ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎರಡು ಚುನಾವಣೆಗಳ ಸುತ್ತ

ನವೆಂಬರ್ ೪, ೨೦೦೮ ರಲ್ಲಿ ನಡೆದ ಐತಿಹಾಸಿಕ ಚುನಾವಣೆಯಲ್ಲಿ ಬರಾಕ್ ಒಬಾಮ ಜಯಭೇರಿ ಬಾರಿಸಿದರು. ೪೪ನೆ ಅಧ್ಯಕ್ಷರಾಗಿ ಚುನಾಯಿತರಾದ ಒಬಾಮ ಅಮೆರಿಕೆಯ ಪ್ರಪ್ರಥಮ ಕಪ್ಪು ಅಧ್ಯಕ್ಷ ಎಂಬ ಹೆಗ್ಗಳಿಕೆ ಮತ್ತು ಗೌರವಕ್ಕೆ ಪಾತ್ರರಾಗಿ ಚರಿತ್ರೆಯ ಸುವರ್ಣ ಪುಟಗಳಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡರು.

ನಾನು ಮತ್ತು ???

ಅವತ್ತು ಕಚೇರಿಯಿ೦ದ ಕೆಲಸ ಮುಗಿಸಿ ಹೊರಟಿದ್ದೇ ತಡವಾಗಿತ್ತು. ೯.೧೫ ಕ್ಕೆ ಬಸ್ ಇತ್ತು. ತಪ್ಪಿದರೆ ೧೦.೧೫ ಕ್ಕೆ ಇದ್ದಿದ್ದು. ಹಾಗಾಗಿ ಅವಸರದಲ್ಲಿ ಎಷ್ಟಾಗತ್ತೋ ಅಷ್ಟು ಪ್ಯಾಕ್ ಮಾಡ್ಕೊ೦ಡು (ನನ್ನನ್ನೇ) ಹೊರಟೆ. ಬಸ್ ಸ್ಟಾಪಿಗೆ ನಾನು ಹೋಗೋದಕ್ಕೂ ಬಸ್ ಬರೋದಕ್ಕೂ ಸರಿ ಹೋಯ್ತು. MP3 ಪ್ಲೇಯರ್ ಕೇಳ್ಲೊ೦ಡು ಕೂತೆ. 'ತಪ್ಪಿ ಹೋಯಿತಲ್ಲೇ ಚುಕ್ಕಿ, ಬೆಳಕಿನ ಜಾಡು.....' ಹಾಡು ಬರ್ತಾ ಇತ್ತು. ಹಾಗೇ ಒ೦ದು ಜೋ೦ಪು ಹತ್ತಿತ್ತು. ಅಷ್ಟರಲ್ಲಿ 'ತ೦ಗಾಳಿಯಲ್ಲಿ ತೇಲಿ .. ' ಹಾಡು ಶುರು ಆಯ್ತು. ನನ್ನ ಸ್ಟಾಪೂ ಬ೦ತು. ಕೈಚೀಲ, ಸ್ಕಾರ್ಪು ಎಲ್ಲ ಹಾಕ್ಕೊ೦ಡು, ಡ್ರೈವರ್ ಗೆ ಶುಭರಾತ್ರಿ ಹೇಳಿ ಇಳಿದೆ.

"ನಂಬಿಕೆಯೇ ನಂಬಲೇ ನಾ ನಿನ್ನ "

ಬಸ್ ಬರೋ ಟೈಮ್ ಆಯಿತು ಏಳೋ ..ಅತ್ತ ಅಮ್ಮನ ಕೂಗು ಕೇಳಿದಾಕ್ಷಣ ...ಅಬ್ಬಾ ಎಷ್ಟು ಹೊತ್ತು ಮಲಗಿ ಬಿಟ್ಟೆ ಎಂದು ಬಿರ ಬಿರನೆ ಎದ್ದು ಟೈಮ್ ನೋಡಿದೆ ...ಆಗಲೇ ೪.೧೫ ಆಗಿತ್ತು .೫ ಕ್ಕೆ ಕೊನೆ ಬಸ್ ನಮ್ಮೂರಿಂದ ತೀರ್ಥಹಳ್ಳಿಗೆ (ಶಿವಮೊಗ್ಗದಿಂದ ರಾತ್ರಿ ೧೦ ಕ್ಕೆ ಹೊರಡುವುದಾದರು,ಬಸ್ ವ್ಯವಸ್ತೆ ಇಲ್ಲದ ಕಾರಣ ಮನೆಇಂದ ಬೇಗನೆ ಹೊರಡಬೇಕಾದ ಪರಿಸ್ಥಿತಿ ).ಇನ್ನು ಏನು ಪ್ಯಾಕ್ ಮಾಡ್ಕೊ

ಚೂಡಿದಾರ್ - ಜೀನ್ಸ್ ಪ್ಯಾಂಟ್

ರಾಜಾಜಿನಗರದಲ್ಲಿ ಈ ಹುಡುಗಿಯನ್ನ ನೋಡ್ತಿದ್ದೆ, ಅವಳನ್ನು ನೋಡಿ ಈ ಕವನ‌

ಮುಂಜಾನೆ,
ಅವಳು ಅಪ್ಪನ‌ ಜೊತೆ,
ಚೂಡಿದಾರಲ್ಲಿ

ಮುಸ್ಸಂಜೆ,
ಅವಳು ಅವನ (ಅವಳ ಹುಡುಗ) ಜೊತೆ,
ಜೀನ್ಸ್ಪ್ ಪ್ಯಾಂಟಿನಲ್ಲಿ

ಕೆ.ಎಸ್ ನರಸಿ೦ಹ ಸ್ವಾಮಿಯವರ ’ಮದುವಣಗಿತ್ತಿಯ ಮನಸ್ಸು’

ನವಿರಾದ ಪ್ರೇಮಗೀತೆಗಳಿಗೆ ಕೆ.ಎಸ್.ನ ಖ್ಯಾತರು.ದ೦ಪತಿಗಳಿಗೆ ದಾ೦ಪತ್ಯದ ಮಾಧುರ್ಯವನ್ನು ಉಣಿಸಿದ ಕವಿ
ಮೈಸೂರುಮಲ್ಲಿಗೆಯ ಪ್ರತಿಯೊ೦ದು ಕವನವೂ ಮಲ್ಲಿಗೆಯಷ್ಟೇ ಮ್ರದು, ಪರಿಮಳಯುಕ್ತ. ಕವನಗಳನ್ನು ಓದುತ್ತಾ ಹೋದ೦ತೆ
ಭಾವನನ್ನು ಅನುಭವಿಸುತ್ತೇವೆ.ಮನಸ್ಸು ಕೆ೦ಪಾಗುತ್ತದೆ.ಕವನಗಳನ್ನ ಆಳಕ್ಕಿಳಿದು,ಬಗೆದು , ಶೋಧಿಸಿ ನೋಡಬೇಕಾಗಿಲ್ಲ

ರಾಜ್‌ಕುಮಾರ್ ಎಂಬ ಕವಿತೆ

(ರಾಜ್‌ಕುಮಾರ್ ಬಗ್ಗೆ ಬಹಳ ಹಿಂದೆಯೇ ನಾನೊಂದು ಕವನ ಬರೆದಿದ್ದೆ. ಎಲ್ಲೂ ಪ್ರಕಟಣೆಗೆ ಕಳಿಸಲಿಲ್ಲ. ಅದೀಗ ಎಲ್ಲಿ ಹೋಗಿದೆಯೋ ಗೊತ್ತಿಲ್ಲ. ಆದರೆ ಈಗಷ್ಟೇ ನಾನು ಈ ಪೋರ್ಟಲ್‌ನಲ್ಲಿ ಮಿತ್ರ ಡಿ.ಎಸ್.ರಾಮಸ್ವಾಮಿಯವರ ’ಬರೆಯದ ಕವಿತೆಯ ರೂಪಕ (ಡಾ.ರಾಜ್ ಕುಮಾರ್ ಕುರಿತು)’ ಬರಹ ಓದಿದೆ. ಓದಿದ ತಕ್ಷಣ ನನ್ನ ಮನದಲ್ಲಿ ಕವನವೊಂದು ಸ್ಫುರಿಸಿತು.

ನನಗೂ ಓದುವಾಸೆ!!!

ನಾನೂ ಓದಬೇಕೆಂಬಾಸೆ ತುಂಬಿದೆ ನನ್ನೀ ಮನದೊಳಗೆ
ಊರೂರು ಸುತ್ತಾಡಿ ಬಂದೆನದಕೆ ಮಿಡ್ ಲ್ಯಾಂಡಿನೊಳಗೆ

ಪ್ರೇಮ ಪತ್ರಗಳ ರವಾನಿಸುವ ಕೆಲಸಕ್ಕೆ ಈಗಿಲ್ಲ ಅಷ್ಟು ಬೇಡಿಕೆ
ಈ ಸಮೋಸಗಳಿಂದಾಗಿ ಈಗ ಇಲ್ಲ ಪತ್ರ ಬರೆಯುವ ವಾಡಿಕೆ

ಓದು ಬರಹ ತಿಳಿಯದ ನಾನಿಳಿಯ ಬಹುದಿತ್ತು ರಾಜಕೀಯಕ್ಕೆ
ಆದರೆ ರೋಸಿಹೋಗಿದೆ ಮನಸ್ಸು ಅಲ್ಲಿನ ಹೊಲಸು ಕಿತ್ತಾಟಕ್ಕೆ

ನಾವು ನೆನೆದಂತೆ ಬಾಳು ಏಕೆ ನೆಡೆಯುವುದಿಲ್ಲ...?

ಡಾ||ರಾಜಣ್ಣನವರ "ಪ್ರೇಮದ ಕಾಣಿಕೆ" ಚಿತ್ರದ ಒಂದು ಹಾಡು....

"ಬಾನಿಗೊಂದು ಯೆಲ್ಲೆ ಯೆಲ್ಲಿದೆ... ನಿನ್ನಾಸೆಗೆಲ್ಲಿ ಕೊನೆಯಿದೆ..."

ಅದೇ ಹಾಡಲ್ಲಿ ಬರುವ ಎರಡು ಸಾಲು:

"ಆಸೆಯೆಂಬ ಬಿಸಿಲ ಕುದುರೆ ಏಕೆ ಏರುವೆ, ಮರಳುಗಾಡಿನಲ್ಲಿ ಸುಮ್ಮನೇಕೆ ಅಲಿಯುವೆ..."

"ಅವನ ನಿಯಮ ಮೀರಿ ಇಲ್ಲಿ ಏನು ಸಾಗದು, ನಾವು ನೆನೆಸಿದಂತೆ ಬಾಳಳೇನು ನೆಡೆಯದು..."

ಗುಲಗಂಜಿ ನಿಮಗೆಷ್ಟು ಗೊತ್ತು... ?

ಗುಲಗಂಜಿ ಎಂದರೆ ಬಹಳಷ್ಟು ಜನರಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ.ನಗರವಾಸಿಗಳಿಗೆ ಇದರ ಪರಿಚಯ ಕಡಿಮೆಯೇ ಎನ್ನಬಹುದು.ಬಂಗಾರದ ಕೆಲಸ ಮಾಡುವವರಿಗೆ ಇದು ಚಿರಪರಿಚಿತ.ಹಿಂದಿನ ದಿನಗಳಲ್ಲಿ ಬಂಗಾರವನ್ನು ಗುಲಗಂಜಿ ತೂಕದಲ್ಲಿಯೇ ತೂಗುತ್ತಿದ್ದರಂತೆ.
ಗುಲಗಂಜಿ ದ್ವಿದಳ ಸಸ್ಯದಲ್ಲಿ ಬಿಡುವ ಒಂದು ಬೀಜ.ಇವುಗಳಲ್ಲಿ ಮೂರು ವಿಧಗಳಿವೆ.ಹಾಲಿನಕೆನೆ ಬಣ್ಣದ ಗುಲಗಂಜಿ, ಕೆಂಪು ಬಣ್ಣದ ಗುಲಗಂಜಿ,ಮತ್ತು ಕಪ್ಪು ಬಣ್ಣದ ಗುಲಗಂಜಿ.ಸಂಪದಿಗರಿಗಾಗಿ ಕೆಂಪು ಬಣ್ಣದ ಗುಲಗಂಜಿಯ ಚಿತ್ರ ಹಾಕಿದ್ದೇನೆ. (ಉಳಿದೆರಡು ರೀತಿಯ ಗುಲಗಂಜಿಗಳನ್ನು ಮುಂಬರುವ ದಿನಗಳಲ್ಲಿ ಅಪ್ಲೋಡ್ ಮಾಡ್ತೀನಿ).
ಗುಲಗಂಜಿ ತುಂಬಾ ಮನಮೋಹಕ ಬಣ್ನವುಳ್ಳದ್ದಾಗಿದ್ದು,ಇದರ ಗಾತ್ರ ತೊಗರಿ/ಹಲಸಂದೆ ಕಾಳಿನಷ್ಟಾಗಿರುತ್ತದೆ.ಮೈತುಂಬಾ ಕೆಂಪು ಇರುವ ಇದರ ಸೌಂದರ್ಯಕ್ಕೆ ಮನಸೋಲದ ಮಕ್ಕಳಿಲ್ಲ .ಇದನ್ನು ಬಾಯಿಯಲ್ಲಿಟ್ಟು ಕಡಿದರೆ ಕಹಿ.ಸುಮಾರು ಜನರಿಗೆ ಇದೊಂದು ಕೃತಕ ವಸ್ತುವಿನಂತೆ ಕಂಡರೂ ಇದೂ ಒಂದು ಪ್ರಕೃತಿಯ ಕೊಡುಗೆಯೆಂದು ತಿಳಿದಿಲ್ಲ.
ಗುಲಗಂಜಿಯ ಬಗ್ಗೆ ಪ್ರಚಲಿತವಾದ ಕಥೆಯೊಂದು ಹೀಗಿದೆ.ಗುಲಗಂಜಿ ಒಮ್ಮೆ ನನಗಿಂತಾ ಸುಂದರಿಯಿಲ್ಲ ಎಂದು ಬೀಗುತ್ತಿತ್ತಂತೆ.ಬೇರೆಯವರ ಬಣ್ಣ ನೋಡಿ ನಗುತ್ತಿದ್ದ ಗುಲಗಂಜಿಗೆ ತನ್ನ ಕೆಳಗಿರುವ ಕಪ್ಪು ಬಣ್ಣದ ಬಗ್ಗೆ ತಿಳಿದಿರಲಿಲ್ಲ.ಇದನ್ನು ಮಾರ್ಮಿಕವಾಗಿ ಹಳ್ಳಿಗಳಲ್ಲಿ ಬೀಗುವ ಜನರಿಗೆ ಹಿರಿಯವರು ಬುದ್ದಿ ಹೇಳುವಾಗ ಬಳಸುತ್ತಾರೆ.