ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶುರುವಾತಿನ ಪ್ರಲಾಪಗಳು...

ಇವು ನೋಡಿ ನಾ ಹುಡುಗನಾಗಿದ್ದಾಗ(ಈಗಲೂ ಹುಡುಗುತನ ಉಳಿಸಿೊಳ್ಳುವ ಪ್ರಯತ್ನದಲ್ಲಿಯೇ ಇರುವೆ) ಬರೆದ ಸಾಲುಗಳು. ಇವಕ್ಕೇನು ಹನಿ ಅನ್ನಬೇಕೋ
ಚುಟುಕ ಅಂತ ಕರೀಬೇಕೋ ಗುತ್ತಿಲ್ಲ. ಓದಿ ನೋಡ್ರಿ ಬ್ಯಾಸರಿಕಿ ಬಂದ್ರ ಬೈಯ್ಯುವುದು ಮರೀಬ್ಯಾಡ್ರಿ...

೧) ನನ್ನ ಮನದ ಖಾಲಿ
ಹಾಳೆಗಳ ಮೇಲೆ ನಿನ್ನ ನೆನಪು
ಕವಿತೆ ಬರೆದಿದೆ...

"ಏನು ಪ್ರಯೋಜನ??"

ಏನು ಪ್ರಯೋಜನ
ಇಲ್ಲಿ ಹೇಳಿ ಕೇಳಿ...
ಹೊಳೆಯೆಲ್ಲಾ ಕೊಳೆಯಾಗಿದೆಯಿಲ್ಲಿ
ನೆಮ್ಮದಿಯ ಬೆಳೆ ಬೆಳೆಯಲಾಗುತ್ತಿಲ್ಲವೆಲ್ಲಿ... !! |ಪ|

ಎಲ್ಲಿ ಕೇಳಲಿ ಇಲ್ಲಿ ನ್ಯಾಯವನು?
ಕಣ್ತೆರೆದರೆ ಕಾಣುವಷ್ಟೊ.. ಅನ್ಯಾಯವೇ.
ಹೋರಾಡಲು ಹೋದರೆ
’ಫ್ರೀ’ಯಾಗಿ ಸಿಗುವುದಿಲ್ಲಿ "ಗಾಂಧೀ"ಯೆಂಬ ಪಟ್ಟ |೧|

ಕೇಳಲಿ ಯಾರನ್ನು ಇಲ್ಲಿ
ಸುಗಂಧದ ವಾಸನೆ ಹೇಗಿತ್ತೆಂದು?
ಇಲ್ಲಿ ಎಲ್ಲರೂ ದುರ್ವಾಸನೆಯೆನ್ನೆ
ಉಸಿರುತ್ತಿರುವಾಗ...... |೨|

ಒಗ್ಗಟ್ಟಲ್ಲಿ ಬಲವಿದೆ ಎಂಬುದು
ಇಲ್ಲಿ ಎಳ್ಳಷ್ಟೂ ಸುಳ್ಳಲ್ಲ
ಅದೇ ದುರ್ಜನರ ಒಗ್ಗಟ್ಟೆ,
ಒಬ್ಬ ಸಾಮಾನ್ಯಂಗೆ ಶೂಲವಾಗುವುದ ಇಲ್ಲಿ ಯಾರೂ ಕೇಳಲ್ಲ |೩|

ಅಭಿವೃದ್ಧಿಯಾಗಿದೆ ದೇಶ ಒಪ್ಪುತ್ತೇನೆ

ವಿಜ್ಞಾನಿ ಮತ್ತು ಸೌಂದರ್ಯ : ರಿಚರ್ಡ್ ಫೆಯ್ನ್ ಮನ್ ಚಿಂತನೆ

ರಿಚರ್ಡ್ ಫೆಯ್ನ್ ಮನ್  ಒಬ್ಬ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಮತ್ತು ನಾವೆಲ್ಲಾ ಕಂಡ ಉತ್ತಮ ದಾರ್ಶನಿಕರಲ್ಲಿ ಒಬ್ಬ. ಬೂಟಾಟಿಕೆ ಮತ್ತು ಡಂಭಾಚಾರವನ್ನು ವಿರೋಧಿಸುತ್ತಿದ್ದ ಫೆಯ್ನ್ ಮನ್ ತಮ್ಮ ನೇರ ನಡೆ ನುಡಿಗಳಿಂದ, ನಿಷ್ಟುರತೆಯಿಂದ ಬಹಳ ಪ್ರಸಿದ್ಧ. (ನಮ್ಮ ಕಾರಂತಜ್ಜ ಇದ್ದ ಹಾಗೆ). ಕೊನೆಯ ದಿನಗಳ ವರೆಗೂ ಕುತೂಹಲ ಮತ್ತು ವ್ಯವಸ್ಥೆಯ ವಿರುಧ್ಧ ಸಿಟ್ಟನ್ನು ಉಳಿಸಿಕೊಂಡು ಬಂದಿದ್ದ ಫೆಯ್ನ್ ಮನ್ ರ ಜೀವನವನ್ನು ತಿಳಿಯಲು Surely you are joking Mr. Feynmann ಎಂಬ ಬಹಳ ಹಾಸ್ಯಭರಿತ ಮತ್ತು ಮನಮುಟ್ಟುವ ಪುಸ್ತಕವನ್ನು ಆಸಕ್ತಿ ಇರುವವರು ಓದಬಹುದು. ವಿಕಿಪೀಡಿಯಾ ಪೇಜಿನ ಕೆಳಗೆ ಮತ್ತು ಯೂಟ್ಯೂಬಿನಲ್ಲಿ ಅನೇಕ ವೀಡಿಯೋಗಳು ಕೂಡ ಲಭ್ಯ ಫೆಯ್ನ್ ಮನ್ ಬಗ್ಗೆ.
ಫೆಯ್ನ್ ಮನ್ ರವರ ಕೆಲವು ವಿಚಾರಗಳನ್ನು ಭಾಷಾಂತರ ಮಾಡೋಣ ಎನಿಸಿತು. ಇದರಲ್ಲಿ ಮೊದಲ ಪ್ರಯತ್ನ ಇಲ್ಲಿದೆ. ಯಾರಿಗಾದರೂ ಇದು ಉಪಯುಕ್ತ ಎನಿಸದರೆ ಮುಂದುವರೆಸುವ ವಿಚಾರವಿದೆ.  What do you care what other people think? ಪುಸ್ತಕದಿಂದ ಆಯ್ದ ಕೆಲವು ಪ್ಯಾರಗಳ ಅನುವಾದ ಇಲ್ಲಿದೆ. ಮೂಲ ಪಾಠ ಅಮೆಜಾನ್ ಪುಸ್ತಕ preview ನಲ್ಲಿ ನೋಡಬಹುದು. ಪುಸ್ತಕದ ಮೊದಲ ಪುಟದಲ್ಲೇ ಈ ಪ್ಯಾರಗಳುಇವೆ.

ಪ್ರೀತಿಯ ದೃಶ್ಯ ..... ನಿನಗೆ ಜನುಮದಿನದ ಶುಭಾಶಯಗಳು

ನಲ್ಮೆಯ ಸಂಪದಿಗರೇ, ನಾಳೆ ನನ್ನ ಒಲವಿನ ತಂಗಿ ದೃಶ್ಯಳ ಹುಟ್ಟುಹಬ್ಬ . ನಿಮಗೆಲ್ಲಾ ತಿಳಿದಿರುವ ಹಾಗೇ ಅವಳೊಂದು ಚೈತನ್ಯದ ಚಿಲುಮೆ . ಸದಾ ಚಟುವಟಿಕೆಯ ಪಾದರಸ.... ತನ್ನ ಮಾತುಗಳಲ್ಲೇ ಸೆಳೆಯುವ ಕಾಂತೀಯ ವ್ಯಕ್ತಿತ್ವ. ಹೇಳಿದಷ್ಟೂ ಸಾಲದು . ಇರಲಿ , ನಿಮ್ಮೆಲ್ಲರ ಉಪಸ್ಥಿತಿಯಲ್ಲಿ ನಾನೇ ಮೊದಲಿಗೆ ಅವಳಿಗೆ ಶುಭಾಶಯಗಳನ್ನು ಹೇಳಬೇಕೆನ್ನಿಸಿತು ಅದಕ್ಕಾಗಿ ಈ ಪತ್ರ.......

ಮತ್ತೆ ನನ್ನ ಮೂರ್ಖನನ್ನಾಗಿಸಬೇಡಿ!

ಮೂರ್ಖರ ದಿನದಂದು ನನ್ನ
ಮತ್ತೆ ಮೂರ್ಖನನ್ನಾಗಿಸಬೇಡಿ

ನಿಮ್ಮ ಸಮಯ ನಿಮ್ಮ ಶಕ್ತಿಯ
ಹೀಗೆ ವ್ಯರ್ಥಗೊಳಿಸಲೇ ಬೇಡಿ

ಮೂರ್ಖನೇ ಹಿಂದಿನಿಂದಲೂ
ನಿಜ ಇಂದು ಉಳಿದಿಲ್ಲ ಬಾಕಿ

ಮೂರ್ಖನಾಗುತ್ತ ಬಂದಿದ್ದೇನೆ
ನಾಯಕರುಗಳಿಗೆ ಮತ ಹಾಕಿ

ಇದೇನ ಸಭ್ಯತೆ ಇದೇನ ಸಂಸ್ಕೃತಿ...

ನಿನ್ನೆ ಕೆಲಸ ಮುಗಿಸಿಕೊಂಡು ಬಸ್ಸಿನಲ್ಲಿ ಹೋಗೋವಾಗ ಎಫ್ ಎಂ ಕೇಳ್ತಿದ್ದೆ, ಸಂಜೆ 6.30ಕ್ಕೆ 104 ಸ್ಟೇಶನ್ನಲ್ಲಿ ಏನೋ ಸ್ಪರ್ಧೆ ನಡೀತಾ ಇತ್ತು. ಸರಿ ಕೇಳೋಣ ಅಂದ್ಕೊಂಡು ಹಾಕಿ ಕುಳಿತೆ.

ಹಾಡು ಹೇಳೋ ಸ್ಪರ್ಧೆ ಅನ್ಸತ್ತೆ, ಒಬ್ಬಳು ಹುಡುಗಿ ಕರೆ ಮಾಡಿದ್ಲು. ಕಾರ್ಯಕ್ರಮ ನಡೆಸಿಕೊಡುವವನು ಶುರುಮಾಡಿ ಅಂದ, ಅವಳು 'ನಗುವ ನಯನ ಮಧುರ ಮೌನ...' ಅಂತ ಹಾಡಿದ್ಲು.

ಗೂಫೂಲ್ !!! :D

ಈ ವರ್ಷದ ಗೂಗಲ್ಲ್ನೋರ್ ಮಾಮೂಲಾಗ್ಮಾಡೋ ಏಪ್ರಿಲ್ಫೂಲ್ಹೋಕ್ಸ್ಗಳು ,

ಜೀಬಾಲ್ :D

ಆಟೋಪೈಲಟ್ಮೈಲು :D :D

ತ್ರೀ ಡಿ ಗೂಗಲ್ಕ್ರೋಮು :D :D :D

ಮಜಾ ಮಾಡಿ! ಸಹಜವಾಗೇ, ಗೂಗಲ್ನೋರ್ಸಕತ್ತ್ಮಜಾ ಕೊಡ್ತಾರೆ :) ಇದನ್ನೋಡಿ ಪೂರ್ತಿ ಲಿಸ್ಟಿಗೆ.

ಸೋತವನೊಳಗೆ

(ಜೀವನದಲ್ಲಿ ಸೋತವನೊಬ್ಬ ನಡೆದು ಬರುತ್ತಿರುತ್ತಾನೆ.ಅವನನ್ನು ಕ೦ಡ ಒ೦ದಿಬ್ಬರು ಹ೦ಗಿಸಿ ಮಾತನಾಡಿಕೊಳ್ಳುತ್ತಾರೆ)
ಒಬ್ಬ:ಕೈಲಾಗಲ್ಲ ಅ೦ದ್ಮೇಲೆ ಬದುಕೋದಾದ್ರೂ ಯಾಕೆ?
ಇನ್ನೊಬ್ಬ:ಭೂಮಿಗೆ ಭಾರ.ಇನ್ನು ಬದುಕಿ ಮಾಡೋದಾದ್ರೂ ಏನಿದೆ?
ಒಬ್ಬ:ನಾನಾಗಿದ್ರೆ ಕಥೇನೆ ಬೇರೆ ಇರ್ತಿತ್ತು

ಭೌತಶಾಸ್ತ್ರ ರಾಷ್ತ್ರೀಯ ವಿಚಾರ ಸಂಕಿರಣ

ಬೆಂಗಳೂರಿನ ಆರ್.ವಿ. ರಸ್ತೆಯಲ್ಲಿರುವ ವಿಜಯಾ ಪದವಿ ಕಾಲೇಜಿನಲ್ಲಿ ಭೌತಶಾಸ್ತ್ರ ರಾಷ್ತ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.