ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಏ ಗಂಗೂ, ಈ ಬೈಕು ಕಲಿಸಿಕೊಡೋ ನಂಗೂ

ಈ ಹಾಡನ್ನು ಒಬ್ಬ "ಮೊಬೈಲ್ ಅಪ್ಪ" ಹೆಚ್ಚು ಕಡಿಮೆ ಪೂರ್ತಿ ಕೇಳಿಸಿದ ನನ್ನ ರೈಲು ಪ್ರಯಾಣದ ವೇಳೆ. ಅಕ್ಕ ಪಕ್ಕ ಕುಳಿತಿರುವವರ ಯಾವುದೇ ಪರಿವೆ ಇಲ್ಲದೆ ಎಲ್ಲರೂ ತನ್ನ creation ಮೆಚ್ಚಿ ತಲೆದೂಗುತ್ತಿದ್ದಾರೆನೋ ಅನ್ನೋ ಭಾವದಿಂದ ಆತ ಕೂತಿದ್ದ. ಭದ್ರಾವತಿಯಿಂದ ಬೆಂಗಳೂರು ತಲುಪುವವರೆಗೂ ಎಂಥೆಂಥ ಹಾಡು ಬೇಕು ನಿಮಗೆ. ಎಲ್ಲಾ ಲಭ್ಯ, ಸಹನೆ ಒಂದಿದ್ದರೆ.

ಸಂಬಳ ೨ ಸಾವಿರ ಆದರೂ ೧೦ ಸಾವಿರದ ಮೊಬೈಲ್ ಇರುತ್ತೆ ಕೆಲವರ ಬಳಿ. ಮೊಬೈಲ್ ನಷ್ಟು ಸಾಮಾಜಿಕ ನ್ಯಾಯವನ್ನು ಬೇರಾವುದೇ ವ್ಯಕ್ತಿಯೂ, ವ್ಯವಸ್ಥೆಯೂ, ಉಪಕರಣವೂ ನೀಡಿರಲಾರದು. ಭಿಕ್ಷುಕರ ಕೈಯಲ್ಲೂ ಮೊಬೈಲ್. ನಾನಿರುವ ಜೆದ್ದಾಹ್ದಲ್ಲಿ ಒಂದು ತಮಾಷೆ ಕೇಳಿ. ಸೌದಿಗಳು (ಅರಬರು) ಬಾಂಗ್ಲಾದೇಶದ ರಸ್ತೆ ಗುಡಿಸುವ ಕೆಲಸಗಾರರಿಗೆ, ಮತ್ತು ಇತರ ನಾಡಿನವರಿಗೆ ದಾನ ಕೊಡುವ ಪದ್ಧತಿ ಇದೆ. ಹೀಗೆ ಒಮ್ಮೆ ಒಬ್ಬ ಅರಬ್ ರಸ್ತೆ ಬದಿ ನಿಂತಿದ್ದ ಬಂಗ್ಲದೆಶದವನನ್ನು ಕರೆದು ಹಣ ಕೊಡಲು ಹೋದಾಗ ಆ ಬಂಗಾಳಿಗೆ ಒಂದು ಕರೆ ಬಂತು. ಜೇಬಿನಿಂದ ಹೊರಗೆ ಬಂತು ಹೊಳೆಯುವ N 90 ಮೊಬೈಲು. ಇದನ್ನು ನೋಡಿದ ಸೌದಿ ಹೇಳಿದ ನನ್ನ ಹತ್ತಿರ ಇನ್ನೂ ಓಬೀರಾಯನ ಕಾಲದ ಮೊಬೈಲ್ ಇರೋದು, ನಿನಗೇಕೆ ಭಕ್ಷೀಸು ಎಂದು ಹೋಗಿಬಿಟ್ಟ.

ಹೊಸ technology ಜೊತೆ ಒಂದಿಷ್ಟು ಸೋಶಿಯಲ್ ರೆಸ್ಪೋನಿಸ್ಬಿಲಿಟಿ ಸಹ ಬರಬೇಕು.
ಪ್ರಪ್ರಥಮವಾಗಿ ವಾಹನ ಚಲಾವಣೆ ವೇಳೆ ದಯಮಾಡಿ ಮೊಬೈಲ್ ಉಪಯೋಗಿಸಬೇಡಿ. ಮೊನ್ನೆ ಅಮೆರಿಕಲ್ಲಿ ಒಬ್ಬಳು ಗಾಡಿ ಕಾರು ಚಲಾಯಿಸುತ್ತಾ ಮೆಸೇಜ್ ಮಾಡುತ್ತಿದ್ದಾಗ ನಿಂತ ವಾಹನಗಳ ಮೇಲೆ ಕಾರು ಚಲಾಯಿಸಿ ಒಬ್ಬ ವ್ಯಕ್ತಿಯನ್ನು ಕೊಂದಳು.

ಬಾರದೇಕೆ ಸಾವು!!!

ಸಖೀ,
ಸಾವರಿಸಿಕೊಳ್ಳಬಹುದಾದರೂ ಬಾಳ
ಹಾದಿಯಲಿ ಮುಗ್ಗರಿಸಿ ಬಿದ್ದು ಎದ್ದು
ಸಹಿಸಲಾಗದು ನಮ್ಮವರಿಂದಲೇ ನಮಗೆ
ಸದಾ ಸಿಗುವ ಈ ಮುಸುಕಿನೊಳಗಿನ ಗುದ್ದು

ಇದು ಅತ್ತ ಉಗಿಯಲಾಗದೆ, ಇತ್ತ ನುಂಗಲಾಗದೆ
ನಮ್ಮ ಬಾಯೊಳಗಿದ್ದು ಸುಡುವ ಬಿಸಿ ತುಪ್ಪದಂತೆ
ನಮ್ಮನ್ನು ಒಳಗೊಳಗೆ ಕೊರಗಿಸುತಾ ಕ್ಷೀಣಿಸುತಾ
ಸದಾ ಕಾಲ ನಡೆವ ಒಂದು ಶೀತಲ ಯುದ್ಧದಂತೆ

ಸಂಪದದಲ್ಲಿ ನಮ್ಮ ಖಾತೆಯನ್ನು ಡಿಲೀಟ್ ಮಾಡುವುದು ಹೇಗೆ?

ಸಂಪದದಲ್ಲಿ ನಮ್ಮ ಖಾತೆಯನ್ನು ಡಿಲೀಟ್ ಮಾಡಲು ಅವಕಾಶವಿಲ್ಲವೇ?

ಆರ್ಕುಟ್ ರೀತಿಯಲ್ಲಿ ನಮ್ಮ ಪ್ರೊಫೈಲ್ ಜೊತೆಗೆ ನಮ್ಮ ಬರಹಗಳು ಎಲ್ಲವನ್ನು ಡಿಲೀಟ್ ಮಾಡುವುದು ಹೇಗೆ ?

ಯಾರಾದರೂ ಸಂಪದಿಗರು ಅಥವಾ ಮಾಡರೇಟರ್ ಗಳು ತಿಳಿಸಿಕೊಡಬೇಕಾಗಿ ವಿನಂತಿ.

ಹವ್ಯಾಸಗಳು

ಹವ್ಯಾಸಗಳು ಹಲವು. ಕೆಲವರಿಗೆ ಓದುವ ಹವ್ಯಾಸವಾದರೆ ಇನ್ನು ಕೆಲವರಿಗೆ ಹಳೆ ಲೇಖನಿಗಳನ್ನು ಸಂಗ್ರಹಿಸುವ ಹವ್ಯಾಸ. ಅಂಚೆ ಚೀಟಿ ಸಂಗ್ರಹ, ನಟ ನಟಿಯರ ಚಿತ್ರ ಸಂಗ್ರಹ, antique ಕಾರುಗಳು, ಇಲಿ ಸಾಕುವುದು, ಕ್ಯಾಲ್ಲಿಗ್ರಫಿ, ನಾಣ್ಯಗಳು ಹೀಗೆ ಸಾಗುತ್ತವೆ ಹವ್ಯಾಸಗಳ ಪಟ್ಟಿ. ಈಗಿನ rush rush ಯುಗದಲ್ಲಿ ಕೆಲವರಿಗೆ ಹವ್ಯಾಸಗಳ ಆಸಕ್ತಿ ಕಡಿಮೆಯಾದರೂ ಈಗಲೂ ಬಹಳಷ್ಟು ಜನ ತಮಗೆ ಇಷ್ಟವಾದ ವಿಷಯಗಳ ಮೇಲೆ ಕಾರ್ಯಮಗ್ನರಾಗಿರುತ್ತಾರೆ. ಚಿಕ್ಕವನಿದ್ದಾಗ ನನಗಿತ್ತು ಅಂಚೆಚೀಟಿಗಳ ಸಂಗ್ರಹದ ಗೀಳು. ನನ್ನ ಮಟ್ಟಿಗೆ ಹವ್ಯಾಸ ಸುಲಭವಾಗಿ ಚಟವಾಗಿ ಅಂಟಿ ಕೊಂಡು ಬಿಡುತ್ತದೆ. ರಣ ಬಿಸಿಲಿನಲ್ಲಿ ಬರುವ ಪೋಸ್ಟ್ ಮ್ಯಾನ್ ಹಿಂದೆ ಸುತ್ತಿ ಅಂಚೆ ಚೀಟಿಗಾಗಿ ಮನೆ ಮನೆಗಳಿಗೆ ತೆರಳಿ ಬೇಡುತ್ತಿದ್ದೆ.

ಕರಗುತ್ತಿರುವ ಬೆಂಗಳೂರಿನ ಕೆರೆಗಳು

ಆತ್ಮೀಯ ಮಿತ್ರರೇ,

ಬೆಂಗಳೂರು ಕೆರೆಗಳ ಸ್ಥಿತಿಯನ್ನು ನೀವು ‘ನಮ್ಮೂರ್ ಕೆರೆ’ ಸರಣಿಯಲ್ಲಿ ಓದಿದ್ದೀರಿ. ಈ ಬಗೆಗಿನ ಅನುಭವ ಮತ್ತು ಕೆರೆಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ದೂರದರ್ಶನದ ‘ಕರಗುತ್ತಿರುವ ಬೆಂಗಳೂರಿನ ಕೆರೆಗಳು’ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದೇನೆ. ಮಿತ್ರ ಶಿವರಾಂ ನನ್ನನ್ನು ಮಾತಿಗೆಳೆದಿದ್ದಾರೆ. ಈ ಕಾರ್ಯಕ್ರಮ ದೂರದರ್ಶನ-1 ಮತ್ತು ಚಂದನದಲ್ಲಿ ಏಪ್ರಿಲ್ 13, 2009ರ ಸೋಮವಾರದಂದು, ಬೆಳಗ್ಗೆ 8-30 ಕ್ಕೆ ಪ್ರಸಾರವಾಗಲಿದೆ.

ದಯವಿಟ್ಟು ವೀಕ್ಷಿಸಿ, ಮತ್ತು ತಮ್ಮ ಅಮೂಲ್ಯ ಪ್ರತಿಕ್ರಿಯೆಯನ್ನು ನೀಡಿ.

ಚೆಲುವೆಯೇ ನಿನ್ನ ನೋಡಲೂ..

ಅಷ್ಟೊತ್ತಿನಿಂದ ನೋಡ್ತಾನೆ ಇದೀನಿ, ನನ್ನತ್ತಲೇ ಇದೆ ಆಕೆಯ ದ್ರುಷ್ಟಿ
ಮನಸ್ಸೆಂತು, ಆಚರಿಸ್ಕೊಂಡ್ರೆ ಇವಳ್ ಜೊತೆಗೇನೆ, ಅರವತ್ತನೇ ನನ್ನ ಷಷ್ಟಿ! ಕಮಲದಂತಹ ಅಗಲವಾದ ಕಣ್ಣುಗಳು
ನೋಟದಲ್ಲೇ ಕೊಲ್ಲೋ ಅಂತಹ ಹುಬ್ಬುಗಳು,
ಆ ಬಸ್ಸಿನ ರಶ್ಶಿನಲ್ಲೂ ತಂಗಾಳಿಯೊಂದು ಸುಳಿದಂತೆ
ಬಿಸಿಲಿನ ಬೇಗೆಯಲ್ಲೂ ತಂಪಾಗಿಸೋ ಸೋನೇ ಮಳೆಯಂತೆ,

ಹನ್ನೆರಡು ಜ್ಯೋತಿರ್ಲಿಂಗಗಳು - ೯ [ರಾಮೇಶ್ವರಂನ ರಾಮೇಶ್ವರ].

ರಾಮೇಶ್ವರಂನ ರಾಮೇಶ್ವರ.

ಎಲ್ಲಿದೆ?
ತಮಿಳುನಾಡಿನ ರಾಮೇಶ್ವರಂ ಅಲ್ಲಿದೆ. ಇದು ೪ ಕಿ. ಮೀ (೩೪ ಚ. ಮೈ) ಅಗಲದ ದ್ವೀಪ. ಇಲ್ಲಿನ ದೇವಸ್ಥಾನ ದ್ರಾವಿಡ ಶಿಲ್ಪ ಕಲೆಯ ಪ್ರತಿರೂಪ.

ದೇವಸ್ಥಾನದ ಸ್ವರೂಪ.
೮೬೫ ಅಡಿ ಉದ್ದ, ೬೫೭ ಅಡಿ ಅಗಲ ಮತ್ತು ೪೯ ಅಡಿ ಎತ್ತರವಾಗಿದೆ. ಸಹಸ್ರಾರು ಕಂಬಗಳು, ಹತ್ತು ಅಂತಸ್ತುಗಳ ಮಹಾದ್ವಾರ, ಹೀಗೆ ದೇಗುಲದ ನೋಟವೇ ಭವ್ಯವಾಗಿದೆ. ಇದರ ಗೋಪುರ ಕೂಡ ೧೨೬ ಅಡಿ ಎತ್ತರವಿದೆ. ಇಲ್ಲಿ ೨೪ ತೀರ್ಥಗಳಿವೆ. ರಾಮತೀರ್ಥ, ಸೀತಾಕುಂಡ, ಲಕ್ಷ್ಮಣ ತೀರ್ಥ, ಕಪಿಲತೀರ್ಥ, ಬ್ರಹ್ಮಕುಂಡ, ಮಂಗಳತೀರ್ಥ ಮುಂತಾದ ಹೆಸರಿನ ಇವುಗಳಲ್ಲಿ ಪ್ರತಿಯೊಂದಕ್ಕೂ ಕತೆಗಳಿವೆ. ಅವೆಲ್ಲವೂ ರೋಗನಿವಾರಕ ಎಂಬುದು ವೈಜ್ಞಾನಿಕವಾಗಿಯೂ ರುಜುವಾತಾಗಿದೆ. ರಾಮೇಶ್ವರ ದೇವಸ್ಥಾನದ ಹತ್ತಿರದಲ್ಲೇ ಪಾರ್ವತಿ ದೇವಸ್ಥಾನವಿದೆ. ಅಲ್ಲದೇ, ಸಂತಾನ ಗಣಪತಿ, ವೀರಭದ್ರ, ಹನುಮಾನ್, ನವಗ್ರಹ ಮುಂತಾದ ದೇವಸ್ಥಾನಗಳಿವೆ.

ಸ್ಥಳ ಪುರಾಣ.
ಶ್ರೀರಾಮ, ರಾವಣನನ್ನು ಸಂಹರಿಸಿದ ನಂತರ ಆತನಿಗೆ ಕಣ್ಣು ಕಾಣದಂತಾಯಿತಂತೆ. ಇದು ಬ್ರಹ್ಮಹತ್ಯಾ ದೋಷದ ಪರಿಣಾಮ ಎಂದು ತಿಳಿದು ರಾಮೇಶ್ವರದಲ್ಲಿ ಲಿಂಗವನ್ನು ಅರ್ಚಿಸಿ ಪಾಪಮುಕ್ತನಾದನೆಂಬುದು ನಂಬಿಕೆ. ಹಾಗೆಯೇ, ಇದು ಶ್ರೀರಾಮನು ರಾವಣನ ಜೊತೆಗಿನ ಯುದ್ಧಕ್ಕೆ ಮೊದಲು ಶಿವನನ್ನು ಅರ್ಚಿಸಿದ ತಾಣ ಎಂಬ ನಂಬಿಕೆ ಕೂಡ ಇದೆ. ಪವಿತ್ರವಾದ ಕಾಶಿಯಾತ್ರೆ ಮಡುವವರು ಮೊದಲು ಇಲ್ಲಿ ದರ್ಶನ ಪಡೆದು, ಇಲ್ಲಿನ ಮರಳನ್ನು ಕಾಶಿಯ ಗಂಗೆಗೆ ಅರ್ಪಿಸಿ, ಕಾಶಿಯಾತ್ರೆ ಮುಗಿಸಿ ಬಂದು ರಾಮೇಶ್ವರನಿಗೆ ಗಂಗಾಸ್ನಾನ ಮಾಡಿಸಿದಾಗಲೇ ಕಾಶಿಯಾತ್ರೆ ಪೂರ್ಣವಾಗುವುದು ಎಂಬ ನಂಬಿಕೆ ಇದೆ.

ವಿಜಯ ಕರ್ನಾಟಕದ ಹೊಗಳು ಭಟ್ಟರು : ಭಾಗ-2

ಹೊಗಳುವುದಕ್ಕೆ ಮುಂಚೆ ಆಗಿರುವ ಮಾತುಕತೆ ಇದು. "ವಿಕ್ರಾಂತ ಕರ್ನಾಟಕ"ದ ಗೌರವ ಸಂಪಾದಕರಾದ ರವೀಂದ್ರ ರೇಷ್ಮೆ ಆ ಪತ್ರಿಕೆಯ ಏಪ್ರಿಲ್ 10, 2009 ರ ಸಂಚಿಕೆಯ ಸಂಪಾದಕೀಯದಲ್ಲಿ ಬರೆದಿರುವ ಬರಹ ಇದು.

ಇ-ಸ್ಕೂಟರ್ ಬಗ್ಗೆ ಮಾಹಿತಿ ಬೇಕಿತ್ತು

ಯಾರಾದ್ರೂ electrical scooter ಬಗ್ಗೆ ಗೊತ್ತಿದ್ರೆ ಹೇಳ್ತಿರಾ? ಒಂದು ಸಲ ಚಾರ್ಜ್ ಮಾಡೋಕೆ ಎಷ್ಟು ಯುನಿಟ್ ವಿದ್ಯುತ್ ಬೇಕು ಮತ್ತು +/- ಅಂಶಗಳು...
BSE Roamer+ ಹೇಗಿದೆ?