ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ಬಿರುಗಾಳಿ' ಹಾಡುಗಳು

ನಿನ್ನೆ ನನ್ನೊಬ್ಬ ಗೆಳೆಯನ ಜೊತೆ ಚಾಟ್ ಮಾಡ್ತಿದ್ದಾಗ "ಕನ್ನಡದಲ್ಲಿ ಹೊಸ ಹಾಡುಗಳಲ್ಲಿ ಯಾವುದು ಚೆನ್ನಾಗಿದೆ?" ಅಂತ ಕೇಳ್ದೆ. "ಬಿರುಗಾಳಿ ಮಗ" ಅಂದ ಅವನು. ಸರಿ ಕೇಳೊಣಾಂತ ಬಿರುಗಾಳಿ ಚಿತ್ರದ ಎಲ್ಲಾ ಹಾಡ್ಗಳ್ನ ಡೌನ್ಲೋಡ್ ಮಾಡಿ ಫೋನ್-ಗೆ ಹಾಕ್ಕೊಂಡೆ.
ಕೇಳಿದ್ಮೇಲ್ ನಂಗನಿಸಿದ್ದು:

ಮಿಡತೆಯ ಗೋಳು

ಚೆಲುವೆಲ್ಲಾ ತನ್ನಲ್ಲಿದೆ
ಎಂದುಲಿಯಿತು ಹೂವು

ಹೂವ ಮುಡಿದ ಬಾಲೆ
ಚೆಲುವೇ ತಾನೆಂದಳು

ಹೂವ ದೈವಕ್ಕೆ ಮುಡಿಸಿದ ಭಕ್ತ
ಭಕ್ತಿಯ ಚೆಲುವು ತನ್ನದೆಂದನು

ಬೋಳು ಗಿಡವ ಕಂಡ ಮಿಡತೆ
ಬಡವನ ಹೊಟ್ಟೆಗೆ ಹೊಡೆದರೆಂದಿತು!

ಪ್ರೇರಣೆ: ಹೂವು ಚೆಲುವೆಲ್ಲಾ ತಂದೆಂದಿತು ಹಾಡು, ಪಾಲಾಅವರ ಮಿಡತೆ ಫೋಟೋ.

"ದೇವರ ರಾಜಕೀಯ"

ಅದೊ೦ದು ರಾಜ್ಯ,ರಾಜ್ಯಕೊಬ್ಬ ರಾಜ, ಪ್ರಜೆಗಳಿಗಾಗಿ ನಡೆಸಿದ ರಾಜ್ಯಭಾರ,
ರಾಜನ ಮೆಚ್ಚಿ ಜನ ಮರೆತರು ದೇವರ. ದೇವರಿಗೂ ಕಾಡಿತ್ತು ಅಸೂಯೆ, ಮೂಡಿತ್ತು ಚಿ೦ತನೆ, ಜನದಿ ತನ್ನ ಅಸ್ತಿತ್ವ ಕಾಯ್ದುಕೊಳ್ಳುವ ಕುರಿತ ಯೋಚನೆ,ಮೂಡಿತ್ತಾಗ ಒ೦ದು ಆಲೋಚನೆ, ಮನ ನೀಡಿತ್ತು ಅನುಮೋದನೆ.

ಶಿವ!

ಅವರವರ ಭಾವಕ್ಕೆ, ಅವರವರ ಭಕುತಿಗೆ, ಅವರವರ ತೆರನಾಗೇ ಇರುತಿಹನು ಶಿವಯೋಗಿ!

ನಮ್ಮಮ್ಮ ಮಗುವಿನಂತೆ ಅತ್ತೇ ಬಿಟ್ಟಿದ್ದರು!!!

ಅದೇಕೋ ಈ ಬಾರಿ ನಮ್ಮಮ್ಮ
ಮಗುವಿನಂತೆ ಅತ್ತೇ ಬಿಟ್ಟಿದ್ದರು
ಹೊರಟು ನಿಂತವನ ಮೈದಡವಿ
ಕೈ ಹಿಡಿದು ತನ್ನತ್ತಲೇ ಸೆಳೆದರು

ಕಳೆದ ಇಪ್ಪತ್ತೊಂಭತ್ತು ವರುಷಗಳಲ್ಲಿ
ಹೀಗಾಗಿದ್ದು ಇದು ಎರಡನೇ ಬಾರಿ
ಅಂದು ಅಪ್ಪಯ್ಯನವರ ಕ್ರಿಯೆ ಮುಗಿಸಿ
ಬರುವಾಗ ಮತ್ತೆ ಈಗ ಈ ಬಾರಿ

ಮೊನ್ನೆ ತನ್ನ ತಂಗಿಯನು ಕಳೆದುಕೊಂಡು
ಮನ ನೊಂದು ಬಡವಾಗಿದ್ದಿರಬಹುದು

ಊರ ಮದುವೆ

ತಲೆಬರಹ ನೋಡಿದಕೂಡಲೇ ಯಾರಾದರೂ ಊರಿಗೆ ಮದುವೆ ಮಾಡ್ತಾರಾ? ಇವರೆಲ್ಲೋ ಹುಚ್ಚರಿರಬೇಕು, ಅನ್ನುವಂತವರೂ ಇರ ಬಹುದು.ಅಂದಹಾಗೆ ನಿಮ್ಮ ಮಗಳನ್ನು ಯಾವ ಊರಿಗೆ ಕೋಟ್ರಿ? ಅಂತಾ ನಮ್ಮ ಕಡೆ ಜನ ಕೇಳ್ತಾರೆ.ಅಂದ್ರೆ ಹೆಣ್ಣನ್ನು ಯಾವುದಾದರೂ ಊರಿಗೇ ಮದುವೆ ಮಾಡಿಕೊಡುತ್ತಾರೇನು? ಆದರೆ ಅದು ರೂಢಿಗೆ ಬಂದು ಬಿಟ್ಟಿದೆ.

ದೇವ್ರು... ನಂಬಿಕೆ ... ಹಾಗೂ ನಮ್ಮಪ್ಪ..

ಸಂಪದದಲ್ಲಿ ಬೇಸಿಗೆಯ ಬಿಸಿಯಲ್ಲಿ ದೇವ್ರು, ನಂಬಿಕೆಗಳ ಬಗ್ಗೆ ಚರ್ಚೆಗಳು ಬಿಸಿಬಿಸಿಯಾಗಿಯೇ ನಡೀತಾ ಇವೆ..
ದೇವ್ರು ಇದ್ದಾನೋ ಇಲ್ಲವೋ ನನ್ಗೆ ಗೊತ್ತಿಲ್ಲಾ... ಅದು ನನಗೆ ಬೇಕಿಲ್ಲಾ...
ಆದ್ರೆ ಅವ್ನೊಬ್ಬನಿದ್ದಾನೆ ಅನ್ನೋ ನಂಬಿಕೆ, ಆ concept ನನ್ನ ಒಂಟಿತನಕ್ಕೆ ತುಂಬಾನೆ ಆತ್ಮಸ್ಥೈರ್ಯ್ಯ ಕೊಟ್ಟಿದೆ...
ಇದು ನನ್ನ ಸ್ವ ಅನುಭವ

ಕೆಂಪಾದವೋ ಎಲ್ಲಾ..

ಇತ್ತೀಚೆಗೆ ರಿಯಾದ್ ಗೆ ಬಂದಿದ್ದಾಗ ಕಂಡುಬಂದ sand storm ನ ಕೆಲ ಚಿತ್ರಗಳು. ಅಂದು ಕೆಲವೊಂದು ಕಡೆ ಸುಮಾರು ನೂರು ಮೀಟರ್ ದೂರಕ್ಕಿಂತ ಹೆಚ್ಚು ಕಾಣುತ್ತಿರಲಿಲ್ಲ. ಎಲ್ಲಾ ಕೆಂಪು ಕೆಂಪು.

ಗಾಳಿಗೆನಾದ್ರು ಬಣ್ಣ ಇದ್ದಿದ್ರೆ ಹೀಗೆ ಇರ್ತಿತ್ತೇನೋ

ಮೊನ್ನೆ ಯುಗಾದಿ ಹಬ್ಬದಂದು...

ಯುಗಾದಿ ಹಬ್ಬಕ್ಕೆ ಊರಿಗೆ ಹೋಗಿದ್ದೆ. ಹಬ್ಬದ ದಿನ ಬೆಳಗ್ಗೆ ಸ್ನಾನ ಮಾಡಿ, ಮಾವಿನಸೊಪ್ಪು ತರಲು ತೋಟಕ್ಕೆ ಹೋಗಿ ಮರ ಹತ್ತಿ ಸೊಪ್ಪು ಕುಯ್ದು ತಂದು ತೋರಣ ಕಟ್ಟಿ ನನ್ನ ಕೆಲಸವಾಯಿತೆಂದು ಟೀ.ವಿ ಹಾಕಿ ಕುಳಿತು ಕಲಾಸಿಪಾಳ್ಯ ನೋಡ್ತಾ ಕೂತ್ಕೊಂಡೆ.

ಅಮೇರಿಕಾದಿಂದೊಂದ್ಲ್ಯಾಪ್ಟಾಪ್ತರ್ಸ್ಬೇಕು, ದಯ್ವಿಟ್ಟ್ಸಹಾಯ ಮಾಡಿ!

ಅಮೇರಿಕಾದಿಂದೊಂದ್ಲ್ಯಾಪ್ಟಾಪ್ತರ್ಸ್ಬೇಕು, ದಯ್ವಿಟ್ಟ್ಸಹಾಯ ಮಾಡಿ!

ಅಮೇರಿಕಾದಿಂದಾ ಯಾರಾದ್ರೂ ಸಂಪದಿಗರು ಸದ್ಯಕ್ಕೆ (ಏಪ್ರಿಲ್ಕೊನೆಯೊಳ್ಗೆ) ಭಾರತಕ್ಕೆ ಬರೋರಿದ್ದು, ಒಂದು ಲ್ಯಾಪ್ಟಾಪ್ತರೋಕ್ಕೆ ಸಾದ್ಯವಿದ್ದು, ಸಹಾಯಮಾಡುವುದಕ್ಕೆ ತಯಾರಿದ್ದಲ್ಲಿ, ದಯವಿಟ್ಟು ತಿಳಿಸಿ. ಒಂದು ಲ್ಯಾಪ್ಟಾಪ್ ಅಲ್ಲಿಂದ ಕೊಂಡು ತರಿಸಬೇಕಾಗಿದೆ.

ಮುಂದಾಗಿ ನನ್ನಿ!

:D