ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸೀತೆ ಮತ್ತು ಶಾಕುಂತಲೆ...

ಸೀತೆಗೂ ಶಾಕುಂತಲೆಗೂ ಸಿಕ್ಕಿತೇನು

ಪ್ರೀತಿಯಿಂದ??

ಪಡುವಂತಾಯಿತೇ ಇಲ್ಲದ ನೋವಿನ ಭಾದೆ...

ಪತಿ ರಾಮ - ದ್ಯುಷಂತರು ಏನು ಕಳೆದರು?

ಕಳೆದುದು ಎಲ್ಲವು ಈ ಎರಡು ಹೆಣ್ಣಿಗೆ...

ಪತಿಯ ಮಾತನ್ನು ಮನ್ನಿಸಿ ನೆಡೆದಳು

ಒಬ್ಬಳು,

ಪತಿಯು ಬಿಟ್ಟು ಹೋದ ಪ್ರೇಮದ ನೆನಪಲಿ ಕಾಲವ ಕಳೆದಳು

ಮತ್ತೊಬ್ಬಳು...

ಪತಿಯ ಏಲ್ಲಾ ಕಷ್ಟಗಳಿಗೆ ಹೆಗಲಾದಳು ಒಬ್ಬಳು,

ಎಷ್ಟು ಜೇನು ಗೂಡುಗಳಿವೆ ಬಲ್ಲಿರಾ ?

ಸಿರ್ಸಿಯಿಂದ ಯಲ್ಲಾಪುರಕ್ಕೆ ಹೋಗುವ ದಾರಿಯಲ್ಲಿ ಕಂಡ ಬೋಳುಮರದಲ್ಲಿ ಜೇನು ಗೂಡುಗಳ ಸಂಖ್ಯೆ ಎಷ್ಟು ಎಣಿಸಬಲ್ಲಿರಾ ?

ಜನಪದ ಭಂಡಾರ ಸಿರಿಯಜ್ಜಿಗೆ ನುಡಿ ನಮನ.

ಸಾಮ್ಮರ್‌ಫೀಲ್ಡ್ ರಷ್ಯಾದ ಪ್ರಖ್ಯಾತ ಗಣಿತಜ್ಞ. ಅವನ ಮೂರು ಜನ ಶಿಷ್ಯಂದಿರಿಗೆ ನೋಬೆಲ್ ಪ್ರಶಸ್ತಿ ಬಂದಿದೆ. ಆದರೆ ಸ್ವತಃ ಸಾಮ್ಮರ್‌ಫೀಲ್ಡ್ ಗೆ ನೋಬೆಲ್ ಪ್ರಶಸ್ತಿ ಬಂದಿಲ್ಲ! ಸಾಮ್ಮರ್‌ಫೀಲ್ಡ್ ಸಂಜೆ ಐದು ನಿಮಿಷದ ಮಟ್ಟಿಗೆ ವಾಕಿಂಗ್ ಹೊರಡುತ್ತಿದ್ದ. ಅವನ ಶಿಷ್ಯಂದಿರು ಅಥವಾ ಶಿಷ್ಯರಾಗಬಯಸುವವರು ಅವನ ಹಿಂದೆ ಓಡಬೇಕಿತ್ತು.

ಮಿತ್ರರ ಮೌನ

"In the end we will not remember the words of our enemy but we will remember the silence of our friends"
ಕೊನೆಗೆ, ನಾವು ನಮ್ಮ ಶತ್ರುಗಳ ಮಾತುಗಳನ್ನು ನೆನೆಸುವುದಿಲ್ಲ, ಬದಲಿಗೆ ನಾವು ನಮ್ಮ ಮಿತ್ರರ "ಮೌನ" ವನ್ನು ನೆನಪಿಡುತ್ತೇವೆ - ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್
ಶೋಷಣೆಗೆ ಒಳಗಾದ, ದಬ್ಬಾಳಿಕೆಯನ್ನು ಮೌನವಾಗಿ ನೋಡುತ್ತಾ ತಮಗೆ ಸಂಬಂಧಿಸಿದ್ದಲ್ಲ ಎಂದು ಹಾದು ಹೋಗುವ ಜನರ ಕುರಿತು ಕಿಂಗ್ ಆಡಿದ ಮಾತುಗಳು.

ಮಾತು ಚಿನ್ನ

"do unto others as you would have them do unto you"
ಇತರರು ನಿಮಗಾಗಿ ಯಾವುದು ಬಯಸುವುದನ್ನು ನೀವು ಇಚ್ಚಿಸುತ್ತೀರೋ ಅದನ್ನೇ ಇತರರಿಗೂ ಬಯಸಿರಿ.
ಈ ಸುವರ್ಣ ಶಬ್ದಗಳು ಕ್ರೈಸ್ತರ "ಹಳೆ ಒಡಂಬಡಿಕೆ", ಯಹೂದಿಗಳ "ತಾಲ್ಮೂದ್" ಗ್ರಂಥ ಮತ್ತು ಮುಸ್ಲಿಮರ "ಪವಿತ್ರ ಕುರಾನ್" ಗಳಲ್ಲಿ ಕಾಣಲು ಸಿಗುತ್ತವೆ.

ಜಾಲತಾಣ ವಿಳಾಸಗಳನ್ನು ಉಳಿಸಿಡಲು ಕನ್ನಡ ತಂತ್ರಾಂಶ

ಕನ್ನಡ ಜಾಲತಾಣ ನಿರ್ವಾಹಕ ತಂತ್ರಾಂಶದಲ್ಲಿ ತಾವು ಜಾಲತಾಣ ವಿಳಾಸ (Website URLs) ಗಳನ್ನು ಉಳಿಸಿಕೊಳ್ಳಬಹುದು. ಇಷ್ಟೇ ಅಲ್ಲದೇ ಇದರಲ್ಲಿ ತಾವು ಆ ಜಾಲತಾಣದ ವಿ-ಅಂಚೆ ಮತ್ತು ರೇಟಿಂಗ್ ಅನ್ನೂ ಸಹ ಉಳಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ http://compuinkannada.co.cc/install.html ಗೆ ಒಮ್ಮೆ ಭೇಟಿ ಕೊಡಿ.

ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

[ಸಂಪದ ಕಾರ್ಯಕ್ರಮ]

ಮ್ಮದೇ ಸಮುದಾಯದವರನ್ನು ತಲುಪುವುದು ತುಂಬ ಕಷ್ಟ ಎನ್ನುವುದು ನಿಜವಾದ ಸಂಗತಿ. ನಾವೆಲ್ಲ ಬೆಳೆದು ಬಂದ ಜಗತ್ತು ಈಗ ನಮ್ಮನ್ನೆಲ್ಲ ಹತ್ತಿರ ತಂದಿರುವ ಅದೇ ಭಾಷೆಯ ಸುತ್ತ ಪೋಣಿಸಿದ್ದು. ಹೀಗಾಗಿಯೇ ನಾವುಗಳು ಇಲ್ಲಿದ್ದೇವೆ, ನಮ್ಮ ಕೆಲಸಗಳಲ್ಲಿ ಬಳಸುವ ಭಾಷೆ ಬೇರೆಯದ್ದಾದರೇನು, ನಮ್ಮ ಭಾಷೆಯ ನಂಟು ಬಿಟ್ಟಿಲ್ಲ! ಸೂಕ್ಷ್ಮ ರೇಖೆಯಂತಿರುವ ಈ "ಭಾಷೆ" ಎಂಬ ಬಂಧ ಬೇರೆ ಬೇರೆ ಆಸಕ್ತಿ, ಬೇರೆ ಬೇರೆ ಅಭಿಪ್ರಾಯಗಳ ಬುತ್ತಿಯನ್ನು ಕಟ್ಟಿ ತರುವ ನಮ್ಮನ್ನೆಲ್ಲ ಅದು ಹೇಗೆ ಹಿಡಿದಿಟ್ಟಿದೆ ಎಂಬುದು ಒಮ್ಮೊಮ್ಮೆ ಆಶ್ಚರ್ಯ ಹುಟ್ಟಿಸುತ್ತದೆ.
ಕಾರ್ಯಕ್ರಮದ ದಿನದಂದು ಕಂಡುಬಂದ ಮುಖಗಳು ಸಂಖ್ಯೆಯ ಲೆಕ್ಕದಲ್ಲಿ ನಮಗೆ ಕೊಂಚ ಬೇಸರ ಮೂಡಿಸಿದರೂ, ಆ ದಿನ "ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ"ಯ ಸುತ್ತ ಒಂದು ಉತ್ತಮ ಚರ್ಚೆ ನಡೆದದ್ದು ಖುಷಿ ಕೊಟ್ಟಿತು. ಉದ್ದೇಶ ಇದ್ದದ್ದು ಹೀಗೆ ಬರೆಯಲು ಇಂಟರ್ನೆಟ್ ಬಳಸುವುದು ಹೇಗೆ? ಮತ್ತು ತದನಂತರ ಇಂಟರ್ನೆಟ್ಟಿನಿಂದ ಹೊರಗೆ, ಇಂಟರ್ನೆಟ್ ವ್ಯಾಪ್ತಿಯಿಲ್ಲದೆಡೆಗೆ ಅದನ್ನು ವಿಸ್ತರಿಸುವುದು ಹೇಗೆ ಎನ್ನುವುದರ ಸುತ್ತ. ಚರ್ಚೆ ನಡೆದದ್ದು ಭಾನುವಾರ ೨೯, ೨೦೦೯, ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ, ಕನ್ನಿಂಗ್ಹಾಮ್ ರೋಡಿನಲ್ಲಿ.

ಅಂದು ನಾವು ಕನ್ನಿಂಗ್ಹಾಮ್ ರೋಡಿಗೆ ಹೊರಟು ನಿಂತಾಗ ನಮಗದು 'ಮತ್ತೊಂದು ಭಾನುವಾರ'. ಆದರೂ ಎಷ್ಟು ಜನ ಬರುತ್ತಾರೋ, ಯಾರು ಯಾರು ಬರುವರು ಎಂಬ ಕುತೂಹಲ ನಮಗೆ! ನಾವುಗಳು ಎಲ್ಲರಿಗೂ ಆಮಂತ್ರಣ ಕಳುಹಿಸಿದ್ದೇ ಕೊಂಚ ತಡವಾಗಿ! ಕಾರ್ಯಕ್ರಮದ ಬಗ್ಗೆ ತಿಳಿಸಲು ಒಂದು ವಾರ ಕೂಡ ಇರಲಿಲ್ಲ. ಅದಕ್ಕೆ ಸೇರಿಕೊಂಡಂತೆ ಮೂರು ದಿನ ರಜೆ ಬೇರೆ - ಯುಗಾದಿ, ಶನಿವಾರ ಮತ್ತು ಭಾನುವಾರ!

ಆದರೆ ಆ ಭಾನುವಾರ ವಿಶೇಷ ದಿನವೆನಿಸಿದ್ದು ಹೌದು. ನಮ್ಮ ನೆಚ್ಚಿನ ವಿಷಯಗಳು - ತಂತ್ರಜ್ಞಾನ, ಕನ್ನಡ ಇವುಗಳೊಡನೆ - ಅಂತರ್ಜಾಲ ಕೂಡ ಬೆರೆತದ್ದಲ್ಲದೆ ಅವುಗಳ ಕುರಿತು ಉತ್ತಮ ಚರ್ಚೆ ನಡೆದದ್ದು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಾಗಿ ಉಳಿಯುವ ನಿಮಿಷಗಳು.

ಒಂಟಿ ಮನದೊಳಗೊಂದು ಸುತ್ತು...

ಕಿಕ್ಕಿರಿದ ಓಪಿಡಿ
ಕೈಯಲ್ಲೊಂದು ಕೈ ಪಿಡಿ
ಎದುರಿಗೆ ಆಕಾಶದೆತ್ತರಕ್ಕೆ ಫೈಲುಗಳು
ಎಣಿಸಲಾರದಷ್ಟು ರೋಗಿಗಳು, ಅವರ ಕಷ್ಟ ಕಾರ್ಪಣ್ಯಗಳು
ಆದರು ಮನಸ್ಸು ಇಲ್ಲಿಲ್ಲ,
ಕಿವಿಗೆ ಕೇಳಿಸೋದು, ಮಿದುಳಿಗೆ ತಾಕುತಿಲ್ಲ
ಯಾಕೆ ಹೀಗಾಯ್ತು ಇವತ್ತು
ನೆನ್ನೆ ತನಕ ಎಲ್ಲಾ ಚೆನ್ನಾಗೆ ಇತ್ತು
ಹೀರಿ ಬರೋಣ ಸ್ವಲ್ಪ ಕಾಫಿ
ಜತೆಗೆ ಹಾಗೆ ಮಿಟಾಯಿ ಟಾಫಿ