ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತಾತನವರ ನೆನಪು

ಅದೊಂದು ದಿನ, ತುಂಬ ಶೆಖೆ. ಬೇಸಿಗೆ ರಜೆಗೆಂದು ನಾವು ಅಜ್ಜಿಯ ಮನೆಯಲ್ಲಿದ್ದೆವು. ನಾವೆಲ್ಲರೂ ಕುಳಿತುಕೊಳ್ಳಲೆಂದು ರೆಡ್ ಆಕ್ಸೈಡ್ ನೆಲದ ಮೇಲೆ ಚಾಪೆ ಹಾಸಿದಳು ಅಕ್ಕ. ಚಾಪೆಯ ಮೇಲೆ ಎಗರಿ ಚಕ್ಳಮಕ್ಳ ಹಾಕಿ ಕೂತು ಇನ್ನೇನು ಮಾಡುವುದು ಎಂದು ಮನಸ್ಸಿಗೆ ಬರುವ ಮೊದಲೇ ಒಂದು ಗೊದ್ದ ಕಂಡಿತ್ತು. ನನಗೆ ಅರಿವೇ ಇಲ್ಲದಂತೆ ಅದನ್ನು ಬೆರಳುಗಳಲ್ಲೆತ್ತುಕೊಂದು ಚಾಪೆಯ ಮತ್ತೊಂದು ಬದಿಗೆ ಬಿಟ್ಟೆ. ಆ ಗೊದ್ದ ಮತ್ತೆ ತಾ ಬಂದ ದಾರಿಯಲ್ಲೇ ವಾಪಸ್ಸು ಚಾಪೆ ಹತ್ತುತ್ತಾ ಬಂತು. ಇನ್ನೇನು ಚಾಪೆ ದಾಟಿ ಹೋಗುವುದಿತ್ತು, ಮತ್ತೆ ಹಿಡಿದು ಇನ್ನೊಂದು ಬದಿಗೆ ಬಿಟ್ಟೆ. ಗೊದ್ದ ತಾ ಬಂದ ದಾರಿಯನ್ನೇ ಹಿಡಿದು, ಚಲಬಿಡದ ತ್ರಿವಿಕ್ರಮನಂತೆ ಮುಂದೆ ನಡೆಯಿತು.

ನನ್ನ ಗಮನವೆಲ್ಲ ಆ ಗೊದ್ದದ ನಡಿಗೆಯಲ್ಲಿ ಮುಳುಗಿಹೋಗಿತ್ತು. ಸುತ್ತಲಿನ ಜಗತ್ತಿನ ಪರಿವೆಯೇ ಇಲ್ಲದಂತೆ ಅದನ್ನೇ ನೋಡುತ್ತ ಕುಳಿತಿದ್ದ ನಾನು ಯಾರೋ ಗದರಿದ್ದು ಕೇಳಿ ಬೆಚ್ಚಿಬಿದ್ದೆ.

ತಲೆ ಎತ್ತಿ ನೋಡಿದಾಗ ನನಗೆ ನಂಬಲಾಗಲಿಲ್ಲ. ನಮ್ಮ ತಾತನವರು ಎಂದೂ ಗದರಿದ್ದೇ ಇಲ್ಲ.
"ಏಯ್, ಗೊದ್ದಕ್ಕೆ ಯಾಕೋ ಸುಮ್ಮನೆ ಹಿಂಸೆ ಕೊಡುತ್ತೀಯ? ಅದರ ಪಾಡಿಗೆ ಬಿಡು ಅದನ್ನು" ಎಂದು ನನ್ನ ಆಟ ನೋಡಿ ಗದರಿದ್ದರು ತಾತ. ಅವರು ಗದರಿದ್ದ ದನಿ ಅಪ್ಪನಂತೆ ಬಿರುಸಾಗಿರಲಿಲ್ಲ. ತೀರ ಗಟ್ಟಿಯಾಗಿ ಕೂಡ ಇರಲಿಲ್ಲ. ಆದರೆ ಅದ್ಯಾಕೋ ಅದರ ಹರಿತ ಮೊನಚಾಗಿತ್ತು. ಅಪ್ಪ ಗದರಿದರೂ ಜಗ್ಗದ ನನಗೆ ಅಳು ಬರುವಂತಾಗಿತ್ತು ಆ ದಿನ.

ಇದು ಮೊದಲನೇ ಬ್ಲಾಗ್, ನನ್ನನ್ನಾರ್ಶೀವಧಿಸಿ.

ಇದು ನನ್ನ ಮೊದಲ ಬ್ಲಾಗ್. ಇಲ್ಲಿ ನನ್ನದೇ ಹೆಸರಿನ ಇನ್ನೊಬ್ಬರೂ ಇದ್ದಾರೆ.
ಅವರು ಗಣೇಶ್ ಆದರೆ ನಾನು ‘ಗಣೇಶ’.

ಸಂಪದದಲ್ಲಿ ಬರೆಯುವ ಉತ್ತಮ ಗುಣದ ಯುವಕರಿಗೂ, ಸುಂದರ ಯುವತಿಯರಿಗೂ ನಮಸ್ಕಾರ. ನಿಮ್ಮ ಭವ್ಯ ಸ್ವಾಗತಕ್ಕಾಗಿ ನಾನು ಬ್ಲಾಗಿಲಲ್ಲಿ ನಿಂತಿರುವೆನು.

ನನ್ನ ಬಗ್ಗೆ ಹೇಳಬೇಕೆಂದರೆ:-

ವಿಶ್ವಮಾನವರ್ಯಾರು?

ಕನ್ನಡದಲ್ಲಿ ಮಾತಾಡಿ, ಪರಭಾಷಿಗರನ್ನು ಕನ್ನಡ ಕಲಿಯುವಂತೆ ಒತ್ತಾಯಿಸಿ, ಕನ್ನಡಾಭಿಮಾನಿಯಾಗಿ ಅಂತೆಲ್ಲ ಇಲ್ಲಿ ಜನ ಅಂತಾರೆ. ಕನ್ನಡದ ಹುಡುಗಿ ಹಿಂದಿಯಲ್ಲಿ ಹಾಡಿದ್ರೆ ನಾವ್ಯಾಕೆ ಓಟು ಹಾಕ್ಬೇಕು ಅಂತ್ಲೂ ಕೇಳ್ತಾರೆ. ಕನ್ನಡದಲ್ಲೇ ರಾಷ್ಟ್ರಗೀತೆ ಇರಬೇಕು ಎನ್ನುತ್ತಾರೆ. ಇವ್ರೆ ಭಾರತದಲ್ಲಿ ಭಾರತೀಯತೆ ಇಲ್ಲ ಎಂದು ಹಲುಬುತ್ತಾರೆ.

ಜಿ-ಮೈಲ್ ಹಾಗೂ ಕನ್ನಡ

ಸ್ನೇಹಿತರೇ,

ಈಗಾಗಲೇ.. ಈ ವಿಚಾರದಲ್ಲಿ (ಜಿ-ಮೈಲ್ ಹಾಗೂ ಕನ್ನಡ) ನಾನು ಬರೆದ ಲೇಖನ ಈ ಕೆಳಗಿನ ಕೊಂಡಿಯಲ್ಲಿದೆ..

http://sampada.net/blog/smsathyacharana/06/03/2009/17645

ಇದನ್ನು ಮತ್ತೆ "Update" ಮಾಡಿದ್ದೇನೆ.. ಈ ಬ್ಲಾಗ್ ಮತ್ತೆ ಬರೆದ ಉದ್ದೇಶ..

ದೇವರೆಂದರೆ ನನ್ನ ಪ್ರಕಾರ ..............................

ಹೌದು ಒಮ್ಮೊಮ್ಮೆ ನಾನೇಕೆ ಇಷ್ಟೊಂದು ದೇವರ ಬಗ್ಗೆ ಧರ್ಮದ ಬಗ್ಗೆ ಭಾವುಕಳಾಗುತ್ತೇನೆ.
ನನಗೆ ಒಳಿತಾದರೂ ಕೆಡುಕಾದರೂ ದೇವರನ್ನೇ ಕಾರಣ ಮಾಡುತ್ತೇನೆ ?
ಹೀಗೆ ಹಲವು ಪ್ರಶ್ನೆಗಳನ್ನು ಹಾಕಿಕೊಂಡಾಗಲೆಲ್ಲಾ ನನಗೆ ನೆನಪಾಗುವುದು ನನ್ನದೇ ಹಿನ್ನೆಲೆ. ನನ್ನ ಜೀವನ.
ಜೀವನದ ಹಲವು ಕ್ಷಣಗಳಲ್ಲಿ ಜೀವನವೆ ಮುಗಿಯುತ್ತದೆ ಎಂದುಕೊಂಡಾಗಲೆಲ್ಲಾ

ಭಾರತೀಯರೇ ಇಲ್ಲದ ಭಾರತ!!

ಅಮೆರಿಕನ್ ಪ್ರಜೆ ಒಬ್ಬ ಭಾರತಕ್ಕೆ ಭೇಟಿ ನೀಡಿ ತನ್ನ ದೇಶಕ್ಕೆ ವಾಪಸಾದ, ಅಲ್ಲಿ ಅವನ ಭಾರತೀಯ ಗೆಳೆಯ, ಅಮೆರಿಕನ್ ಪ್ರಜೆಯನ್ನು ಕೇಳಿದ,

"ನನ್ನ ದೇಶದ ಬಗ್ಗೆ ನಿನಗೆ ಏನನ್ನಿಸಿತು?"

ಅಮೆರಿಕನ್ ಹೇಳಿದ,
"ಇಂಡಿಯಾದ ಭವ್ಯ ನಾಗರಿಕತೆ, ಅಲ್ಲಿನ ಜನರ ಪ್ರೀತಿ, ಅಮೋಘ ಇತಿಹಾಸ, ಶಿಲ್ಪಿ ಕಲೆ, ಅಲ್ಲಿನ ನೈಸರ್ಗಿಕ ಸಂಪತ್ತು,ವಾವ್! ಎಲ್ಲವು ಅದ್ಭುತ"

ಕನ್ನಡ ಗಣಕ ಪ್ರಪಂಚವೆಂಬ ಈಜುಗೊಳ

ಈ ನನ್ನ ಬರಹ, ಬೆಳಕು ಕಂಡರೆ, ಅದು ಬ್ಲಾಗ್ ರೂಪದಲ್ಲೇ ಇರಬೇಕು. ಸ್ವಾನುಭವಗಳಿಗೂ, ಸ್ವಾನಿಸಿಕೆಗಳಿಗೂ ಬ್ಲಾಗೇ ಉತ್ತಮವಲ್ಲವೇ.
ಸಾಕಷ್ಟು ವಿಷಯಗಳನ್ನು ಹೇಳೋಣವೆಂದಿರುಕೊಂಡಿರುವುದರಿಂದ, ವಿಚಾರಗಳು ಕಲಸುಮೇಲೋಗರವಾಗುವ ಸಾಧ್ಯತೆಯಿದೆ. ನಾನಂತೂ ವೃತ್ತಿಪರ ಬರಹಗಾರನಲ್ಲ.

ಇದು ಯಾವ ಸ್ಠಳ??

ಇದು ಕಳೆದ ಅಕ್ಟೋಬರ್ ನಲ್ಲಿ ನಾನು ಪ್ರವಾಸಕ್ಕೆ ಹೋದಾಗ ತೆಗೆದ ಚಿತ್ರ...
ಐತಿಹಾಸಿಕ ಮಹತ್ವವುಳ್ಳ ಸ್ಥಳವಿದು...

ಇದು ಯಾವ ಸ್ಥಳವೆಂದು ಹೇಳಬಲ್ಲಿರಾ??

ನನ್ನಿ
ದೃಶ್ಯ ಪ್ರದೀಪ :)

ಜೀ ಮೇಲ್ ನಲ್ಲಿ ನೇರವಾಗಿ ಕನ್ನಡ

ಜೀ ಮೇಲ್ ನಲ್ಲಿ ಈಗ ನೇರವಾಗಿ ಕನ್ನಡ ಬರೆಯಬಹುದು. ಭಾರತದಲ್ಲಿನ ಎಲ್ಲ ಬಳಕೆದಾರರಿಗೆ
ಇದು ಈಗಾಗಲೇ ಕಾಣಿಸುತ್ತಿರಬೇಕಂತೆ. ನಿಮಗೆ ಕಾಣಿಸದಿದ್ದರೆ 'settings' ಗೆ ಹೋಗಿ
'Language' ನಲ್ಲಿ 'Show all language options' ಕ್ಲಿಕ್ ಮಾಡಿ. Enable
transliteration ಮೇಲೆ ಕ್ಲಿಕ್ ಮಾಡಿ setting ಗಳನ್ನು  ಸೇವ್ ಮಾಡಿದರೆ ಆಯಿತು.