ಒಂದೆ ನಾಡು ಒಂದು ಕುಲವು ಒಂದೆ ದೈವವು,

ಒಂದೆ ನಾಡು ಒಂದು ಕುಲವು ಒಂದೆ ದೈವವು,

ಈ ಹಾಡು ನನ್ನ ಗಮನ ಸೆಳಿತು..
ಬಲು ಸೊಗಸಾದ ಹಾಡು.. ಒಗ್ಗಟ್ಟಿನ ಬಲ, ಒಂದುಗೂಡಿ ಪ್ರೀತಿಯಿಂದ ದುಡಿದರೆ ಎಷ್ಟೆಲ್ಲಾ ಚೆನ್ನ ಅಲ್ಲವೆ..
ಹಾಡು ಕೇಳಿ ಬಲು ಸೊಗಸಾಗಿದೆ... 
ಈ ಹಾಡಿನಲ್ಲಿ ನಾಡಿನ ಬಗ್ಗೆ ಕವಿಗಿರುವ ಒಲವನ್ನು ತೋರಿಸುತ್ತದೆ..  
 
"ಒಂದೆ ನಾಡು ಒಂದು ಕುಲವು ಒಂದೆ ದೈವವು,
ಒಮ್ಮನದಿಂದ್ದ ಎಲ್ಲರೂ ದುಡಿದರೆ ಜಗವನೆ ಗೆಲ್ಲುವೆವು.
 
ಬಡವ ಬಲ್ಲಿದನೆಂಬ ಆ ಭೇದ ದೇವರಿಗಿಲ್ಲ.
ಗಾಳಿ ಬೆಳಕು ನೀರು ನಮಗಾಗಿ ನೀಡಿಹನಲ್ಲ.. 
ಆತನ ಮಕ್ಕಳು ತಾನೆ ಈ ಸೃಷ್ಟಿಯ ಜೀವಿಗಳೆಲ್ಲ.
ಈ ನಿಜ ಅರಿತರೆ ಎಲ್ಲ ಕಷ್ಟವೆ ನಮಗಿಲ್ಲ
ಜಡತೆಯ  ನೀಗೋಣ.. ಏಳಿರಿ ದುಡಿಯೋಣ..
ಎಲ್ಲರು ಶ್ರಮಿಸಿ ನಮ್ಮಿನೆಲವನು ಸ್ವರ್ಗವ ಮಾಡೋಣ..
 
ಸತ್ಯ ಧರ್ಮಗಳೆರಡೂ ನಮ್ಮ ಬಾಳಿನ ಕಣ್ಣಾಗಿರಲಿ  
ಶಾಂತಿಯೇ ಉಸಿರಾಗಿರಲಿ ಸೇವೆಯೇ ಗುರಿಯಾಗಿರಲಿ
ಬದುಕಲಿ ಏನೆ ಬರಲಿ ಒಗ್ಗಟ್ಟಲಿ ನಂಬಿಕೆಯಿರಲಿ 
ಕನ್ನಡತನ ಬಿಡವೆಂಬ ಛಲವಿರಲಿ ಮನದಲ್ಲಿ
ಭೇದವ ಅಳಿಸೋಣ ಸ್ನೇಹವ ಬೆಳೆಸೋಣ.. 
ಗುಡಿಸಲಿದಲ್ಲ ಗುಡಿಯೇ ಎಂದು ಭಾವಿಸಿ ಬಾಳೋಣ..."
 
Rating
No votes yet

Comments