ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸತ್ಯವೋ? ಮಿಥ್ಯವೋ?

ಜನರ ಮೂಢನಂಬಿಕೆಗೆ ಕಾರಣವಾಗಲಿ ತರ್ಕವಾಗಲಿ ಇಲ್ಲ. ಈ ನಂಬಿಕೆಗಳು ನಮಗೆ ಗೊತ್ತಿರುವಂತೆ ಬಹಳಷ್ಟು ಸಾರಿ ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿವೆ. ಮೂಢನಂಬಿಕೆಯ ಜನರು ಒಳ್ಳೆಯದಾಗಲೆಂದು ಅಥವಾ ಕೆಟ್ಟದ್ದು ಆಗದಿರಲೆಂದು ಅಥವಾ ಮುಂದೆ ಆಗುವ ಅವಘಡಗಳನ್ನು ತಪ್ಪಿಸಲೆಂದು ಈ ಆಚರಣೆಗಳನ್ನು ಪರಿಪಾಲಿಸುತ್ತಾ ಬಂದಿದ್ದಾರೆ.

ಮಂಗರಬಳ್ಳಿ

ಮಂಗರಬಳ್ಳಿ ಉಳಿಸೊಪ್ಪು-ಭೂಷಣ್ ಮಿಡಿಗೇಶಿ
ಪ್ರತಿವರ್ಷ ಉಗಾದಿ ಹಬ್ಬದ ಮಾರನೆಯ ದಿನ ನಮ್ಮೂರ ಬಳಿಯಿರುವ ತಾಡಿ ನಾಗಮ್ಮನ ಜಾತ್ರೆಗೆ ನಮ್ಮ ಕುಟುಂಬ ಸಮೇತ ಹೋಗುವುದು ವಾಡಿಕೆ.ನಾಗಮ್ಮ ನನ್ನ ಮನೆದೇವರು .ವಿಶೇಷ ಜಾತ್ರೆಯದಲ್ಲ.ಅಂದು ನಮ್ಮಮ್ಮ ಮಾಡುವ ಮಂಗರಬಳ್ಳಿ ಉಳಿಸೊಪ್ಪು ಎಂಬ ಸಾರಿನದ್ದು.

ಏನಿದು ಮಂಗರಬಳ್ಳಿ?

ಬಯಲುಸೀಮೆಯ ಒಣ ನೆಲದಲ್ಲಿ ಯುಗಾದಿಯ ಸಮಯದಲ್ಲಿ ಕಾರೆಕುದುರು,ಬಂದಗಳ್ಳಿ ಗಿಡ,ಕತ್ತಾಳೆಯ ಮಗ್ಗುಲಿನಲ್ಲಿ,ಮಂಗರಬಳ್ಳಿ ಚಿಗುರುತ್ತದೆ.ಮೇಕೆಗಳು ಮಾತ್ರ ಕೆಳಗೆ ಎಟುಕುವ ಬಳ್ಳಿಯನ್ನು ಮೂತಿಗೆ ತಗುಲಿಸಿಕೊಳ್ಳದ ಹಾಗೆ ತಿನ್ನುತ್ತವೆ.ವರ್ಷಪೂರ್ತಿ ಒರಟೊರಟಾಗಿ ಹುತ್ತಗಳ ಮೇಲೆ,ಬಳ್ಲಿಯಾಕಾರದಲ್ಲಿ ಸತ್ತಂತೆ ಬಿದ್ದುಕೊಂಡ ಈ ಬಳ್ಳಿಗೆ ವಸಂತಕಾಲದಲ್ಲಿ ಚಿಗುರುವ ಅದೃಷ್ಟ.ಬಲಿತ ಬಳ್ಳಿ ಔಷಧೀಯ ಗುಣವುಳ್ಳದ್ದು.ಅಂಗೈ ಬಿಟ್ಟು ದೇಹದ ಬೇರೆಯಾವುದೇ ಭಾಗಕ್ಕೆ ಇದರ ರಸ ತಗುಲಿದರೆ ಅಪಾರ ನವೆ,ಕಡಿತ.ಹಾಗಾಗಿ ಯಾರು ಇದರ ಸುದ್ದಿಗೆ ಹೋಗುವುದಿಲ್ಲ.ಅಂತಹ ಬಳ್ಳಿಯಲ್ಲಿ ಹೊಟ್ಟೆಗೆ ತಿನ್ನುವ ಸೊಗಸಾದ ,ರುಚಿಯಾದ ಸಾರು(ಉಳ್ಸೊಫ್ಪು) ತಯಾರಾಗುತ್ತದೆಯೆಂದರೆ, ಅಚ್ಚರಿಯಲ್ಲವೇ?

ನಾನು ಆಸ್ತಿಕನೋ..ನಾಸ್ತಿಕನೋ...?!

ನಾನು ಇದೆ ಎಂದ ಕೂಡಲೇ
ಇಲ್ಲದ್ದು ಇದೆಯೆಂದಾಗುವುದಿಲ್ಲ

ನಾನು ಇಲ್ಲ ಎಂದ ಕೂಡಲೇ
ಇದ್ದದ್ದು ಇಲ್ಲವೆಂದಾಗುವುದಿಲ್ಲ

ಸತ್ಯವನ್ನು ನೂರು ಮಂದಿ ನೂರು ಬಾರಿ
ಸುಳ್ಳೆಂದರೂ ಅದು ಅಸತ್ಯವಾಗುವುದಿಲ್ಲ

ಅಸತ್ಯವನ್ನು ನೂರು ಮಂದಿ ನೂರು ಬಾರಿ
ಸತ್ಯವೆಂದರೂ ಅದು ಸತ್ಯವಾಗುವುದಿಲ್ಲ

ನನ್ನ ಕಣ್ಣೆದುರು ಇರುವವರಿಗೆ ನನ್ನ ಕಣ್ಣೆದುರು

ವಿಯೋಗ

ಗಿಡಮರಗಳ ನಡುವೆಲ್ಲೋ ಚಿಲಿಪಿಲಿಗಳನ್ನು ಕೇಳುತ್ತಾ ಮನೆಕಡೆ ಹೋಗುತ್ತಿದ್ದ ನಾಗಪ್ಪ ತನ್ನವರ ಬಗ್ಗೆ ತನ್ನ ಮನೆಯವರ ಬಗ್ಗೆ ಯೋಚಿಸತೊಡಗಿದ..

ಹೀಗೊಂದು ರೂಪಕ ‘ನೀಲ ಕಡಲ ಬಾನು‘

ಇದೊಂದು ರೂಪಕ. ಅಥವಾ ಕಥನ ನಾಟಕ ಅಂತಲೂ ಅನ್ನಬಹುದು. ಜಯಲಕ್ಷ್ಮೀಯವರ ‘ನೀಲ ಕಡಲ ಬಾನು’ ಕವನ ಸಂಕಲನದ ಬಿಡುಗಡೆಯ ಸಂದರ್ಭದಲ್ಲಿ ಅವರ ಕೋರಿಕೆಯ ಮೇರೆಗೆ ನಾನಿದನ್ನು ಬರೆದದ್ದು.. ದೀಪಾ ರವಿಶಂಕರ್ ತಮ್ಮ ‘ಅನೇಕ’ ತಂಡದ ಕಲಾವಿದರೊಂದಿಗೆ ಅಭಿನಯಿಸಿದ್ದರು. ಸಂಪದ ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳುವಂತೆ ಜಯಲಕ್ಷ್ಮೀಯವರು ಒತ್ತಾಯಿಸಿದ್ದಕ್ಕೆ ಇಂದು ನಿಮ್ಮೆದುರಿಗಿಡುತ್ತಿದ್ದೇನೆ... ಅವರ ಕವನ ಸಂಕಲನದಿಂದಲೆ ಕೆಲವು ಕವಿತೆಗಳ ತುಣುಕುಗಳನ್ನು ಆಯ್ದುಕೊಂಡು ಹೆಣೆದ ರೂಪಕವಿದು.

 

 

ಅರೆ... ಏನಿವತ್ತು ಇಷ್ಟೋಂದು ಲೆಟರ್ಸು!! ಇಡೀ ಕಾಲನಿ ಪೋಸ್ಟ್‌ನೆಲ್ಲ ನಮ್ಮನೇಲೆ ಡಂಪ್ ಮಾಡಿ ಹೋದ್ನಾ ಈ ಪೋಸ್ಟ್‌ಮನ್!!? ಬಂದ್ರೆ ಹೀಗೆ ಒಟ್ಟೊಟ್ಟಾಗಿ ಬರ್ತವೆ ಇಲ್ಲಾ ಅಂದ್ರೆ ರೆಗ್ಯೂಲರ್ ಆಗಿ ಬರೊ ಮ್ಯಾಗ್ಜಿನ್ಸ್ ಸಹ ಬರೊಲ್ಲ! ಹಂ. (ಒಂದೊಂದಾಗಿ ನೋಡುತ್ತಾ ಹೋಗಿ ಕೊನೆಗೊಂದು ಲೆಟರ್‍ನ ನೋಡುತ್ತಾ ಸ್ಥಬ್ದಳಾಗುತ್ತಾಳೆ).. ಇಷ್ಟು ದಿನದ ಮೇಲಾದ್ರು ನೆನಪಾದ್ನಲ್ಲ ನಾನು.. (ಮೊಬೈಲ್ ರಿಂಗ್ ಆಗುತ್ತದೆ. ಅದನ್ನು ನೋಡಿದ ಅವಳ ಮುಖದಲ್ಲಿ ಆಶ್ಚರ್ಯ ಮಿಶ್ರಿತ ಆನಂದ. ರಿಸೀವ್ ಮಾಡ್ತಾಳೆ.) ಹೇಗಿದ್ದೀಯಾ? ಮ್,ನಾನ್ ಚೆನ್ನಾಗಿದೀನಿ ಮಕ್ಕಳೂ ಚೆನ್ನಾಗಿದಾರೆ... ಈಗಷ್ಟೆ ನಿನ್ನ ಪತ್ರ ಕೈಗೆತ್ಕೊಂಡೆ ಅಷ್ಟ್ರಲ್ಲಿ ನಿನ್ ಫೋನ್...ತುಂಬಾ ಬ್ಯೂಸಿನಾ?ಏನಂದೆ? ಹಾಂ.. ಹಾಂ... ಹೌದಾ!? ಅರೆ ವ್ಹಾ! ಕಾಂಗ್ರಾಟ್ಸ್ ! ತುಂಬಾ ಖುಷಿಯಾಗ್ತಿದೆ.. ಮತ್ತೆ ಫೋನ್ ಮಾಡ್ತಿಯಲ್ವಾ?ಮ್..ಕಾಯ್ತಿರ್ತೀನಿ..ಬಾಯ್..

(ಕ್ಷಣಕಾಲ ಫೋನಿನಲ್ಲಿಯ ದನಿಯ ಗುಂಗಿನಲ್ಲಿದ್ದವಳು ಎಚ್ಚತ್ತು ಪತ್ರ ಬಿಡಿಸಿ ಓದಲು ತೊಡಗುತಿದ್ದಂತೆ ಕರೆಂಟು ಹೋಗುತ್ತದೆ "ಛೆ..! ಎಂದು ಮೊಂಬತ್ತಿಯನ್ನು ಉರಿಸುತ್ತಾಳೆ. ಕೈಯಲ್ಲಿದ್ದ ಪತ್ರ ನೋಡುತ್ತಾ) ...

ಏನೂ ಇಲ್ಲ ಎಂಬಲ್ಲಿ ಇಲ್ಲ ಎನ್ನುವುದು ಇದೆ!!!

ಇದೆ ಎನ್ನುವಷ್ಟು ಹೊತ್ತು ಅದು ನಿಜಕೂ ಇದೆ
ಇಲ್ಲ ಎನ್ನುವಿರಾ ಅಲ್ಲಿ ಇಲ್ಲ ಎನ್ನುವುದು ಇದೆ

ಏನೂ ಇಲ್ಲ ಎಂಬಲ್ಲಿ ಇಲ್ಲ ಎನ್ನುವುದು ಇದೆ
ಹಾಗಾದರೆ ಇದೆ ಎಂಬುದು ಎಲ್ಲಾ ಕಡೆ ಇದೆ

ಇದೆ ಎನ್ನುವುದು ಇದು ಸಾರ್ವಕಾಲಿಕ ಸತ್ಯ
ಇಲ್ಲವೆನ್ನುದು ಏನೇ ಅಂದರೂ ಅದು ಮಿಥ್ಯ

ಇದೆ-ಇಲ್ಲ ಎಂದು ಸದಾ ನಡೆಯುತಿದೆ ವಾದ
ಇಲ್ಲವಾಗಿದ್ದಿದ್ದರೆ ಎಲ್ಲಿ ಇರುತ್ತಿತ್ತು ಈ ಸಂವಾದ

ಹೀಗೆ ಮತ್ತೊಂದಷ್ಟು ಹನಿಗಳು

ಅಂದು ನಿನ್ನ ಹಾಗೆ ಯಾರೂ ಇಲ್ಲ ಕಣೆ ಎಂದು ಚುಂಬಿಸಿದ ಹುಡುಗ ಇಂದೂ ನಿನ್ನ ಹಾಗೆ ಯಾರೂ ಇಲ್ಲ ಕಣೆ ಎಂದು ದೂರ ಓಡುತ್ತಿದ್ದಾನೆ. ಹೆಂಡತಿ ಕಾಳಿಯಾಗಿದ್ದಾಳೆ
------------------------------------------------------------------------------------------------
ನಿಂಗೇನು ಬೇಕಾದ್ರೂ ಕೇಳು ಕೊಡಿಸ್ತೀನಿ ಅಂತಿದ್ದ ಅಪ್ಪ ಮಗಳು ಕೇಳಿದ ಹುಡುಗನ್ನ ಕೊಡಿಸಲಾಗದೆ ಸಿಡಿಮಿಡಿಯಾಗಿದ್ದಾನೆ