ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾಲಕ್ಕೆ ತಕ್ಕಂತೆ

1980
ಸುನಂದ: ಏನತ್ತೆ ಅನ್ನಾನ ಕುಕ್ಕರನ್ನಲ್ಲಿ ಮಾಡಿ ಚೆನ್ನಾಗಿ ಬರುತ್ತೆ ಅಂತ ಹೇಳಿದ್ರೆ ಮಾಡೇ ಇಲ್ಲ
ಶಾರದಮ್ಮ: ನಂಗೆ ಒಲೇಲಿ ಅಡಿಗೆ ಮಾಡೆ ರೂಡಿ ಕಣೇ ಇದೇನೋ ಕುಕ್ಕರ್‌ನಲ್ಲಿ ನೀರು ಹಾಕೋದು, ಅದೂ ಇದೂ ಎಲ್ಲಾ ಬರೋದಿಲ್ಲ
ಸುನಂದ : ಅತ್ತೆ ಕಾಲಕ್ಕೆ ತಕ್ಕ ಹಾಗೆ ನಡೀಬೇಕು. ನೋಡಿ ನಿಮಗೆ ಫೋನ್ ಆಪರೇಟ್ ಮಾಡೋಕೆ ಬರೋದಿಲ್ಲ. ಟಿವಿ ನೋಡಿದ್ರೆ ಚೇಂಜ್ ಮಾಡೋಕೂ ಬರಲ್ಲ

ಪ್ಯಾನಿಂಗ್

ವೀಡಿಯೋ ಚಿತ್ರೀಕರಣವಾದರೆ ಚಲಿಸುವ ವಸ್ತುವನ್ನು ಹಿಂಬಾಲಿಸಿ ಅದರ ಚಲನೆಯನ್ನು ಸೆರೆ ಹಿಡಿದು, ವೀಕ್ಷಕರ ಮನದಲ್ಲಿ ಆ ಚಲನೆಯ ಪರಿಣಾಮವನ್ನು ಬಿಂಬಿಸಬಹುದು. ಸ್ಥಬ್ದ ಛಾಯಾಗ್ರಹಣದಲ್ಲಿ ಚಲಿಸುವ ವಸ್ತುವಿನ ವೇಗಕ್ಕನುಗುಣವಾಗಿ Shutter Speed ಹೆಚ್ಚಿಸಿಕೊಂಡು ಅದರ ಚಲನೆಯನ್ನು ಸ್ಥಬ್ದಗೊಳಿಸಿ ಚಿತ್ರ ಸೆರೆಹಿಡಿಯುವುದು ವಾಡಿಕೆ. ಪರಿಣಾಮ, ಕೆಳಗಿನ ಚಿತ್ರದಂತೆ ಮುನ್ನೆಲೆಯ ಜೀಪು, ಅದರ ಹಿನ್ನೆಲೆ ಎಲ್ಲವೂ ಸ್ಪಷ್ಟವಾಗಿ ಚಿತ್ರಿತವಾಗುವುದು. ಇಲ್ಲಿ ಜೀಪು ಹೊರಬಿಡುತ್ತಿರುವ ಹೊಗೆಯಿಂದ ಅದು ಚಲಿಸುತ್ತಿರಬಹುದೇನೋ ಎಂದು ಊಹಿಸಬಹುದಾದರೂ ಆ ಚಲನೆಯ ಪರಿಣಾಮ ಚಿತ್ರದಲ್ಲಿ ಮೂಡಿಲ್ಲ.

ಕಣ್ಮುಚ್ಚಲಿದೆ ‘ಸಂಪದ’

ಸಂಪದ ನಿರ್ವಹಣಾ ಮಂಡಳಿ, ಎಲ್ಲ ಸಂಪದಗರಿಗೂ ಹಾಗೂ ಸಂಪದಗಿತ್ತಿಯರಿಗೂ ಮೂರ್ಖರ ದಿನದ ಶುಭಾಶಯಗಳು.

‘ಸಂಪದ’ವನ್ನು ಮುಚ್ಚುವ

ಎಂದು ಏಪ್ರಿಲ್ ಫೂಲ್ ಮಾಡುವ

ನಿಮ್ಮ ಹುನ್ನಾರಕ್ಕೆ ನಮ್ಮ

ಶುಭ ಹಾರೈಕೆಗಳನ್ನು ಹೇಳುವ

- ನಾಸೋ

ಮೌನವೆಂಬ ಒಡವೆ

ಅರಿವಿಲ್ಲದಿರುವುದ ಮುಚ್ಚಿಡಲೆಂದೇ
ಸರಸಿಜಭವ*ನು ಕೊಟ್ಟಿಹನಲ್ಲ!
ಧರಿಸುವುದೊಳಿತು ಮೌನದ ಒಡವೆಯ
ಅರಿತವರೆ ಸುತ್ತಲು ನೆರೆದಿರುವಲ್ಲಿ

ಸರಸಿಜಭವ = ತಾವರೆಯಲ್ಲಿ ಹುಟ್ಟಿದವನು, ಬ್ರಹ್ಮ

ಸಂಸ್ಕೃತ ಮೂಲ: (ಭರ್ತೃಹರಿಯ ನೀತಿಶತಕದಿಂದ)

ಏಪ್ರಿಲ್ ಒಂದು- ಎಲ್ಲರ ದಿನ!

ಮತ್ತೊಂದು ಏಪ್ರಿಲ್ ಒಂದು ಬರುತ್ತಿದೆ. ಏಪ್ರಿಲ್ ಒಂದು ಬರುವುದು ವರ್ಷಕ್ಕೆ ಒಂದೇ
ಸಾರಿಯೇ ಆದರೂ ಆ ದಿನದ ಮಹತ್ವವನ್ನು ಅಲ್ಲಗಳೆಯಲಾಗದು. ಆ ದಿನವನ್ನು 'ಮೂರ್ಖ'ರಿಗಾಗಿ
ಮೀಸಲಿಟ್ಟಿರುವುದು ನಿಜಕ್ಕೂ ಅಭಿನಂದನಾರ್ಹವಾದ ಹಾಗೂ ಅತ್ಯಂತ ಸೂಕ್ತವಾದ ಸಂಗತಿ.
ಜಗತ್ತಿನಲ್ಲಿ ಎಂಥೆಂಥವರಿಗೋ ಒಂದಿಡೀ ದಿನವನ್ನು ಮೀಸಲಿಡುವ ಪರಿಪಾಠ ಇದೆ.

ಏಪ್ರಿಲ್ ಒಂದರ ವ್ಯಕ್ತಿ: ನಾಡಿನ ಮತದಾರ!


ಈ ಹಿಂದೆ ಯಾರೂ ಮಾಡಿರದಿದ್ದ ಪ್ರಯತ್ನಕ್ಕೆ ‘ನಗೆ ನಗಾರಿ ಡಾಟ್ ಕಾಮ್’ ಕೇವಲ ಕೈಯನ್ನು ಮಾತ್ರ ಹಾಕಿರುವ ವಿಚಾರವನ್ನು ಹಿಂದೆ ತಿಳಿಸಿದ್ದೆವು.
ಪ್ರತಿಷ್ಠಿತ ಸಂಸ್ಥೆಗಳು ಪೀಟಿಕಾ ವರ್ಷದ ವ್ಯಕ್ತಿ, ಸನ್ ಫಾಸ್ಟ್ ಉತ್ತಮ ನಟ, ಸಾಯಿ

ಕಣ್ಮುಚ್ಚಲಿದೆ 'ಸಂಪದ'

ಸದಸ್ಯರ ಗಮನಕ್ಕೆ:

ಚುನಾವಣೆಯ ಸಮಯ ಅಂತರ್ಜಾಲದಲ್ಲಿ ಬೇಡದ ಸುದ್ದಿ ಹರಡಬಲ್ಲ ಬ್ಲಾಗುಗಳು, ಅಂತರ್ಜಾಲ ಸಮುದಾಯಗಳು ಕಾರ್ಯನಿರ್ವಹಿಸಕೂಡದು ಎಂದು ಎಲೆಕ್ಷನ್ ಕಮೀಶನ್ ಹೊರಡಿಸಿರುವ ವಿಶೇಷ ಆದೇಶವನ್ನು ಅನುಸರಿಸಿ ಸರ್ಕಾರ ಕನ್ನಡದಲ್ಲೂ ಹಲವಾರು ವೆಬ್ ಸೈಟಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ.

ಮೂಲ ಆದೇಶದಲ್ಲಿ "ಚುನಾವಣೆ ಸಮಯ ಸಾಮಾಜಿಕ ಹಾಗು ರಾಜಕೀಯ ಅಭದ್ರತೆಗೆ ಈ ವೆಬ್‌ಸೈಟ್‌ಗಳು ಕಾರಣವಾಗಿರುವುದರಿಂದ ಈ ಕ್ರಮವನ್ನು ತ್ವರಿತವಾಗಿ ಕೈಗೊಳ್ಳಬೇಕಾಗಿದೆ" ಎಂಬ ಕಾರಣ ಕೊಡಲಾಗಿದೆ.

ಕರ್ನಾಟಕ ಸರ್ಕಾರದ ಈ ಆದೇಶವನ್ನು ತೀವ್ರವಾಗಿ ಪರಿಗಣಿಸಿ ಪಾಲಿಸದ ವೆಬ್‌ಸೈಟ್ ಮಾಲಿಕರನ್ನು ಬಂಧಿಸಲು ನಿರ್ಧರಿಸಿದೆ. ಈ ಸಲುವಾಗಿ 'ಸಂಪದ'ದ ನಿರ್ವಹಣೆ 'ಸಂಪದ'ದಲ್ಲಿ ನಡೆದಿರುವ ಹಲವಾರು ಮಾತು, ಚರ್ಚೆಗಳನ್ನು ಕೂಡಲೆ ಅಳಿಸಿ ಹಾಕುವುದರ ಜತೆಗೆ ಮೂರು ದಿನಗಳ ಒಳಗೆ ಇಡೀ ವೆಬ್ಸೈಟನ್ನು ಮುಚ್ಚುಹಾಕುತ್ತಿದ್ದೇವೆಂದು ಅಧಿಕೃತವಾಗಿ ಈ ಮೂಲಕ ತಿಳಿಸುತ್ತ ಖೇದ ವ್ಯಕ್ತಪಡಿಸುತ್ತಿದ್ದೇವೆ.

- 'ಸಂಪದ' ನಿರ್ವಹಣೆ

(ಈ ಸೂಚನೆ [:http://sampada.net/article/8137|ಹೋದ ವರ್ಷ ರೆಡಿ ಮಾಡಿದ] 'ಅನಿವಾಸಿ'ಯವರಿಗೆ 'ಸಂಪದ'ದ ಸಮಸ್ತ ಸದಸ್ಯರ ಪರವಾಗಿ ವಂದನೆಗಳು).

ಅಂತರ್ಜಾಲದಲ್ಲಿ ಬ್ಯಾಂಕಿಂಗ್

"ನಾಳೆ ಮುಂಗಡ ತೆರಿಗೆ ಪಾವತಿಗೆ ಕೊನೆಯ ದಿನ,ನೆನಪಿದೆ ತಾನೆ?" ಸಂಜೆ ಕ್ಲಿನಿಕ್ ಮುಗಿಸಿ ಮನೆಗೆ ಹೋಗುವ ಸಮಯದಲ್ಲಿ ಆಡಿಟರ್ ಇಂದ ದೂರವಾಣಿ ಕರೆ. ರಾತ್ರಿ ಊಟ ಮುಗಿಸಿ ,ಲ್ಯಾಪ್ ಟಾಪ್ ತೆರೆದು ಬ್ರಾಡ್ ಬ್ಯಾಂಡ್ ಹಾಕುತ್ತಿದ್ದಂತೆ ಔಟ್ಲುಕ್ ನಿಂದ ನೆನಪಿಸುವ ಮೆಮೊ- ಮೊಬೈಲ್ ಬಿಲ್ ಪಾವಥಿಸಬೇಕು, ಎಲ್ ಐ ಸಿ ಪ್ರೀಮಿಯಮ್ ಕಟ್ಟುವ ಕೆಲಸ ಬಾಕಿ ಇದೆ!