ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎತ್ತಣಿಂದೆತ್ತ...?? :)

ಎಸೆಯುತ್ತಿದ್ದಳು ಕಲ್ಲು,
ಸಾಗರದತ್ತ....
ಕುಡಿನೋಟದಿ೦ದ,
ನೋಡಿದನು ಅವಳತ್ತ,
ಅಳುಕುತ್ತಲೇ ಓರೆನೋಟವ,
ಬೀರಿದಳು ಅವನತ್ತ..

ತಿರುಗಿತು ಅವರ ನೋಟ,
ಪ್ರೇಮದತ್ತ...
ಸ್ವಲ್ಪದರಲ್ಲೇ ಏರಿದರು..
ಹಸೆಮಣೆಯತ್ತ..!!! :)

ಕಡಿಮೆಯಾಗದಿರಲಿ!!!

ಸಖೀ,
ನೀನು
ನನ್ನವಳಾಗದಿದ್ದರೂ
ಚಿಂತೆಯಿಲ್ಲ,
ಆದರೆ,
ನನ್ನೊಳಗೆ ನಿನ್ನ ಪ್ರೀತಿ
ಸದಾ ಇರುವಂತೆ,
ನಿನ್ನೊಳಗೆ ನನ್ನ
ಪ್ರೀತಿಯೂ ಇರಲಿ;
ನನ್ನ ನಿನ್ನ ನಡುವಣ
ಮಾತುಗಳು
ಕಡಿಮೆಯಾದರೂ
ಚಿಂತೆಯಿಲ್ಲ,
ಆದರೆ,
ನಮ್ಮ ನಡುವಣ
ಈ ಮೌನ ಸಂಭಾಷಣೆ
ಕಡಿಮೆಯಾಗದಿರಲಿ;
ನಿನ್ನ ಕಣ್ಣುಗಳು
ನನ್ನ್ನ ಕಾಣದಿದ್ದರೂ
ಚಿಂತೆಯಿಲ್ಲ,
ಆದರೆ,
ನನ್ನ ಬಿಂಬವನೇ
ತುಂಬಿಕೊಂಡಿರುವ

ನುಡಿಮುತ್ತುಗಳ ವಿನಿಮಯ

ಗುತ್ತಿನ ಅರಮನೆಗಿಂತ ರಟ್ಟಿನರಮನೆ ಲೇಸು,
ಪೆಟ್ಟಿಗೆಯೊಳಗಿರ್ಪ ಬಂಗಾರಕ್ಕಿಂತ ಮನೆಯ ಮಾಡಿನ ಮಣ್ಣ ಹೆಂಚು ಲೇಸು,
ಎಲ್ಲದಕೂ ಕರೆದುಂಬ ಕಾಗೆಯ ಬಾಳೆ ಲೇಸು ಅಲ್ಲವೇ ಅಣ್ಣಯ್ಯಾ?

ನಡೆಯ ಬಿಂಬಿಪ ನುಡಿ ಲೇಸು
ನುಡಿಯ ಗೆಲ್ಲಿಪ ನಡೆ ಲೇಸು
ನುಡಿಗೂ ನಡೆಗೂ ಅಂತರ ಇಲ್ಲದಿರ್ಪ ಜೀವನವದು ಬಲು ಲೇಸು ತಮ್ಮಣ್ಣಾ!!!

ಬದುಕೇ ದುಸ್ತರವಾದಾಗ ,ಬದುಕು ಬದುಕಬೇಕೆ ?

ಮನುಷ್ಯ ಕೆಲವೊಮ್ಮೆ ದೇವರು ಒಡ್ಡುವ ಪರೀಕ್ಷೆಯಲ್ಲಿ ಅನುತ್ತೀರ್ಣನಾದಾಗ ಹೇಳುವ ಒಂದೇ ಮಾತು ," ನೆಮ್ಮದಿಯಾಗಿ ಬದುಕಲು ಬಿಡುವುದಿಲ್ಲ ಈ ದೇವರು ".

ಇದರಲ್ಲೊ೦ದು ಪ್ರಾಣಿಯಿದೆ, ಗುರುತಿಸುವಿರಾ?

ಇದರಲ್ಲೊ೦ದು ಪ್ರಾಣಿಯಿದೆ, ಗುರುತಿಸುವಿರಾ?

ಮಾಹಿತಿ ತು೦ಬಿಸಲೇ ಬೇಕ೦ತೆ. ಏನೆ೦ದು ತು೦ಬಿಸಲಿ? :)
ಉತ್ತರ ದೊರೆತ ನ೦ತರ ಅದನ್ನೇ ಮಾಹಿತಿಯಾಗಿ ತು೦ಬಿಸುವೆ.

ಎಂ ನಾಗರಾಜ್ ಹಾಗೂ ಎಂ ಮಂಜುನಾಥ್ ದ್ವಂದ್ವ ವಯೊಲಿನ್ ವಾದನ

ಸ್ಥಳ: ಕೋಟೆ ಮೈದಾನ ಆವರಣ, ಚಾಮರಾಜಪೇಟೆ, ಬೆಂಗಳೂರು

ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕ ಇದೆ.

ಸಾರಥಿ ನಾನೇ

ಎಂದು ಮುಗಿಯದ ಧಾರವಾಹಿಯಂತೆ ನಮ್ಮ ಪ್ರೀತಿ
ಪ್ರೀತಿ ಮಾಡುವವರೆಲ್ಲರಿಗೂ ಇದ್ದಿದ್ದೇ ಒಂದಲ್ಲ ಒಂದು ಪಜೀತಿ
ಇನ್ನು ಸುಮ್ಮನೆ ಚಿಂತಿಸುವೆಯೇಕೆ ಜೀವದ ಗೆಳತಿ
ಪ್ರೀತಿ ರಥ ಮುನ್ನಡೆಸಲು ಇರುವಾಗ ಈ ಸಾರಥಿ

- Vರ ( Venkatesha ರಂಗಯ್ಯ )

ಮತ ಚಲಾಯಿಸುವ ಮುನ್ನ ಒಮ್ಮೆ ಯೋಚಿಸಿ .....

ಇದು ನಮ್ಮ ಎಂ.ಪಿ.ಗಳ ಸಂಬಳದ ಸಾಮಾನ್ಯ ಪಟ್ಟಿ ಇದನ್ನು ನನ್ನ ಆತ್ಮೀಯರೊಬ್ಬರು ನನಗೆ ಹೇಳಿದ್ದು ,ಅವರು ಹೇಳಿದ್ದನ್ನು ತಪ್ಪು ಅಥವಾ ಸರಿ ಎಂದು ತರ್ಕ ಮಾಡುವಷ್ಟು ಗೋಜಿಗೆ ಹೊಗಲ್ಲ ,ಇದರಲ್ಲಿನ ವಿಷಯಕ್ಕೆ ಗಮನ ಕೊಡಿ ,ಅವರ ಸಂಬಳ ಇದಕ್ಕಿಂತ ಕಡಿಮೆ ಅಥವಾ ಜ್ಯಾಸ್ತಿ ಇರಬಹುದು

ಸಂಬಳ –೪೨೦೦೦
ಕಛೇರಿಯ ಖರ್ಚು --೧೪೦೦೦ /ತಿಂಗಳಿಗೆ
ಇದರ ಜೊತೆ ಸ್ಟೆಷನರಿಗೆ --೧೦೦೦/ತಿಂಗಳಿಗೆ

ಹಳೆಯ ಪುಟಗಳ ಮತ್ತೆ ತೆರೆದಾಗ...

ಕಂಗಳೇ! ನನ್ನ ಸಖಿಯ ತೋರುವ ಕಂಗಳೆ!!

ನನ್ನ ಶತ್ರುವೇಕೆ ಆಗುತ್ತಿರುವಿರಿ ಇಂದು?

ನಲ್ಲೆಯ ನಾ ಕನಸಿನಲ್ಲೂ ಕಾಣಬಾರದೆಂದು

ನಿದ್ರೆ ಬರಿಸದೆ ಮುಷ್ಕರ ಹೂಡಿ ಏಕೆಂದು?

 

ನಿದ್ರಿಸುವಾಗ ನನ್ನ ತೋಳ ತೆಕ್ಕೆಯಲ್ಲಿ

ಸಖಿ ಪವಡಿಸಿರುವಳು

ಎಚ್ಚರವಾಗಲು ಹೃದಯದೊಳಗೆ ಏಕೆ

ನಲ್ಲೆಯ ಒಡನಾಟ

ಸ್ನೇಹಿತರೆ ಇಲ್ಲಿ ನಾನು ನನ್ನ ಮೊದಲ ಸಣ್ಣ ಕವನವನ್ನು ಬರೆಯುತ್ತಿರುವೆನು. ಇದರಲ್ಲಿ ಶೃಂಗಾರ ರಸದ ಬಳಕೆಯಿದೆ. ದಯವಿಟ್ಟು ತಪ್ಪಿದ್ದರೆ ತಿಳಿಸಿ.

ಕವನ : ಮಾಗಿಯಾ ಚಳಿಯಲಿ
ಮುತ್ತಿನಾ ಮಳೆಯಲಿ
ತೇಲಾಡಿದೆನ್ನ ತನು-ಮನ
ಆ ನಿನ್ನ ಬಿಸಿಯಪ್ಪುಗೆಯಲಿ