ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎಂದೂ ಮರೆಯಲಾಗದ ನನ್ನ ಮೆಚ್ಚಿನ ರಮೇಶ್ ಸರ್..ಗೆ ಈ ಪತ್ರ

ಗುರುಗಳೇ
ನೀವು ಇವತ್ತು ನಮ್ಮನ್ನೆಲ್ಲಾ ಬಿಟ್ಟು ಹೋದ್ರಿ...

ದೈಹಿಕವಾಗಿ ಬಿಟ್ಟು ಹೋದ್ರು ನೀವು ಕಲಿಸಿ ಹೋಗಿರುವ ವಿದ್ಯೆ ಸದಾ ನಮ್ಮಲ್ಲಿ ನಿಮ್ಮ ನೆನಪಾಗಿ ನಮ್ಮ ಜೊತೆಯಲ್ಲೇ ಇರುತ್ತದೆ.
ನಿಜ..
ನಾನು ನಿಮ್ಮ ಕಾಲೇಜಿನಲ್ಲಿ ಓದಿ ನಿಮ್ಮ ಶಿಷ್ಯನಾಗಲಿಲ್ಲಾ.. ನೀವು ನನ್ನ ಗುರುಗಳ ಗುರುಗಳು...

ಪ್ರೋತ್ಸಾಹದಾಯಕ ನುಡಿಗಳು

"ಅಲೆಗಳು ನನ್ನನ್ನು ತುಂಬಾ ಅಭಿಪ್ರೇರೆಪಿಸುತ್ತವೆ. ಅವುಗಳ ಏಳುಬೀಳುಗಳಿಂದಲ್ಲ; ಪ್ರತಿಬಾರಿ ಅವು ಬಿದ್ದಾಗಲೂ ಏಳುವ ಅವುಗಳ ಬತ್ತದ ಉತ್ಸಾಹದಿಂದ"
ಯಾವಾಗಲೂ ಆಶಾವಾದಿಯಾಗಿರಿ.

ಚಾಮುಂಡಿ ಎಕ್ಸ್ಪ್ರೆಸ್ಸ್ ರೈಲಿನಲ್ಲಿ ಮೂರು ಘಂಟೆ

ಏಪ್ರಿಲ್ ೧೨, ೨೦೦೯

ಬೆಂಗಳೂರಿನಲ್ಲಿ ಕಾರ್ಯಕ್ರಮ ಇದ್ದರಿಂದ ಸಂಜೆ ಹೊರಡುವ ಬದಲು ಬೆಳಿಗ್ಗೆ ೬:೪೫ಕ್ಕಿರುವ ಮೈಸೂರಿ-ಬೆಂಗಳೂರು ಚಾಮುಂಡಿ ಎಕ್ಸ್ಪ್ರೆಸ್ಸ್ ರೈಲು ಹತ್ತಿದೆ. ಹಿಂದಿನ ದಿನವೇ ಚೀಟಿ ತೆಗೆದುಕೊಂಡಿದ್ದರಿಂದ ಸೀದಾ ರೈಲು ಹತ್ತಿದೆ. ಮೊದಮೊದಲಿಗೆ ಜನ ಇಲ್ಲದಿದ್ದರೂ ನಂತರ ರೈಲು ತುಂಬಿಹೋಯಿತು. ನನ್ನ ಎದುರು ಒಬ್ಬ ೪೦ ವರುಷದ ವ್ಯಕ್ತಿಯೊಬ್ಬರು ಕುಳಿತಿದ್ದರು. ಇನ್ನೆನು ರೈಲು ಹೊರಡಬೇಕೆನ್ನುವಷ್ಟರಲ್ಲಿ ಯಾರೊ ಒಬ್ಬರು ಬಂದು ಮುಂದಿನ ಆಸನದಲ್ಲಿ ಕುಳಿತಿದ್ದ ವ್ಯಕ್ತಿಯನ್ನು "ಇದು ರಿಸೆರ್ವ್ಡ್ ಸೀಟ್, ನೀವು ಏಳಿ" ಎಂದರು. ಆ ವ್ಯಕ್ತಿಗೆ ಸಿಕ್ಕಾಪಟ್ಟೆ ಕೋಪ ಬಂತು. "ಅಲ್ಲಯ್ಯ ಸುಮಾರ್ ವರ್ಷದಿಂದ ಇದೇ ರೈಲಲ್ಲಿ ಹೋಗ್ತಾ ಇದೀನಿ, ನೀನು ರಿಸೆರ್ವ್ಡ್ ಅಂತ ಜಗಳಕ್ಕೆ ಇಳಿತಿಯಲ್ಲಾ. ರಿಸೆರ್ವ್ಡ್ ಬೋಗಿ ಕಡೆಗಿರೋದು. ಬೇಕಾದರೆ ಟಿಟಿಇ ವಿಚಾರಿಸು" ಎಂದು ಜೋರು ಮಾಡಿದನು. ಸರಿ ರಿಸರ್ವ್ಡ್ ಚೀಟಿ ಇದ್ದವನು ಹೊರಕ್ಕೆ ಹೋಗಿ ಟಿಟಿಇ ವಿಚಾರಿಸಿದಾಗ, ರಿಸೆರ್ವ್ಡ್ ಬೋಗಿ ಬೇರೆ ಎಂದು ಹೇಳಿದನು. ಇದು ಮುಂದಿದ್ದ ವ್ಯಕ್ತಿಗೂ ತಿಳಿಯಿತು. ಸ್ವಲ್ಪ ಹೊತ್ತಿನ ನಂತರ ಅಲ್ಲಿದ್ದವರಲ್ಲಿ "ಸುಮಾರು ವರ್ಷದಿಂದ ಇದೇ ರೈಲ್ನಾಗೆ ಹೋಗ್ತಿವ್ನಿ. ಅಲ್ಲಾ ರಿಸೆರ್ವ್ಡ್ ಅಂತ ಜಗಳಕ್ಕೆ ಇಳಿತಾರೆ. ನಾವು ಸ್ವಲ್ಪ ಕಮ್ಮಿ ಒದೋರ್ತರ ಕಂಡ್ರು ಜಾಸ್ತಿ ದುಡ್ ಕೊಟ್ಟು ಹೋಗೊರ್ಗೆ ಈತರ ಮೋಸ ಮಾಡಲ್ಲ. ಇವ್ರು ಬಿಹಾರದ ಕಡೆ ಮಂದಿನ ನೋಡ್ಲಿ. ಅಲ್ಲಿ ರಿಸೆರ್ವ್ಡ್ ಅಂತ ಇದ್ರು ಅಲ್ಲಿನ್ ಜನ ದಬಾಯ್ಸಿ ಸುಮ್ನೆ ಆಚಿಕ್ಕೆ ಕಳಿಸ್ತಾರೆ" ಎಂದು ತನ್ನ ಬೇಸರ ವ್ಯಕ್ತಪಡಿಸಿದನು. ಹಾರ್ನ್ ಮಾಡುತ್ತಾ ನಿಗದಿತ ಸಮಯಕ್ಕೆ ರೈಲು ಹೊರಡಿತು.

ಫೈರ್ಫಾಕ್ಸ್ (firefox) ಬ್ರೌಸರ್ ಚಾಲೆಂಜ್

ನನ್ನ ಫೈರ್ಫಾಕ್ಸ್ ಬ್ರೌಸರ್ ತೆಗೆದ್ರೆ ಸರ್ರ್ ಅಂತ ೭೦-೮೦ ಟ್ಯಾಬ್ಗಳು ಲೋಡ್ ಆಗ್ಲಿಕ್ಕೆ ಶುರು ಮಾಡ್ತಾವೆ. ಇವತ್ತಂತೂ ೧೦೦ ದಾಟಿತ್ತು.. ನಿಮಗೂ ಇಷ್ಟೇಲ್ಲಾ ಟ್ಯಾಬ್ (tab) ಓಪನ್ ಮಾಡ್ಲಿಕ್ಕೆ ಸಾಧ್ಯ ಆಗಿದ್ಯಾ? ನಿಮ್ಮ ಬ್ರೌಸರ್ನಲ್ಲಿ ಅಂತ. ಫೈರ್ ಫಾಕ್ಸ್ ಉಪಯೋಗಿಸೋ ಕೆಲವರಿಗೆ ಅದು ಕೆಲವುಸಲ ಕಿರಿಕಿರಿ ಅನ್ನಿಸಿರಬಹುದು.

ಓದಿದ್ದು ಕೇಳಿದ್ದು ನೋಡಿದ್ದು- 227 ಭತ್ತದ ಗದ್ದೆ ರಕ್ಷಿಸುವ "ಕೊಕ್ಕರ್ಣಿ"

ಸತ್ಯಂ : ಅಂತು ಇಂತೂ ಟೆಕ್ ಮಹೀಂದ್ರ ಮಡಿಲಿಗೆ

ಇನ್ನು ಸತ್ಯಂ ಮೊದಲಿನಂತೆ ಆದೀತೆ ಎನ್ನುವ ಕುತೂಹಲ ಇದೆ.ಅದು ಐಟಿ ಕ್ಷೇತ್ರದ ಪರಿಸ್ಥಿತಿಯ ಮೇಲೆಯೂ ಅವಲಂಬಿತವಾಗಿದೆ.

---------------------------------------------------------------------

ಓದಿದ್ದು ಕೇಳಿದ್ದು ನೋಡಿದ್ದು- 227

ಸತ್ಯಂ : ಅಂತು ಇಂತೂ ಟೆಕ್ ಮಹೀಂದ್ರ ಮಡಿಲಿಗೆ

ಇನ್ನು ಸತ್ಯಂ ಮೊದಲಿನಂತೆ ಆದೀತೆ ಎನ್ನುವ ಕುತೂಹಲ ಇದೆ.ಅದು ಐಟಿ ಕ್ಷೇತ್ರದ ಪರಿಸ್ಥಿತಿಯ ಮೇಲೆಯೂ ಅವಲಂಬಿತವಾಗಿದೆ.

---------------------------------------------------------------------

ಕಂಪ್ಯೂಟರ್ ಮೆಮೊರಿ: ಹಾಗೆಂದರೇನು?

ಕಂಪ್ಯೂಟರ್ ಮೆಮೊರಿ, GB, MB ಇತ್ಯಾದಿ ಶಬ್ದಗಳನ್ನು ನೀವು ಕೇಳಿರಬಹುದು. ಹಾಗೆ ಎಂದರೇನು ಎಂದು ನಿಮಗೆ ಗೊತ್ತಿಲ್ಲದಿದ್ದರೆ, ಯಾರನ್ನು ಕೇಳಬೇಕೆಂದು ತಿಳಿಯದಿದ್ದರೆ (ಅಥವಾ ಕೇಳಲು ನಾಚಿಕೆ ಪಟ್ಟುಕೊಂಡಿದ್ದರೆ) ನಿಮಗಾಗಿ ಈ ಲೇಖನ.

ಕಂಪ್ಯೂಟರ್ ಬಹಳ ವೇಗವಾಗಿ ಸಂಖ್ಯೆಗಳನ್ನು ಕೂಡಿ, ಕಳೆದು ಮಾಡುತ್ತೆ ಆದರೆ ಅದರ 'ಮಿದುಳಿನ' ಒಳಗೆ ತುಂಬಾ ಸಂಖ್ಯೆಗಳನ್ನು ಇಟ್ಟುಕೊಳ್ಳುವುದಕ್ಕೆ ಜಾಗ ಇರೋಲ್ಲ. ಅದಕ್ಕೆ ನಾವು ಚಿಕ್ಕವರಿದ್ದಾಗ ಲೆಕ್ಕ ಮಾಡಲು ಕೈ ಬೆರಳುಗಳನ್ನು ಮಡಿಚಿ ಇಟ್ಟುಕೊಂಡಿರುತ್ತೀವಲ್ಲ (ದಶಕ / ಕೈಲಿ ನೆನಪು ಇಟ್ಟುಕೊಳ್ಳೋಕೆ ) ಅದೇ ರೀತಿ ಕಂಪ್ಯೂಟರ್ ಗೆ ಕೂಡ ಮಿದುಳು (processor) ಜೊತೆಗೆ ಮೆಮೊರಿ ಬೇಕು.

ನಾವು ಅಡಿಗೆ ಮಾಡುವಾಗ ಅಕ್ಕಿಯನ್ನು ಹೇಗೆ ಬಳಸುತ್ತೇವೆ ಹೇಳಿ? ಮನೆಯ ಮೂಲೆಯಲ್ಲಿ ಒಂದು ದೊಡ್ಡ ಮೂಟೆಯಲ್ಲಿ ಅಕ್ಕಿ ಇಟ್ಟಿರುತ್ತೇವೆ. ವಾರಕ್ಕೆ ಬೇಕಾದಷ್ಟು ಅಕ್ಕಿಯನ್ನು ಅಡುಗೆ ಮನೆಯ ಮೂಲೆಯಲ್ಲಿ ಒಂದು ಸಣ್ಣ ಡಬ್ಬದಲ್ಲೋ, ಚೀಲದಲ್ಲೋ ಇಟ್ಟಿರುತ್ತೇವೆ. ಇನ್ನು ಅಡಿಗೆ ಮಾಡುವಾಗ ಬೇಕಾದಷ್ಟು ಅಕ್ಕಿಯನ್ನು ಅನ್ನ ಮಾಡುವ ಪಾತ್ರೆಯಲ್ಲಿ ಹಾಕಿ ಮಾಡುತ್ತೇವೆ ಅಲ್ಲವೇ?

ಹಾಡಲ್ಲ,ಕವನವಲ್ಲ-ಇದು ಮನದ ಮಾತುಗಳು

ನೆನ್ನೆ ಇದ್ದೆಡೆ ಇಂದಿಲ್ಲ ಇಂದಿರುವೆಡೆ ಇರುವುದಿಲ್ಲ ನಾಳೆ
ಮನವಿರುವುದಿಲ್ಲ ಒಂದೇ ಕಡೆ . ಇಲ್ಲ ಒಂದೇ ನಡೆ
ಭೇಷ್ ಪಕ್ಷಾಂತರಿಗಳನ್ನೂ ಮೀರಿಸುವ ಈ ಬುದ್ದಿಗೆ

ಸರಿ ಎಂದುದು ನೆನ್ನೆ , ತಪ್ಪಾಯಿತೆ ನಾಳೆಗೆ
ತಪ್ಪಾದುದು ಇಂದು ಒಪ್ಪು ನಾಳೆಗೆ
ಗೋಸುಂಬೆಗೂ ಇವರ ಕಂಡರೆ ನಾಚಿಕೆ

ಹೇಳುವುದು ಒಂದು ಮಾಡುವುದು ಮತ್ತೊಂದು
ನೀತಿ ಹೇಳಿಕೆಗೊಂದು, ಬಾಳುವೆಗೊಂದು

ನೀರು

"ನೀರು ನಮಗೆ ಅತ್ಯಮೂಲ್ಯವಾದ ಆಕರ

ನೀರನ್ನ ಮಿತವಾಗಿ ಬಳಸಿ ನೀರನ್ನ ಉಳಿಸಿ" 

 

"ನೀರು ದ್ರವ ರೂಪದ ಬಂಗಾರ

ದಯವಿಟ್ಟು ಮಿತವಾಗಿ ಬಳಸಿ ಪೋಲು ಮಾಡದಿರಿ"

 

ಉತ್ತರಿಸು ಗೆಳತಿ

ಸಣ್ಣದೊ೦ದು ಬೇಸರಿಕೆ
ಸುಳಿಯಲಿಲ್ಲ.
ನಿನ್ನೆಡೆಗೆ ಚಿಕ್ಕ
ತಿರಸ್ಕಾರವೂ ಇಲ್ಲ.
ಬೇಕೆನಿಸಿದುದು ನಿಜ,
ನೀನಿಲ್ಲದ ನಾನು
ಸುಳ್ಳೆ೦ಬುದೂ ನಿಜ.
ಸಾಗರನ ಹನಿಗಳು.
ಕಣ್ಣೊಳಗೆ ತು೦ಬಿದ೦ತಿದೆ.
ಮರುಭೂಮಿಯ ಬಿಸಿಗಾಳಿ
ನಿಟ್ಟುಸಿರಾದ೦ತಿದೆ.
ಕೋಗಿಲೆಯ ಹಾಡು
ಬೇಕೆನಿಸದು,
ಚ೦ದಿರನ ಬೆಳ್ದಿ೦ಗಳು
ತ೦ಪೆನಿಸದು,
ಆಗದೆನ್ನುತ್ತಲೇ
ನನ್ನಿ೦ದ ದೂರಾದೆ.
ಮದುವೆಗಿನ್ನೆರಡು ದಿನ,