ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸತ್ಯ

"ಸತ್ಯ ಬಹು ಪವಿತ್ರ; ಆದರೆ ಪದೇ ಪದೇ ಸತ್ಯವನ್ನೇ ಹೇಳುತ್ತಿದ್ದರೆ ಯಾರೂ ನಂಬರು".

ಒಂದೊಳ್ಳೇ ಹಳೇ ಹಾಡು ಕೇಳ್ರಿ - ನಾನೂ ನೀನೂ ಜತೆಗಿರಲೂ

ಮೊದಲು ಹಾಡು ಕೇಳಿ
( http://www.kannadaaudio.com/Songs/Compilations/Preethne-Aa-Dyavru-Thandha-PB-Srinivas-Hits/Naanu-Neenu.ram )

ನಾನೂ ನೀನೂ ಜತೆಗಿರಲೂ
ಕಾಲದ ನೆನಪೇ ಬೇಕಿಲ್ಲ
ಋತುಗಳು ಕಾಲದ ಮಾತುಗಳು
ಅವುಗಳ ಭೇದವೇ ನಮಗಿಲ್ಲ

ಕಣ್ಣು ಕಣ್ಣೂ ಕಲೆತಿರಲು
ಹಗಲೂ ಇರುಳಿನ ಅರಿವಿಲ್ಲ
ತುಟಿಯೂ ತುಟಿಯೂ ಸೇರಿರಲು
ಮಧುಮಾಸವೇ ಪ್ರತಿಕ್ಷಣವೆಲ್ಲ

ಮನಸೂ ಮನಸೂ ಬೆರೆತಿರಲೂ
ಅಂದವೇ ನೋಡಿದ ಕಡೆಯೆಲ್ಲ

ಉತ್ತರ ಕೊರಿಯಾ

ನಿನ್ನೆ ಉತ್ತರ ಕೊರಿಯಾ ವಿಶ್ವದ ಮನವಿಯನ್ನೂ ಮತ್ತು ಎಚ್ಚರಿಕೆಯನ್ನೂ ಕಡೆಗಣಿಸಿ ಕ್ಷಿಪಣಿ ಪರೀಕ್ಷ ನಡೆಸಿತು. ಉತ್ತರ ಕೊರಿಯದ ಆಸುಪಾಸಿನಲ್ಲಿರುವ ದಕ್ಷಿಣ ಕೊರಿಯಾ ಮತ್ತು ಜಪಾನ್ ಮತ್ತು ಇತರ ರಾಷ್ಟ್ರಗಳಿಗೆ ಆತಂಕ ಹುಟ್ಟಿಸಿದ ಈ ಪರೀಕ್ಷೆ ಅಮೆರಿಕೆಯ ತಾಕೀತಿನಿಂದಲೂ ನಿಲ್ಲಲಿಲ್ಲ.

ಕಾರ್ಯ - ಕಾರಣ ಸಂಬಂಧ?

ನನಗೆ ಪದ್ಯ ಹೊಸೆಯಲು ಬರುವುದೇ ನೋಡೋಣ ಎಂದು ಕುಳಿತಾಗ ಮೂಡಿದ ಸಾಲುಗಳು

ಒಂದು ದಿನ ಹುಟ್ಟು
ಒಂದು ದಿನ ಸಾವು
ನಡುವೆ ಜೀವನದಲಿ
ಬೆಲ್ಲ , ಬೇವು.

ಯಾಕಾಗಿ ಹುಟ್ಟು?
ಯಾಕಾಗಿ ಸಾವು?
ನಡುವೆ ಹೀಗೇಕೆ
ಬೆಲ್ಲ , ಬೇವು ?

ಒಂದರೊಳಗೊಂದಕ್ಕೆ
ಇಲ್ಲವೇ ಸಂಬಂಧ ?
ತಿಳಿಯದೆ ಮೂಡುತಿದೆ
ಮನದೊಳಗೆ ದ್ವಂದ್ವ.

??????????????

ನನ್ನ ಜೀವಮಾನದ ಸಾಧನೆ! - ಹರಿದಾಸ.ಇನ್ ನಲ್ಲಿ ಪುರಂದರದಾಸರ ಎಲ್ಲಾ* ಕೃತಿಗಳು

(* ಹೆಚ್ಚೂ ಕಡಿಮೆ)
ಈಗ http://haridasa.in ನಲ್ಲಿ ಪುರಂದರದಾಸರ ಬಹುತೇಕ ಎಲ್ಲಾ ಕೃತಿಗಳು ಇದ್ದಂತಾಗಿದೆ.
ಇದು ಹುಲುಜೀವವಾದ ನನ್ನ ಜೀವಮಾನದ ಸಾಧನೆ ಅಂತ ಹೇಳ್ಬಹುದೇನೋ !
ಹೆಚ್ಚೇನು ಹೇಳಲಿ?

ಆತ ನಗುತಿಹನಲ್ಲಿ!

ಸಖೀ,
ಕಣ್ಣು ಕಂಡು ಮೆಚ್ಚಿದ್ದನ್ನೆಲ್ಲ
ಮನ ಮೆಚ್ಚುವುದು ನಿಜ,
ಅವುಗಳ ಪಡೆಯಬೇಕೆಂಬ
ಆಸೆ ಆಗುವುದೂ ಸಹಜ;

ನಮ್ಮ ಹಕ್ಕು ಇದ್ದಲ್ಲೇ ನಾವು
ಕೈಗಳ ಚಾಚಿದರೆ ಒಳಿತು,
ನಮ್ಮದಲ್ಲದ್ದಕ್ಕೆ ಶರಣು
ಆಗಬಾರದೆಂದಿಗೂ ಸೋತು;

ಮನದೊಳಗೆ ನೂರೆಂಟು
ಬಯಕೆಗಳು ಇರಲಂತೆ,
ಬಯಕೆಗಳೆಂದಿಗೂ ನಮ್ಮ
ಹಿಡಿತದೊಳು ಇರಲಂತೆ;

ಎಲ್ಲಾದರೂ ಅವು ಕೊಂಚ
ಹಿಡಿತ ಮೀರಿದರೆ ಸಾಕು,

ಇರುವ ಭಾಗ್ಯವ ನೆನೆದು...

ನೀವು ತುಂಬಾ ಸಲ ಇವುಗಳನ್ನ ಕೇಳಿರಬಹುದು, ನಾವೂ ಒಂದ‌ಲ್ಲ ಒಂದ್ಸಲ ಹೇಳಿರ್ತೀವಿ‌ ...

ಆ ಸೈಟ್ ತಗೊಂಡಿದ್ರೆ ಈಗ ಬಾರೀ ಲಾಭ ಬಂದಿರ್ತಿತ್ತು.

ಅವತ್ತೇ ಆ ಶರ್ಟ್ ತಗೊಂಡಿದ್ರೆ ಇನ್ನೊಂದು ಶರ್ಟ್ ಸಿಗ್ತಿತ್ತು.

ಅವತ್ತು ಹೋಗಿದ್ರೆ ಬಾರೀ ಕಡಿಮೆಯಲ್ಲಿ ಸಿಗ್ತಿತ್ತು ಮಗಾ.

ಎಲ್ಲಾ ಇದೆ ಆದರೂ ಏನೂ ಇಲ್ಲ ಅಂತ ಚಿಂತೆ.........

ಪತ್ರಿಕಾ ಧರ್ಮ

"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗಳ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."
— ಕುವೆಂಪು

ಇದು - ಮಣಿಪಾಲದ "ಎಂಡ್ ಪಾಯಿಂಟ್"

ಈ ಸುಂದರ "ಪಾರ್ಕ್" ಯಾವ ಊರಿನಲ್ಲಿದೆ? ಇದರ ಬಗ್ಗೆ ಆ ಮೇಲೆ ಬರೆಯುತ್ತೇನೆ. ಇದು ಹೊಸದಾಗಿ ನಿರ್ಮಿಸಲ್ಪಟ್ಟಿದ್ದು. ಕರ್ನಾಟಕದ ಒಳಗೇ ಇದೆ. ೮ ಎಪ್ರಿಲ್ ೨೦೦೯, ಬುಧವಾರ ಈ "ಪಾರ್ಕ್" ಮಣಿಪಾಲದ "ಎಂಡ್ ಪಾಯಿಂಟ್" ನಲ್ಲಿದೆ.