ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಗುರ ಮನ

ಓ ಬ್ಲಾಗಿಗರೇ ನಿಮಗ್ ಯಾತರ್ ಚಿಂತಿ,
ಕಲ್ಲು ಗುಡ್ಡಧಾಂಗ ನೀ ಖಡೀ ನಿಂತಿ,
ಬೀಸ್ತದ್ ಗಾಳಿ ಮ್ಯಾಲಿಂದ್ ಹೊಡಿತಾದ್ ಮಳಿ,
ಆದ್ರೂ ಭಿ ನಿಲ್ಲಪ್ಪ ಖಡೀ ಖಡೀ.
ಮನಸ್ಸು, ಇದು ಎಲ್ಲಿದೆ ಎಂದು ಯಾರಿಗಾದ್ರೂ ಸರಿಯಾಗಿ ಗೊತ್ತಿದ್ರೆ ಅವರಿಗೆ ನಮೋನ್ನಮಃ,
ಆದ್ರೆ ಅದು ಮರ್ಕಟ ಅಂತಮಾತ್ರ ಸಿಕ್ಕ್ದೋರೆಲ್ಲಾ, ಆಡೋರೆಲ್ಲಾ, ನೋಡ್ದೋರೆಲ್ಲಾ ಬೈಯ್ಯೋರೇ.

ಯುಗಾದಿಯಂದು ಸಮೋಸಗಳ ವಿನಿಮಯ!

ನಿನ್ನೆ ಯುಗಾದಿಯಂದು ಎಲ್ಲರೂ ಸಮೋಸಗಳ ವಿನಿಮಯ ಮಾಡಿಕೊಳ್ಳುತ್ತಿದ್ದಾಗ ನಾನು ನನ್ನದೇ ಶೈಲಿಯಲ್ಲಿ ಈ ನಾಲ್ಕು ಸಾಲುಗಳನ್ನು ಎಲ್ಲರಿಗೂ ರವಾನಿಸಿದ್ದೆ.

ಕಹಿ ಇರಲಿ
ಆ ಕಹಿಯ ಮರೆಸುವ
ಸಿಹಿ ಇರಲಿ

ನೋವಿರಲಿ
ಆ ನೋವ ಮರೆಸುವ
ನಲಿವಿರಲಿ

ಬೇವಿರಲಿ
ಆ ಬೇವಿಗೆ ಬೆಲ್ಲದ
ಸಿಹಿ ಇರಲಿ

ವಿರೋಧಿ ಇದು
ಸಂವತ್ಸರದ ನಾಮವಷ್ಟೇ
ಆಗಿರಲಿ
ವರುಷವಿಡೀ ಹರುಷ,
ಸುಖ, ನೆಮ್ಮದಿ ಇವು

ಇದೂ ಯುಗಾದಿಯೇ.....

ಪ್ರಿಯ ಸಂಪದಿಗರೇ, ಎಲ್ಲರೂ ಕವಿಗಳ ಕವನಗಳನ್ನ ಸಂಪದದಲ್ಲಿ ಹಾಕುತ್ತಿರೋದು ನೋಡಿ ಕಳೆದ ವರ್ಷ ಯುಗಾದಿ ಹಬ್ಬದ ಹಿಂದಿನ ದಿನ ನಾನು ಬರೆದ ಕವನವೊಂದನ್ನು ಹಾಕಬೇಕು ಅನ್ನಿಸ್ತಿದೆ. ಇದೂ ಸಹ ನನ್ನ ’ಭಾವಯಾನ’ ಸಂಕಲನದಲ್ಲಿದೆ. ಒಪ್ಪಿಸಿಕೊಳ್ಳಿ....

ಕೇಳಿ ಕೇಳಿರಿ ಎಲ್ಲ ಕೇಳಿರಿ
ವಸಂತ ರಾಜನು ಬರುತಿಹ
ಸನ್ಮಿತ್ರಳಾಗಿಹ ಚೈತ್ರಳೊಡನೆ
ಹೇಳಿರೆಲ್ಲರು ಜಯಜಯ

ಯುಗ ಯುಗಾದಿ ಕಳೆದರೂ...

ನಮಸ್ಕಾರ. ಯುಗಾದಿಯ ಶುಭಾಶಯಗಳು. ಈ ಯುಗಾದಿಯು ಸಂಪದಿಗರೆಲ್ಲರಿಗೂ "ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪು ಸೂಸಿ ಜೀವಕಳೆಯನು ತರಲಿ" ಎಂದು ಹಾರೈಸುತ್ತೇನೆ.

ನವ ಸಂವತ್ಸರ ಭೂಮಿಗೆ ಬಂದು......................

ಬೇಂದ್ರೆಯವರ ಸುಪ್ರಸಿದ್ಧ "ಯುಗ ಯುಗಾದಿ ಕಳೆದರೂ........" ಕವನದ ಜೊತೆಗೆ, ಕುವೆಂಪು ಅವರ ಈ ಕವನವೂ ತುಂಬಾ ಸುಂದರವಾದ (ನನ್ನ ಮೆಚ್ಚಿನ) ಕವಿತೆಯಾಗಿದೆ. ಅದನ್ನು ಹಂಚಿಕೊಳ್ಳುತ್ತಿದ್ದೇನೆ ಸಂಪದಿಗರಲ್ಲಿ.......... ಎಲ್ಲರಿಗೂ ವಿರೋಧಿ ನಾಮ ಸಂವತ್ಸರದ ಯುಗಾದಿಯ ಶುಭಾಶಯಗಳು!!!!!

ಸುರಲೋಕದ ಸುರನದಿಯಲಿ ಮಿಂದು
ಸುರಲೋಕದ ಸಂಪದವನು ತಂದು
ನವ ಸಂವತ್ಸರ ಭೂಮಿಗೆ ಬಂದು

ಜಗವನುಳಿಸುವ ಬಾರಾ.. - ವೋಟ್ ಅರ್ಥ್ ಫಾರ್ ಅರ್ಥ್ ಅವರ್

ಸಂಪದಿಗರಿಗೆಲ್ಲ ಯುಗಾದಿಯ ಶುಭಾಶಯಗಳು.

ಎಲ್ಲರೂ ಬೇವು-ಬೆಲ್ಲ ಹಂಚಿ, ಒಬ್ಬಟ್ಟು ತಿನ್ನುತ್ತಿರಬೇಕಲ್ವಾ? ಜೀವನದ ಸುಖ ಮತ್ತು ದು:ಖಗಳೆರಡನ್ನೂ ನೆನಪಿಸಿ, ಎರಡನ್ನೂ ಒಮ್ಮನಿಸ್ಸಿನಿಂದ ಎದುರಿಸಿ ಎಂದು ಉಸಿರುವ ಈ ಹಬ್ಬ ನಿಮಗೆಲ್ಲ ಸುಖ ಶಾಂತಿ ನೆಮ್ಮದಿಯನ್ನ ಈ ಹೊಸ ವರ್ಷದಲ್ಲಿ ತರಲಿ ಎಂದು ಹಾರೈಸುತ್ತೇನೆ. ಹಾಗೇ ನಿಮಗೆಲ್ಲ ಒಂದು ಕಿವಿ ಮಾತು. 

ಯಕ್ಷಪ್ರಶ್ನೆ - ನನ್ನ ಕ್ವಿಜ಼್ ತಾಣ

ಆತ್ಮೀಯರೆ!

ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಾ ೧೨೦೦ ಕಂತುಗಳನ್ನು ಮುಗಿಸಿ, ಯುಗಾದಿಯ ಮುನ್ನಾದಿನ ೧೨೦೧ ಕಂತನ್ನು ಹಾಗೂ ಯುಗಾದಿಯ ಈ ದಿನದಂದು ೧೨೦೨ನೆಯ ಕಂತನ್ನು ಪ್ರಸಾರ ಮಾಡುತ್ತಿದ್ದೇನೆ.

ಅಳಿಱ್, ಎಳಿಱ್

ಅಳಿಱ್, ಎಳಿಱ್=ಕೆಸಱ್, ಕೆಸಱು. ಈ ಪದಗಳು ಹೞಗನ್ನಡ ಬಿಟ್ಟು ಹೊಸಗನ್ನಡದಲ್ಲಿ ಬೞಕೆಯಿರುವ ಬಗ್ಗೆ ಅನುಮಾನವಿದೆ. ಹಾಗಾಗಿ Dravidian Etymological Dictionaryಯಲ್ಲೂ ಈ ಪದದ ಉಲ್ಲೇಖವಿಲ್ಲ. ಕಿಟ್ಟೆಲ್ ಕೋಶದಲ್ಲಿ ಈ ಪದಗಳ ಉಲ್ಲೇಖವಿದ್ದು ಶಬ್ದಮಣಿದರ್ಪಣದಲ್ಲಿ ಇದಱ ಉಲ್ಲೇಖವನ್ನು ತಿಳಿಸಿದ್ದಾರೆ.

ಕೆಳದಿ ಹಸ್ತಪ್ರತಿ ಅಭಿಯಾನದ ಜಾಗ್ಋತಿ ಕಾಯಱಕ್ರಮಗಳ ಸಮಾರೋಪ

ದಿನಾಂಕ 20.3.2009 ರಂದು ಶಿವಮೊಗ್ಗದಲ್ಲಿ ಕೆಳದಿ ಸಂಪನ್ಮೂಲ ಕೇಂದ್ರದ ವತಿಯಿಂದ ಹಸ್ತಪ್ರತಿಗಳ ಜಾಗ್ಋತಿ ಕಾಯಱಕ್ರಮಗಳ ಸಮಾರೋಪ ಸಮಾರಂಭೌವನ್ನು ಏಪಱಡಿಸಲಾಗಿತ್ತು.