ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎಡವದಿರಿ ಶ್ವಾನಪ್ರಿಯರೆ ...

ನಾಯಿಮರಿಯನೊಂದ ಇಟ್ಟು
ದಿನವೂ ಅನ್ನಹಾಲು ಕೊಟ್ಟು
ವಾರಕ್ಕೊಮ್ಮೆ ಶುಚಿಯಾಗಿಟ್ಟು
ಮೂಕಪ್ರಾಣಿಯೊಳಗೆ ಒಂದು
ಜೀವವಿಹುದು ಎಂದು ಅರಿತು
ತೋರಿದ ಪ್ರೀತಿ ಮಾನವೀಯತೆ

ಯಜಮಾನಿಯಾಕೆ ಕಲಿತ ಹೆಣ್ಣು
ನಾಲ್ಕು ಗೋಡೆ ಶಾಲೆ ಮಧ್ಯೆ
ಪಠ್ಯ ಹೊತ್ತು ಓದಿ ಬೆಳೆದು,
ಕೈಗೊಂದಿಷ್ಟು ರೊಕ್ಕ ಬಂದು
ಪ್ರೀತಿ ತೋರಿದಳು ನಾಯಿಮರಿಯ ತಂದು,

ವರದಿ: ಕನ್ನಡದಲ್ಲಿ ತಂತ್ರಜ್ಞಾನ, ವಿಜ್ಞಾನ, ಕೃಷಿ ಬರವಣಿಗೆ - ಚರ್ಚೆ

ಹೊಸ ವಿಷಯಗಳನ್ನು ಅದರಲ್ಲೂ ವಿಜ್ಞಾನ ಮತ್ತು ತಂತ್ರಜ್ಞಾನದ ಬಗೆಗಿನ ವಿಚಾರಗಳನ್ನು ಜನರಿಗೆ ತಲುಪಿಸಲು ನಮ್ಮಲ್ಲಿ ಅನೇಕ ಮಂದಿ ಪ್ರಯತ್ನಿಸುತ್ತಿದ್ದೇವೆ. ನಾನೇ ಬರೆದ ವಿಷಯಗಳನ್ನು ಮತ್ತೆ ಓದಿದಾಗ ಅದನ್ನು ಇನ್ನೂ ಸುಲಭವಾಗಿ ಬರೆಯಬಹುದಿತ್ತು,  ಅಥವಾ ಇದನ್ನು ಇನ್ನೂ ಸರಳವಾಗಿ ಬರೀಲಿಕ್ಕೆ ಪ್ರಯತ್ನಿಸಬಹುದಾ ಅಂತ ಅನ್ನಿಸ್ತಿರುತ್ತೆ. ಕೆಲವು ಸಲ ನಮ್ಮಲ್ಲಿ ಅನೇಕರು ಇದು ಕಷ್ಟ ಎಂದು ಬೇರೇನೋ ವಿಷಯದ ಬರವಣಿಗೆಯ ಕಡೆ ಹೆಚ್ಚಿನ ಗಮನ ಕೊಟ್ಟು ವೈಜ್ಞಾನಿಕ ಬರವಣಿಗೆಯಿಂದ ದೂರ ಉಳಿಯೋದು ಇದೆ.

ನೆನ್ನೆ ಭಾನುವಾರ ಸಂಪದ, ಸೆಂಟರ್ ಫಾರ್ ಇಂಟರ್ನೆಟ್ ಮತ್ತು ಸೊಸೈಟಿ ಜೊತೆಗೂಡಿ ಆಯೋಜಿಸಿದ್ದ "ಕನ್ನಡದಲ್ಲಿ ತಂತ್ರಜ್ಞಾನ, ವಿಜ್ಞಾನ, ಕೃಷಿ ಬರವಣಿಗೆ" ಕುರಿತ ಚರ್ಚಾವೇದಿಕೆಯಲ್ಲಿ, ವರ್ಷಾನು ವರ್ಷಗಳಿಂದ ಪತ್ರಿಕೆಗಳು, ಪುಸ್ತಕಗಳು, ದೂರದರ್ಶನ ಇತ್ಯಾದಿ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರೋ ಅನೇಕರಿಂದ ಅನೇಕ ವಿಷಯ ಮತ್ತು ವಿಚಾರಗಳ ವಿನಿಮಯ ಮಾಡಿಕೊಂಡೆವು. ನಮ್ಮೆಲ್ಲರ ನೆಚ್ಚಿನ ವೈಜ್ಞಾನಿಕ ಬರಹಗಾರ ನಾಗೇಶ್ ಹೆಗ್ಡೆ, ಕನ್ನಡಪ್ರಭದ ರವಿ ಕೆ ಹೆಗ್ಡೆ, ಉದಯವಾಣಿಯ ಎನ್.ಎ.ಎಮ್ ಇಸ್ಮಾಯಿಲ್ (ಬರೆವ ಬದುಕಿನ ತಲ್ಲಣ) ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಲ್ಲದೆ, ಯುವ ಬರಹಗಾರರಿಗೆ ಮಾರ್ಗದರ್ಶನ ನೀಡಿದರು. ಪತ್ರಕರ್ತ ಚಾಮರಾಜ ಸವಡಿ ಕೂಡ ಭಾಗವಹಿಸಿದ್ದರು. ಚರ್ಚೆಯ ಒಂದು ಕಿರು ನೋಟ ಇಲ್ಲಿದೆ.

ಕನ್ನಡಬ್ಲಾಗ್ಸ್ ಎಂಬ ಕನ್ನಡ ಬ್ಲಾಗಿಗರ ಸಮುದಾಯ

ಕನ್ನಡಬ್ಲಾಗ್ಸ್ ಎಂಬ ಕನ್ನಡ ಬ್ಲಾಗಿಗರ ಸಮುದಾಯ
ಕನ್ನಡದ
ಹವ್ಯಾಸಿ ಮತ್ತು ಬರಹಗಾರರು ಅಂತರ್ಜಾಲದಲ್ಲಿ ಬ್ಲಾಗ್‌ಗಳನ್ನು ಬರೆಯುವುದರಲ್ಲಿ ಹಿಂದೆ
ಬಿದ್ದಿಲ್ಲ. ಆದರೆ ಆ ಬಗ್ಗೆ ನಿಖರ ಮಾಹಿತಿಗಳು ಸಿಗವು. ಸಂಪದ.ನೆಟ್.
ಕೆಂಡಸಂಪಿಗೆ.ಕಾಂ,ವಿಶ್ವಕನ್ನಡ.ಕಾಂ,ವೆಬ್‌ದುನಿಯ,ದಟ್ಸ್‌ಕನ್ನಡ,ಯಾಹೂಕನ್ನಡ ಹೀಗೆ

ಬಿ.ಎಸ್.ಎನ್.ಎಲ್ ಮ೦ಡೆ ಬೋಳು ಮಾರಾಯ!!

ಕರ್ನಾಟಕದ ಹಳ್ಳಿ ಹಳ್ಳಿಯಲ್ಲಿ ನೆಟ್ ವರ್ಕ್ ಇರುವ ಬಿ.ಎಸ್.ಎನ್.ಎಲ್ ಸಹಜವಾಗಿ ಕನ್ನಡಿಗರಿಗೆ ಅರ್ಥ ಆಗೋ ಹಾಗೆ ಜಾಹೀರಾತು ಮಾಡಬೇಕಿತ್ತು.
ಆದ್ರೆ ಅದನ್ನು ಮಾಡದೆ ಬೆಂಗಳೂರಲ್ಲಿ ಎಲ್ಲೆಡೆ ಯಾವ ಯಾವ್ದೋ ಭಾಷೆಯಲ್ಲಿ ಹೋರ್ಡಿಂಗ್-ಗಳನ್ನು ಹಾಕುತ್ತಿದ್ದಾರೆ.
ಈ ಹೋರ್ಡಿಂಗ್-ಗಳು ರೋಮನ್ ಲಿಪಿಯಲ್ಲಿ ಹಿಂದಿಯಲ್ಲಿ ತಮ್ಮ ಪಂಚ್-ಲೈನ್ ಹೊಂದಿವೆ.

ವಿದ್ಯಾವಂತ ಮತದಾರರೆ ಚಲಾಯಿಸಿ ಈಗಲಾದರೂ ನಿಮ್ಮ ಹಕ್ಕನ್ನು!

ಲೋಕಸಭೆ ಚುನಾವಣೆ ಇನ್ನೇನು ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಮತದಾರ ಜಾಗೃತಿ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿವೆ,ಇಂಥದ್ದೆ ಒಂದು ಕಾರ್ಯಕ್ರಮ youtube ನಲ್ಲಿ ಪ್ರಸಾರವಾಗಿದೆ mata mahatva(ಮತ ಮಹತ್ವ ಕೊಪ್ಪಳ ), ಕೇವಲ ಒಂದು ಮತಗಳಿಂದ ಸೋತ ಅಥವ ಗೆದ್ದ ಅಭ್ಯರ್ಥಿಗಳ ಸಂದರ್ಶನ ಇದರಲ್ಲಿ ನೀಡಲಾಗಿದೆ, ಮಾನ್ಯ ವಿದ್ಯಾವಂತ ಮತದಾರ ಬಂಧುಗಳೆ ಈಗಲಾದರು ತಾವುಗಳು ಮತದಾನದ ಮ

ಸ೦ಪದಿಗರೆಲ್ಲಾ ನಮಸ್ಕಾರಗಳು....

ಸ೦ಪದಿಗರೆಲ್ಲಾ ನಮಸ್ಕಾರಗಳು....
ಹೊಸ ಸ೦ವತ್ಸರದ ಶುಭಾಶಯಗಳು..

ಸ೦ಪದ ಬಳಗದ ಬಾ೦ಧವ್ಯ
ಸ೦ತಸ ತ೦ದಿದೆ..
ಕನ್ನಡ ತೇರಿಗೆ ಸಿ೦ಗಾರ ತೋರಣದ೦ತೆ
ಕಟ್ಟುತ್ತಿರುವ ಕಾವ್ಯಧಾರೆಗಳು,
ಉನ್ನತ ಮಟ್ಟದ ಬೌಧ್ಧಿಕ ಚರ್ಚೆಗಳು,
ಅಪರೂಪದ ಸ೦ಗತಿಗಳು
ಎಚ್ಚರಿಸುವ ವಾಗ್ಬಾಣಗಳು,
ಮನಮೆಚ್ಚಿಸುವ ಬ್ಲಾಗ್ಗಳು
ಡಾ.ನಾ.ಸೋ, ಡಾ.ಮೀನಾರವರ೦ತಹ
ವೈದ್ಯಸಾಹಿತಿಗಳೊಡನೆ,

ಅ ಆ ಇ ಈ ಕನ್ನಡದ ಅಕ್ಷರಮಾಲೆ...

ಮಕ್ಕಳಿಗೆ ಕನ್ನಡ ಈ ರೀತಿ ಪಾಠ ಹೇಳಬೇಕು..

ನೆನಪಿದೆಯೆ.. ನಾವು ಚಿಕ್ಕವರಿದ್ದಾಗ ಅಂಕಲಿಪಿ ತಗೊಂಡು ಅದರಲ್ಲಿರೋ ಚಿಕ್ಕ ಪುಟ್ಟ ಪದಗಳನ್ನು ಓದುತ್ತಿದುದು.
ಅದರಲ್ಲಿರುವ ಅ ಅಳಿಲು, ಆ ಆನೆ, ಇ ಇಲಿ, ಈ ಈಶ....ನಮ್ಮಮ್ಮ ಇದನ್ನೆ ಹೇಳಿಕೊಡುತ್ತಿದ್ದರು...
ಅದರ ಜೊತೆಗೆ ಅವುಗಳಲ್ಲಿರುವ ಪಾಪೆಗಳು ಕೂಡ ಮುದಕೊಡುತ್ತಿದ್ದುವು..