ದೇವರೆಂದರೆ ನನ್ನ ಪ್ರಕಾರ ..............................

ದೇವರೆಂದರೆ ನನ್ನ ಪ್ರಕಾರ ..............................

ಬರಹ

ಹೌದು ಒಮ್ಮೊಮ್ಮೆ ನಾನೇಕೆ ಇಷ್ಟೊಂದು ದೇವರ ಬಗ್ಗೆ ಧರ್ಮದ ಬಗ್ಗೆ ಭಾವುಕಳಾಗುತ್ತೇನೆ.
ನನಗೆ ಒಳಿತಾದರೂ ಕೆಡುಕಾದರೂ ದೇವರನ್ನೇ ಕಾರಣ ಮಾಡುತ್ತೇನೆ ?
ಹೀಗೆ ಹಲವು ಪ್ರಶ್ನೆಗಳನ್ನು ಹಾಕಿಕೊಂಡಾಗಲೆಲ್ಲಾ ನನಗೆ ನೆನಪಾಗುವುದು ನನ್ನದೇ ಹಿನ್ನೆಲೆ. ನನ್ನ ಜೀವನ.
ಜೀವನದ ಹಲವು ಕ್ಷಣಗಳಲ್ಲಿ ಜೀವನವೆ ಮುಗಿಯುತ್ತದೆ ಎಂದುಕೊಂಡಾಗಲೆಲ್ಲಾ
"ಅಯ್ಯೋ ಪೆದ್ದಿ ಇದು ಅಂತ್ಯವಲ್ಲ ಆರಂಭ" ಎಂದು ದೇವರೇ ಬಂದು ಹೇಳಿದಂತೆ ಭಾಸವಾಗುತ್ತದೆ
ಆಷ್ಟಕ್ಕೂ ಈ ದೇವರು ಯಾರು ಹೇಗೆ ಇದ್ದಾನೆ ಎಂದು ನಾನೆ ಎಷ್ಟೋ ಬಾರಿ ಯೋಚಿಸಿದ್ದೇನೆ
ನಾನು ಗಣೇಶನನ್ನು ನಂಬಿ ಮೊರೆಹೊಕ್ಕರೆ ನನ್ನ ಮನಸಿಗೆ ಗಣೇಶನಾಗಿಯೂ
ದುರ್ಗಿಯನ್ನು ನೆನೆದು ಪೂಜಿಸಿದರೆ ಮನಸಿಗೆ ದುರ್ಗಿಯಾಗಿಯೂ ದರ್ಶನ ನೀಡುವ ಈ ಶಕ್ತಿ ಅಷ್ಟಕ್ಕೂ ಎಲ್ಲಿಂದ ಬಂದಿದೆ ?
ಅಂತ: ಶಕ್ತಿ ಎನ್ನಲೋ ಬಾಹ್ಯ ಶಕ್ತಿ ಎನ್ನಲೋ
ಯಾವುದೋ ಒಂದು ಶಕ್ತಿ ಆದರೆ ಪ್ರಪಂಚದಲ್ಲಿ ನಮಗೆ ಮೀರಿದ ಶಕ್ತಿ ಒಂದಿದೆ ಎನ್ನುವುದಂತೂ ಖಂಡಿತಾ ಅದು ಬೇರೆಯವರಿಗೆ ಹೇಗೋ ಏನೋ
ಆದರೆ ನನ್ನಂಥವರ ಪಾಲಿಗಂತೂ ನಿಜ.
ನಾನು ಮೊರೆಹೊಕ್ಕಾಗಲೆಲ್ಲಾ ಆಶ್ಚರ್ಯವಾಗುವಂತೆ ಫಲಗಳು ಲಭಿಸಿವೆ ಹಾಗೆಂದು ನಾನು ದೇವರನ್ನು ನೆನೆದುಕೊಂಡು ಕೈಕಟ್ಟಿ ಕೂತಿರಲಿಲ್ಲ
ನನ್ನ ಪ್ರಯತ್ನದ ಜೊತೆ ದೈವ ಬಲವೂ ಸೇರಿದ್ದು ಕಾಕತಾಳೀಯವಂತೂ ಅಲ್ಲವೇ ಅಲ್ಲ
ಪತಿರಾಯರು ರಾಘವೇಂದ್ರರ ಪರಮ ಭಕ್ತರಾಗಿದ್ದಕ್ಕೂ ಅವರಿಗೆ ಆಗುವ ಒಳ್ಳೇಯದೆಲ್ಲಾ ಗುರುವಾರವೇ ಆಗುವುದಕ್ಕೂ ಏನಾದರೂ ಸಂಬಂಧವಿದೆಯೇ
ಎಲ್ಲವೂ ಕಾಕತಾಳೀಯವಾಗುವುದಿಲ್ಲ ಅಲ್ಲವೇ?
ಯಾವಾಗಲೋ ಒಮ್ಮೆ ಮಗುವಿಗೆ ಹುಷಾರಿಲ್ಲವೆಂದು ದೇವಿಗೆ ಹರಸಿಕೊಂಡು ಹೋಗಲಾಗದೆ ಆ ವಿಷಯವನ್ನು ಮರೆತೇ ಬಿಟ್ಟಾಗ
ವಿಜಯದಶಮಿಯಂದು ದೇವಿ ಕನಸಿನಲ್ಲಿ ಕೋಪಗೊಂಡು ನಿಂತಿದ್ದು. ಅದಲ್ಲದೆ ಅದೇ ದೇವಿ ಮತ್ತೆ ಆ ವಿಷಯ ಗೊತ್ತೇ ಇಲ್ಲದ ನಮ್ಮ ಸೋದರತ್ತೆಯವರ ಕನಸಿನಲ್ಲಿಯೂ ಬಂದು
ನಮ್ಮ ಕಣಕಟ್ಟೆಯ ಪ್ರಯಾಣದ ಬಗ್ಗೆ ನೆನಪಿಸಿದ್ದು ಸಹಾ ಕಾಕತಾಳೀಯವಾಗಲೂ ಸಾಧ್ಯವೇ ಇಲ್ಲ ಅಲ್ಲವೇ?
ಶನಿ ದೆಸೆ ಇದ್ದಾಗ ಬಂದೊದಗಿದ ಬೆಟ್ಟದಂತಹ ಕಷ್ಟ ಅಶ್ವಥ್ ವೃಕ್ಷವನ್ನು ಬಿಡದೆ ಸುತ್ತಿದಾಗ ಮಂಜಿನಂತೆ ಕರಗಿಹೋಗಿದ್ದು ಕಾಕತಾಳಿಯವಲ್ಲ ಅಲ್ಲವೇ
ಹೀಗೆ ಜೀವನದ ಹಲವು ಮಜಲುಗಳಲ್ಲಿ ತಾಯಿಯಂತೆ ನನ್ನನ್ನು ಕಾಪಾಡಿದ ಕಾಪಾಡುತ್ತಿರುವ ದೇವರನ್ನು ಕಳ್ಳ, ಕೊಲೆಗಾರ, ಸುಲಿಗೆಕಾರ , ಇಲ್ಲವೇ ಇಲ್ಲ
ಎಂದಾಗ ಮನಸಿಗೆ ನೋವಾಗುವುದು ಖಂಡಿತಾ ಅಲ್ಲವೇ?
ನಾಸ್ತಿಕವಾದಿಗಳನ್ನು ಆಸ್ತಿಕರು ಎಂದೂ ಖಂಡಿಸಿಲ್ಲ . ಅವರ ನಂಬಿಕೆ ಅವರದು ಆದರೆ ಅನಾವಶ್ಯಕವಾಗಿ ಆಸ್ತಿಕರನ್ನು ಅವರ ನಂಬಿಕೆಗಳನ್ನು ಹಿಡಿದು ಹಿಪ್ಪೆ ಮಾಡಿ
ವಿಕೃತಾನಂದ ಪಡೆಯುವ ಬುದ್ದಿಯವರಿಗೇನನ್ನಬೇಕು?