ಸೋತವನೊಳಗೆ

ಸೋತವನೊಳಗೆ

ಬರಹ

(ಜೀವನದಲ್ಲಿ ಸೋತವನೊಬ್ಬ ನಡೆದು ಬರುತ್ತಿರುತ್ತಾನೆ.ಅವನನ್ನು ಕ೦ಡ ಒ೦ದಿಬ್ಬರು ಹ೦ಗಿಸಿ ಮಾತನಾಡಿಕೊಳ್ಳುತ್ತಾರೆ)
ಒಬ್ಬ:ಕೈಲಾಗಲ್ಲ ಅ೦ದ್ಮೇಲೆ ಬದುಕೋದಾದ್ರೂ ಯಾಕೆ?
ಇನ್ನೊಬ್ಬ:ಭೂಮಿಗೆ ಭಾರ.ಇನ್ನು ಬದುಕಿ ಮಾಡೋದಾದ್ರೂ ಏನಿದೆ?
ಒಬ್ಬ:ನಾನಾಗಿದ್ರೆ ಕಥೇನೆ ಬೇರೆ ಇರ್ತಿತ್ತು
ಇನ್ನೊಬ್ಬ:ಅವತ್ತೇ ಹೇಳ್ದೆ ಅವನಿಗೆ ’ನಿ೦ಗೆ ಸೈನ್ಸ್ ಆಗಲ್ಲ ಆರ್ಟ್ಸ್ ತಗೋ ’ಅವನು ಜ೦ಬ ಮಾಡಿದ ಈಗ ನೋಡು
ಒಬ್ಬ:ಅವನ ಕೈಲಾಗಲ್ಲ.ನಮ್ಮ ಸಮ ನಿ೦ತ್ಕೊಳ್ಳೋಕೆ ಆಗುತ್ತಾ?
ಇನ್ನೊಬ್ಬ:ಬುಧ್ಧಿ ಕಡಿಮೆ .ಅವರ ಅಪ್ಪ ಅಮ್ಮನ್ನ ನೊಡಿದ್ರೆ ಅಯ್ಯೋ ಅನ್ಸುತ್ತೆ .ಪಾಪ

ವ್ಯಕ್ತಿ:ನಿಲ್ಲಿ (ಕೂಗಿಕೊಳ್ಳುತ್ತಾನೆ)
ನಿಜ .ನಿಮ್ಮ ಎಲ್ಲಾ ಮಾತು ನಿಜ
ನಾನು ಭೂಮೆಗೆ ಭಾರ,ನಿಮ್ಮ ಹಾಗಿಲ್ಲ,ನನಗೆ ಬದುಕೊ ಹಕ್ಕಿಲ್ಲ.ನಿಮ್ಮ ಹಾಗೆ ಇರೊಕೆ ಪ್ರಯತ್ನ ಪಟ್ಟೆ ಆದ್ರೆ ಆಗ್ಲಿಲ್ಲ
ನೀವು ತಿಳಿಯೋ ಹಾಗೆ ನಾನು ಮಾತ್ನಾಡ್ಲಾರೆ
ನೀವು ನಡೆಯೋ ಹಾಗೆ ನಾನು ಓಡಲಾರೆ
ನೀವು ಕೇಳೋ ಹಾಗೆ ನಾನು ಕಿವಿ ಕೊಡಲಾರೆ
ನಾನು ಮ೦ದಮತಿ ನಿಜ ಎನು ಮಾಡಲಿ . ಸಾಯಲೇ?
ಇಲ್ಲಾ , ಚುಚ್ಚುನುಡಿಗಳಿಗೆ ಅಹಾರವಾಗಿ ಹೋಗಲೇ?
ಇದರಿನ್ದ ಹೊರಕ್ಕೆ ಬರೋದಾದ್ರೂ ಹೇಗೆ?
ಬರೀ ಪ್ರಶ್ನೆಗಳೇ ಆಗೋಯ್ತಲ್ಲಾ
ಅಗೋ! ತಳ ಕಾಣದ ಭಾವಿ….ಅದೇ ಸರಿ.
ಧ್ವ್ನನಿ೧: ನಿಲ್ಲು
ವ್ಯಕ್ತಿ : ಯಾರದು?
ಧ್ವ್ನನಿ೧: ನನ್ನನ್ನು ಆತ್ಮ ವಿಶ್ವಾಸ ಅ೦ತಾರೆ.ನಿನ್ನೊಳಗಿನ ಬೆಳಕು ನಾನು.ಓಳಗೆ ಅವಿತಿರುವ ನನ್ನನ್ನು ಹೊರಕ್ಕೆ ಎಳಿ
ಸಾಯೋದು ಯಾಕೆ?
ವ್ಯಕ್ತಿ : ನಾನು ನಿಷ್ಪ್ರಯೋಜಕ. ಬಿಡು ಸಾಯಲು ನನ್ನನ್ನ.(ಮತ್ತೆ ಬಾವಿಯ ಕಡೆ ನಡೆಯುವ)

ಧ್ವನಿ ೨: ನಿಲ್ಲು

ವ್ಯಕ್ತಿ ; ಯಾರದಿದು ಹೊಸ ಧ್ವನಿ

ಧ್ವನಿ ೨: ನಾನು.ನನ್ನನ್ನು ಗುರಿ ಅ೦ತಾರೆ. ನೀನು ಮುಟ್ಟಬೇಕಾದದ್ದು ನನ್ನನ್ನೇ.ನೋಡು ನಿನ್ನ ಕಣ್ಣೆದುರಿಗೇ ಇದ್ದೇನೆ
ನನ್ನನ್ನು ಸೇರುವ ದಾರಿ ಕಷ್ಟ.ಇಷ್ಟು ದಿನ ನನ್ನನ್ನ ಕಾಣದಾಗಿದ್ದೆ ಈಗಲಾದರೂ ಕಣ್ಬಿಡು.
ಸಾಯೋದು ಯಾಕೆ

ವ್ಯಕ್ತಿ : ನಾನು ಮ೦ದಮತಿಯ೦ತೆ. ತೀಷ್ಣ ಬುಧ್ಧಿ ಇಲ್ಲ ನನಗೆ.ಸಾಯಲು ಬಿಡು ನನ್ನನ್ನು (ಮತ್ತೆ ಬಾವಿಯ ಕಡೆ ನಡೆಯುವ)

ಧ್ವನಿ ೩ ನಿಲ್ಲು

ವ್ಯಕ್ತಿ : ಮತ್ಯಾರು

ಧ್ವನಿ ೩: ತಿಳಿಯಲಿಲ್ಲವೇ,ಸ್ಪೂರ್ತಿ ಎನ್ನುತ್ತಾರೆ ನನ್ನನ್ನು.ಗುರಿ ಪಡೆದವರು ನಾನಾಗುತ್ತಾರೆ.ನೀನೂ ನಾನಾಗಬಹುದು.ನಿನ್ನ ಗುರಿ
ಸಾಧನೆಗೆ ನಾನು ದಾರಿ ದೀಪ. ಆದರೂ ಸಾಯುವೆ ಏಕೆ?

ವ್ಯಕ್ತಿ : ನಿಜ ನಿಮ್ಮ ಮಾತುಗಳು ನಿಅ ,ಆದರೂ ನಾನು ಬದುಕಲೊಲ್ಲೆ.ಹೇಡಿತನ ನನ್ನ ಹೆಗಲೇರಿದೆ.ಬಿಡಿ ನನ್ನನ್ನು ಸಾಯಲು

ಧ್ವನಿ ೪: ನಿಲ್ಲು

ವ್ಯಕ್ತಿ : ನೀನ್ಯಾರು

ಧ್ವನಿ ೪: ಈಗಾಗಲೇ ನಿನ್ನಲ್ಲಿರುವೆ.ಇನ್ನೂ ಅರಿವಿಗೆ ಬಾರದೆ.ನನ್ನನ್ನು ಪ್ರೀತಿ ಎನ್ನುತ್ತಾರೆ.ನಿನ್ನ ಗುರಿ ಸಾಧನೆಗೆ ನಾನು ಜೊತೆ
ಜೊತೆಗೆ ಬರುವೆ .ಕೈ ಹಿಡಿದು ನಡೆಸುವುದಿಲ್ಲ ಜೊತೆಗಿರುತ್ತೇನೆ.ಸೋಲು ಗೆಲುವಿನಲ್ಲಿ ,ನೋವು ನಲಿವಿನಲ್ಲಿ
ನಾನಿರುತ್ತೇನೆ.ನಾನಿದ್ದರೆ ನೀನು ಸಾಧಿಸಬಲ್ಲೆ

ವ್ಯಕ್ತಿ : ಅದ್ಭುತ! ನೀವೆಲ್ಲರೂ ನನ್ನೊಳಗೇ ಇದ್ದೀರಿ.ಆತ್ಮವಿಶ್ವಾಸದಿ೦ದ ಗುರಿ ಕಾಣುತ್ತಿದೆ.ನಾ ನಡೆವ ದಾರಿಯಲ್ಲಿ ಸ್ಪೂರ್ತಿ ಬೆಳಕು
ಹಿಡಿದು ಕಾಯುತ್ತಿದೆ.ಪ್ರೀತಿ ನನ್ನ ಜೊತೆಗೆ ನಡೆಯುತ್ತಿದೆ.ಎಲ್ಲವೂ ಇದೆ.ಆದರೂ ಎನೋ ಕೊರತೆ.ಅದು ನನ್ನಲ್ಲಿಲ್ಲ
ನಿಮ್ಮಲ್ಲಿದೆ ನಿಮ್ಮಲ್ಲಿದೆ (ಪ್ರೇಕ್ಷಕರೆಡೆಗೆ ಕೈ ತೋರಿ) ನಿಮ್ಮಲ್ಲಿದೆಅದೊ೦ದೇ ಬೇಕಾಗಿದೆ

ಧ್ವನಿ ೫: ಹೋ, ಇಗೋ ಬ೦ದೆ.ನಾನೇ ಅದು ಪ್ರೋತ್ಸಾಹ ನನ್ನ ಹೆಸರು.ಜನರೊಳಿರುವ ಒ೦ದ೦ಶ
ಮುನ್ನಡೆ ಎನ್ನುವುದೇ ನನ್ನ ಗುಣ.ಜಿಪುಣರು ನನ್ನನ್ನು ತಿಜೋರಿಯಲ್ಲಿಟ್ಟು ಬೀಗ ಹಾಕಿ ಬಿಡುತ್ತಾರೆ
ಉದಾರಿಗಳು ಎಲ್ಲರಿಗೂ ನೀಡುತ್ತಾರೆ

ವ್ಯಕ್ತಿ : ಸಾಯುವುದಾದರೂ ಏಕೆ? ಎಲ್ಲರೂ ಸಿಕ್ಕ ಮೇಲೆ.ನನ್ನೊಳಗೆ ಎಲ್ಲರೂ ಎಲ್ಲರೊಡನೆ ನಾನು ನಾನು

ಮುಗಿಯುತು