ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಪ್ರಿಯಾಂಕಾ-ವರುಣ್ ಕರ್ಮಯೋಗ

ಪ್ರಿಯಾಂಕಾ ಉವಾಚ :
ವರುಣ್ ಗಾಂಧಿ ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಳ್ಳಲಿ.

ಗುಳಿಗೆ ಶಾಸ್ತ್ರೀ ಉವಾಚ :
ವರುಣ್ ಗಾಂಧಿಯು ಭಗವದ್ಗೀತೆಯನ್ನು ಓದಿ ಅರ್ಥಮಾಡಿಕೊಂಡು ಅದರಂತೆಯೇ ನಡೆಯುತ್ತಿದ್ದಾನೆ.

ಗುಳಿಗೆಗಳು

-1-
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ
ಮೂರು ರೂಪಾಯಿಗೆ ಕೆಜಿ ಅಕ್ಕಿ-ಗೋಧಿ!
ಕೊಟ್ಟರೆ ಒಂದು ಪಕ್ಷ ನಾಳೆ
ತಿಂದೋರಿಗೆ ಗ್ಯಾರಂಟಿ ವಾಂತಿ-ಭೇದಿ!

-2-
ಸೌತ್ ಆಫ್ರಿಕಾದಲ್ಲಿ ಐಪಿಎಲ್ ಕ್ರಿಕೆಟ್.
ಇಂಡಿಯಾದಲ್ಲಿ ಟೂರ್ನಿ kicked the ಬಕೆಟ್!
ಅಂದು ಆಫ್ರಿಕದಲ್ಲಿ
eradication of the apartheid.
ಇಂದು ಅಲ್ಲಿ
rehabilitation of the disabled!

-3-
’ಈ ಸಲದ ಚುನಾವಣೇಲಿ
ಮುಖವಾಡಗಳದ್ದೇ ಕಾರುಬಾರಂತೆ.’

ಊರ ಮದುವೆ ಭಾಗ-೨

ನಿನ್ನೆ ನನ್ನ ಬರಹದಲ್ಲಿ ಇಂದಿನ ಕಾಲದಲ್ಲೂ ಶಿಖೆ ಬಿಟ್ಟು, ಪ್ಯಾಂಟ್ ಧರಿಸದ, ತಲೆಕೂದಲು ಕ್ರಾಪ್ ಮಾಡದ, ಅಪ್ಪಟ ಭಾರತೀಯ ಶೈಲಿಯಲ್ಲಿ ಬದುಕುತ್ತೇನೆಂದು ಹೇಳುವ ಹುಡುಗನನ್ನು ಒಬ್ಬ ಓದಿದ ಹುಡುಗಿ ಮದುವೆಯಗಲು ಒಪ್ಪಿರುವ ವಿಚಾರ ಪ್ರಸ್ಥಾಪಿಸಿರುವೆ. ಶಿಖೆ ಬಿಟ್ಟು ,ಕೇವಲ ಪಂಚೆ ಉಟ್ಟು ಶಲ್ಯ ಹೊದ್ದು ವೇದ ಕಲಿಯುವ ಸಹಸ್ರಾರು ವಿದ್ಯಾರ್ಥಿಗಳು ಈಗಲೂ ಇದ್ದಾರೆ.

ಏನ್ ತಿಂದ್ರೀ ??

ಸಂಜೆ ತಂಪು ಗಾಳಿ ಸೇವನೆಗೆ ಹೊರಟಿದ್ದೆ. ಮನಸ್ಸಿಗೆ ಬಂದ ಹಾಡನ್ನು ಗುನುಗುನಿಸುತ್ತಾ ಹಾಗೇ ನೆಡೆಯಲು ವಕ್ರಮೂತಿ ಸುಂದರೇಶ ಸಿಕ್ಕ. ಹಾಗೇ ಅವನೊಡನೆ ಹೆಜ್ಜೆ ಹಾಕುತ್ತಾ ನನಗೇ ಅರಿವಿಲ್ಲದೆ ಕದಂಬ ರೆಸ್ಟೋರೆಂಟ್’ನಲ್ಲಿ ಕುಳಿತಿದ್ದೆ. ನಾನು ಬಂದದ್ದೇ ಊಟಕ್ಕೇನೋ ಅನ್ನುವಂತೆ ಮಾಣಿ ಎರಡು ಊಟ ತಂದಿಟ್ಟ.

ರಾಮನವಮಿಯ ಸಮಯಕ್ಕೆ ಒಂದು ಮಂಗಳ ಸುಳಾದಿ

ಇಂದು ರಾಮನವಮಿ. ರಾಮ ಹುಟ್ಟಿದ ದಿನವೆಂಬ ನೆನಪಿನಲ್ಲಿ ಮಾಡುವ ಹಬ್ಬ. ಮಂಗಳಕರವಾದ ದಿನವೆಂಬ ನಂಬಿಕೆ. ಇಂತಹ ದಿನಕ್ಕೆ ತಕ್ಕಂತೆ, ಒಂದು ಮಂಗಳಕರ ಸಂಗೀತ ರಚನೆಯನ್ನುವಿವರಿಸೋಣ ಎನ್ನಿಸಿತು.

ಲಿನಕ್ಸಾಯಣ - ೪೮ - ಫ್ರೀ ಸಾಫ್ಟ್ವೇರ್ ಫೌಂಡೇಶನ್ ಅಂದರೇನು?

ಫ್ರೀ ಸಾಫ್ಟ್ವೇರ್ ಫೌಂಡೇಶನ್ (ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ) (ಎಫ್ ಎಸ್ ಎಫ್) ಗ್ನೂ ಯೋಜನೆಗೆ ಮೂಲ ವ್ಯವಸ್ಥೆಯ ಹೊಣೆಗಾರನಾಗಿದೆ. ಎಫ್ ಎಸ್ ಎಫ್ ಸಂಘ ಸಂಸ್ಥೆಗಳಿಂದ ಅಷ್ಟೇನೂ ದೇಣಿಗೆಯನ್ನು ಪಡೆಯುವುದಿಲ್ಲ, ಆದರೆ ನಮ್ಮಂತಹವರ ವೈಯುಕ್ತಿಕ ಸಹಾಯವನ್ನು ಬೆಂಬಲವಾಗಿಟ್ಟುಕೊಂಡಿದೆ.

ಲಿನಕ್ಸಾಯಣ - ೪೭ - ಏನಿದು ಸ್ವತಂತ್ರ ತಂತ್ರಾಂಶ?

ಸ್ವತಂತ್ರ ತಂತ್ರಾಂಶ” ಸ್ವಾತಂತ್ರ್ಯತೆಯ ಅಂಶ, ಬೆಲೆಯಲ್ಲ. ಇದನ್ನ ಅರಿಯಲು ನೀವು “ ಸ್ವತಂತ್ರ ಸಂವಾದ ” ದಲ್ಲಿನ “ಸ್ವತಂತ್ರ ” ಎಂಬುದಾಗಿ ಅರ್ಥೈಸಿಕೊಳ್ಳಬೇಕು, “ಉಚಿತ ಬಿಯರ್ ” ನಲ್ಲಿನ “ಉಚಿತ ” ವೆಂಬಂತಲ್ಲ.

ಲಿನಕ್ಸಾಯಣ - ೪೬ - ಏನಿದು ಗ್ನೂ?

ಗ್ನೂ ಯೋಜನೆಯನ್ನು ೧೯೮೪ ರಲ್ಲಿ ಯುನಿಕ್ಸ್ ಮಾದರಿಯ ಕಂಪ್ಯೂಟರ್ ತಂತ್ರಾಂಶ ಅಭಿವೃದ್ಧಿಗೊಳಿಸಲು ಪ್ರಾರಂಬಿಸಲಾಯಿತು, ಅದೇ ಸ್ವತಂತ್ರ ತಂತ್ರಾಂಶ.

ಶ್ರೀರಾಮ ನವಮಿಯ ದಿವಸ

 ರಾಮನಾಮಾಮೃತದ ಜೊತೆ ಜೊತೆಗೆ

ನೀರೊಸರುವ ಹಣ್ಣುಗಳ ನೈವೇದ್ಯ

ಜೇನು, ಕಾಯಿತುರಿ, ಸಕ್ಕರೆಯಾರೋಗಣೆ

ಬಡಬಾಗ್ನಿಗೆ ಸಿಕ್ಕ ಎಲ್ಲವೂ ಭಸ್ಮ.

ಕಾದ ಕಾವಲಿ ಮಣ್ಣ ಮೇಲಿನ ಪದರ

ಸೀದು ಕರಕಲಾಗುತ್ತಿದೆ ಜೀವದಾಧಾರ