ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ವರುಷವೆರಡು ಕಳೆದಿದೆ... ಶಿಶಿರ ಶೃಂಗಾರದಲ್ಲಿ ವಸಂತ ವಿಹರಿಸಿದೆ...'

'ವರುಷವೆರಡು ಕಳೆದಿದೆ...
ಶಿಶಿರ ಶೃಂಗಾರದಲ್ಲಿ ವಸಂತ ವಿಹರಿಸಿದೆ...'

ಅದೊಂದು ರೀತಿಯಲ್ಲಿ ಬಯಸದೇ ಒಲಿದು ಬಂದ ಭಾಗ್ಯ !!!

ಸಚಿತ್ರ ಚೈತ್ರ!.....

ಯಾವ ಮೋಡಿಕಾರ ಬಂದ ಯಾವ ಕುಂಚವನ್ನು ತಂದ

ಬೋಳು ಬೋಳು ಮರ ಬರೀ ಅಸ್ಥಿಪಂಜರ|

ಬಣ್ಣ ಬಳಿದು ಜೀವ ತುಂಬಿ ಎಲ್ಲಿ ನೋಡೆ ಅಲ್ಲಿ ಹಸಿರು

ನಲಿದು ತೊಟ್ಟು ಬಣ್ಣ ಬಣ್ಣದ ಪೀತಾಂಬರ||

ಬೇಂದ್ರೆ ಅಜ್ಜ ನುಡಿದ ಮಾತು ಎಷ್ಟು ದಿಟ

ಹೂತ ಹುಣಸಿ ಒಂದು ಸಾಲದೆ ನಿನ್ನ ಭಾವ ಜಲ ಉಕ್ಕಲು|

ಅರಳ ಹೊರಟ ಮೊಲ್ಲೆ ಗಮಲು ಸಾಲದೆ

ಮರೆತುಹೋಗಿದ್ದ ಅರ್ಥ್ ಅವರ್‍.

ಮರೆತುಹೋಗಿದ್ದ ಅರ್ಥ್ ಅವರ್‍.

ಇಂದು ಬೆಳಿಗ್ಗೆ ಗೆಳೆಯ ಆನಂದ ಫೋನ್ ಮಾಡಿದ್ದ. ಹೊಸದಾಗಿ ಮನೆ ಕಟ್ಟಿಸಿದ್ದ. ಗೃಹಪ್ರವೇಶಕ್ಕೆ ಹೋಗಿರಲಿಲ್ಲ. ಇಂದು ಬಿಡುವಿದ್ದ ಕಾರಣ ಅವನ ಮನೆಗೆ ಬರುತ್ತೇನೆಂದು ಹೇಳಿದೆ. ಇಂದು ಮಧ್ಯಾಹ್ನ ಊಟ ಮುಗಿಸಿ ಗೆಳೆಯ ಆನಂದನನ್ನು ನೋಡಲು ಕೆಂಗೇರಿಗೆ ಹೋಗಿದ್ದೆ. ಬಹಳ ದಿನಗಳ ಬಳಿಕ ಭೇಟಿ ಆಗಿದ್ದರಿಂದ ಅವನ ಜೊತೆ ಸಿಕ್ಕಾಪಟ್ಟೆ ಮಾತು. ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಸಂಜೆ ಮನೆಗೆ ಬರುವ ಹೊತ್ತಿಗೆ ೬.೩೦ ಆಗಿತ್ತು. ಬಂದೊಡನೆ ಕೈಕಾಲು ತೊಳೆದುಕೊಂಡು ಅಮ್ಮ ಕೊಟ್ಟ ಕಾಫಿ ಕುಡಿಯುತ್ತಿದ್ದೆ.

ಅಷ್ಟರಲ್ಲಿ ಹರಿ ಫೋನ್ ಮಾಡಿದ. ಹರಿಯ ಮನೆಗೆ ಹೊರಟೆ. ಹರಿಯ ಮನೆಗೆ ಹೋಗುವ ಹೊತ್ತಿಗೆ ೭.೧೫ ಆಗಿತ್ತು. ಅವನು ನಾಳೆಯ ಕಾರ್ಯಕ್ರಮದ ಬಗ್ಗೆ ಕೆಲವರಿಗೆ ಮಾಹಿತಿಯನ್ನು ನೀಡುತ್ತಿದ್ದ. ಹರಿ ಜೊತೆ ಸುಮಾರು ೧ ಘಂಟೆ ಹೊತ್ತು ಮಾತನಾಡಿ ನಾಳೆ ಬೆಳಿಗ್ಗೆ ಭೇಟಿಯಾಗುತ್ತೇನೆಂದು ಹೇಳಿ ಮನೆಗೆ ಹೊರಟೆ.

ಒಂದೆ ನಾಡು ಒಂದು ಕುಲವು ಒಂದೆ ದೈವವು,

ಈ ಹಾಡು ನನ್ನ ಗಮನ ಸೆಳಿತು..
ಬಲು ಸೊಗಸಾದ ಹಾಡು.. ಒಗ್ಗಟ್ಟಿನ ಬಲ, ಒಂದುಗೂಡಿ ಪ್ರೀತಿಯಿಂದ ದುಡಿದರೆ ಎಷ್ಟೆಲ್ಲಾ ಚೆನ್ನ ಅಲ್ಲವೆ..
ಹಾಡು ಕೇಳಿ ಬಲು ಸೊಗಸಾಗಿದೆ... 
ಈ ಹಾಡಿನಲ್ಲಿ ನಾಡಿನ ಬಗ್ಗೆ ಕವಿಗಿರುವ ಒಲವನ್ನು ತೋರಿಸುತ್ತದೆ..  
 
"ಒಂದೆ ನಾಡು ಒಂದು ಕುಲವು ಒಂದೆ ದೈವವು,
ಒಮ್ಮನದಿಂದ್ದ ಎಲ್ಲರೂ ದುಡಿದರೆ ಜಗವನೆ ಗೆಲ್ಲುವೆವು.
 
ಬಡವ ಬಲ್ಲಿದನೆಂಬ ಆ ಭೇದ ದೇವರಿಗಿಲ್ಲ.
ಗಾಳಿ ಬೆಳಕು ನೀರು ನಮಗಾಗಿ ನೀಡಿಹನಲ್ಲ.. 
ಆತನ ಮಕ್ಕಳು ತಾನೆ ಈ ಸೃಷ್ಟಿಯ ಜೀವಿಗಳೆಲ್ಲ.
ಈ ನಿಜ ಅರಿತರೆ ಎಲ್ಲ ಕಷ್ಟವೆ ನಮಗಿಲ್ಲ
ಜಡತೆಯ  ನೀಗೋಣ.. ಏಳಿರಿ ದುಡಿಯೋಣ..
ಎಲ್ಲರು ಶ್ರಮಿಸಿ ನಮ್ಮಿನೆಲವನು ಸ್ವರ್ಗವ ಮಾಡೋಣ..
 
ಸತ್ಯ ಧರ್ಮಗಳೆರಡೂ ನಮ್ಮ ಬಾಳಿನ ಕಣ್ಣಾಗಿರಲಿ  
ಶಾಂತಿಯೇ ಉಸಿರಾಗಿರಲಿ ಸೇವೆಯೇ ಗುರಿಯಾಗಿರಲಿ
ಬದುಕಲಿ ಏನೆ ಬರಲಿ ಒಗ್ಗಟ್ಟಲಿ ನಂಬಿಕೆಯಿರಲಿ 
ಕನ್ನಡತನ ಬಿಡವೆಂಬ ಛಲವಿರಲಿ ಮನದಲ್ಲಿ
ಭೇದವ ಅಳಿಸೋಣ ಸ್ನೇಹವ ಬೆಳೆಸೋಣ.. 
ಗುಡಿಸಲಿದಲ್ಲ ಗುಡಿಯೇ ಎಂದು ಭಾವಿಸಿ ಬಾಳೋಣ..."

ಪಂಗುಂ ಲಂಘಯತೇ ಗಿರಿಂ|

ಇದು ಭಗವದ್ಗೀತೆಯಲ್ಲಿ ಬರುವ ಶ್ರೀ ಕೃಷ್ಣನಲ್ಲಿ ಅಡಗಿರುವ ಅಗಾಧ ಶಕ್ತಿಯನ್ನು ಸೂಚಿಸಿದರೆ, ಈ ಯುವತಿ ಇದನ್ನು ಸತ್ಯವನ್ನಾಗಿಸ ಹೊರಟ ದಿಟ್ಟೆ ಎನ್ನಿಸುತ್ತಿದೆ. ಪಕ್ಕದ ಚಿತ್ರದಲ್ಲಿರುವ ಶಾಂತ ಧಾರವಾಡದ ಸಮೀಪದವಳು. ಎರಡೂ ಕಾಲು ಇಲ್ಲದ ಅಂಗವಿಕಲೆ. ಈಕೆಗೆ ಇರುವ ಅಚಲ ಭಕ್ತಿ ಶ್ರದ್ಧೆಗಳಿಂದಾಗಿ ಇವಳನ್ನು ಈ ಅಸಾಮಾನ್ಯ ಗುರಿ ಸಾಧಿಸಿದಳು.

ಜೋಕಾಲಿ ಜೀಕೋಣ ಬನ್ನಿರೋ...

ನೆಲ ಬಿಟ್ಟು ಗಾಳಿಗೆ ಹಾರಲು ಎಲ್ಲರಿಗೂ ಅದೆಷ್ಟು ಇಷ್ಟ ಅಲ್ವಾ?ನನಗೂ ಅಷ್ಟೆ. ಚಿಕ್ಕಂದಿನಲ್ಲಂತೂ ಮುಗಿಲಿಗೆ ಏಣಿ ಹಾಕುವುದು ಹೇಗೆಂದು ಅದೆಷ್ಟು ರೀತಿ ಯೋಚಿಸಿದ್ದೆನೋ. ಹಕ್ಕಿ ರೆಕ್ಕೇನ ಕಟ್ಟಿಕೊಂಡರೆ ಹಾರಲಾದೀತಾ ಎಂದು ಪರೀಕ್ಷಿಸಬೇಕು ಅಂತ ಅದೊಮ್ಮೆ ನೂರಾರು ಹಕ್ಕಿ ಪುಕ್ಕಗಳನ್ನೂ ಸಂಗ್ರಹಿಸಿಟ್ಟಿದ್ದೆ.

ಹಳೆಯ ಮರವೂ.. ಆಧುನಿಕ ರಸ್ತೆಯೂ..

ಒಂದೂರು. ಆ ಊರಿನ ಮಧ್ಯದಲ್ಲೊಂದು ಹಳೆಯದಾದ ಒಂದು ಮರ ಇತ್ತು.. ಆ ಮರವು ದಾರಿಹೋಕರಿಗೆ ನೆರಳನ್ನೂ, ಸಿಹಿಯಾದ ಹಣ್ಣುಗಳನ್ನೂ ನೀಡುತ್ತಿತ್ತು.

ವಿರೋಧಿಯ ವರ್ಷ

ಚೈತ್ರದ ಚಿಗುರಿಗೆ
ವಸಂತದ ಬರುವಿಗೆ
ಅರಳುವ ಮನದಲಿ
ವಿರೋಧಿಯ ಹೆಸರು

ಸರ್ವರ ಗೆಲಿದು ಸರ್ವರ
ಧರಿಸಿದ ಸಂವತ್ಸರ
ತಿರುಗಲು ಶುರುವಾಯಿತು
ವಿರೋಧಿಯ ವರುಷ

ಹರಡುತ ಬೆಳಕನು, ಪರಿ
ಹರಿಸುತ ತೊಡಕನು, ಮಧು-
ವಿರೋಧಿಯು ಹರಸಲಿ
ಸರ್ವರ ವರುಷವಿಡಿ

ಎಲ್ಲರಿಗೂ ವಿರೋಧಿ ಸಂವತ್ಸರದ ಶುಭಾಶಯಗಳು’