ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯುಗಾದಿ ಹಬ್ಬದ ಶುಭಾಶಯಗಳು

ಸಿಂಗರಿಸಿಕೊಂಡಿದೆ ಪ್ರಕೃತಿ ವಸಂತರಾಜನ ಸ್ವಾಗತಿಸಲು....
ಮೂಡುತಿವೆ ಹೊಂಗಿರಣಗಳು ಈ ಭೂಮಿಯ ಚುಂಬಿಸಲು....

ಚಿಗುರಿದ ಮಾಮರಗಳಿಗೆ ಹೂವಾಗುವ ಬಯಕೆ
ಹಾಡಿಗೆ ಸ್ವರವಾಗುವ ತವಕ ಕೋಗಿಲೆಗಳ ಮನಕೆ

ನಳನಳಿಸಿದೆ ತೋರಣ ಮನೆಮನೆಗಳಲ್ಲಿ
ನಲಿವು ತುಂಬಿದೆ ಎಲ್ಲರ ಮನಗಳಲ್ಲಿ

ವಿರೋಧಿ ನಾಮ ಸಂವತ್ಸರವು ಶುಭವಾಗಿರಲಿ
ಮೊಗ್ಗಾಗಿರುವ ನಿಮ್ಮ ಕನಸುಗಳು ಅರಳಲಿ.....

ಪ್ರೀತಿ ಅನ್ದ್ರೆ ಇದೇನಾ.......

ದಿನವೆಲ್ಲ ಸುಖ ಇಲ್ಲ..
ರಾತ್ರಿಯೆಲ್ಲ ನಿದ್ದೆ ಇಲ್ಲಾ..
ಮೈ ಕೈ ಎಲ್ಲಾ ಒನ್ ಥರಾ... ನೋವು..
ಮನಸ್ಸಿಗೆ ನೆಮ್ಮದಿ ಇಲ್ಲಾ..

ಓ ದೇವರೇ...
ಪ್ರೀತಿ ಅ೦ದ್ರೆ ಇದೇನಾ?..

ದೇವರು: ಇಲ್ಲಾ ಮಗು..ಇದು

ಚಿಕನ್ ಗುನಿಯಾ...!

ಡಿಸಿ - ಡಿಸಿ ಕನ್ವರ್ಟರ್

ಇದು ಲ್ಯಾಪ್ಟಾಪು, ಮೊಬೈಲ್ ಫೋನ್ಗಳು ಮುಂತಾದ ಅತ್ಯಾಧಿಕ ಆದರೆ portable ಸಾಧನಗಳ ಯುಗ. ತುಂಬಾ ಸಣ್ಣ ಗಾತ್ರದ ಇವನ್ನು ನಾವು ಯಾವಾಗಲೂ ಜೊತೆಯಲ್ಲಿ ಕೊಂಡೊಯುತ್ತಿರುತ್ತೇವೆ. ಹಾಗಾಗಿ ಇವಕ್ಕೆ ಬ್ಯಾಟರಿ ಗಳಿಂದಲೇ ಶಕ್ತಿ ( power) ಪೂರೈಕೆಯಾಗಬೇಕಾಗುತ್ತೆ.

ಎರಡು ಎಸೆಮೆಸ್‌ಗಳು

ನಿನ್ನೆ ರಾತ್ರಿ ಮಲಗಲು ಹೊರಟವನಿಗೆ ಮೊಬೈಲ್ ಸಂದೇಶ ಬಂದ ನೆನಪಾಯಿತು. ಸಹೋದ್ಯೋಗಿಯೋರ್ವರ ಸಂದೇಶ. "ಮೂರು ಜನ ನಿಮ್ಮ ಮೊಬೈಲ್ ನಂಬರ್ ಕೇಳಿದ್ರು. ನಾನು ಕೊಡಲಿಲ್ಲ. ಬದಲಾಗಿ ನಿಮ್ಮ ಮನೆಯ ವಿಳಾಸ ಕೊಟ್ಟಿದ್ದೇನೆ.ನಾಳೆ ಅವರು ನಿಮ್ಮ ಮನೆಗೆಬರಬಹುದು,"ಎಂಬ ಸಂದೇಶ ನೋಡಿ ಆಶ್ಚರ್ಯವಾಯಿತು.

ಶ್ರೀ " ವಿರೋಧಿ ಸಂವತ್ಸರದ ಯುಗಾದಿ " ಯ ಹಾರ್ದಿಕ ಶುಭಾಶಯಗಳು !

ಯುಗಾದಿ ಹಬ್ಬವನ್ನು ’ಚಾಂದ್ರಮಾನ ’ ಮತ್ತು ’ಸೌರಮಾನ ’ ರೀತಿಯಾಗಿ ಆಚರಿಸುವ ಎರಡು ಪದ್ಧತಿಗಳು ನಮ್ಮಲ್ಲಿವೆ. ಈ ವರ್ಷ ಚಾಂದ್ರಮಾನ ರೀತಿ ಚೈತ್ರ ಶುಕ್ಲ ಪ್ರತಿಪತ್ ತಾ. ೨೭-೦೩-೨೦೦೯ ನೇ ಶುಕ್ರವಾರವೂ, (ಇಂದು) ಸೌರಮಾನರೀತಿ ಸೂರ್ಯನು ನಿರಯಣ ಮೇಷರಾಶಿ ಪ್ರವೇಶಿಸುವ ಪುಣ್ಯಕಾಲದ ದಿನ, ತಾ. ೧೪-೦೪-೨೦೦೯ ನೇ ಮಂಗಳವಾರವೂ ಯುಗಾದಿ ಹಬ್ಬವನ್ನು ಆಚರಿಸಬೇಕು.

ಈ ಯುಗಾದಿಯ ಶುಭದಿನವು, ಸಂಪದೀಯರ, ಹಾಗೂ ನಮ್ಮೆಲ್ಲಾ ಭಾರತೀಯರ ಆಶೋತ್ತರಗಳ ಸಂಕೇತವಾಗಿರಲಿ. ದೇಶದಲ್ಲಿ ಸುಭಿಕ್ಷಬರಲಿ. ಜನರೆಲ್ಲಾ ಸಮಾಧಾನ, ಶಾಂತಿ, ಹಾಗೂ ಶುದ್ಧಮನಸ್ಕರಾಗಿ, ದೇಶದ ಹಿತಕ್ಕಾಗಿಯೇ ದುಡಿಯುವ ಮನೋಭಾವವನ್ನು ಹೊಂದಲಿ. ದೇಶದ ಯುವಜನ ಹೆಚ್ಚು ಹೆಚ್ಚು ಜವಾಬ್ದಾರಿಯನ್ನು ಹೊತ್ತು, ಪ್ರಗತಿಯ ದಾರಿಯಲ್ಲಿ ನಡೆಯಲಿ.

ಲವೇರಿಯಾ..ಪಬೇರಿಯಾ..

‘ಸರ್ದಿ ಖಾಂಸೀ ನ ಮಲೇರಿಯಾ ಹುವಾ..
ಲವೇರಿಯಾ ಹುವಾ..ಲವೇರಿಯಾ ಹುವಾ..’
ಹಾಡು ನೆನಪಿದೆಯಾ?

ಮಲೇರಿಯಾ- ಒಂದು ರೋಗ.
ಲವೇರಿಯಾ?-ಲವ್ ಮಾಡುವವರನ್ನು ಬಿಟ್ಟು ಉಳಿದವರಿಗೆ ಅದು ರೋಗದಂತೆ ಕಾಣುವುದು.
ಮಗ/ಮಗಳು ಲವ್ ಮಾಡುವುದು ಗೊತ್ತಾದ ಕೂಡಲೇ ‘ಕ್ರಿಮಿ’ ತರಹ ನೋಡುವರು.
ಅಪ್ಪ, ಅಮ್ಮ, ಆಂಟಿಬಯೋದಿ(ಟಿ)ಕ್ ಸುರು..

ನೀಲಿ ಕಣ್ಣಿನ ಹುಡುಗ

ಸ೦ಪದಗರಿಗೆಲ್ಲಾ ಯುಗಾದಿಯ ಶುಭಾಶಯಗಳು...

ನೀಲಿ ಕಣ್ಣಿನ ಹುಡುಗ...
------
ನೋವು ತರುವುದು ತರವೇ ಗೆಳೆಯನೆ
ಒಲವ ಹರವು ಹರಿಯದೇ?
ಸಹಿಸಲಾರೆನು ಇನ್ನು ವಿರಹವ
ಇನಿಯ ನನ್ನಲಿ ಕೋಪವೇ?

ನೀಲಿ ಕಣ್ಣಿನ ಹುಡುಗ ನಿನ್ನಯ
ನೋಟದಿ೦ದಲೆ ಧನ್ಯತೆ
ಹಾಡ ಹಾಡಿದೆ ಹೃದಯವೆಲ್ಲವೂ
ನಿನ್ನ ಧ್ಯಾನದಿ ಏಕತೆ |

ಸವಿಯ ನುಡಿಯಲಿ ಮೋಹಗೊಳಿಸುತ
ಪ್ರೀತಿ ಬೀಜವ ಬಿತ್ತಿದೆ