ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾನೂರು ಹೆಗ್ಗಡಿತಿ to 'ning.com'!

(ಇವತ್ತು ನಿಂಗ್ ಡಾಟ್ ಕಾಮ್ ನಲ್ಲಿ ಬ್ಲಾಗಿಗರ ಕೂಟದ ಸ್ನೇಹಿತರ ರಿಕ್ವೆಸ್ಟುಗಳನ್ನು ಅಪ್ರೂವ್ ಮಾಡೋಣಾಂತ ಅಲ್ಲಿಗೆ ಹೋದಾಗ ನನಗನಿಸಿದ್ದನ್ನು ಅಲ್ಲಿ ಬರೆದಿದ್ದೆ. ಅಲ್ಲಿ ಅದು ಅಪ್ರೂವಲ್ಲಿಗೆ ಕಾಯುತ್ತಿದೆ, ಹೀಗಾಗಿ ಅದನ್ನೇ ಇಲ್ಲೂ ಕೂಡ ಪೋಸ್ಟ್ ಮಾಡುತ್ತಿರುವೆ. ನಡುವೆ ಇರುವ ಇಂಗ್ಲೀಷ್ ಕುರಿತು ಕ್ಷಮೆಯಿರಲಿ.

ಗುಟ್ಟು

ಮೊನ್ನೆ ಯುಗಾದಿ ಹಬ್ಬಕ್ಕೆ ಊರಿಗೆ ಹೋದಾಗ ಜಗುಲಿಯಲ್ಲಿ ಕಂಬಕ್ಕೆ ತಲೆಯಿಟ್ಟು ಮಲಗಿ ಕ್ಯಾಮೆರಾದಲ್ಲಿ ತೆಗೆದ ಫೋಟೋ ನೋಡ್ತಾ ಇದ್ದೆ.

ಇವ್ಳು ಅಲ್ಲೇ ಮೇಯಕ್ಕೆ ಹೋಗಿದ್ದವ್ಳು ಬಂದಳು, ಅದೇನ್ ಗುಟ್ಟು ಹೇಳ್ಬೇಕಿತ್ತೋ ಏನೋ... :)  

ಗುಟ್ಟು

ಇವ್ಳ ಹೆಸ್ರು ಲಕ್ಷ್ಮಿ, ನಾನು ಕರೆಯೋದು ಚೆಲ್ವಿ ಅಂತ. 

ಹಿಮಾಚಲ ಪರ್ಯಟನೆ - ಯಾಕೂ (ಝಾಕೂ) ದೇಗುಲ, ಶಿಮ್ಲಾ

 

ಶಿಮ್ಲಾ ನಗರದಲ್ಲಿನ ಪೂರ್ವಕ್ಕಿರುವ ಎತ್ತರದ ಬೆಟ್ಟ  - ಝಾಕೂ(ಯಾಕೂ). ಸಮುದ್ರ ಮಟ್ಟದಿಂದ, ಸುಮಾರು ೮೫೦೦ ಅಡಿಗಳ ಮೇಲೆ ಇರುವ ಈ ಬೆಟ್ಟದ ಮೇಲೆ, ಹನುಮಂತನ ದೇಗುಲವೊಂದಿದೆ.
ಈ ದೇಗುಲವನ್ನು ತಲುಪಲು, ಬೆಟ್ಟದ ಬುಡದಿಂದ ೨ ಕಿ.ಮೀ. ಕಡಿದಾದ ದಾರಿ ಇದ್ದು, ಇದನ್ನು ಹತ್ತಿ ತಲುಪಬಹುದು ಇಲ್ಲವೇ ಬೆಟ್ಟಗಳನ್ನು ಸುಲುಭವಾಗಿ ಹತ್ತುವ(೪-wheel drive) ಕಾರಿನಲ್ಲಿ  ತಲುಪಬಹುದು.

ಈ ಝಾಕು ಬೆಟ್ಟಕ್ಕೆ ಹನುಮಂತನು ಭೇಟಿ ಕೊಟ್ಟಿದ್ದನೆಂಬ ಪ್ರತೀತಿ. ಈ ದೇಗುಲದಲ್ಲಿ ಕೆಳಕಂಡ ಇತಿಹಾಸ(ನಂಬಿಕೆ)ಯನ್ನು ದಾಖಲಿಸಿದ್ದಾರೆ:

ರಾಮಾಯಣದಲ್ಲಿ, ಲಕ್ಷ್ಮಣನು ಇಂದ್ರಜಿತುವಿನ ಬಾಣದಿಂದ ಪ್ರಜ್ಞಾಹೀನನಾದಾಗ, ಹನುಮಂತನು ವಾನರ ಸಹಚರರೊಂದಿಗೆ ಹಿಮಾಲಯಕ್ಕೆ ಧಾವಿಸುತ್ತಾನೆ.
ಸಂಜೀವಿನಿಯನ್ನು ಹುಡುಕುತ್ತಾ ಹಿಮಾಲಯದಲ್ಲಿ ಸಂಚರಿಸುತ್ತಿರುವಾಗ, ಝಾಕೂ ಎಂಬ ಋಷಿಯು ಈ ಸ್ಥಳದಲ್ಲಿ ತಪಸ್ಸು ಮಾಡುತ್ತಿರುವುದು ಹನುಮನ ಕಣ್ಣಿಗೆ ಬೀಳುತ್ತದೆ.
ಆಗ ಹನುಮನು ಸಂಜೀವಿನಿ ಗಿಡಮೂಲಿಕೆಯ ಬಗ್ಗೆ ಹೆಚ್ಚು ತಿಳಿಯಲು, ಝಾಕೂ ಋಷಿಯ ಸಹಾಯವನ್ನು ಕೋರುತ್ತಾನೆ.
ಝಾಕೂ ಋಷಿಯು ಸಂಜೀವಿನಿ ಗಿಡಮೂಲಿಕೆಯ ಬಗ್ಗೆ ತಿಳಿಸಿ, ಅದು ದ್ರೋಣ ಪರ್ವತದಲ್ಲಿ ಸಿಗುವುದಾಗಿ ವಿವರಿಸುತ್ತಾನೆ.
’ಸಂಜೀವಿನಿ ಮೂಲಿಕೆ ಸಿಕ್ಕ ಮೇಲೆ, ಈ ಬೆಟ್ಟಕ್ಕೆ ಬಂದು, ತನ್ನನ್ನು ಭೇಟಿ ನೀಡಿ ಲಂಕೆಗೆ ಹೋಗು’ ಎಂದು ಹನುಮನ ಬಳಿ ವಚನ ತೆಗೆದುಕೊಳ್ಳುತ್ತಾನೆ.

ಬೆಲೆಯಿರದ ನಿಧಿ

ಹೊತ್ತಿಗೆಯೊಳಗಡೆ ಅಡಗಿದ ಅರಿವು
ಕಂಡವರ ಕೈ ಸೇರಿದ ಹಣವು
ಬೇಕಾದೊಡನೆ ಸಿಗದಂತಿರಲು
ಅದಲ್ಲ ಅರಿವು! ಅದಲ್ಲ ಹಣವು!

ಸಂಸ್ಕೃತ ಮೂಲ:

ಪುಸ್ತಕಸ್ತಾತು ಯಾ ವಿದ್ಯಾ ಪರಹಸ್ತಂ ಗತಂ ಧನಂ|
ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಂ||

-ಹಂಸಾನಂದಿ

ರೋಡ್ ರೋಮಿಯೋನ ರೋಡ್ ರಾಜ

ಕನ್ಫ್ಯೂಸ್ ಆದ್ರಾ? ಪರ್ವಾಗಿಲ್ಲ ಬಿಡಿ. ಈಗೆಲ್ಲಾ ತರಾವರಿ ಬೈಕ್ಗಳು ತಗೊಂಡು ಹಿಗ್ಗಾಮುಗ್ಗಾ ತಿರುಗ್ಸಿ, ಆಕ್ಸಿಡೆಂಟ್ ಮಾಡ್ಕೊಂಡ್ ಆಸ್ಪತ್ರೆಯಾಗ್ ಒಂದಪ ಮಲಗ್ಕಂಡ್ರೆನೇ ಅಂತೆ  "ರೋಡ್ ರೋಮಿಯೋ" ಅಂತ ಜನ ನಿಮ್ಮನ್ನ ಕರೆಯೋದು. ಈಗ ಈ ಬ್ಲಾಗ್ ಬರೆದದ್ದು ಅವನ್ ಬಗ್ಗೆ ಮಾತಾಡ್ಲಿಕ್ಕಲ್ಲ.

Section 49-O -- ಯಾರಿಗೂ ಮತಚಲಾಯಿಸುವುದಿಲ್ಲ ಎಂದು ಹೇಳುವ ಸಂವಿಧಾನಾತ್ಮಕ ಹಕ್ಕು

ಸಂಪದಿಗರಿಗೆಲ್ಲ ನಮಸ್ಕಾರ,

ಹೀಗೊಂದು ಮಾಹಿತಿ ಸಂವಿಧಾನದ Section 49-O ಬಗ್ಗೆ.

ನನ್ನ e-mail ಗೆ ಬಂದಿದ್ದು ಕನ್ನಡಕ್ಕೆ ಭಾಷಾಂತರಿಸಿದ್ದೇನೆ. ತಪ್ಪಿದ್ದಲ್ಲಿ ತಿದ್ದಬೇಕಾಗಿ ವಿನಂತಿ ಹಾಗು ಕ್ಷಮಿಸಿ.

ನಿಮಗಿದು ತಿಳಿದಿದೆಯೇ?

ಧಾರ್ಮಿಕ ನಂಬಿಕೆಗಳ ಚೌಕಟ್ಟಿನಲ್ಲಿ....

ಸುಮಾರು ಒಂದು ವಾರದಿಂದ ಸುದ್ದಿಯಲ್ಲಿರುವ ಮನುಷ್ಯ ವರುಣ್ ಗಾಂಧಿ. ಕಾರಣ ಸರಿಯಿಲ್ಲದಿರಬಹುದು, ಆದರೆ, ಅದು ಜನರ ಗಮನ ಸೆಳೆಯಲು, ಮತ್ತು ಜನಪ್ರೀಯತೆ ಗಳಿಸಲು ಸಾಧ್ಯವಾದದ್ದಂತೂ ಸುಳ್ಳಲ್ಲ. ಹೀಗೆ, ಜನರನ್ನು ಧಾರ್ಮಿಕವಾಗಿ ಒಡೆಯಲು ಮಾಡುವಪ್ರಯತ್ನಗಳಉ ತುಂಬಾ ಅಪಾಯಕಾರಿ ಮತ್ತು, ಅಸಹ್ಯಕರ. ಹಾಗೆಂದಮಾತ್ರಕ್ಕೆ, ಕೇವಲ ವರುಣ್ ಗಾಂಧಿಯೊಬ್ಬನೇ ಈ ರೀತಿಯ ರಾಜಕೀಯ ನಡೆಸುತ್ತಿದ್ದಾನೆಯೇ? ಬಿಹಾರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ತುಂಬಾ ಹತ್ತಿರದಿಂದ ನೋಡಿದಾಗ, ಭಯವುಂಟಾಗುತ್ತದ.

ಲಾಲೂ ಪ್ರಸಾದರ ಹೇಳಿಕೆಯನ್ನು ನಾವು ಗಮನಿಸಿ -"ನಮ್ಮ ದೇಶದಲ್ಲಿ ಬ್ರಾಹ್ಮಣರನ್ನು ದೇವರೆಂದು ಪರಿಗಣಿಸುತ್ತೇವೆ. ಅವರ ಆಶೀರ್ವಾದವಿಲ್ಲದೇ, ಯಾರೊಬ್ಬರೂ ರಾಜರಾಗಲೂ ಸಾಧ್ಯವಿಲ್ಲ". ಹಿಂದೊಮ್ಮೆ ಪಕ್ಕಾ ಬ್ರಾಹ್ಮಣ ವಿರೋಧಿಯಾಗಿದ್ದ ಲಾಲೂ, ಈಗ ಬ್ರಾಹ್ಮಣ ಹಿತರಕ್ಷಕ. (ದಿ. ೩೦/೦೩/೨೦೦೯ ವಿಜಯ ಕರ್ನಾಟಕ ದಿನಪತ್ರಿಕೆಯೋದಿದರೆ, ನಿಮಗಿದು ಇನ್ನೂ ವಿವರದಲ್ಲಿ ತಿಳಿದೀತು. ಪುಟ ೯). ಮೊನ್ನೆ ಮೊನ್ನೆಯವರೆಗೂ ಬ್ರಾಹ್ಮಣರ ಬಗ್ಗೆ ಅಸಹ್ಯಕರವಾಗಿ ಮಾತನಾಡುತ್ತಿದ್ದ ಪಾಸ್ವಾನ್ ಇಂದು ಲಾಲುವಿನ ಮಾತಿಗೆ ತಲೆಯಾಡಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲೂ ಮಾಯಾವತಿ ಬ್ರಾಹ್ಮಣರಿಗೆ ಮೀಸಲಾತಿಯ ಆಶ್ವಾಸನೆ ಕೊಡುತ್ತಿದ್ದಾಳೆ. ಇದೆಲ್ಲಾ ಯಾಕೆ? ಇದು ಭಾರತೀಯ ಸಂವಿಧಾನದ ಉಲ್ಲಂಘನೆಯಲ್ಲವೇ?? ಅಥವಾ, ಕೊನೆಯ ಪಕ್ಷ, ಇದು, ಒಡೆದು ಆಳುವ ನೀತಿಯಲ್ಲವೇ? ಇವರನ್ನು ಯಾರೋ ಏಕೆ ಪ್ರಶ್ನಿಸುವದಿಲ್ಲ?

ತಂದೆಯವರ ನೆನಪುಗಳು - ಭಾಗ ಒಂದು

ಮೊನ್ನೆ ಆಸು ಸಾರ್ ಬರೆದ ತೀರ್ಥರೂಪರ ಸ್ಮರಣೆ ಓದಿದಾಗ ನನಗೂ ನಮ್ಮ ತಂದೆಯವರನ್ನು ನೆನಪಿಸಿಕೊಂಡು, ಬರೆಯಬೇಕೆನ್ನಿಸಿತು. ಇದುವರೆಗೂ ಬರೀ ಮನಸ್ಸಿನಲ್ಲಿಯೇ ಅವರನ್ನು ನೆನಪಿಸಿಕೊಂಡು, ಅವರಿಗೆ ನನ್ನ ಧನ್ಯವಾದಗಳನ್ನು ಹೇಳುತ್ತಿದ್ದೆ, ಆದರೆ ಇಂದು ಅದನ್ನು ಬರೆಯಬೇಕೆನ್ನಿಸಿತು. ಕಾರಣರಾದ ಆಸು ಸಾರ್ ಗೂ ಧನ್ಯವಾದಗಳು.

ನಾವು ನಾಲ್ಕು ಜನ ಮಕ್ಕಳಲ್ಲಿ, ನಾನೇ ಕೊನೆಯವಳು. ಇಬ್ಬರು ಅಕ್ಕಂದಿರು ಮತ್ತು ಒಬ್ಬನೇ ಅಣ್ಣ ನನಗೆ. ಒಬ್ಬನೇ ಮಗನಾದ್ದರಿಂದ ಅವನು ನಮ್ಮ ತಾಯಿಯ ಕಣ್ಮಣಿಯಾಗಿದ್ದ, ಆದರೆ ಕೊನೆಯ ಮಗು ಎಂದೋ ಏನೋ ನನ್ನ ಮೇಲೆ ಅಪ್ಪನಿಗೆ ವಿಶೇಷ ಪ್ರೀತಿ ! ಇದು ನಾನು ಅಪ್ಪನಿಗಾಗಿ ಬರೆದ ಮೊದಲ ನೆನಪು. ಅವರು ನಮ್ಮನ್ನಗಲಿ ಆಗಲೇ ೧೫ ವರ್ಷಗಳಾಯಿತು. ಈ ಹದಿನೈದು ವರ್ಷಗಳಲ್ಲಿ, ನಾನವರನ್ನು ಅದೆಷ್ಟು ಲಕ್ಷಸಲ ನೆನಪಿಸಿಕೊಂಡಿದ್ದೇನೋ ನನಗೇ ಗೊತ್ತಿಲ್ಲ - ಮರೆತಿದ್ದರೆ ತಾನೇ ಎಂದೂ ಹೇಳಬಹುರು. ಈ ದಿನ ನಾನು ಏನಾಗಿದ್ದೇನೋ, ಅದಕ್ಕೆ, ನನ್ನ ಈ ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಅಪ್ಪನೇ ತಳಪಾಯ ಹಾಕಿದ್ದು.