ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂತೋಷ ಏವ ಪುರುಷಸ್ಯ ಪರಂ ನಿಧಾನಮ್

’ಸಂತೋಷ ಏವ ಪುರುಷಸ್ಯ ಪರಂ ನಿಧಾನಮ್’ ಎಂದರು ಹಿರಿಯರು. ಅಂದರೆ ಸಂತಸವೇ ವ್ಯಕ್ತಿಗೆ ಶ್ರೇಷ್ಠ ಸಂಪತ್ತು (ನಿಧಿ). ಅಂದರೆ ಮನುಷ್ಯ ಯಾವಾಗಲೂ ಸಂತೋಷಚಿತ್ತನಾಗಿರಬೇಕು. ನಾವು ಬಹಳ ಸಾರಿ ಸಂತಸದಿಂದ ಇರುವ ಎಲ್ಲಾ ಅವಕಾಶಗಳಿದ್ದರೂ ಸಂತುಷ್ಟರಾಗಿರುವುದಿಲ್ಲ. ಅಂದರೆ ನೆಮ್ಮದಿಯಿಂದಿರಲಾಱೆವು. ಆದರೆ ಕೆಲವು ಸಮಸ್ಯೆಗಳು ಸಂತಸದಿಂದಿರಲು ಅಡ್ಡ ಬರುತ್ತವೆ.

ಸಾಲ ಮೇಳ

ಸಾಲ ಮೇಳ ಈಗ. ಅಮೇರಿಕೆಯಲ್ಲಿ. ಓಹೋ, ಏನು ನಮ್ಮ ಮಾಜಿ ಕೇಂದ್ರ ಹಣಕಾಸು ಸಚಿವರನ್ನು ಅನುಕರಿಸುತ್ತಿದ್ದಾರೋ ಹೊಸ ಅಧ್ಯಕ್ಷ ಒಬಾಮ ಅಂತ ಅಚ್ಚರಿ ಪಡಬೇಡಿ. ಇದು ಬೇರೆಯೇ ರೀತಿಯ ಸಾಲ ಮೇಳ. ಠಾಕು ಠೀಕಾಗಿ ಸೂಟು ಬೂಟು, ಗರಿಗರಿ ರೇಷ್ಮೆ ಟೈ ಕಟ್ಟಿಕೊಂಡು ಖಾಸಗಿ ವಿಮಾನದಲ್ಲಿ ಹಾರಿಬಂದ ಮಹಾನುಭಾವರ ಸಾಲ ಮೇಳ.

ವಸಂತನ ಕರೆ

"ಮಳೆರಾಯ ಕೊಟ್ಟ ಮುತ್ತಿಗೆ...ಮತ್ತೇರಿದೆ ಭೂಮಿಗೆ" ಎಂದು ಬೆಳಗ್ಗೆಯೇ ಕಳಿಸಿದ ಗೆಳೆಯನ ಮೆಸೇಜನ್ನು ಓದಿ ಕಿಟಕಿಯಾಚೆ ಕಣ್ಣಾಯಿಸಿದವಳಿಗೆ ಹೊರಗಡೆ ಹೊಸ ಲೋಕವೊಂದು ಬಂದಿಳಿದಂತೆನಿಸತೊಡಗಿತು.

ಯಾಕ್ರೀ ಬೇಕು ಈ ಚುನಾವಣೆ.... ?

ಶೀರ್ಷಿಕೆ ನೋಡಿದ್ ಕೂಡ್ಲೇ ಏನೋ ಗಂಭೀರವಾದ ವಿಷಯ ಬರೀತಾಳೆ ಅಂದ್ಕೊಂಡ್ರಾ ... ಇಲ್ಲಾರೀ... ಈ ಚುನಾವಣೆ ಬರೋದು ಸಾಕು... ಅದಕ್ಕೋಸ್ಕರ ನಮ್ಮಂಥವರನ್ನ ಆ ಕೆಲಸಕ್ಕೆ ಹಾಕೋದು ಸಾಕು.. ಎಷ್ಟ್ ಕಷ್ಟ ಗೊತ್ತೇನ್ರಿ ? ನೆನ್ನೆ ಚುನಾವಣೆಗೆ ಅಂತ ಒಂದು ತರಭೇತಿ ಇತ್ತು. ಮತಯಂತ್ರ ಉಪಯೋಗಿಸೋದು ಹೇಗೆ , ಅಲ್ಲಿ ಕೆಲಸ ಮಾಡೋದು ಹೇಗೆ ಇತ್ಯಾದಿ ಇತ್ಯಾದಿ....

ಕೋರಮಂಗಲದಲ್ಲೊಬ್ಬ ಸ್ಲಮ್‍ಡಾಗ್ (?), ಹಾಗೂ ಬಾಲ ಭಿಕ್ಷುಕಿ

[ಮೊದಲಿಗೆ, ಆ ಹುಡುಗನನ್ನು "ಸ್ಲಮ್‍ಡಾಗ್" ಎಂದು ಹೆಸರಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ. "ಸ್ಲಮ್‍ಡಾಗ್ ಮಿಲಿಯನೇರ್" ಹಿನ್ನೆಲೆಯಲ್ಲಿ ರೂಪಕವಾಗಿ ಮಾತ್ರ ಹಾಗೆ ಬಳಸಿಕೊಂಡಿದ್ದೇನೆ.]

ಅವರೂ ಸರಿ ಇಲ್ಲ, ನಾವೂ ಸರಿ ಇಲ್ಲ!

ಅವನೊಬ್ಬ ವ್ಯಾಪಾರಿ. ಭಾರೀ ಶ್ರೀಮಂತ. ಆದರೂ ತೀರದ ಧನದಾಹ. ವರದಕ್ಷಿಣೆ ವಿಷಯದಲ್ಲಿ ಸೊಸೆಯೊಡನೆ ಜಟಾಪಟಿಗಿಳಿದ ಆತ ಅದೊಂದು ದಿನ ಮಗನೊಡಗೂಡಿ ಸೀಮೆಎಣ್ಣೆ ಸುರಿದು ಸೊಸೆಯನ್ನು ಸುಟ್ಟುಹಾಕಿಬಿಟ್ಟ. ಕಾನೂನಿನ ಕೈಗೆ ತಾವಿಬ್ಬರು ಸಿಕ್ಕಿಬೀಳದಂತೆ ಎಲ್ಲ ಏರ್ಪಾಡುಗಳನ್ನೂ ಮಾಡಿದ. ಆದರೆ ಆ ಊರಿನ ಮಹಿಳಾ ಸಂಘಟನೆಗಳವರು ಅವನ ವಿರುದ್ಧ ಸಿಡಿದೆದ್ದರು.

ಓಶೋ ಚಿ೦ತನೆ ೬

ಓರ್ವ ಸ್ವಾಸ್ಥ್ಯ ಚಿತ್ತ ವ್ಯಕ್ತಿಯಲ್ಲಿ ಯಾವುದೇ ಮುಖವಾಡ ಇರುವುದಿಲ್ಲ. ಆತನ ಮುಖ ಮೌಲಿಕವಾಗಿರುತ್ತದೆ. ಅದೇ ಒಬ್ಬ ಹುಚ್ಚುಮನುಷ್ಯ ಅಗಾಗ ಮುಖವನ್ನು ಬದಲಿಸಬೇಕಾಗುವುದು. ಪ್ರತಿಕ್ಷಣದಲ್ಲೂ ಆತನಿಗೆ ಬೇರೆ ಸ್ಥಿತಿಗಾಗಿ, ಭಿನ್ನ ಸ೦ಬ೦ಧಗಳಿಗಾಗಿ ಭಿನ್ನ ಭಿನ್ನವಾದ ಮುಖವಾಡಗಳನ್ನು ಧರಿಸುತ್ತಲೇ ಇರಬೇಕಾಗುವುದು. ಸ್ವಲ್ಪ ನಿಮ್ಮ ಮುಖವನ್ನೇ ನೀವು ನೋಡಿಕೊಳ್ಳಿ.

ಪಾಣಿನಿಯ ತಪ್ಪು

ಮನಸು ಗಂಡಲ್ಲ ಹೆಣ್ಣಲ್ಲ
ಎನುವ ಪಾಣಿನಿಯ ನೆಚ್ಚಿ
ಮನವ ನಿನ್ನಲಿ ಕಳುಹಿ
ನಾನಂತೂ ಕೆಟ್ಟೆ ನಲ್ಲೆ!


ಮನವೇನೋ ನಲಿಯತಿದೆ
ನೆಲೆಸಿ ಅಲ್ಲೇನೇ; ಆದರೆ
ಪಾಣಿನಿಯ ತಪ್ಪಿಂದ
ನಾವಂತೂ ಸತ್ತೆವಲ್ಲೆ!

 

ಸಂಸ್ಸ್ಕೃತ ಮೂಲ (ಧರ್ಮಕೀರ್ತಿ)

ವೋಲ್ವೊದೊಳ್ಗಣ ಜಾಪಾನ್!

ಕೊನೆ ವಾರ ತುಂಬಾ ಮುಖ್ಯ ಅನ್ನುವಂತಹ ವೈಯಕ್ತಿಕ ಕೆಲ್ಸ ಇತ್ತು. ಒಂದು ವಾರ ಪೂರ್ತಿ ಅಫೀಸಿಂದ ದೂರನೆ ಇದ್ದೆ. ನಡುವೆ ಎರಡು ದಿನ ಮೀಟಿಂಗ್ ( ಅದೂ ಕ್ಯಾನ್ಸಲ್ ಆಯ್ತು ;) )  ಅಂತ ಆಫೀಸ್ ಕಡೆ ಮುಖ ಹಾಕಿದ್ ಬಿಟ್ರೆ ನನ್ನ ರಜ ಎರಡು ವಾರ ಅಂತ ಲೆಕ್ಕಾನೆ! :)    

................