ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾಫೀ ಅಥವಾ ಟೀ?

ಬೆಳಗಾದ ತಕ್ಷಣ ನಿಮಗೆ ಏನು ಕುಡಿಬೇಕು ಅನ್ಸತ್ತೆ....

ನ‌ಂಗಂತೂ ಒಂದು ಲೋಟ ಕಾಫಿ, ಅದೂ ಫಿಲ್ಟರ್ನಲ್ಲಿ ಮಾಡಿದ್ದು (ಕಾಫಿ ಪುಡಿ ಹಾಕಿ), ನೀವು ಹೇಗೆ...

1) ಇನ್ಸ್ಟ್ಯಾಂಟ್ ಕಾಫಿಯೋ (ಬ್ರೂ, ನೆಸ್ಕಫೆ ಇತ್ಯಾದಿ)?

2) ಫಿಲ್ಟರ್ನಲ್ಲಿ ಮಾಡಿದ್ದೋ (ಕಾಫಿ ಪುಡಿ ಹಾಕಿ)?

ಟೀ ಬಗ್ಗೆ ಅಷ್ಟು ಅನುಭವ ಇಲ್ಲ, ಆದರೂ

3) ರೆಡ್ ಲೇಬಲ್ನಲ್ಲಿ ಟೀ ಮಾಡಿ ಕುಡಿತೀನಿ ಆಗಾಗ...

ಇನ್ನು...

ಕೈ ತುತ್ತು

ಅಲ್ಲ ನಾವು ಬದುಕುವುದಕ್ಕೋಸ್ಕರ ತಾನೆ ಊಟ ಮಾಡೋದು…… ಆ ಊಟದ ಬಗ್ಗೆ ಪ್ರೀತಿ ಇರಲೇಬೇಕು ಅಲ್ವ……. ಅದೇ ಊಟಾನ ನಾವು ಪ್ರೀತಿಸುವವರು ತಿನ್ನಿಸಿದರೆ…… ಆಹಾ ಏನು ಸಂತೋಷ….. ನಮ್ಮ ಮನಸು ನಿಂತಲ್ಲೇ ಕುಣಿಯೋಕೆ ಆರಂಭಿಸುತ್ತೆ……..

ಹಕ್ಕಿಯಂತೆ ಹಾರಿದಾಗ!!!!

ವಿಶಾಲವಾದ ಬಯಲಲಿ
ಕುತೂಹಲದ ಮನದಲಿ
ಭಯದ ತುಂಟತನದಲಿ
ಹಾರಿದೆನು ಪ್ಯಾರಚ್ಯೂಟಲಿ

ಮೇಲಕೆ ಹಾರುತಲಿ
ನಾನು ಹಗುರವಾದಂತೆ
ಖುಷಿಯ ಕಡಲಲಿ
ನಾನೇ ಹಕ್ಕಿಯಾದಂತೆ ..

ದಾರದ ನಿಯಂತ್ರಣದಲಿ
ಹಾರಿದೆನು ಬಾನಿನಲಿ
ರೋಮಾಂಚನ ಎದೆಯಲಿ
ಕ್ಷಣದ ಚಿಂತನೆಯಲಿ
ಭಯದ ಛಾಯೆ ಮನದಲಿ
"ದಾರವೇ ತುಂಡಾದರೆ"!!!!

ಮಹಿಷಕ ಎಂಬ ಶೂದ್ರರ ನಾಡಿನಲ್ಲಿ...

೨೦೦೬ರಲ್ಲಿ ನಾನು ಬರೆದ ‘ನಮಗೆ ಹೊಸ ರಾಷ್ಟ್ರಗೀತೆ ಬೇಕೆ’ ಎಂಬ ಲೇಖನವನ್ನು ಈಗ ಸಂಪದಿಗರು ಚರ್ಚೆಗೆ ತೆಗೆದುಕೊಂಡಿರುವುದು ನನಗೆ ತುಸು ಆಶ್ಚರ್ಯವನ್ನು ಉಂಟು ಮಾಡಿದೆ.

ಆದದ್ದೆಲ್ಲಾ ಒಳಿತೇ ಆಯಿತು

“ಆದದ್ದೆಲ್ಲ ಒಳ್ಳೆಯದಕ್ಕೇ, ಆಗುತ್ತಿರುವುದೆಲ್ಲಾ ಒಳ್ಳೆಯದಕ್ಕೇ, ಮುಂದಾಗುವುದೂ ಒಳ್ಳೆಯದೇ” ಇದು ಭಗವದ್ಗೀತೆಯ ಒಂದು ಭಾಗದ ಕನ್ನಡಾನುವಾದವಂತೆ. ಈ ಕುರಿತು ಚಿಕ್ಕಂದಿನಲ್ಲಿ ನಾನೋದಿದ “ರಾಜ ಮಂತ್ರಿಯ” ಕಥೆ ನನ್ನಲ್ಲಿ ಎಷ್ಟು ಗಾಢವಾದ ಪರಿಣಾಮ ಬೀರಿತ್ತೆಂದರೆ ದಿನನಿತ್ಯ ನಡೆಯುತ್ತಿದ್ದ ಘಟನೆಗಳಿಗೆ ಈ ಒಳಿತಿನ ಮುಖವಾಡ ತೊಡಿಸುತ್ತಿದ್ದೆ. ಕಥೆಯ ಸಾರಾಂಶ ಇಂತಿದೆ. “ಒಂದು ರಾಜ್ಯದ ಮಹಾರಾಜ ಅವನಿಗೊಬ್ಬ ಚಾಣಾಕ್ಷ ಮಂತ್ರಿ. ಭೇಟೆಗೆಂದು ಇಬ್ಬರೂ ಒಮ್ಮೆ ಕಾಡಿಗೆ ಹೋಗಿದ್ದಾಗ ಅರಸನ ಕೈ ಕತ್ತಿಯಿಂದ ಗಾಯವಾಗುತ್ತದೆ. ಮಂತ್ರಿ ಅರಸನ ಗಾಯಗೊಂಡ ಕೈಯನ್ನು ನೋಡುತ್ತಾ, ’ಆದದ್ದೆಲ್ಲಾ ಒಳ್ಳೆಯದಕ್ಕೇ’ ಎಂದುಲಿಯುತ್ತಾನೆ. ಕೋಪಗೊಂಡ ಅರಸ, ’ನನ್ನ ಕೈ ಗಾಯವಾದರೆ ಅದರಲ್ಲಿ ಒಳ್ಳೆಯದೇನು ಬಂತು’ ಎಂದು ಪ್ರತಿಕ್ರಿಯಿಸಿ, ಮಂತ್ರಿಯ ಪದವಿಯನ್ನು ಕಸಿದು ದಟ್ಟಾರಣ್ಯದಲ್ಲಿ ಮಂತ್ರಿಯನ್ನು ಬಿಟ್ಟು ಒಬ್ಬನೇ ಮುಂದುವರಿಯುತ್ತಾನೆ. ಮಂತ್ರಿ ಮುಗುಳ್ನಕ್ಕು, ’ಆದದ್ದೆಲ್ಲಾ ಒಳ್ಳೆಯದಕ್ಕೇ’ ಎಂದು ಹೇಳಿ ರಾಜನಿಂದ ಬೀಳ್ಕೊಡುತ್ತಾನೆ. ಅರಣ್ಯದ ನಡುವೆ ಕಾಡು ಮನುಷ್ಯರ ಸೆರೆಗೆ ಸಿಕ್ಕ ರಾಜನನ್ನು ಬಲಿಕೊಡಲು ಅವನ ದೇಹ ಪರೀಕ್ಷೆ ನಡೆಸುತ್ತಾರೆ. ಗಾಯ ಮಾಡಿಕೊಂಡು ಅಂಗ ಊನವಾದ್ದರಿಂದ ಆತನನ್ನು ಬಲಿ ಕೊಡದೆ ಬಿಡುತ್ತಾರೆ. ರಾಜ ಅರಮನೆಗೆ ಮರಳಿ ಮಂತ್ರಿ ಹೇಳಿದ ಮಾತನ್ನು ನೆನೆದು ಆತ ಸರಿಯಾಗಿಯೇ ಹೇಳಿದ್ದಾನೆಂದು ಆತನನ್ನು ಕರೆಸಿ ಮತ್ತೆ ತನ್ನ ಮಂತ್ರಿಯನ್ನಾಗಿ ನೇಮಿಸಿಕೊಳ್ಳುತ್ತಾನೆ. ’ನೀವು ಹೇಳಿದಂತೆ ನನ್ನ ಕೈ ಗಾಯವಾಗಿದ್ದೇನೋ ಒಳಿತೇ ಆಯಿತು ನಿಜ, ಆದರೆ ತಮ್ಮನ್ನು ಮಂತ್ರಿ ಪದವಿಯಿಂದ ಕಿತ್ತೊಗೆದುದರಿಂದ ಒಳಿತು ಹೇಗಾಯಿತು?’ ಎಂದು ಮುಗ್ಧ ಭಾವದಿಂದ ರಾಜ, ಮಂತ್ರಿಯನ್ನು ಪ್ರಶ್ನಿಸುತ್ತಾನೆ. ಅದಕ್ಕುತ್ತರವಾಗಿ ಮಂತ್ರಿ ’ಜೊತೆಯಲ್ಲಿ ಇದ್ದಲ್ಲಿ ನಾವಿಬ್ಬರೂ ಕಾಡು ಮನುಷ್ಯರ ಸೆರೆಗೆ ಸಿಗುತ್ತಾ ಇದ್ದೆವು, ನನ್ನಂಗ ಊನವಾಗಿಲ್ಲವಾದ್ದರಿಂದ ಅವರು ನನ್ನನ್ನು ಬಲಿ ಕೊಡುತ್ತಿದ್ದರು’ ಎಂದು ಮಾರುತ್ತರ ನೀಡುತ್ತಾನೆ”.

ನನ್ನ ಜೀವನದಲ್ಲಿ ಇಂತಹ ಮಹತ್ತರ ಘಟನೆಗಳ್ಯಾವುವೂ ಘಟಿಸಿಲ್ಲವಾದರೂ ಒಂದೆರಡು ಚಿಕ್ಕ ಘಟನೆಗಳನ್ನು ನೆನಪಿಸಿಕೊಳ್ಳಬಲ್ಲೆ. ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯ. ವಾರದ ಆರಂಭ, ವಾರಾಂತ್ಯದಲ್ಲಿ ಕನ್ನಡದ ಅಧ್ಯಾಪಕರು ಪ್ರಬಂಧವೊಂದನ್ನು ಬರೆದು ಒಪ್ಪಿಸಲು ಸೂಚಿಸಿದ್ದರು. ಮನೆಯಿಂದ ಶಾಲೆ ಸುಮಾರು ೨ ಕಿ.ಮೀ.ಗಳಷ್ಟು ದೂರ. ಸೋಮವಾರ ಶಾಲೆ ಇನ್ನೇನು ತಲುಪಬೇಕು ಎನ್ನುವಷ್ಟರಲ್ಲಿ ಪ್ರಬಂಧ ಪುಸ್ತಕ ಬಿಟ್ಟು ಬಂದಿರುವುದು ನನ್ನ ಗಮನಕ್ಕೆ ಬಂತು. ವಾರದ ಆರಂಭದ ದಿನವೇ ಅಧ್ಯಾಪಕರಿಂದ ಬೈಗುಳ ಕೇಳುವುದು ಬೇಡವೆಂದು ಮತ್ತೆ ಮನೆಯ ಕಡೆ ಸೈಕಲ್ ತಿರುಗಿಸಿದೆ. ವೇಗವಾಗಿ ಮನೆ ತಲುಪಿ, ಮತ್ತೆ ಶಾಲೆಯ ಕಡೆ ಹೊರಟಾಗ ದಾರಿಯಲ್ಲಿ ೧೦೦ರೂಪಾಯಿ ನೋಟು! ಸುತ್ತ ಮುತ್ತ ಯಾರೂ ಇರಲಿಲ್ಲವಾದ್ದರಿಂದ ಆ ನೋಟಿನ ಮಾಲೀಕತ್ವ ವಹಿಸಿ ಶಾಲೆ ತಲುಪಿದೆ.

ಮಗು ಕಾಣೆಯಾಗಿದೆ

ಈ ಚಿತ್ರದಲ್ಲಿ ಕಾಣುವ ಮಗು ಶಮೀಂ (2 ವಯಸ್ಸು) ಕೇರಳದ ತ್ರಿಚೂರ್ ಜಿಲ್ಲೆಯಿಂದ ಕಳೆದ ಶುಕ್ರವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದಾನೆ. ಸಂಪದಿಗರಲ್ಲಿ ಯಾರಿಗಾದ್ರೂ ಈ ಮಗುವಿನ ಪತ್ತೆಯಾದರೆ ಕೂಡಲೇ ಸಮೀಪದ ಪೊಲೀಸ್ ಸ್ಟೇಶನಿಗೋ, ಕೆಳಗಿನ ದೂರವಾಣಿಗೆ ಕರೆಮಾಡಿಯೋ ವಿಷಯ ತಿಳಿಸಬೇಕೆಂದು ಮನವಿ.

ದೂರವಾಣಿ ಸಂಖ್ಯೆ 044812345678

ಅಥವಾ 09712345678

ಸೂಚನೆ: ಇದರ ಅಗತ್ಯತೆ ಇಲ್ಲವಾದ್ದರಿಂದ ದೂರವಾಣಿ ಸಂಖ್ಯೆಯನ್ನು ಬದಲಾಯಿಸಲಾಗಿದೆ..

 

 

 

ಗುಣಕ್ಕೆ ಧರ್ಮವಾವುದಯ್ಯ?

"ಹೇಮಂತ್. ಇವತ್ತು ಬರ್ತಾ ಅನೂಪ್‌ನೂ ಕರೆದುಕೊಂಡು ಬಾ" ಓವನಿಂದ
ಪಾತ್ರೆ ತೆಗೆಯುತ್ತಾ ಹೇಳಿದರು ಸುಮಾ
"ಯಾಕಮ್ಮ?" ಹೇಮಂತ್‌ನ ಪ್ರಶ್ನೆ
ಹೇರ್ ಡ್ರೈಯರ್ ನಿಂದ ಒಣಗಿಸಿಕೊಳ್ಲುತ್ತಿದ್ದಂತೆ ನಿಲ್ಲಿಸಿದಳು ಶೈಲಾ.ಮುಖದ ಬಣ್ಣಬದಲಾಯಿತು
"ಎಲ್ಲಾ ಹೇಳಿಬಿಡೋಣ . ಅವನಿಂದ ಯಾವುದನ್ನೂ ಮುಚ್ಚಿಡೋದು ಬೇಡ" ಗಂಭೀರವಾಗಿ ಹೇಳಿದರು