ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಪದಿಗರೇ, ನಿಮಗಿದೋ ನಮನ

ಸಂಪದಿಗರೇ,
ನಿಮಗಿದೋ ಹೃತ್ಪೂರ್ವಕ ನಮನ.
ಕಳೆದ ಕೆಲ ದಿನಗಳಲ್ಲಿ ನಿಮ್ಮೆಲ್ಲರೊಡನೆ ಒಡನಾಟ ಮಜವಾಗಿತ್ತು.
ಸ್ಥಳಾಂತರಿಸುವ ಆಲೋಚನೆಯಲ್ಲಿದ್ದೇನೆ...
ಕೆಲಸುವ ಹುಡುಕುವ ಪ್ರಕ್ರಿಯೆಗೆ ರಭಸ ಸಾಲುತ್ತಿಲ್ಲ, ಕೆಲ ದಿನ ಇತ್ತ, ಬಾರದಿದ್ದೇನು...
ಮತ್ತೆ ಸಿಗೋಣ...
ಇಲ್ಲಂತೂ ಇದ್ದೇ ಇದ್ದೇನೆ:
shivaramshastri@yahoo.com

ಅಲ್ಲಮ ಹೆಸರಿನಲ್ಲಿನ ’ಮ’ ಬಗ್ಗೆ

ನಿನ್ನೆ ಮಾಸ್ತಿಯವರ ಪುಸ್ತಕ - ನಮ್ಮ ನುಡಿ ತಿರುವಿ ಹಾಕುತ್ತಿದ್ದಾಗ ಕಂಡದ್ದು . ಇವತ್ತು ’ಅಲ್ಲಮ’ ಹೆಸರಿನ ಬಗ್ಗೆ ಇಲ್ಲೆಲ್ಲೊ ಟಿಪ್ಪಣಿ ನೋಡಿ ನಾನು ಓದಿದ್ದನ್ನು ಹಾಕಬೇಕೆನಿಸಿತು .

೨೦೦೯ ರ ಚುನಾವಣೆ - ಅಫಿಡವಿಟ್ಟುಗಳು

ನಾಮಪತ್ರ ಸಲ್ಲಿಸುವಾಗ ಚುನಾವಣೆಗೆ ನಿಂತ ರಾಜಕಾರಣಿಗಳು ಕೊಟ್ಟ ಅಫಿಡವಿಟ್ಟುಗಳನ್ನು ನೋಡಿದ್ದೀರಾ? ಇಲ್ಲಿವೆ ಎಲ್ಲ:

http://eci.nic.in/CurrentElections/ge2009/Affidavits_fs.htm

ಅವಳಿಲ್ಲದ ಐದು ವರ್ಷ

ಎಲ್ಲಿ ಹೋದೆಯೇ ಸೌಮ್ಯ ಹೆಸರಿನ ಸೌಂದರ್ಯವತಿ?

ನೀನಿಲ್ಲದ ಐದು ವರ್ಷ ಇಲ್ಲಿ ಏನೇನು ಬದಲಾವಣೆಯಾಗಿದೆ ಗೊತ್ತೆ? ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬಂದಿದೆ. ನೀನು ಆ ಪರಿ ಬೆಂಬಲಿಸಿದ್ದ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿದಿದೆ. ಕಾವೇರಿ ಗಲಾಟೆಯಾಗಿಲ್ಲ. ಆಲಮಟ್ಟಿ ಏಕೋ ಉಕ್ಕಿಉಕ್ಕಿ ಹರಿದಿದೆ. ರಾಜ್ಯ ಮೊದಲಿಗಿಂತ ಸದೃಢವಾಗಿದೆ. ಹಣದುಬ್ಬರ ಇಳಿದಿದೆ. ಆರ್ಥಿಕ ಹಿಂಜರಿತವನ್ನೂ ಮೆಟ್ಟಿ ನಿಲ್ಲಬಲ್ಲ ವಿಶ್ವಾಸ ವ್ಯಕ್ತವಾಗಿದೆ. ಇದನ್ನೆಲ್ಲ ನೋಡಲು ನೀನಿರಬೇಕಿತ್ತೇ ಸೌಂದರ್ಯವತಿ.

ಎಂಥಾ ವಿಚಿತ್ರ ನೋಡು, ನೀನು ಅತ್ತ ಹೋದ ಐದು ವರ್ಷದಲ್ಲಿ ಕನ್ನಡ ಚಿತ್ರರಂಗಕ್ಕೆ ಎಪ್ಪತ್ತೈದು ತುಂಬಿತು. ನಿನ್ನ ಅನುಪಸ್ಥಿತಿಯಲ್ಲಿ ಸಡಗರಪಡಬೇಕಾದ ದೌರ್ಭಾಗ್ಯ ಕನ್ನಡಿಗರದು. ನಿನ್ನನ್ನು ಆ ಪರಿ ಮೆರೆಸಿದ ಆಂಧ್ರಪ್ರದೇಶದಲ್ಲಿ ಚಿರಂಜೀವಿ ಹೊಸ ಪಕ್ಷ ಶುರು ಮಾಡಿ ಚುನಾವಣೆಗೆ ನಿಂತಿದ್ದಾರೆ. ನೀನಿದ್ದರೆ ಪ್ರಜಾರಾಜ್ಯಂ ಕಡೆ ವಾಲುತ್ತಿದ್ದೆಯೇನೋ. ಯಾರಿಗೆ ಗೊತ್ತು? ಆಂಧ್ರದಲ್ಲಿ ಚುನಾವಣೆಗೆ ನಿಂತಿದ್ದರೂ ಗೆದ್ದು ಬರಬಲ್ಲ ಜನಪ್ರಿಯತೆ, ಆಕರ್ಷಣೆ ನಿನಗಿತ್ತು. ನಿನ್ನೊಲುಮೆಯಿಂದ ಚಿರುಗೆ ಇನ್ನಷ್ಟು ಸೀಟ್‌ಗಳು ಸಿಗುವ ಸಾಧ್ಯತೆಗಳೂ ಇದ್ದವು. ಎಷ್ಟೊಂದು ಜನ ನಿನ್ನನ್ನು ಮಿಸ್ ಮಾಡಿಕೊಳ್ತಿದ್ದಾರೆ ಗೊತ್ತೆ?

ನನ್ನ ಪ್ರಥಮ ವಿದೇಶಿ ಯಾತ್ರೆಯ ಹೀಗೊಂದು ಅನುಭವ...!!

ಇದನ್ನ ಅನುಭವ ಕಥನ ಅನ್ನಬೇಕೋ ಅಥವಾ ಪ್ರವಾಸ ಕಥನ ಅನ್ನಬೇಕೋ ಅನ್ನೋ ಗೊಂದಲದೊಂದಿಗೇ ನನ್ನ 'ಗೊಂದಲ ಪೂರ್ಣ' ಪ್ರಥಮ ವಿದೇಶಿ ಯಾತ್ರಾನುಭಾವವನ್ನ ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನೂ ದೇವನಹಳ್ಳಿಗೆ ಸ್ಥಳಾಂತರಗೊಂಡಿರದಿದ್ದ ದಿನಗಳವು.

"ನಾನು ಮಲಗಿದ್ದಾಗ"

ಸುತ್ತಲೂ ಕಗ್ಗತ್ತಲು, ಕ೦ಡರಿಯದ ನಿರವತೆ, ನನ್ನ ಏದುಸಿರ ಸದ್ದು ಬಿಟ್ಟರೆ ಬೇರಾವುದೇ ಸದ್ದಿಲ್ಲ, ನಾನು ಓಡುತ್ತಿದ್ದೇನೆ, ಓಡುತ್ತಲೇ ಇದ್ದೇನೆ. ಎಷ್ಟು ದೂರದಿ೦ದ ಓಡುತ್ತಿದ್ದೇನೆ? ಎಲ್ಲಿಗೆ ಹೋಗುತ್ತಿದ್ದೇನೆ? ಎಲ್ಲಿ೦ದ ಬ೦ದಿದ್ದೇನೆ? ಯಾಕಾಗಿ ಓಡುತ್ತಿದ್ದೇನೆ? ಯಾರು ನನ್ನನ್ನು ಹೀಗೆ ಓಡಿಸುತ್ತಿರುವುದು? ಅವರು ಓಡಿಸುತ್ತಿದ್ದರೆ ನಾನ್ಯಾಕೆ ಓಡತ್ತಿರಬೇಕು?

ನನ್ನೀ ಕೃತಿ

"ಬರೆಯಲೋರಟಿರುವೆ ನಾ ಕೃತಿ ಒಂದ
ಅದಕೆ ಬೇಕಾ ಸ್ಪೂರ್ತಿ ,
ಸ್ಪೂರ್ತಿಯೇ ಇಲ್ಲದ ಕೃತಿ
ಆತ್ಮವಿಲ್ಲದ ದೇಹದಂತೆ
ಮಮತೆಯೇ ಇಲ್ಲದ ಅನುರಾಗದಂತೆ"