್ಲದೆ ಅಲೆದಾಡಲು ಬಿಟ್ಟುಕೊಂಡೆ ಅವಳನ್ನು
ನನ್ನ ಮನದ

ಕೆಲವು ಪದಗಳ ಅರ್ಥ ಬೇಕಾಗಿದೆ!

ಪ್ರಿಯ ಸಂಪದಿಗರೇ,

ನನಗೆ "ಅಹಂಕಾರ", "ಮಮಕಾರ", "ಲೋಭ", "ಮೋಹ" - ಈ ಪದಗಳ ನಿಚ್ಚಳವಾದ ಅರ್ಥ (literal meaning) ಬೇಕಾಗಿದೆ. (ವೇದಾಂತದ ವ್ಯಾಖ್ಯೆ ಮುಂತಾದುವೇನೂ ಬೇಡ, ಬರೀ ಅರ್ಥ ಮಾತ್ರ).  ಅರ್ಥವು ಆಂಗ್ಲ ಭಾಷೆಯಲ್ಲಿದ್ದರೂ  ನಡೆಯುತ್ತದೆ.  ದಯವಿಟ್ಟು ಆದಷ್ಟು ಬೇಗ  ಪ್ರತಿಕ್ರಿಯಿಸುತ್ತೀರಾ?

ಧನ್ಯವಾದಗಳು,

ಶಾಮಲ

ವಿವಾಹ-ಪ್ರೇಮದ ಬಗ್ಗೆ ಕವನದ೦ಥ ಎರಡು ಸಾಲುಗಳು

ಹೊಸದಾಗಿ ವಿವಾಹವಾದ ಮನುಷ್ಯ
ಖುಷಿಯಾಗಿದ್ದರೆ ನಾವು ಅರ್ಥ ಮಾಡಿಕೊಳ್ಳುತ್ತೇವೆ.
ಆದರೆ ಮದುವೆಯಾದ
ಹತ್ತು ವರ್ಷಗಳ ನ೦ತರವೂ
ಒಬ್ಬ ಮನುಷ್ಯ ಖುಷಿಯಾಗಿದ್ದರೆ
ನಾವು
ಆಶ್ಚರ್ಯ ಪಡುತ್ತೇವೆ!

****
ಅಲ್ಲೊಬ್ಬ ಮನುಷ್ಯನಿದ್ದ. ಚರ್ಚಿನಲ್ಲಿ ಕೆಲವು ಶಬ್ದಗಳನ್ನು
ಗೊಣಗಿದ ನ೦ತರ ತಾನು
ಮದುವೆಯಾದದ್ದನ್ನು ಕ೦ಡುಕೊ೦ಡ.
ಒ೦ದು ವರ್ಷದ ನ೦ತರ ಅವನು ನಿದ್ದೆಯಲ್ಲಿ

ಬೊಗಸೆಯ ಹೂವುಗಳು

ಬೊಗಸೆಯಲಿದ್ದರೆ ಹೂವುಗಳು
ಅಂಗೈಯೆರಡೂ ಘಮಘಮವು;
ಅಂತೆಯೆ ಪ್ರೀತಿಯು ಸುಜನರದು
ಎಡಬಲಕೆರಡಕು ಸರಿಸಮವು!

ಸಂಸ್ಕೃತ ಮೂಲ:

ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಂ|
ಅಹೋ ಸುಮನಸಾಂ ಪ್ರೀತಿರ್ವಾಮದಕ್ಷಿಣಯೋಃ ಸಮಾ||

 -ಹಂಸಾನಂದಿ

 

 

ಲಸಿಕೋಪಾಖ್ಯಾನ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಷಡ್ಯಂತ್ರ

"ಎನೂ ಕಾಳಜಿ ಮಾಡಬ್ಯಾಡಣ್ಣಾ! ನೀ ಹೇಳೂದು ಖರೆ ಅದ. ವ್ಯಾಕ್ಸಿನ್ ಇಲ್ಲದಂಗ ಮನಿಶ್ಯಾ ಅಗ್ದಿ ಛೊಲೊ ಬದುಕತಾನ. ಎಮ್ಮೆನ್ಸಿಗಳು ಎಲ್ಲಾ ಪಿತ್ತೊರಿ ನಡಿಸಿ ಹಿಂಗ ಬೇಕಬೇಕಾದಂಗ ಔಷಧಿ ಚುಚ್ಚತಾವು. ರೇಬಿಸ್ ವ್ಯಾಕ್ಸಿನ್ ಸೆರೆಬ್ರಲ್ ಎಡಿಮಾ ತಂದು ಇಡತತಿ.

ದೇವರೆಂಬ ಕಲ್ಪನೆಯಿಂದ ಬಿಡುಗಡೆ ಹೊಂದಿದೆ: ಸಾಮಾನ್ಯ ಮನುಷ್ಯನ‌ ಬದುಕಿನ ಪುಟಗಳಿಂದ…1

ಪ್ರಿಯ ಓದುಗರೇ,

ನಾನು ನನ್ನ ಹಳೆಯ ಬದುಕಿನ ಪುಟಗಳನ್ನು ೪೯ ವಸಂತಗಳ ಬಳಿಕ ನೋಡಿದಾಗ ನನ್ನ ಬದುಕಿನ ಕೆಲವು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಬಯಕೆ ಚಿಗುರಿತು. ನನ್ನ ಅನುಭವಗಳು ನಿಮ್ಮದೂ ಆಗಿರಬಹುದು ಅಥವಾ ಭಿನ್ನವಾಗಿರಬಹುದು. ಓದಿ… ನಿಮ್ಮ ಮನದಲ್ಲಿ ಪುಟಿದೇಳುವ ಭಾವನೆಗಳನ್ನು ವ್ಯಕ್ತಪಡಿಸಿ….

ಜೇನಿನ , ಜೇನುಹುಳಗಳ ಕುತೂಹಲಕರ ಸಂಗತಿಗಳು

ಜೇನು ಮತ್ತು ಇರುವೆಗಳ ಜೀವನ ಕ್ರಮಬದ್ಧವಾಗಿದ್ದು , 'ಜೇನವ್ವನ ಸಂಸಾರ' ಪುಸ್ತಕವು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ . ಮಕ್ಕಳಿಗೂ ಓದಲು ಸುಲಭವಾಗಿದೆ.
ನಿಮಗೆ ಜೇನುಗಳ ಬಗ್ಗೆ ಎಷ್ಟು ಗೊತ್ತಿದೆ ?

ಜೇನು ಏಳುವದು , ಇಳಿಯುವದು ಅಂದರೆ ? ಜೇನುಹುಳುಗಳು ಗೂಡು ಕಟ್ಟಲು ಗುಂಪು ಗುಂಪಾಗಿ ಹೊರಡುವುದೇ ಜೇನು ಏಳುವುದು . ಒಂದು ಕಡೆ ಜೇನು ಕಟ್ಟಲು ನಿರ್ಧರಿಸಿ ನೆಲೆಯಾಗುವುದೇ ಜೇನು ಇಳಿಯುವುದು.
ಸಾಮಾನ್ಯವಾಗಿ ಪ್ರಾಣಿಗಳು ಸಮಾಜಜೀವಿಗಳಲ್ಲ ; ಒಂಟೊಂಟಿಯಾಗಿಯೇ ಬದುಕುತ್ತವೆ . ತಮ್ಮ ತಮ್ಮ ಜೀವನವನ್ನು ತಾವೇ ನೋಡಿಕೊಳ್ಳುತ್ತವೆ. ಆದರೆ ಜೇನು, ಇರುವೆ , ಗೆದ್ದಲು ಮಾತ್ರ ಸಮಾಜಜೀವಿಗಳು.
ಜೇನುಗಳಲ್ಲಿ ಮೂರು ಲಿಂಗಗಳು , ಒಂದು ರಾಣಿಜೇನು , ಹೆಣ್ಣು . ಒಂದು ಗುಂಪಿಗೆ ಒಂದೇ . ತತ್ತಿಗಳನ್ನಿಡುವುದಷ್ಟೇ ಅದರ ಕೆಲಸ . ಮತ್ತೆ ಗಂಡುಜೇನುಗಳು . ರಾಣಿಜೇನು ಒಂದು ಗಂಡು ಜೇನಿನ ಜತೆ ಒಮ್ಮೆ ಸೇರಿ ಮುಂದೆ ನಾಲ್ಕೈದು ವರ್ಷ ಕಾಲ ನಾಲ್ಕೈದು ಲಕ್ಷ ತತ್ತಿಗಳನ್ನು ಇಡುತ್ತದೆ . ರಾಣಿ ಜೇನಿನ ಜತೆ ಸೇರಿದ ಗಂಡಿನ ಕತೆ ಮುಗಿದೇ ಹೋಯಿತು . ಸತ್ತೇ ಹೋಗುವದು . ರಾಣಿ ಜೇನು ಒಂದು ಗಂಡು ಜೇನಿನ ಜತೆ ಸೇರಿದ ನಂತರ ಉಳಿದ ಗಂಡು ಜೇನುಗಳನ್ನು ಮೂರನೇ ವಿಧವಾದ ಆಳುಜೇನುಗಳು ಕೊಂದು ಬಿಡುತ್ತವೆ.

ಹರೆಯದ ಮಗನನ್ನು ಹೊಡೆಯುವುದೇ?

ಬೆಳಗ್ಗೆ ೭.೩೦, ನಾನಿನ್ನು ಮಲಗಿದ್ದೆ. ನನ್ನದು UK Shift timings ಮದ್ಯಾಹ್ನ ೨.೦೦ ರಿಂದ ರಾತ್ರಿ ೧೧.೦೦ ರವರೆಗೆ, ಹಾಗಾಗಿ ಬೆಳಗ್ಗೆ ಸ್ವಲ್ಪ ತಡವಾಗಿ ಏಳುತ್ತೇನೆ. ನನ್ನ ಅತ್ತೆ ಮಾವ ನಮ್ಮೊಟ್ಟಿಗೆ ಇಲ್ಲದಿರುವುದರಿಂದ ಬಚಾವಾದೆ :-)

ನಾನು ನಿನ್ನ ಪ್ರೀತಿಸುವೆ!

ಹದಿಹರಯದ ಹುಚ್ಚು ಖೋಡಿ ಹೆಣ್ಣು ನೀನಾಗ

ಹೇಳಿದೆ, ನಾನು ನಿನ್ನ ಪ್ರೀತಿಸುವೆ!

ನಾಚಿದೆ, ನುಲಿದೆ, ಗುಲಾಬಿ ಬಿಳಚಿ ಬೆಳ್ಳಗಾಯಿತು

ತಲೆಬಾಗಿ ಕಾಲ್ಬೆರಳಲ್ಲಿ ಬರೆದೆ

 

ಇಪ್ಪತ್ತರ ಹಿತ ಬಿಸಿಲ  ಬೆಚ್ಚನೆಯ ಹೆಣ್ಣು ನೀನಾಗ

ಹೇಳಿದೆ, ನಾನು ನಿನ್ನ ಪ್ರೀತಿಸುವೆ!