ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

OS ಲ್ಯಾಂಡಿನಲ್ಲೊಂದು ಮದುವೆ

ನೆನ್ನೆ ಮಧ್ಯಾಹ್ನ ಸಂಪದ ತೆಗೆದು ಕೂತಿದ್ದೆ. Slashdot ನೋಡೇ ಇಲ್ಲ ಅನ್ನೋದು ನೆನಪಿಗೆ ಬಂದು ತೆಗೆದಾಗ ಕಂಡದ್ದು ನನಗೆ ಬಂದಿರೋ mod points . ಸ್ವಲ್ಪ ಖುಶಿ, ಹಾಗೇ ಯಾವತ್ತು mod points ಖಾಲಿ ಆಗುತ್ತೋ, ಬೇಗ moderate ಮಾಡಿಬಿಡಬೇಕು ಅಂದುಕೊಂಡೇ ಬರಹಗಳನ್ನು ಓದುತ್ತಾ ಹೋದೆ. ಸುಮಾರು ೫-೬ ಆಸಕ್ತಿ ಹುಟ್ಟಿಸುವ ಬರಹಗಳಲ್ಲಿ ಕಣ್ಣಿಗೆ ಕಂಡದ್ದು ದೆಬಿಯನ್ BSD kernelಗೂ ಬಂದಿದೆ!! ಒಂಥರಾ ಖುಶಿ ಆಯ್ತು. ಅಚ್ಚರಿಯೂ ಆಯ್ತು ಅನ್ನಿ.
ದೆಬಿಯನ್ ಅತೀ ಹಳೆಯ (slackware ಜೊತೆಗೆ), ಬಹಳ ಗಟ್ಟಿ ಅನ್ನಿಸೋ, ಇಂದಿಗೂ ಅತ್ಯಂತ democratic ಅನ್ನೋ ಗ್ನು/ಲಿನಕ್ಸ್ ವಿತರಣೆ (distribution). ಇಲ್ಲಿಯವರೆವಿಗೂ ಸರಿ ಸುಮಾರು ೧೦-೧೨ architectureಗಳಲ್ಲಿ ದೆಬಿಯನ್ ಓಡಿಸಬಹುದು. ಒಂದು ರೀತಿಯಲ್ಲಿ "Universal Operating System". ಇಂದಿಗೂ ಅತ್ಯಂತ ಹೆಚ್ಚು ಸಾಫ್ಟ್ವೇರ್ಗಳಿರೋ OS. ನಮ್ಮ ಸಂಪದದ ಗೆಳೆಯರೇ ಸೇರಿ ಕೂಡಿಸಿದ ಚಿಗುರು ಕೂಡ ದೆಬಿಯನ್ ಮೂಲದ್ದೇ.
ಇತ್ತ ಕಡೆ FreeBSD BSDಯ ಮತ್ತೊಂದು ಆವೃತ್ತಿ. BSD ಕೆರ್ನೆಲ್ಗಳು ಯಾವತ್ತೂ ತಮ್ಮ security/stability ಗೆ ಹೆಸರುವಾಸಿ. ಸಾಕಷ್ಟು ಸರ್ವರ್ಗಳಲ್ಲಿ ಇದರ ಬಳಕೆ ಆಗಿದೆ. ಆದರೆ ಇವುಗಳ ಬಳಕೆ Desktopಗಳಲ್ಲಿ ಕಮ್ಮಿ.
ಒಟ್ಟಿನಲ್ಲಿ ಗ್ನು/ಲಿನಕ್ಸ್ ಮತ್ತು ಯೂನಿಕ್ಸ್ ಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿದ ಎರಡು ಜೀವಗಳು ಬಹಳ ವರ್ಷಗಳ ಬಳಿಕ ಹತ್ತಿರ ಬಂದಿವೆ. ಬಹಳ ಕಾಲ ಸಂತೋಷದಿಂದಿರಲಿ, ವರ್ಷಕ್ಕೊಂದು ಹೊಸ Derivative Distribution ಕೊಟ್ಟು ನೂರು ವರ್ಷ ಬಾಳಲಿ ಅಂತ ನನ್ನ ಹಾರೈಕೆ.

ಮನಸ್ಸಾಕ್ಷಿ

ಸೈರಾಕ್ಯೂಸ್ ನ ನಿರ೦ಕುಶ ದೊರೆ ಮೊದಲನೆಯ ಡಯೋನಿಸಿಯಸ್ಸನ ಕವಿತೆಗಳನ್ನು ಕಟುವಾಗಿ ವಿಮರ್ಶಿಸಿದ್ದಕ್ಕಾಗಿ ಕವಿ ಫಿಲೋಕ್ಸೇನಸ್ ಕಲ್ಲಿನ ಗಣಿಯಲ್ಲಿ ಕೆಲಸ ಮಾಡುವ ಶಿಕ್ಷೆ ಅನುಭವಿಸಬೇಕಾಯಿತು. ಹೀಗೆಯೇ ಕೆಲವು ದಿನಗಳು ಉರುಳಿದವು.

ಇದು ನನ್....ನಾ ಕಥೆ (ಬಿರುಗಾಳಿ ಚಿತ್ರದ ಸೂಪರ್ ಹಾಡಿನ ಸಾಹಿತ್ಯ..)

ಕರೆಯೋಲೇ.. ಕರೆಯೋಲೆ
ಬರೆದೇ ಕಡಲ ಅಲೆ ಮೇಲೆ
ನಿನ್ನಾ ಸೇರೋ ಮೊದಲೇನೇ
ನೆನೆದೂ ಹರಿದೂ.. ಚೂರಾಗಿದೆ..
ಇದು ನನ್....ನಾ ಕಥೆ

ದಾರಿ ಹೇಗೆ ನಾ ತಿಳಿಯುವುದು..?
ಹೆಸರಿಲ್ಲದ ನಿನ್ನ ಊರಿನಲಿ.
ಕಣ್ಣಾ ಕಿತ್ತು ಹೀಗೆ ಬಿಡಬಹುದೆ..?
ಕೊನೆಯಿಲ್ಲದಾ ಮರಳಗಾಡಿನಲಿ.
ನೆರಳ ಹುಡುಕೊ ಆಸೆಯಲಿ
ಕಳೆದೆ ಹೋದೆ ಪ್ರೀತಿಯಲಿ.
ಗೆಳತಿ ನಿನ್ನ ಕ್ಷಮೆ ಇರಲಿ..
ಇದು ನನ್....ನಾ ಕಥೆ

ಲಿನಕ್ಸಾಯಣ - ೫೦ - ಗ್ನು/ಲಿನಕ್ಸ್ ಬಗ್ಗೆ ಮತ್ತಷ್ಟು ವಿಷಯ ತಿಳೀಬೇಕಾ?

ಗ್ನು/GNU ಬಗ್ಗೆ ಹಿಂದೆ ಬರೆದಿದ್ದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಗ್ನು ತನ್ನ ೨೫ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿತ್ತು. ಆ ಸಮಯದಲ್ಲಿ ಫ್ರೀ ಸಾಫ್ಟ್ವೇರ್ ಫೌಂಡೇಶನ್ (ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ) ಎಲ್ಲರಿಗೆ ಗ್ನು ಹಾಗು ಸ್ವತಂತ್ರ ತಂತ್ರಾಂಶ ಅಂದ್ರೆ ಏನು ಅನ್ನೋದನ್ನು ಮನದಟ್ಟು ಮಾಡ್ಬೇಕು ಅನ್ನೋ ಸಲುವಾಗಿ ಒಂದು ವಿಡಿಯೋ ಬಿಡುಗಡೆ ಮಾಡಿತು.

ಹೀಗೊಂದು ಧನ್ಯವಾದ ಸಮರ್ಪಣೆ

ಇವತ್ತು ಬೆಳಗ್ಗೆ ಶ್ರೀಕಾಂತ ಮಿಶ್ರಿಕೋಟಿಯವರು ಹರಿದಾಸ ಸಂಪದಕ್ಕೆ ನಮ್ಮ ಬಳಿ ಇದ್ದ ಎಲ್ಲ ಪುರಂದರ ದಾಸರ ರಚನೆಗಳನ್ನು ಹಾಕಿ ಆಯಿತು ಅಂತ ಹೇಳಿದಾಗ ಸಿಕ್ಕಾಪಟ್ಟೆ ಖುಷಿಯಾಯಿತು ನನಗೆ. ಶ್ರೀಕಾಂತರಿಗೂ, ಮತ್ತೆ ಈ ಕೆಲಸದಲ್ಲಿ ನೆರವಾದ ಎಲ್ಲ ಸಂಪದಿಗರಿಗೂ ನನ್ನ ಧನ್ಯವಾದಗಳು.

ಗಾದೆಗಳು(ಚ)

ಚಕ್ಕಂದದವನಿಗೆ ತಕ್ಕ ಫಲ ಸಿಕ್ಕುವುದು

ಚಟ್ಟಿದಿನ ಬಿಟ್ಟಿಗೂ ಹೋಗಬೇಡ

ಚನ್ನಾಗಿದ್ದರೆ ನಂಟರು, ಕೆಟ್ಟರೆ ಸ್ನೇಹಿತರು

ಚಪ್ಪರಕ್ಕೆ ಗತಿಯಿಲ್ಲದವ ಉಪ್ಪರಿಗೆಯನಪೇಕ್ಷಿಸಿದ

ಚಲವಾದಿಯ ಸಂಗಡ ಹಟವಾದಿ ಸೇರಿದ ಹಾಗೆ

ಚಳಿಗಿಲ್ಲದ ಕಂಬಳಿ ಮೆಳೇ (=ದಿಂಡುಗದ ಮೆಳೆ, ಸಣ್ಣದಾದ ಕಾಡು ಮರ) ಮೇಲೆ ಬಿದ್ದರೇನು ಮುಳ್ಳಿನ ಮೇಲೆ ಬಿದ್ದರೇನು

ಚಳಿಗಾಲಕ್ಕಿಂತ ಮಳೆಗಾಲ ವಾಸಿ

ಕಾರ್ಮೋಡಗಳ ತೂರಿ ಹೊಂಗಿರಣ

ಗ್ವಾನ್ಟಾನಾಮೋ ಹೆಸರು ಕೇಳದವರು ವಿರಳ. ಅಮೆರಿಕೆಯ ಹತ್ತು ಹಲವು "ಸುಂದರ" project ಗಳಲ್ಲಿ ಒಂದು guantanamo. ಕ್ಯೂಬಾ ದೇಶದ ದ್ವೀಪದಲ್ಲಿರುವ ಈ ತಾಣದಲ್ಲಿ ಅಮೇರಿಕ "ಶಂಕಿತ" ಭಯೋತ್ಪಾದಕರನ್ನು ಪಿಕ್ನಿಕ್ ಮೇಲೆ ಕಳಿಸುತ್ತದೆ. 9/11, 2001 ನಂತರ ಭ್ರಾಂತ ಸ್ಥಿತಿಯಲ್ಲಿರುವ ಅಮೇರಿಕೆಗೆ ತೋಚಿದ್ದು ಒಂದಿಷ್ಟು ಜನರನ್ನು guantanamo ಅಂಥ ಸ್ಥಳಗಳಿಗೆ ಕಳಿಸಿಬಿಟ್ಟರೆ ನಾವು ಲಾಸ್ ವೇಗಸ್ ನಲ್ಲಿ ಸುರಕ್ಷಿತವಾಗಿ ಕೂತು ಮಜವಾಗಿ ಜೂಜಾಡಬಹುದು ಎಂದು. ಅಮೆರಿಕೆಯ ಈ ಕ್ರಮದ ಉದ್ದೇಶ ಎಷ್ಟು ಸಫಲವಾಯಿತು ಎಂದು ಕಾಲವೇ ಹೇಳಬೇಕು. ಆದರೆ ಒಂದಂತೂ ಸತ್ಯ. ಅಲ್ಲಿನ ಸೆರೆಯಾಳುಗಳನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಂಡರೂ, ಅದಕ್ಕಾಗಿ ವಿಶ್ವದ ಛೀ ಥೂ ಕೇಳಬೇಕಾಗಿ ಬಂದರೂ ಕಾರ್ಮೋಡಗಳ ತೂರಿ ಹೊಂಗಿರಣ ಸೂಸಲೇಬೇಕು. cuba ದ್ವೀಪದ ಕೆಲವು ಪ್ರಾಣಿಗಳು ಈಗ ಮಜವಾಗಿ ಸುರಕ್ಷಿತವಾಗಿ ಬದುಕುತ್ತಿವೆ. ನಾವು ಕೇಳದ, ಪರಿಚಯವಿಲ್ಲದ ಹಲವು ಪ್ರಾಣಿಗಳು ಈಗ ಸುರಕ್ಷಿತವಾಗಿ ಅಡ್ಡಾಡಿ ಕೊಂಡಿವೆ. ಅವುಗಳ ಹೆಸರು "Hutia", groundhog-like rodents nicknamed banana rats and Cuban rock "iguana" (ಉಡ), ಇವರುಗಳು ಆಶ್ರಯ ಪಡೆದುಕೊಂಡ ಅದೃಷ್ಟವಂತರು. ಹುತಿಯ, ಮತ್ತು ಉಡಗಳನ್ನು ವಿಟಮಿನ್ ವಂಚಿತ ಕ್ಯುಬನ್ನರು ತಿಂದು ಖಾಲಿ ಮಾಡುತ್ತಿದ್ದರಂತೆ. ಪಾಪ ಕ್ಯೂಬಾ ಅಧ್ಯಕ್ಷ ಫಿಡೆಲ್ ಕಾಸ್ಟ್ರೋ ಕೂಳಿಗೂ ಸಂಚಕಾರ ಅಮೇರಿಕನ್ನರಿಂದ. ಈಗ ಆ ಪ್ರಾಣಿಗಳು safe.
ಹಾಗಾದರೆ ಮನುಷ್ಯರು ಮೃಗಗಳಂತೆಯೂ, ಮೃಗಗಳು ಐಶಾರಾಮ ವಾಗಿಯೂ ನೆಲೆಸುವ ತಾಣಕ್ಕೆ " guantanamo " ಎಂದು ಹೆಸರು.

ಆಹಾ! ಒಳ್ಳೇ ಜೋಡಿ

ನಾನಿಂದು ಯಾವುದೋ ಫಂಕ್ಷನ್ನಿಗೆ ಅಮ್ಮನ ಬಲವಂತಕ್ಕಾಗಿ ಹೋಗಿದ್ದೆ. ಅಲ್ಲಿ ಕುಳಿತವರೆಲ್ಲರೂ ಗುಸುಗುಸು ಎಂದು ಮಾತಾಡುತ್ತಿದ್ದರು. ಅದು ಯಾರ ಬಗ್ಗೆ ಎಂದು ಅರ್ಥವಾಗಿರಲಿಲ್ಲ. ಅಲ್ಲಿ ಯಾರೂ ಗೆಳತಿಯರಿಲ್ಲದೆ ಬೇಸರದಿಂದ ಕುಳಿತಿದ್ದ ನನಗೆ ಅಮ್ಮ ಕರೆದು ಒಂದು ಜೋಡಿಯನ್ನು ತೋರಿಸಿ, ಇವರ ಬಗ್ಗೆಯೆ ಎಲ್ಲರೂ ಮಾತಾಡಿಕೊಳ್ಳುತ್ತಿದ್ದದ್ದು ಎಂದರು.