ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನೂರಿನ ರಾಮ ನವಮಿ

ನಾಳೆ ರಾಮ ನವಮಿ.ರಾಮ ನವಮಿ ಅ೦ದಾಕ್ಷಣ ಕಣ್ಮು೦ದೆ ಬರೋದು ಪಾನಕ.ಕೋಸ೦ಬರಿ.ದಿನ ಪೂರ್ತಿ ಬರೀ ಕೋಸ೦ಬ್ರಿ ಪಾನಕ
ಕುಡ್ಕೊ೦ಡು ಹೊಟ್ಟೆ ತು೦ಬಿಸ್ಕೊಳ್ಳೊ ದಿನ.ರಾಮ ಮ೦ದಿರ,ಮಾರುತಿ ಮ೦ದಿರ ಇರೋ ಕಡೆ ಫುಲ್ ಜೋರು , ಹಬ್ಬ.
ನನ್ನೂರು ಅ೦ದ್ರೆ ನೇಟಿವ್ ಬ೦ದು ಚಿತ್ರದುರ್ಗ ಜಿಲ್ಲೆಯ ದೊಡ್ಡಸಿದ್ದವ್ವನ ಹಳ್ಳಿ .ಅಲ್ಲಿ ಊರ ಕಡೆ ಮುಖ ಮಾಡಿರೋ ಹನುಮ ಇದಾನೆ
ಅದ್ರಲ್ಲೇನು ವಿಶೇಷ ಅ೦ದ್ರೆ ಊರ ಕಡೆ ಮುಖ ಮಾಡಿದಾನೆ ಅ೦ದ್ರೆ ಊರನ್ನ ಕಾಯ್ತಾ ಇರ್ತಾನೆ ಅನ್ನೊ ನ೦ಬಿಕೆ.ನನ್ನ ಮುತ್ತಾತ
ಅವನನ್ನ ನೋದಿದ್ರ೦ತೆ.ಆ ಘಟನೆ ನನಗೆ ನನ್ನ ತಾತ ಹೇಳಿದ್ದು .ನನ್ನೂರಲ್ಲಿ ಶೌಚಾಲಯುಗಳು ಇಲ್ಲ ಎಲ್ಲರೂ ಬಯಲಿಗೆ ಹೋಗೋರೆ
ಒ೦ದು ದಿನ ಬೆಳಗ್ಗೆ ಮೂರು ಮೂರುವರೆ ಇರ್ಬೇಕು ಅವಾಗ ಮುತ್ತಾತ ಬಯಲಿಗೆ ಹೋಗೋಣ ಅ೦ತ ಬ೦ದಿದ್ದಾರೆ .ದೊಡ್ಡ ಬಲವಾದ
ಕಾಲುಗಳು ಎರಡು ಚಲಿಸುತ್ತಿರೋ ಹಾಗೆ ಕ೦ಡಿತ೦ತೆ.ಆಶ್ಚ್ರರ್ಯದಿ೦ದ ತಲೆ ಎತ್ತಿ ಮೇಲೆ ನೋಡಿದ್ದಾರೆ ,ದೊಡ್ಡ ದೇಹದ ,ಗದೆ ಹಿಡಿದ
ಊರನ್ನು ಶಾ೦ತ ಕಣ್ಣುಗಳಿ೦ದ ನೋಡುತ್ತಾ ಇರುವ ಹನುಮ ಕ೦ಡನ೦ತೆ.ಅದನ್ನು ಕ೦ಡ ಮುತ್ತಾತ ಮೂಛೆ ಹೋದರ೦ತೆ.ನ೦ತರ ಊರಿನ
ಜನ ಆ ಸಮಯದಲ್ಲಿ ಬಯಲಿಗೆ ಹೋಗುವುದನ್ನೇ ಬಿಟ್ಟರ೦ತೆ.ಮು೦ದೆ ಆ ಸಮಯದಲ್ಲಿ ಹೋದರೂ ಯಾರಿಗೂ ಹನುಮ ಕಾಣಲಿಲ್ಲ
ಅವನಿಗೂ ಜನರ ಮೋಸ ದ್ವೇಷ ನೋಡಿ ಬೇಜಾರು ಬ೦ದಿತೇನೋ.ಬಿಡಿ ಅದು ಹಳೇ ವಿಚಾರ.

ನೀರಿನ ಬಗ್ಗೆ

ನೀರಿನ ಬಗ್ಗೆ ಎಲ್ಲೆಲ್ಲೂ ಹಾಹಾಕಾರ ಕೇಳಿಬರುತ್ತಿದೆ. ಇನ್ನಂತೂ ಬಿಸಿ ಬಿಸಿ ಬೇಸಿಗೆ. ಕರಾವಳಿಯ ಜನರಿಗೆ ಸಂಜೆಯೊಮ್ಮೆ ಸ್ನಾನ ಬೇಕೇ ಬೇಕು. ಸುವಾಸನಾದ್ರವ್ಯಗಳನ್ನು ಉಪಯೋಗಿಸಿ ನೀರನ್ನು ಉಳಿಸಲಾಗುವುದೆ? ಅಥವಾ ಸಂಜೆ ಮಾತ್ರ ಸ್ನಾನ ಮಾಡಿದರೆ ಹೇಗೆ? ನೀರು ಕುಡಿಯುವ ಬದಲು ಎಳೆ ಸೌತೇಕಾಯಿ ತಿಂದರೆ?

ಬಿಸಿಲೇ ಗೊತ್ತಿಲ್ಲದ ಮೇಲೆ ಬೆಳದಿಂಗಳ ಮಾತೇಕೆ...?

ಮೊನ್ನೆ ಉತ್ತರ ಕರ್ನಾಟಕದಲ್ಲಿರುವ ನಮ್ಮ ಹಳ್ಳಿಗೆ ಹೋಗಿದ್ದೆನಲ್ಲ, ಎಂಥ ಬಿಸಿಲು ಅಂತಿರಿ ಅಲ್ಲಿ? ಬಸ್ಸಿಲ್ಲದ ನಮ್ಮೂರಿಗೆ ಎರಡು ಕಿಲೋ ಮೀಟರ್ ನಡೆದು ಹೋಗುವಷ್ಟರಲ್ಲಿ ಸುಟ್ಟ ಸೋರೇಕಾಯಂತಾಗಿಬಿಟ್ಟಿದ್ದೆ. ಅಮ್ಮ ಮಾಡಿಕೊಟ್ಟ ನಿಂಬೆ ಹಣ್ಣಿನ ಪಾನಕ ಕುಡಿಯುವ ತನಕ ಮಾತಾಡಲೂ ಶಕ್ತಿ ಇರಲಿಲ್ಲ. 'ಎನ್ ಬಿಸಿಲಮ್ಮಾ ಇಲ್ಲಿ.ಬೆಂಗಳೂರಿನಲ್ಲಿ ಬಿಸಿಲೇ ಇಲ್ಲ ಗೊತ್ತಾ' ಅಂದೆ.

ಹೆಸರಿಲ್ಲದ ಒಂದು ಡಜನ್ ಮಿಣಿಮಿಣಿ ಮೈಕ್ರೌಮೈಕ್ರೌ ಕಥೆಗಳು. (ಹೆಡ್ಡಿಂಗೇ ಇಷ್ಟುದ್ದ!)

-೧-
ಅಂದು ದೀಪಾವಳಿ ರಾತ್ರಿ. ಕೆಲ ದಿನಗಳ ಹಿಂದಷ್ಟೇ ಪಕ್ಕದಮನೆಗೆ ಬಾಡಿಗೆಗೆ ಬಂದಿದ್ದ ಮುದಿ ಸಂಸಾರದ ಹದಿ ಹರಯದ ಸದಸ್ಯೆಯಾದ ಆಕೆಯ ಮುಖವನ್ನು ಅವಳು ಹಚ್ಚಿದ ನಕ್ಷತ್ರಕಡ್ಡಿಯ ಬೆಳಕಿನಲ್ಲಿ ನಾನು ದಿಟ್ಟಿಸಿದಾಗ ಅವಳೂ ಓರೆಗಣ್ಣಿಂದ ನನ್ನನ್ನು ದಿಟ್ಟಿಸಿದಳು. ಮುಂದಿನ ಒಂದು ಗಂಟೆ ಇಬ್ಬರಿಗೂ ದೀಪಾವಳಿ.

ಪುನರ್ಮಿಲನ : ’ಬಂಕುಮ’ಚಂದ್ರರ ಕಥೆ

ಇದು ’ಬಂಕುಮ’ಚಂದ್ರರ ಕಥೆ.
ಒಂದಾನೊಂದು ಕಾಲದಲ್ಲಿ,
’ನಮ್ಮ ಸಂಸಾರ, ಆನಂದಸಾಗರ’, ಎನ್ನುತ್ತಾ ಚಂದಾಗಿ ಬಾಳುತ್ತಿದ್ದರು ’ಬಂ(ಗಾರಪ್ಪ) ಕು(ಮಾರ) ಮ(ಧು)’ಚಂದ್ರರು.
ಪಸಂದಾಗಿ ಆಳುತ್ತಿದ್ದರು.
ಅದೊಂದು ಕೆಟ್ಟ ಗಳಿಗೆಯಲ್ಲಿ ’ಬಂ-ಕು’ ಮಧ್ಯೆ ದ್ವೇಷ ಅಂಕುರಿಸಿತು.
’ಹೋದರೆಹೋಗು, ನನಗೇನು? ಕೋಪದಿ ತಾಪದಿ ಫಲವೇನು?’ ಎಂದು ಒಬ್ಬರಿಂದೊಬ್ಬರು ದೂರಾದರು.

ಐಪಿಎಲ್ಲೇ ಸತ್ಯ

(ಕುವೆಂಪು ಅವರನ್ನು ನೆನೆದು)

ಎಲ್ಲಾದರು ಇರು ಎಂತಾದರು ಇರು
ಹೆಸರಿಗೆ ಮಾತ್ರ ’ಐಪಿಎಲ್’ ಆಗಿರು
ಐಪಿಎಲ್ಲೇ ಸತ್ಯ
ಐಪಿಎಲ್ಲೇ ನಿತ್ಯ

ಐಪಿಎಲ್ ಎಂಬ ಓ ಮುದ್ದಿನ ಕರು,
ಟಿವಿ ಪ್ರಸಾರವೊಂದಿದ್ದರೆ ನೀ ನಮಗೆ ಕಲ್ಪತರು

ನೀ ಮೆಟ್ಟುವ ನೆಲ ಅದೆ ಅನ್ಯರ ನೆಲ
ನೀ ಆಡುವ ಪಿಚ್ ಧನಲಕ್ಷ್ಮಿ
ನೀ ಮುಟ್ಟುವ ಬ್ಯಾಟ್ ಅದೆ ದುಡ್ಡಿನ ಗಂಟ್
ನೀ ಕುಡಿಯುವ ನೀರ್ ಬಿಸ್‌ಲೇರಿ

ಬ್ಲಾಗಿನಲ್ಲಿ ಪ್ರತಿಕ್ರಿಯೆಗಳು ಮಾಯವಾಗುವುದು ಹೇಗೆ...ಏಕೆ?

ನಿನ್ನೆ ಸುಪ್ರೀತರ ಈ ಕೆಳಗಿನ ಲೇಖನಕ್ಕೆ ನಾನು ಪ್ರತಿಕ್ರಿಯಿಸಿದ್ದೆ. ಅವರೂ ಮರು ಪ್ರತಿಕ್ರಿಯೆ ನೀಡಿದ್ದರು.

http://sampada.net/article/18526

ಆದರೆ ಇಂದು ಮುಂಜಾನೆ ಬಂದು ನೋಡಿದರೆ ಎಲ್ಲವೂ ಮಂಗ ಮಾಯ!

ಇದು ಯಾಕಾಗಿರಬಹುದು? ಹೇಗಾಗಿರಬಹುದು?

ಈ ಪ್ರಶ್ನೆ ನನ್ನ ತಲೆ ತಿನ್ನುತ್ತಿದೆ.

ಯಾರಾದರೂ ಉತ್ತರಿಸುತ್ತೀರಾ?

SkyDiving - ಹೀಗೊಂದು ಅನುಭವ

ನಮ್ಮೂರಲ್ಲಿ ಎಳ್ಳಅಮಾವಾಸ್ಯೆ ಜಾತ್ರೆ. ಬೃಹತ್ ಚಕ್ರ(Giant wheel) ಬಂದಿತ್ತು. ಕೂತ್ಕೊಳ್ತೀನಿ ಅಂತ ಅಮ್ಮನ ಜೊತೆ ಹತ್ತಿದೆ. ಒಂದ್ಸಲ ಮೇಲಿಂದ ಕೆಳಗ್ಬ೦ದಿದ್ದೇ ಬಂತು, ಕೂಗಾಟ, ಕಿರುಚಾಟ, ರೋದನ ಎಲ್ಲ ಪ್ರಾರಂಭ ಆಯ್ತು. ನಿಲ್ಸೋಕೇಳಮ್ಮ ಅಂತ ಅಮ್ಮನ ಬೆಂಬಲ ಬೇರೆ ಕೇಳೋದು. ಅಮ್ಮನ ಯಾವ ಸಮಾಧಾನವು ಪ್ರಯೋಜನಕ್ಕೆ ಬರ್ಲಿಲ್ಲ. ಅದೇ ಮೊದಲು, ಅದೇ ಕೊನೆ. ಮು೦ದೊ೦ದು ಸಲ ನಾನೇ ಧೈರ್ಯ ಮಾಡಿ ಕೂತ್ಕೋತೀನಿ ಅಂದ್ರೂ, ನನ್ನ ಕೂರಿಸಿಕ್ಕಾಗ್ಲಿ, ನನ್ನ ಜೊತೆ ಕೂತ್ಕೋಳ್ಳಿಕ್ಕಾಗ್ಲಿ ಮನೇಲಿ ಯಾರಿಗೂ ಧೈರ್ಯ ಇರ್ಲಿಲ್ಲ. ಇ೦ಥದೊ೦ದು ಹಿನ್ನೆಲೆಯಲ್ಲಿ ಸ್ಕೈ ಡೈವಿಂಗ್!! ಏನ್ ತಮಾಷೆನಾ!!

ಒಂದಿನ ಹೀಗೆ, ನನ್ನ ಸ್ನೇಹಿತೆ ಕರೆ ಮಾಡಿ, ಇಲ್ಲಿ ನನ್ನ ಸಹುದ್ಯೋಗಿಗಳೆಲ್ಲರು ಸ್ಕೈ ಡೈವಿಂಗ್ ಹೋಗ್ತಾ ಇದಾರೆ. ನಾವೂ ಹೋಗೋಣ ಅಂದ್ಲು. ಸರಿ ಇಬ್ರಿಗೂ ಟಿಕೆಟ್ ಬುಕ್ ಮಾಡು ಅಂದೆ. ಹಂಗಂದ್ರೆ ಏನು ಅಂತಾನು ಕೇಳಲಿಲ್ಲ. ಆಮೇಲೆ ಕೆಲಸದ ಮಧ್ಯೆ ಮರೆತೇ ಹೋಗಿತ್ತು. ಹೋಗುವ ಹಿಂದಿನ ದಿನ, ಎಲ್ಲ ರೆಡಿನಾ ಅಂತ ಕರೆ ಬಂತು. ಆಗ ಗೂಗ್ಲಿಸಿದೆ. ಒಂದು ಕ್ಷಣ 'ನಾನ್ಯಾರು' ಅನ್ನೋ ಪ್ರಶ್ನೆ ಮೂಡಿತ್ತು. ಟಿಕೆಟ್ ರದ್ದು ಮಾಡುವ ಅಥವಾ ಬದಲಾಯಿಸೋ ಹಂತ ಮೀರಿತ್ತು!!