ವೋಲ್ವೊದೊಳ್ಗಣ ಜಾಪಾನ್!

ವೋಲ್ವೊದೊಳ್ಗಣ ಜಾಪಾನ್!

ಕೊನೆ ವಾರ ತುಂಬಾ ಮುಖ್ಯ ಅನ್ನುವಂತಹ ವೈಯಕ್ತಿಕ ಕೆಲ್ಸ ಇತ್ತು. ಒಂದು ವಾರ ಪೂರ್ತಿ ಅಫೀಸಿಂದ ದೂರನೆ ಇದ್ದೆ. ನಡುವೆ ಎರಡು ದಿನ ಮೀಟಿಂಗ್ ( ಅದೂ ಕ್ಯಾನ್ಸಲ್ ಆಯ್ತು ;) )  ಅಂತ ಆಫೀಸ್ ಕಡೆ ಮುಖ ಹಾಕಿದ್ ಬಿಟ್ರೆ ನನ್ನ ರಜ ಎರಡು ವಾರ ಅಂತ ಲೆಕ್ಕಾನೆ! :)    

................

ಮೊನ್ನೆ ಸೋಮವಾರ  (ಎಂದಿನಂತೆ) ಲೇಟಾಗಿ ಎದ್ದೆ. ಅಫೀಸ್ ಕ್ಯಾಬ್ ಮಿಸ್ಸ್ ಅಗಿತ್ತು. ( ಅದೇನೂ ಹೊಸದಲ್ಲ ;)  ). ಸೋಮಾರಿತನನ ಹಂಗೇನೆ ಮೈಯಲ್ಲಿ ಇಟ್ಕೊಂಡು ಕೋತಿ-ಬಂಡೆ ( ಅದೇ .. ಮಾರುತಿ ಮಂದಿರ!) ಕಡೆ ಹೆಜ್ಜೆ ಹಾಕಿದೆ. 

ಬೆಂಗಳೂರಿನ BMTC  ಬಸ್ಸುಗಳ ರಶ್ಶು ನನಗೇನೂ ವಿಶೇಷವಲ್ಲ. ಇದೇ ರಶ್ಶಿನ ನೂಕು ನುಗ್ಗುಲಲ್ಲಿ ೩-೪ ಮೊಬೈಲು .. ಹಣ ( ಸಂಬಳದ ಪೂರ್ತಿ ಹಣ!) .. ಇನ್ನೂ ಏನೇನೋ ;) ಕಳ್ಕೊಂಡಿದ್ದೇನೆ.  ಆದರೂ ಆ ನೂಕು ನುಗ್ಗಲಿಗೆ ನಾನು ಹೊಂದಿಕೊಂಡು ಬಿಟ್ಟಿದ್ದೆ.

ಆದರೆ ಇತ್ತೀಚೆಗೆ ಯಾಕೋ ...ಅದೇನು ಬಂತೋ ( ವೋಲ್ವೋ ;) ) ... ಆರಮಾಗಿರೋ ಬಸ್ಸು  ಕಾಯ್ತೀನಿ. ಹೆಂಗೂ ವೋಲ್ವೊ (ವಿಜಯನಗರದಿಂದ) ಖಾಲಿ ಇರುತ್ತೆ ಅಲ್ವ !

ಹಾಗಾಗಿ ಬನಶಂಕರಿ-ಸಿಲ್ಕ್ ಬೋರ್ಡ್ ಮೇಲೆ ಸುತ್ತಾಕ್ಕೋಂಡು ಮಾರತ್ತಹಳ್ಳಿಗೆ ಹೋಗೊ ವೋಲ್ವೋ ಹಿಡಿದೆ. ಕೂತುಕೊಂಡೆ.

ದೇವೇಗೌಡ ಪೆಟ್ರೋಲ್ ಬಂಕ್ ಹತ್ರ ( ಅಲ್ಲೆ ಎಲ್ಲೋ ;) ) ಒಬ್ಳು ಹುಡುಗಿ ಓಡಿ ಬಂದು ಬಸ್ಸು ಹತ್ತಿದ್ಳು. ಹುಡುಗಿ ಗುಂಡು ಗುಂಡುಗೆ.. ಗುಂಗುರು ಕೂದಲು "ಮಾಡಿಸಿಕೊಂಡು" ಸಕತ್ತಾಗೆ ಇದ್ಳು ;).   ಹಾಗಾಗಿ ನನ್ನ ಗಮನ ಆಕೆ ಕಡೆ ಹೋಯ್ತು.

ಇಶ್ಟೆ  ಹಾಗಿದ್ರೆ ಆಕೆ ನನ್ನ ನೆನಪಲ್ಲಿ ಉಳೀತಾ ಇರಲಿಲ್ಲ...ಆದರೆ ಆಕೆ ನನಗೆ ನನ್ನ ಜಪಾನ್ ವಾಸವನ್ನು ನೆನೆಪಿಸಿ ಕೊಟ್ಟ್ಳು! :)

ತನ್ನ ಪರ್ಸೊಳಗಿಂದ ಕನ್ನಡಿ, ಲಿಪ್ಸ್ಟಿಕ್ ತೆಗೆದು ತನ್ನ ತುಟಿಗಳನ್ನು ತಿದ್ದಿದ್ದೇ ತಿದ್ದಿದ್ದು. ಸಿಲ್ಕ್ ಬೋರ್ಡ್ ನಿಂದ ಮಾರತ್ತಹಳ್ಳಿ ಸೇತುವೆ ತನಕ! . ಬೆಂಗಳೂರಿನಲ್ಲಿ ಬಸ್ಸಲ್ಲಿ ಕೂತು ಮೇಕಪ್ ಮಾಡಿಕೊಳ್ಳುವುದು ನಾನು ಇದೇ ಮೊದಲ ಸಲ ನೋಡಿದ್ದು. ಹಾಗಾಗಿ ಇಲ್ಲಿ ಬರೀತ ಇದ್ದೇನೆ. ( ಅದು ತಪ್ಪು ಸರಿ ಅಂತ ವಿಮರ್ಶೆ ಇದಲ್ಲ). 

..................

ಅಂದ ಹಾಗೆ ಇತ್ತೀಚಿನ ಜಪಾನ್ ಸಂಸ್ಕೃತಿನಲ್ಲೂ ಹೀಗೆ. ಅಲ್ಲಿನ ತುಂಡು ಬಟ್ಟೆ ಹುಡುಗಿಯರು ( ಅಲ್ಮೋಸ್ಟ್ ಎಲ್ಲಾ  ಯುವತಿಯರು!)  ಅಲ್ಲಿನ ಟ್ರೈನುಗಳಲ್ಲಿ ಸ್ವಲ್ಪ ಸಮಯ ಸಿಕ್ರೆ ಸಾಕು ಮೇಕಪ್ ಬಾಕ್ಸ್ ತಗೀತಾರೆ.! 

Rating
No votes yet