ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಲಾಲೂ ಯಾರು......!?

ಹೌದು ಲಾಲೂ ಕಂಗಾಲಾಗಿದ್ದಾರೆ...ಮೊದಲಬಾರಿ ನಡುಗುತ್ತಿದ್ದಾರೆ...ರಾಜ್ಯದಲ್ಲಿರುವ ಬಿಹಾರಿಗಳನ್ನು ಬೇರೆ ಬೇರೆ ರೇಲ್ವೆzoneಗಳಲ್ಲಿ
ತುರುಕಿಯೂ ಅವರು ಹೆದರಿದ್ದಾರೆ ಅಂದರೆ ಪ್ರಬಲವಾದ ಆಯುಧವೇ ಎದುರಾಳಿಗಳ ಕಡೆ ಇರಬೇಕು. ಆ ಆಯುಧವೇ ಅಭಿವೃದ್ದಿ ಎಂಬ ಸಂತಸದ ಸಂಗತಿ ನಿಜ ನಿತೀಶ್ ಕುಮಾರ್ ಅಸಾಧ್ಯವಾದದ್ದನ್ನು ಸಾಧಿಸುವತ್ತ ದಾಪುಗಾಲಿಟ್ಟಿದ್ದಾರೆ.... ಮೊದಲ ಸಲ ಮುಖ್ಯ

ದಯವಿಟ್ಟು ಎಲ್ಲರೂ ನನ್ನನ್ನು ಕ್ಷಮಿಸಿ

"ಏನು ಸಾಧಿಸಿದೆ ಆ ಎರೆಡು ದಿನಗಳಲ್ಲಿ?"
ನೆನ್ನೆ ರಾತ್ರಿ ನನ್ನ ಮನಸು ಕೇಳಿತು
ನೆನ್ನೆ ರಾತ್ರಿ ಮನೆಗೆ ಹೋದಾಗ ೧೦ ಘಂಟೆ.,ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಿ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದೆ .
ಆಗಲೇ ಮನಸ್ಸು ಕೇಳಿದ್ದು.

ಪರಾರಿಯಾದವರು

ಅವನು ಯಾರೋ ಏನೋ
ಯಾವ ಊರೋ ಏನೋ ಪಾಪ!
ನಡು ಬೀದಿಯಲಿ ಬಿದ್ದು
ಎರಡು ದಿನಗಳಾದರೂ ಆಗಿರಬಹುದು
ಪಕ್ಕದ ಕಸದ ತೊಟ್ಟಿಯಲಿ
ತಿ೦ದುಳಿದು ಬಿಸಾಕಿದ ಬ್ರೆಡ್ ಚೂರೂ ಕೊಳೆಯುತ್ತಿತ್ತು

ಹಾದಿ ತು೦ಬಾ ಜನ, ಬಸ್ಸು ಕಾರುಗಳು
ಮೆರವಣಿಗೆ, ರಾಜಕಾರಣಿಗಳ ಲಾಳಿ
ಎಲ್ಲೆಡೆಯೂ ಸ೦ಭ್ರಮ, ಸಡಗರ
ಜನ ಆ ಅನಾಥನನ್ನು ಬಳಸಿಕೊ೦ಡೇ
ಮೂಗು, ಕಣ್ಣೂ ಮುಚ್ಚಿಕೊ೦ಡೇ ಜಾಗಿ೦ಗ್

ಬದುಕೆಂಬ ಕಲ್ಪನೆಯ ನಡುವೆ ಸಾವೆಂಬ ವಾಸ್ತವ!

ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು! ಎಂಬ ತಲೆಬರಹದಡಿಯಲ್ಲಿ ಪ್ರಕಟವಾದ ಸುದ್ಧಿ ನನ್ನ ಗಮನಕ್ಕೆ ಇನ್ನೂ ಬಂದಿರಲಿಲ್ಲ. ನಾಗೇಶ ಸಾಯಂಕಾಲ ನಿರುದ್ವಿಗ್ನ ಸ್ಥಿತಿಯಲ್ಲಿ ಹೇಳಿದ "ಕಾಡುಅಗ್ರಹಾರದ ಐನೋರ್ ಮಗ ನೀರ್ನಲ್ಲಿ ಮುಳುಗಿ ಸತ್ತೋದ್ನಂತೆ" ಎಂಬ ವಿಷಯ ಗಂಭೀರತೆಯನ್ನ ಅರಿಯಲು ಸಾಧ್ಯ್ವವಾಗಿರಲಿಲ್ಲ.

ಡಾ| ರಾಜ್ - ಪದಬಂಧ (ಸಾಮಾಜಿಕ)

ಡಾ| ರಾಜ್ ಅವರ ಹಾಡುಗಳನ್ನು ಹಾಡಿಕೊಂಡು ಆ ಹಾಡಿನ ಚಿತ್ರದ ಹೆಸರನ್ನು ಪದರಂಗದಲ್ಲಿ ತುಂಬಿಸೋಣವೇ ? ನಿಮ್ಮೆಲ್ಲರಿಗೂ ಚಿರಪರಿಚಿತವಾದ ಹಾಡು / ಸಿನಿಮಾಗಳಿಂದಲೇ ಆಯ್ಕೆ ಮಾಡಿರುವುದರಿಂದ, ಅವಶ್ಯಕತೆ ಇದ್ದಲ್ಲಿ ಉತ್ತರ ಪ್ರಕಟಿಸುತ್ತೇನೆ. ನಿಮ್ಮ ಉತ್ತರಗಳನ್ನು ಕಮೆಂಟಿನಲ್ಲಿ ಹಾಕುವಿರಿ ತಾನೇ?

ಎಡದಿಂದ ಬಲಕ್ಕೆ

(೦೧) "ನಗು ನಗುತಾ ನಲೀ ನಲೀ, ಏನೇ ಆಗಲಿ" {೭}
(೦೨) "ಜೇನಿನ ಹೊಳೆಯೋ ಹಾಲಿನ ಮಳೆಯೋ, ಸುಧೆಯೋ ಕನ್ನಡ ಸವಿನುಡಿಯೋ" {೮}
(೦೩) "ಇದು ರಾಮ ಮಂದಿರ ಆನಂದ ಸಾಗರ, ಜೊತೆಯಾಗಿ ನೀನಿರಲು ಬಾಳು ಸಹಜದ ಸುಂದರಾ" {೪}
(೦೪) "ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆ ಇದೆ, ಏಕೇ ಕನಸು ಕಾಣುವೇ, ನಿಧಾನಿಸು ನಿಧಾನಿಸು" {೬}
(೧೨) "ನಾವಿರುವಾ ತಾಣವೆ ಗಂಧದ ಗುಡಿ..." {೫}
(೧೩) "ನಿನದೇ ನೆನಪೂ ದಿನವೂ ಮನದಲ್ಲಿ, ನೋಡುವಾ ಆಸೆಯೂ ತುಂಬಿದೇ ನನ್ನಲೀ ನನ್ನಲೀ" {೬}
(೧೫) "ಆಕಾಶವೆ ಬೀಳಲಿ ಮೇಲೇ, ನಾ ನಿನ್ನ ಕೈಬಿಡೆನು" {೬}

ಹನ್ನೆರಡು ಜ್ಯೋತಿರ್ಲಿಂಗಗಳು - ೧೧ [ವೇರುಳಿನ ಘುಶ್ಮೇಶ್ವರ].

ವೇರುಳಿನ ಘುಶ್ಮೇಶ್ವರ.

ಎಲ್ಲಿದೆ?
ಔರಂಗಾಬಾದ್ ಇಂದ ಎಲ್ಲೋರ ಗುಹೆಗಳ ಕಡೆ ಹೋಗುವ ರಸ್ತೆಯಲ್ಲಿ ವೇರುಳ್ ಸಿಗುತ್ತದೆ. ಜ್ಯೋತಿರ್ಲಿಂಗ ಗ್ರೀಷ್ಮೇಶ್ವರ ಅಥವಾ ಘುಶ್ಮೇಶ್ವರ ಇಲ್ಲಿದೆ. ಇದು ಮೂಲತಃ ನಾಗ್ ಬುಡಕಟ್ಟು ಜನಾಂಗದವರ ದೇವಸ್ಥಾನ.

ದೇವಸ್ಥಾನದ ಸ್ವರೂಪ.
ದಶಾವತಾರದ ಕೆತ್ತನೆಗಳಿಂದ ಶೋಭಿತವಾದ ಇದು ೨೪೦ * ೧೮೫ ಅಡಿ ವಿಸ್ತಾರವಾಗಿದೆ. ಅಂಗಳದಲ್ಲಿ ೨೪ ಕಂಬಗಳ ಮೇಲೂ ನಂದಿಕೇಶ್ವರನ ಮೂರ್ತಿ ಇದೆ. ದೇವರು ಪೂರ್ವಾಭಿಮುಖವಾಗಿದ್ದು ದೇವಾಲಯದಿಂದ ಪವಿತ್ರ ಜಲ ಪ್ರವಹಿಸುವುದು.

ಸ್ಥಳ ಪುರಾಣ.
ಈ ಸ್ಥಳದ ಕುರಿತು ಅನೇಕ ಕತೆ(ಥೆ)ಗಳಿವೆ. ಪಾರ್ವತಿ ಕುಂಕುಮ ಇಟ್ಟುಕೊಳ್ಳುವಾಗ ಅದು ಶಿವಲಿಂಗವಾಗಿ ಕೆಳಗೆ ಬಿದ್ದಿತಂತೆ. ಇದಕ್ಕೆ ಕುಂಕುಮೇಶ್ವರ ಎಂಬ ಹೆಸರು ಕೂಡ ಇದೆ. ಇನ್ನೊಂದು ಕತೆ(ಥೆ)ಯಂತೆ, ದೇವಗಿರಿ ಪರ್ವತದಲ್ಲಿ ಸುಧರ್ಮ-ಸುದೇಹಿ ದಂಪತಿಗಳು ಧರ್ಮಪರರಾಗಿದ್ದರು. ಇವರಿಗೆ ಮಕ್ಕಳಾಗದಿರಲು ತಂಗಿ ಘುಶ್ಮಾದೇವಿಗೆ ಮಗುವಾಯಿತು. ಅಕ್ಕ ಸುದೇಹಿ ಆ ಮಗುವನ್ನು ಮೋಸದಿಂದ ಕೊಂದಳು. ಆಗ ತಂಗಿಯು ಶಿವನನ್ನು ಪ್ರಾರ್ಥಿಸಿದಳು. ಶಿವನು ಮಗುವನ್ನು ಬದುಕಿಸಿದ ಮತ್ತು ಅವಳ ಕೋರಿಕೆಯ ಮೇರೆಗೆ ಘುಷ್ಮೇಶ್ವರನಾಗಿ ಇಲ್ಲಿ ನಿಂತನು ಎಂದು ನಂಬಿಕೆ. ಇದನ್ನು ವೇರುಳಿನ ಅರಸನಾದ ಭೋಂಸ್ಲೆ ಸ್ಥಾಪಿಸಿದನೆಂದೂ, ಅಹಲ್ಯಾಬಾಯಿ ಹೋಳ್ಕರ‍್ ಅಭಿವೃದ್ಧಿ ಪಡಿಸಿದಳೆಂದೂ ಚಾರಿತ್ರಿಕ ದಾಖಲೆಗಳು ಹೇಳುತ್ತವೆ.

ಡಾ. ರಾಜ್ ನೆನಪಿನಲಿ............

ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಯನ್ನು ಹೇಗೆ ಬಾಳಿಸಿ ಬೆಳಗಬೇಕು ಎಂಬುದನ್ನು ತೋರಿಸಿಕೊಟ್ಟ ಡಾ: ರಾಜ್ ಅನ್ನು ಸ್ಮರಿಸೋಣ. ಹೀಗೊಂದು ಡಾ: ರಾಜ್ ಸ್ಮರಣ ! ಕವನ !! ನಮನ !!! (ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.)

ಡಾ. ರಾಜ್ ಕುಮಾರ್ ನೆನಪಿನಲಿ!!!!!

ಕನ್ನಡದ ಕಂದಾ, ನೀ ಕರುನಾಡ ಅಣ್ಣನಾದೆ,

ಕನ್ನಡಿಗರ ಹೃದಯದಲಿ ಕನ್ನಡದ ಉಸಿರಾದೆ,

ಕರುನಾಡು ಬೆಳೆಸಿದ ಮಂದಾರ ಮರವಾದೆ,

ಮತ್ತೊಂದು ಗ್ರಹಕೂಟ

ಕನ್ನಡಕಂದರು ಚಂದ್ರ ಶುಕ್ರ ಮಂಗಳ ಯುತಿ ಮುಂದಿನ ವಾರದಲ್ಲಿ ಬರುವುದರ ಬಗ್ಗೆ ಬರೆದಿದ್ದಾರೆ. ಆದಿನದ ಆಕಾಶ ಹೇಗಿರತ್ತೆ ಅಂತ ತೋರಿಸೋಣ ಅಂತ ಈ ಬರಹ.

ನಸ್ಯದಾನಂ ಮಹಾದಾನಂ

ನಸ್ಯದಾನಂ ಮಹಾದಾನಂ

ಅನ್ನ ದಾನಂ ಚ ಮಧ್ಯಮಂ|

ಅಧಮಂ ವಸ್ತ್ರದಾನಂಚ

ಕನ್ಯಾದಾನಂಚ ನಿಷ್ಪಲಂ|| ಅನ್ಬಿಟ್ಟು ಹಿರೀಕ್ರೆ ಹೇಳ್ಭಿಟ್ಟಿದ್ದಾರೆ. ಅದೂ ಅಲ್ದೆ

 

ಅಸ್ಯ ಶ್ರೀನಸ್ಯಸ್ತೋತ್ರಮಿತಿ

ಮಹಾಮಂತ್ರಸ್ಯ

ಹೊಗೇಸೊಪ್ಪೆ ದಿವಿಜಂ

ಡಬ್ಬೀಂ ಋಷಿಃ

ಮಮ ನಸ್ಯಧಾರಣ ಪ್ರಸಾದ

ಅಮೇರಿಕೆಗೆ ತಿಗಣೆ ಕಡಿತ

ಅಮೆರಿಕೆಗೀಗ ತಿಗಣೆ ಕಾಟ ಅಂತೆ. ಅಮೆರಿಕವೇ ಒಂದು ಮಹಾ ತಿಗಣೆ ಎಂದು ಅದನ್ನು ನಿಗ್ರಹಿಸಲು ನಾವು ಯೋಚಿಸುತಿದ್ದರೆ ಬಂತು ಹೊಸ ಪ್ರಾರಬ್ದ. ಕಳೆದ ೫ ವರ್ಷಗಳಲ್ಲಿ ಶೇಕಡಾ ೭೧ ರಷ್ಟು ವೃದ್ಧಿ ಆಗಿದೆ ಅಂತೆ ಅಮೇರಿಕೆಯಲ್ಲಿ. ಎಲ್ಲಿಂದ ಬಂದವು ಎಂದು ಕೇಳಬೇಡಿ, ಬಹುಶಃ ಅಮೆರಿಕೆಯ ಮಿತ್ರ ಲಾಡೆನ್ ಮಹಾಶಯ ಆಫ್ಘಾನಿಸ್ತಾನದ "ತೋರಬೋರ" ಗವಿಗಳಿಂದ ಕಳಿಸಿರಲಿಕ್ಕೂ ಸಾಕು.