ಕಾನೂರು ಹೆಗ್ಗಡಿತಿ to 'ning.com'!

ಕಾನೂರು ಹೆಗ್ಗಡಿತಿ to 'ning.com'!

(ಇವತ್ತು ನಿಂಗ್ ಡಾಟ್ ಕಾಮ್ ನಲ್ಲಿ ಬ್ಲಾಗಿಗರ ಕೂಟದ ಸ್ನೇಹಿತರ ರಿಕ್ವೆಸ್ಟುಗಳನ್ನು ಅಪ್ರೂವ್ ಮಾಡೋಣಾಂತ ಅಲ್ಲಿಗೆ ಹೋದಾಗ ನನಗನಿಸಿದ್ದನ್ನು ಅಲ್ಲಿ ಬರೆದಿದ್ದೆ. ಅಲ್ಲಿ ಅದು ಅಪ್ರೂವಲ್ಲಿಗೆ ಕಾಯುತ್ತಿದೆ, ಹೀಗಾಗಿ ಅದನ್ನೇ ಇಲ್ಲೂ ಕೂಡ ಪೋಸ್ಟ್ ಮಾಡುತ್ತಿರುವೆ. ನಡುವೆ ಇರುವ ಇಂಗ್ಲೀಷ್ ಕುರಿತು ಕ್ಷಮೆಯಿರಲಿ. ಈಗಷ್ಟೇ ಇಂಗ್ಲೀಷಿನಲ್ಲಿ ಒಂದು ಪುಟ ಏನೋ ಬರೆದದ್ದು, ಬರೇ ಇಂಗ್ಲೀಷ್ ಪದಗಳೇ ತಲೆ ಹೊಕ್ಕಿ ಕಾಡುತ್ತಿವೆ)

ಅದ್ಯಾಕೋ ಕೆಲಸ ಸಾಕೆನಿಸಿ ಎಲ್ಲವನ್ನೂ ನಾಳೆಗೆ ಮುಂದೂಡಿ ಕಾನೂರು ಹೆಗ್ಗಡಿತಿ ಮತ್ತೊಮ್ಮೆ ಓದುತ್ತ ಕುಳಿತಿದ್ದೆ. ನಡುರಾತ್ರಿ ನಾಳೆ ಆಗಿಯೇ ಹೋಯಿತು. ನಡುವಿನ ಕೆಲವು ಪುಟಗಳು ಖಾಲಿ ಖಾಲಿ! ಅಂಕಿತದವರಿಗೆ ಮೊದಲು ಪುಸ್ತಕ ವಾಪಸ್ ಕೊಟ್ಟು ಬೇರೆ ತಗೊಂಡು ಬರಬೇಕು! ಮುಂದೆ ಓದಲು ಮನಸ್ಸು ಬಾರದು, ಬಂದು ning.com ನಲ್ಲಿ ಎಷ್ಟೋ ದಿನಗಳಿಂದ ನನ್ನನ್ನು friends listಗೆ ಹಾಕಿಕೊಂಡಿದ್ದ ಸ್ನೇಹಿತರನ್ನು add ಮಾಡಿಕೊಳ್ಳುತ್ತ ಮತ್ತಷ್ಟು ಪ್ರೊಫೈಲುಗಳಿಗೂ ಭೇಟಿ ಕೊಡುತ್ತ ಸ್ವಲ್ಪ ಹೊತ್ತು ಕಳೆದೆ.

ಒಂದಾನೊಂದು ಕಾಲದಲ್ಲಿ ನಿಂಗ್.ಕಾಮ್ ಬೀಟ ಟೆಸ್ಟರುಗಳಾಗಿ ರಿಜೆಸ್ಟರ್ ಮಾಡಿಕೊಂಡಾಗಲೂ ನಿಂಗ್ ಇಷ್ಟೊಂದು ಉಪಯೋಗಿಸಿರಲಿಲ್ಲ :-)
ಪರವಾಗಿಲ್ಲ, ಮ್ಯಾಶಪ್ಸ್ ಗಳಿಗೆ ಸೋಶಿಯಲ್ ನೆಟ್ವರ್ಕಿಂಗ್ angle ಕೊಟ್ಟು ತುಂಬ ಚೆನ್ನಾಗಿ ಮಾಡಿದ್ದಾರೆ! ಬಹುಶಃ ಇಂಥದ್ದೊಂದು ಪ್ರಾಕ್ಟಿಕಲ್ ಅಪ್ಲಿಕೇಶನ್ನಿಗೆ ಬಹು ಉಪಯುಕ್ತ. ಆದರೆ ತಂತ್ರಜ್ಞನಾಗಿರುವುದರ ಸೈಡ್ ಎಫೆಕ್ಟೋ ಏನೋ ಯಾವುದೋ ಅಮೇರಿಕೆಯ ಕಂಪೆನಿಗೆ ನಮ್ಮದೆಲ್ಲ ಡೇಟ ಧಾರೆ ಎರೆದುಕೊಡುತ್ತಿದ್ದೇವಲ್ಲದೆ ಪ್ರೈವೇಟ್ ಇನ್ಫರ್ಮೇಶನ್ನು ಅಗಿದು ಅಗಿದು ಬಳಸಿಕೊಳ್ಳುವಂತೆ ಅನುವು ಕೂಡ ಮಾಡಿಕೊಡುತ್ತಿದ್ದೇವೆ ಎಂದು ಅನಿಸದೆ ಇರದು. ಜೊತೆಗೆ ಜೀವನಾದ್ಯಂತ ಡಿಪೆಂಡೆನ್ಸಿ? Wordpress, Blogspotನಲ್ಲಿ atleast ಡೇಟ export ಮಾಡೋ option ಕೊಟ್ಟಿರ್ತಾರೆ, XMLಗೆ ಹಾಕಿ ಅದನ್ನು ಪುನಃ ಬಳಸುವಲ್ಲಿ ಸಾಮಾನ್ಯ ಬಳಕೆದಾರರಿಗೆ ಎಷ್ಟು ತೊಂದರೆ ಕೊಡಬೇಕೋ ಅಷ್ಟು ಕೊಟ್ಟು. ಆದರೆ ಇಲ್ಲಿ export ಕೂಡ ಮಾಡಲಿಕ್ಕಾಗಲಿಕ್ಕಿಲ್ಲ ಅನ್ಸತ್ತೆ. ಎಲ್ಲೂ ಆಪ್ಶನ್ ಕಾಣುತ್ತಿಲ್ಲ.

ಆದರೆ mashups ತುಂಬ ಇಷ್ಟ ಆಯ್ತು. ಹೆಚ್ಚು ಬಗ್ಸ್ ಇಲ್ಲ. ಬೇಗ ಲೋಡ್ ಕೂಡ ಆಗತ್ತೆ. ಟ್ವಿಟ್ಟರಿನಲ್ಲಿ ನಿಮ್ಮದೂ ಅಕೌಂಟಿದ್ದರೆ ಟ್ವಿಟ್ಟರ್ ಫೀಡ್ ಇಲ್ಲಿ ಹಾಕಿಕೊಳ್ಳಬಹುದು. apps ಸರ್ಚ್ ಮಾಡುತ್ತ "twitter" ಎಂದು ಹುಡುಕಿ. ನಿಮ್ಮ ನಿಮ್ಮ ಬ್ಲಾಗುಗಳ RSS ಫೀಡ್ ಕೂಡ ಹಾಕಿಕೊಳ್ಳಬಹುದು. ಜೊತೆಗೆ RSS ಫೀಡುಗಳ ಮ್ಯಾಶಪ್ ಕೂಡ ರೆಡಿ ಮಾಡಬಹುದು. ಮಲ್ಟಿನ್ಯಾಶನಲ್ಲುಗಳು ಮನಸ್ಸು ಮಾಡಿದರೆ, ವೆಂಚರ್ ಹೂಡುವವರು ಧೈರ್ಯ ಮಾಡಿದರೆ ಏನೆಲ್ಲ ಸಾಧ್ಯವುಂಟು, ಅಲ್ಲವ?

ನಿಂಗ್ ಹುಟ್ಟುಹಾಕಿದವರಲ್ಲೊಬ್ಬರು ಯಾರು ಗೊತ್ತ? ಮೊಸಾಇಕ್ (ಮೊಟ್ಟ ಮೊದಲ ಬ್ರೌಸರುಗಳಲ್ಲೊಂದು) ಎಂಬ ಬ್ರೌಸರನ್ನು ಬರೆದು ನಂತರ ನೆಟ್ಸ್ಕೇಪ್ ಕಂಪೆನಿಯನ್ನು ಹುಟ್ಟುಹಾಕಿದ ಮಾರ್ಕ್ ಆಂಡರ್ಸನ್. ಏಂಜೆಲ್ ಗ್ರೂಪ್ ಸಹಾಯದಿಂದ ಮೊದಲ ವರ್ಷ ೪೪ ಮಿಲಿಯನ್, ಎರಡನೆಯ ವರ್ಷ ೬೦ ಮಿಲಿಯನ್ ಹಣ ಹೂಡಿದ್ದಾನೆ ಈ ಕಂಪೆನೀಲಿ. ಹೇಗೆ ದುಡ್ಡು ವಾಪಸ್ ತರುತ್ತಾನೋ ಕಾದು ನೋಡಬೇಕು. ಆದರೆ ನಿಂಗ್ ಪಿರಮಿಡ್ ಸ್ಕಾಮ್ ಬಳಸುತ್ತಿದೆ ಅಂತ ದೊಡ್ಡ ಅಪವಾದವುಂಟು ಕೂಡ. ಇದನ್ನೆಲ್ಲ ಕಳೆದು ನಿಜವಾಗಲೂ ಫೇಸ್ ಬುಕ್ ಹಾಗು ಮೈಸ್ಪೇಸಿಗೆ ಕಾಂಪಿಟೆಶನ್ ಒಡ್ಡುತ್ತಾರ ಕಾದು ನೋಡಬೇಕು!

Rating
No votes yet

Comments