ಅಮ್ಮ ನಾನಿಂದು ಆದೆ ಧನ್ಯ!!!
ಅಮ್ಮ ನಾನು ನಿಮ್ಮ ಮಗನಾದುದಕೆ
ನಿಮಗೆ ಅನಿಸಿರಬಹುದೇನೋ ಅನ್ಯ
ಆದರೆ ನಾನು ನಿಮ್ಮ ಮಗನಾದುದಕೆ
ನಿಜವಾಗಿಯೂ ನಾನಿಂದು ಆದೆ ಧನ್ಯ
ನಿಮ್ಮ ನೆನಪಾದಾಗ ನಾ ನಿನ್ನೆ ಬರೆದ
ನಾಲ್ಕು ಸಾಲುಗಳು ಕವನವಾಯಿತಮ್ಮ
ಆ ಕವನ ಓದಿದ ಓದುಗರ ಕಣ್ಣುಗಳೂ
ಕೇಳಿ ಅದೋಕೋ ತೇವವಾಯಿತಮ್ಮ
ನನ್ನಿಂದಾಗಿ ಅಲ್ಲ ನಿಮ್ಮ ನನ್ನಿಂದಾಗಿ
ಅವರಿಗವರ ಮಾತಾಪಿತರ ನೆನಪಾಯ್ತು
- Read more about ಅಮ್ಮ ನಾನಿಂದು ಆದೆ ಧನ್ಯ!!!
- 5 comments
- Log in or register to post comments