ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಿಕ್ಷುಕನ ಜೀವನದಲ್ಲಿ ಜ಼ೆನ್

ಟೊಸಾಯಿ ತನ್ನ ಕಾಲದ ಒಬ್ಬ ಪ್ರಸಿದ್ಧ ಜ಼ೆನ್ ಗುರುವಾಗಿದ್ದ. ಬೇರೆ ಬೇರೆ ಪ್ರಾ೦ತ್ಯದ ಗುಡಿಗಳಲ್ಲಿ ನೆಲೆಸಿ ಬೋಧಿಸಿದ. ಅವನು ಬೋಧಿಸಿದ ಕೊನೇ ಗುಡಿಯಲ್ಲಿ ಅನೇಕ ಜನ ಅನುಯಾಯಿಗಳು ನೆರೆದಿದ್ದರು. ಆತ ಹೇಳಿದ, 'ಇದೇ ನನ್ನ ಅ೦ತಿಮ ಉಪದೇಶ. ಈ ಭೋಧೆಯ ಕೆಲಸ ತಾನು ಬಿಡುತ್ತೇನೆ.' ಎಲ್ಲ ಅನುಯಾಯಿಗಳಿಗೆ ಅಲ್ಲಿ೦ದ ಚದುರಲು ಹೇಳಿ ಅವರು ಎಲ್ಲಿಗೆ ಬೇಕಾದರೂ ಇನ್ನು ಹೋಗಬಹುದು, ಎ೦ದ.

ಕಾಲವನ್ನು ತಡೆಯೋರು ಯಾರೂ ಇಲ್ಲ!

ನೀನೊಳ್ಳೆ ಕೆಲ್ಸ ಮಾಡ್ಲಿ ಅಂತ
ರೋಗ ರುಜಿನ ಕಾಯೋದಿಲ್ಲ;
ನಿನ್ನಿಂದಿನ್ನೂ ಒಳ್ಳೇದಾಗ್ಬೇಕ್
ಅಂತ ಯಮನೂ ನಿಲ್ಲೋದಿಲ್ಲ;
ಮನಸ್ನೊಳಗೆ ಒಳ್ಳೇ ಕೆಲ್ಸ
ಮಾಡ್ಬೇಕಂತ ಅನ್ನಿಸ್ತಿದ್ರೆ
ಮಾಡಿಮುಗಿಸ್ಬೇಕ್ ಅವಾವಾಗ್ಲೇ
ಕಾಲವನ್ನ ತಡೆಯೋರಿಲ್ಲ!

ಸಂಸ್ಕೃತ ಮೂಲ ( ಮಹಾಭಾರತ, ಸಭಾಪರ್ವ ೫೬-೧೦ )

ನನ್ನ ಚೊಚ್ಚಲ ಕವನ ( ನನಗೆ ಜ್ಙಾಪಕವಿರುವಂತೆ)

ಆಸು ಹೆಗ್ಡೆಯವರು ಈವತ್ತು ಬ್ಲಾಗ್ನಲ್ಲಿ ಒಂದು ಕವನ ಹಾಕಿ ಚಿಕ್ಕ ವಯಸ್ಸಿನಲ್ಲಿ ಬರೆದದ್ದು ಅಂದಾಗ ಜ್ಙಾಪಕ ಬಂತು. ನಾನು 6-7ನೇ ಕ್ಲಾಸ್ನಲ್ಲಿರೋವಾಗ ಬಾಯಿಗ್ ಬಂದಿದ್ದು ಗೀಚ್ತಾ ಇದ್ದೆ.
ಆವಾಗ ಬರೆದು ಹರಿದು ಹಾಕಿದ ಕವನ(!!)ಗಳೆಷ್ಟೋ?
ಯಾವುದೂ ನನ್ನ ಹತ್ರ ಇಲ್ಲ. ಆದ್ರೆ ಈ ಚುಟುಕ ನನಗೆ ತುಂಬಾ ಚೆನ್ನಾಗಿ ಜ್ನಾಪಕ ಇದೆ. ಯಾಕೆ ಅಂತ ತಿಳಿಯೋಕೆ ಕವನದ ಕೆಳಗೆ ನೋಡಿ.

ಮೌನ ವಲಸೆ

ಮೌನ ವಲಸೆ

 

ಎಲ್ಲಿ ಹೋದವು ಶುಕಗಳು?

ಎಲ್ಲಿ ಹೋದವು ಗುಬ್ಬಚ್ಚಿಗಳು?

ಕಣ್ಣಿಗೆ ಕಾಣದಷ್ಟು,ಕಿವಿಗೆ ಕೇಳದಷ್ಟು

ದೂರ ಹೋದವು ಏಕೆ ಪಾರಿವಾಳಗಳು?

 

ಚಂದಗೆ ಮೈದುಂಬಿ,ಪುಟ್ಟ ಕಣ್ಮಿಟುಕಿಸುತ

ಕಾಳು ಕದಿಯುತ್ತಿದ್ದ ಅಳಿಲುಗಳೆಲ್ಲಿ?

ಚಿನ್ನದಾ ಬೆಳಕಲ್ಲಿ, ಮೈತುಂಬ ನೀಲಿಹೊದ್ದು

ಮೀನು ಹಿಡಿಯುತ್ತಿದ್ದ ಆ ಮಿಂಚುಳ್ಳಿಗಳೆಲ್ಲಿ?

 

ಹೋದವು ಕಣ್ಣಿನಿಂದಾಚೆ,

ಹೋದವು ಬಾನಿನಿಂದಾಚೆ,

ಹುಡುಕುತ್ತ ನೆಲೆಯನ್ನು,

ಗೂಡು ಕಟ್ಟುವ ಕನಸನ್ನೂ.

 

ಏನು ಉಳಿದಿದೆ ಇಂದು?

ಬರಿಯ ಮಣ್ಣಿನ ಕಂದು.

ಹಾಳು ಹಂದಿಯ ಹಿಂಡು,

ಬೀಡಾಡಿ ದನಗಳು ದಂಡು ದಂಡು.

 

ಒತ್ತಿನಣೆ ಮತ್ತು ಚಾಪ್ಲಿನ್‍ನ ಅಂಡು

ಒತ್ತಿನಣೆ ಮತ್ತು ಚಾಪ್ಲಿನ್‍ನ ಅಂಡು

ಕಡುಗೆಂಪು ಕುಂಕುಮವೇ ಬೆವರಲ್ಲಿ ಕಪ್ಪಾಗಿ ಹರಡಿಕೊಂಡಂತೆ ಉದ್ದೋವುದ್ದ ಮಲಗಿದ ಕರಿನೀರತೆರೆ
ಮುರದ ವಿಸ್ತಾರ: ಅದು ಭೂದೇವಿಯ ಹಣೆ - ಒತ್ತಿನಣೆ. ಪೂರ್ವದಲ್ಲಿ ಹಸಿರು ಹೆಪ್ಪುಗಟ್ಟಿ ಕಪ್ಪಾದಂತೆ ನೀಲಾಕಾಶಕ್ಕೆ
ಜೋತುಬಿದ್ದ ಸಹ್ಯಾದ್ರಿಯಲ್ಲಿ ಕೋಸಳ್ಳಿ, ಚಕತ್ಕಲ್ ಇತ್ಯಾದಿ ಜಲಪಾತಗಳ ಬಿಳಿಬಿಳಲುಗಳು: ಅದು ನಡುವಯಸ್ಸಿನ

ಊರಿನಲ್ಲಿ ತೇರು

ಇದು ಕಳೆದ ವರ್ಷ ಈ ಸಮಯದಲ್ಲಿ ನಾನು ಬರೆದಿದ್ದ ಬರಹ. ಮತ್ತೊಮ್ಮೆ ಹಾಕುತ್ತಿದ್ದೇನೆ, ಯಾವುದೇ ಬದಲಾವಣೆಗಳಿಲ್ಲದೆ.

ಯಾಕಂದರೆ, ಇವತ್ತು ಚಿತ್ರಾ ಪೂರ್ಣಿಮೆ, ನಮ್ಮೂರಲ್ಲಿ ತೇರು! ಅದಕ್ಕೆ. 

----------------------------------------------------------------------------------------------------------------

ಮಡಿಕೇರಿಯಲ್ಲಿ ಮೆರೆದಾಟ.

ಮಡಿಕೇರಿಯಲ್ಲಿ ಮೆರೆದಾಟ.

ಈ ಪ್ರವಾಸ ನಾವು ಕೈಗೊಂಡಿದ್ದು ಜನವರೀ ೨೪ ೨೦೦೯ರ ಶನಿವಾರದಂದು. ಈ ಪ್ರಯಾಣಕ್ಕೆ ಜೊತೆಯಾದವರು ನನ್ನ ಸಂಬಂಧಿ ರಾಘು, ಆತನ ಸೋದರಿಯರು (ಅವನ Cousins ಸೇರಿ) ಮತ್ತು ಗೆಳೆಯ ರಾಮ.

ಈ ಪ್ರವಾಸಕ್ಕೆ ಹೋಗುವುದೆಂದು ಖಾತ್ರಿಯಾದದ್ದು ಶುಕ್ರವಾರ, ಅಂದರೆ ಜನವರೀ ೨೩ ೨೦೦೯. ಸಂಜೆ ೬ಕ್ಕೆ ರಾಘು, ನನಗೆ ಮತ್ತು ರಾಮನಿಗೆ ಫೋನ್ ಮಾಡಿ ಮಡಿಕೇರಿಗೆ ಹೋಗೋಣವೆಂದು, ನಮ್ಮ ಜೊತೆಗೆ ಆತನ ಸೋದರಿಯರು ಬರುತ್ತಾರೆಂದು ಹೇಳಿದ. ಒಟ್ಟು ೭ ಮಂದಿ. ಎರಡು ಕಾರುಗಳಲ್ಲಿ ಹೋಗುವುದಾಗಿ ಹೇಳಿದ. ನನ್ನ ಮತ್ತು ರಾಘು ಕಾರಿನಲ್ಲಿ ಹೋಗುವುದಾಗಿ ನಿರ್ಧರಿಸಿದೆವು.
ಕೊನೆ ಘಳಿಗೆಯಲ್ಲಿ ಎಲ್ಲರೂ ಒಟ್ಟಿಗೆ ಒಂದೇ ವಾಹನದಲ್ಲಿ ಹೋಗುವ ನಿರ್ಧಾರವಾಯಿತು.

ಈಗ ನಮ್ಮಲ್ಲಿದ್ದ ಗೊಂದಲ ವಾಹನದ arrangement. ನಾಳೆ ಬೆಳಿಗ್ಗೆ ಹೋಗುವ ಪ್ರಯಾಣಕ್ಕೆ ಇಂದು ರಾತ್ರಿ ವಾಹನ ಬುಕ್ ಮಾಡಿದರೆ ಸಿಗುವುದೇ ಎಂಬ ಯೋಚನೆ ಇತ್ತು. ಗೊತ್ತಿದ್ದ ಎಲ್ಲಾ ಟ್ರ್ಯಾವೆಲ್ ಏಜೆಂಟರಿಗೆ ಫೋನ್ ಮಾಡಿದೆವು. ಯಾವ ವಾಹನವೂ ಸಿಗಲಿಲ್ಲ. ಯಾವುದೇ ವಾಹನ ಸಿಗದಿದ್ದಲ್ಲಿ ನಮ್ಮದೇ ಕಾರುಗಳಲ್ಲಿ ಹೋಗುವ ನಿರ್ಧಾರ ಮಾಡಿ, ಕೊನೆಯ ಪ್ರಯತ್ನ ಅಂತ ಇನ್ನೊಬ್ಬ ಟ್ರ್ಯಾವೆಲ್ ಏಜೆಂಟ್ಗೆ ಫೋನ್ ಮಾಡಿದ ರಾಘು. ಟಾಟಾ ಸುಮೋ ಇದೆ ಅಂತ ಹೇಳಿದ ಏಜೆಂಟ್. ಅಬ್ಬಾ ಸದ್ಯ ವಾಹನ ಸಿಕ್ತಲ್ಲಾ ಅಂತ ಟಾಟಾ ಸುಮೋವನ್ನು ಬುಕ್ ಮಾಡಿದ ರಾಘು. ಆಗ ಸಮಯ ರಾತ್ರಿ ೧೨ಘಂಟೆ.

ರಾಘು ನನಗೆ ಮತ್ತು ರಾಮನಿಗೆ ಫೋನ್ ಮಾಡಿ ಟಾಟಾ ಸುಮೋ ಬುಕ್ ಮಾಡಿದ್ದೇನೆ. ಬೆಳಿಗ್ಗೆ ಆರಕ್ಕೆ ನಮ್ಮ ಮನೆಗೆ ಬರುತ್ತದೆ ಅಂತ ಹೇಳಿ ಫೋನ್ ಡಿಸ್ಕನೆಕ್ಟ್ ಮಾಡಿದ.

ಬೆಳಿಗ್ಗೆ ಆರಕ್ಕೆ ರಾಘು ಮನೆಗೆ ಟಾಟಾ ಸುಮೋ ಓಡಿಸಿಕೊಂಡು ಡ್ರೈವರ್ ಮಂಜುನಾಥ್ ಬಂದನು. ಅಲ್ಲಿಂದ ರಾಘು ಮತ್ತು ಅವನ ಸೋದರಿಯರು ನಮ್ಮ ಮನೆಗೆ ಬಂದರು. ಅಲ್ಲಿಂದ ರಾಮನನ್ನು ಕರೆದುಕೊಂಡು ಮಡಿಕೇರಿಯ ಕಡೆಗೆ ಪ್ರಯಾಣ ಬೆಳೆಸಿದೆವು. ಮಧ್ಯಾಹ್ನ ದುಬಾರೆ ಆನೆ ಶಿಬಿರಕ್ಕೆ ತಲುಪಿದೆವು.

 

 

 

 

 

 

 

 

 

ಭೂಮಿತಾಯಿ

ಭೂಮಿತಾಯಿ

 

ಅವಳನ್ನು ಇಂಚಿಂಚು ಬಿಡದಂತೆ

ನಿಧಾನವಾಗಿ ಮಾರಾಟಮಾಡತೊಡಗಿದ್ದಾಯಿತು.

ಅವಳನ್ನು ಮನಸ್ಸಿಗಿಚ್ಛೆ ಬಂದಂತೆ

ದುಡಿಸಿಕೊಂಡದ್ದಾಯಿತು.

 

ಆದರೂ ಅವಳು ಸಿಟ್ಟಿಗೆದ್ದಿಲ್ಲ.

ಅವಳ ಮೈ ಚರ್ಮದಲ್ಲರ್ಧ ಕಿತ್ತಿದ್ದಾಗಿದೆ;

ಅವಳ ನೆತ್ತಿ ಪಾದಗಳ ಕೆಳಗೆ ಬೆಂಕಿಯಿಟ್ಟಿದ್ದಾಗಿದೆ;

ಆದರೂ ಅವಳು ಆಗೊಮ್ಮೆ ಈಗೊಮ್ಮೆ

ರೋಧಿಸಿದ್ದು ಬಿಟ್ಟರೆ ಮತ್ತೇನೂ ಅಂದಿಲ್ಲ.

 

ಅವಳ ಸೀರೆಗೆ ಬೆಂಕಿ ಹತ್ತುವವರೆಗೂ;

ಆ ಬೆಂಕಿ ಎಲ್ಲರನ್ನೂ ನುಂಗಿಕೊಳ್ಳಲಿದೆ

ಎಂದು ತಿಳಿಯುವವರೆಗೂ;

ಆಕೆಯನ್ನು ದುಡಿಸಿಕೊಂಡ್ಡದ್ದಾಯಿತು.

ಆದರೂ ಅವಳು ಸುಮ್ಮನಿದ್ದಳು.

ಹೊಟ್ಟೆಯೊಳಗಿನ ಜ್ವಾಲಾಮುಖಿ