ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಟಿಂಗಿಯ ಲೋಕ

ಅಕ್ಕನ ಮದುವೆಯ ಸಿದ್ಧತೆಗೆಂದು ಅಪ್ಪ-ಅಮ್ಮ ಇಬ್ಬರೂ ಬೆಂಗಳೂರಿಗೆ ಹೋಗಿದ್ದರು. ನಾನು, ನನ್ನ ಎರಡನೆಯ ಅಕ್ಕ ಮತ್ತು ಅಣ್ಣ ಮಾತ್ರ ಮನೆಯಲ್ಲಿದ್ದೆವು. ರಾತ್ರಿ ಮಲಗಿ ಸ್ವಲ್ಪ ಹೊತ್ತಿಗೆಲ್ಲ ಪಕ್ಕದ ರಸ್ತೆಯ ಕಡೆಯಿಂದ ನಾಯಿಮರಿಯೊಂದು ಅಳುವ ಸದ್ದು ಶುರುವಾಯಿತು.

ಮುನೀ

"ಟ್ರೀನ್ ಟ್ರೀನ್ ...."
ಫೋನಿನ ರಿಂಗ್ ಕೇಳಿದಾಗ ತಾನು ನಿರೀಕ್ಷಿಸುತ್ತಿದ್ದ ಮಗನ ಕರೆಯಾಗಿರಬಹುದು ಎಂದು ಊಹಿಸಿ ಖದೀಜುಮ್ಮ ಫೋನೆತ್ತಿ "ಹಲೋ" ಎಂದರು
"ಹಲೋ ಅಸ್ಸಲಾಮು ಅಲೈಕುಂ"
"ವ ಅಲೈಕುಂ ಸಲಾಂ ಯಾರು?"
"ಉಮ್ಮ ನಾನು ಮುನೀರ್"
"ಮುನೀ ಯಾವಾಗ ತಲುಪಿದ್ದೀಯ , ಹೇಗಿದ್ದೀಯ..?"
"ಬೆಳಿಗ್ಗೆ....... ಹತ್ತು ಗಂಟೆಗೆ"
"ಹೋಗುವಾಗ ತೊಂದರೆ ಏನೂ ಆಗಿಲ್ಲ ತಾನೆ?"
"ಇಲ್ಲ"
"ದುಡ್ಡು ಜೋಪಾನ"
"ಸರಿ ಉಮ್ಮ ಬಾಪ ಇಲ್ವಾ?"

ತೊಡದೇವು ಮತ್ತು ಮಂಡಿಗೆ

ಸಂಪದಿಗರೆ!

ಹಳೇ ಮೈಸೂರಿನ ಕಡೆ ಮಂಡಿಗೆ ಎನ್ನುವ ತಿಂಡಿಯೊಂದಿದೆ. 

ಹಾಗೆಯೇ ಮಲೆನಾಡಿನ ಕಡೆ ತೊಡದೇವು ಎನ್ನುವ ತಿಂಡಿಯಿದೆ.

ಇವೆರಡೂ ಒಂದೇ ತಿಂಡಿಯೆನ್ನುವರು.

ಹೌದೆ?

ಸೆಳೆತ

ಸಖೀ,
ನಾವು
ಎದುರು
ಬದುರಾಗಿ
ಕೂತು
ಒಬ್ಬರನ್ನೊಬ್ಬರು
ಕಣ್ಣಲ್ಲಿ
ಕಣ್ಣಿಟ್ಟು
ನೋಡುವುದಕ್ಕಿಂತಲೂ,
ಸ್ವಲ್ಪ ದೂರ
ಪರಸ್ಪರ
ವಿರುದ್ಧ ದಿಕ್ಕಿನಲ್ಲಿ
ನಡೆದು,
ಒಮ್ಮೆಗೇ
ಇಬ್ಬರೂ
ಹಿಂತಿರುಗಿ
ನೋಡಿದಾಗ
ಆಗುವ
ಆ ಅನುಭವ
ಅದ್ಭುತ;

ಅಂತೆಯೇ,
ದಿನವೆಲ್ಲಾ
ಜೊತೆಗಿದ್ದು
ನಾವಾಡುವ
ಹತ್ತಾರು
ಮಾತುಗಳಿಗಿಂತಲೂ
ದೂರದೂರಿಂದ
ಕರೆ ಮಾಡಿ
ಆಡುವ
ಒಂದೇ ಒಂದು

ಕನ್ನಡಿಗರು ತನಿಷ್ಕ್ ನ ಚಿನ್ನ ಕೊಳ್ಳಲಾಗದಷ್ಟು ಬಡವರೇ ?

ತನಿಷ್ಕ್ ನ ಚಿನ್ನಾಭರಣದ ಅ೦ಗಡಿ ಬೆ೦ಗಳೂರಲ್ಲಿ 4 - 5 ಕಡೆ ಇವೆ. ಜನರನ್ನು ಆಕರ್ಷಿಸಲು ಇವರು ತಯಾರಿಸುತ್ತಿರುವ ಜಾಹೀರಾತೆಲ್ಲಾ ಇ೦ಗ್ಲೀಷಿನಲ್ಲಿದೆ. ಯಾವದೇ ಹೋರ್ಡಿ೦ಗ್ ಗಳಲ್ಲಿ, ದಿನಪತ್ರಿಕೆಗಳಲ್ಲಿ, ಟಿವಿ ಯಲ್ಲಿ ಅಥವಾ ಇನ್ಯಾವುದೇ ಮಾಧ್ಯಮದಲ್ಲಿ ಬರುವ ಇವರ ಜಾಹೀರಾತುಗಳಾಗಲ್ಲಿ ಒ೦ದಕ್ಷರ ಕನ್ನಡವಿಲ್ಲ.

ಬಸಂತ್ ಮುಖಾರಿ

ಅವತ್ತಿನಿಂದ ಡಾ.ಕೇಶವ ಕುಲಕರ್ಣಿ ಅವರು ಯಾವುದಾದರೂ ರಾಗದ ಬಗ್ಗೆ ಬರ್ದಿಲ್ವಲ್ಲ ಅಂತ ಹೇಳ್ತಾನೇ ಇದ್ರು. ಇವತ್ತು ಇದ್ದಕ್ಕಿದ್ದ ಹಾಗೆ ಈಗಿನ್ನೂ ವಸಂತ ಋತು ಅನ್ನೋದು ನೆನಪಾಯ್ತು.

ಓಶೋ-ಚಿ೦ತನೆ ೫

ನಾವು ಧನ. ಪ್ರತಿಷ್ಠೆ, ಅಧಿಕಾರ, ಗೌರವ, ಘನತೆಗಳೆಲ್ಲವನ್ನೂ ಸಾಧಿಸಿದ್ದೇವೆ ಹಾಗೂ ಇವುಗಳ ಸಾಧನೆಯಲ್ಲಿ ಸ್ವತಃ ನಮ್ಮನ್ನು ನಾವು ಕಳೆದುಕೊ೦ಡಿದ್ದೇವೆ. ನಮ್ಮನ್ನು ಸ೦ಪೂರ್ಣವಾಗಿ ಕಳೆದುಕೊ೦ಡಿದ್ದೇವೆ.

ಇರುವ ಹಾಗೆ ಬದುಕಲು ಸಾಧ್ಯವಿಲ್ಲವೇನು?

ಈ ಜಗತ್ತಿನಲ್ಲಿ ಯಾವ ಮಹತ್ವಾಕಾ೦ಕ್ಷೆಯಿಲ್ಲದೆ, ನಾವು ಇರುವ ಹಾಗೆ ಬದುಕಲು ಸಾಧ್ಯವಿಲ್ಲವೇನು? ನಿಮ್ಮ ಸದ್ಯದ ಸ್ಥಿತಿಯನ್ನು, ಪರಿವರ್ತನೆಯ ಯಾವ ಪ್ರಯತ್ನವೂ ಇಲ್ಲದೆ ಅರ್ಥಮಾಡಿಕೊಳ್ಳಲು ಸಾಧ್ಯವಾದರೆ, ಅಗ ನಿಮ್ಮ ಇರುವಿಕೆಯಲ್ಲಿಯೇ ರೂಪಾ೦ತರವಾಗುತ್ತದೆ.

ಮರಳಿ ಗೂಡಿಗೆ

ನಮಸ್ಕಾರ ಸಂಪದಿಗರೆ,
20 ತಿಂಗಳ ವಿದೇಶವಾಸ ಮುಗಿಸಿ, ಇದೀಗ ನಿಮಗೆಲ್ಲಾ ಹೇಳದೆ ನಾನು ದುಬೈನಿಂದ ನನ್ನೂರಾದ ಚೇರಂಬಾಣೆಗೆ (ಭಾರತ ರಾಷ್ಟ್ರದ, ಕರ್ನಾಟಕ ರಾಜ್ಯದ, ಕೊಡಗು ಜಿಲ್ಲೆಯ ಪುಟ್ಟ ಊರು) ಕಳೆದ ವಾರ ಬಂದು ತಲುಪಿದೆ.
ತಿಳಿಸಲು ಅನಾನುಕೂಲವಾದುದಕ್ಕೆ ವಿಷಾದಿಸುತ್ತೇನೆ.

ಬಶೀರ್ ಕೊಡಗು