ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗಣಿತ ಆಸಕ್ತರಿಗೆ ಮತ್ತು ಅಲ್ಗಾರಿದಮ್ ವಿನ್ಯಾಸಕಾರರಿಗೆ

೨‌೧೦೦೦ ಇದರ ಅಂಖ್ಯೆಗಳ ಮೊತ್ತ ಎಷ್ಟು?
೧೦೦! ಇದರ ಅಂಖ್ಯೆಗಳ ಮೊತ್ತ ಎಷ್ಟು?

ಇಂತಹ ಸಮಸ್ಯೆಗಳ ಬಗ್ಗೆ ತಿಳಿಯಬೇಕೆ? ಹಾಗಾದರೆ ಪ್ರಾಜೆಕ್ಟ್ ಓಯ್ಲೆರ್ (EULER) ತಾಣಕ್ಕೆ ಭೇಟಿ ಕೊಡಿ.

ಹೊಸತು ವರುಷ , ತರಲಿ ಹರುಷ

ಬಯಲ ಮರಗಳ ತುಂಬ
ಜೀವಸೆಲೆಯುಸಿರು
ವಸಂತ ತಂದಿಹ ನೋಡು
ಮರಮರದಿ ಹಸಿರು ||

ಎಲ್ಲೆಲ್ಲೂ ಹೊಸ ಹರುಷ
ಉತ್ಸಾಹ ಕಿರಣ
ನವ ವರುಷ ಹಾದಿಯಲಿ
ನಗೆ ಬಗೆಯ ಸ್ಫುರಣ ||

ಸಂತಸವನುಕ್ಕಿಸುವ
ಸಂತರೆದೆಯಲ್ಲೂ
ಉತ್ಸಾಹವಿರಿಸಿ
ಕಹಿ ಬೇವ ಚಿಗುರಲ್ಲೂ ||

ವಸಂತನದೆ ಹೆಸರಿಹುದು
ಚಿಗುರೆಲೆಯ ತುಂಬ
ಪ್ರಕೃತಿಯ ಒಡಲಿನಲಿ
ಅವನದ್ದೆ ಬಿಂಬ ||

ನವ ಜೀವ ನವ ಭಾವ
ಸಿರಿ ಬಯಲಿನಲ್ಲಿ

ಸಂಪದ ಬಳಗಕ್ಕೆ ಯುಗಾದಿ ಹಬ್ಬದ ಶುಭಾಷಯಗಳು..

ಹೊಸ ವರುಷ ಬರುತಿದೆ..
ಹೊಸ ಹರುಷವ ತರಲಿ
ಹೊಸ ಕನಸುಗಳ ತರಲಿ
ಎಲ್ಲರ ಕನಸು ನನಸಾಗಲಿ ಎಂದು ಹಾರೈಸುವ...

ಬೆವು ಬೆಲ್ಲದ ಸವಿಯುಂಡು
ಸವಿಯಾದ ಮಾತನಾಡಿ
ತಮ್ಮ ಪಾಲಿಗೆ ಬಂದ ಸುಖ ದುಃಖಗಳನ್ನು ಸಮಾನಾಗಿ
ಸ್ವೀಕರಿಸುವ ಶಕ್ತಿ ಕೊಡಲಿ ಎಂದು ಹಾರೈಸುವ...

ನಾಡಿನಲ್ಲಿ ಹೊತ್ತಿ ಹರಿಯುತ್ತಿರುವ ಆಶಾಂತಿಯ
ನಂದಿಸುವ ಹೊಸ ಆಶಾಕಿರಣದ ಅಲೆಯು ಮೂಡಿಬರಲಿ

ಯುಗಾದಿ ಗೀತ

ಅಂತ್ಯವಾಯ್ತು
ಆದಿ ಬಂತು
ಓಹೋ! ಹರುಷ
ಹೊಸ ವರುಷ
ಹೊಸ ವರುಷ
ಯಾರಲ್ಲಿ ? ಯಾರಲ್ಲಿ ?
ಯಾರಿಹರು ಅಲ್ಲಿ

ಭಾರ್ಗವ ರಾಜನೋ
ಅಂಗಾರಕ ಸಚಿವನೋ
ಕಾಯುವವನು ಸೋಮನೋ
ಕಾಣೆನೋ ಕಾಣೆನೋ
ಬಾ ! ಎಂದೊರಲಿ
ಉರುಳುರುಳಿ ಬಿದ್ದೆನೋ

ಧಿಗ್ಗನೆದ್ದು ಕುಳಿತು
ಧಿಂಕಿಟ ಧೀಂಕಿಟ
ತಂ ಕಿಟ ತೋಂ ಕಿಟ
ನೋಡು ಕಾಲಾಟ
ಸತ್ಯ ದೇವ
ಸಸ್ಯ ದೇವ
ತನ್ನಿರೈ ತನ್ನಿರೈ
ವೃದ್ಧಿ
ಸಂವೃದ್ಧಿ

ಉಗಾದಿ: ಮಾವ Vs ಅಳಿಯ !

ಪರಿಸರ ಪ್ರೇಮಿಯಾದ ಮಾವ ವರ್ಷದ ಮೊದಲ ದಿನವನ್ನು ಸವಿಯಲು ಕಾದಿದ್ದಾರೆ. ಅದೇ ವೇಳೆಗೆ ಅಳಿಯ ಮನೆಗೆ ಬಂದಿಳಿಯುತ್ತಾನೆ. ಮಾವನಿಗೆ ವರ್ಷದ ಮೊದಲ ದಿನದ ಸಡಗರವಾದರೆ ಅಳಿಯನಿಗೆ ವರ್ಷದಲ್ಲಿ ಇದೂ ಒಂದು ದಿನ ಅಷ್ಟೆ. ಶಿಸ್ತಿನ ಜೀವನದ ಮಾವ, ಅಶಿಶ್ತಿನ ಅಳಿಯ ಈ ಕವಿತೆಯ ವಿಷಯ. ಇಷ್ಟಕ್ಕೂ ಈ ಮಾವನಿಗೆ ಅಳಿಯ ವಸಂತಕುಮಾರನ ಮೇಲೆ ಏಕಿಷ್ಟು ಕೋಪ? ನೀವೇ ಓದಿ...

ಮನವ ಕಸಿವ ಗುರು

ಕಲಿಸುವವರು ಹಲವರಿಹರು
ಕಲಿಯುವರ ಹಣವ ಕಸಿವರು;
ಬಲು ವಿರಳವದು ದೊರಕುವುದು
ಕಲಿವರ ಮನವ ಕಸಿವ ಗುರು!

ಸಂಸ್ಕೃತ ಮೂಲ:

ಗುರವೋ ಬಹವಃ ಸಂತಿ ಶಿಷ್ಯವಿತ್ತಾಪಹಾರಕಾಃ |
ದುರ್ಲಭಃ ಸ ಗುರುರ್ಲೋಕೇ ಶಿಷ್ಯಚಿತ್ತಾಪಹಾರಕಃ ||

-ಹಂಸಾನಂದಿ

ಸೋಮಾರಿಯೊಬ್ಬನ ಯುಗಾದಿಯ ಶುಭಾಶಯಗಳು

ಯುಗಯುಗಾದಿ ಕಳೆದರೂ

ಯುಗಾದಿ ಮರಳಿ ಬರುತಿದೆ


ಎಂಬ ಮಾತು ಕೇಳಿ ನಾನು

ಮತ್ತೆ ಹೊದ್ದು ಮಲಗಿದೆ

 

ಸಂಪದಿಗ ಮಿತ್ರರೆಲ್ಲರಿಗೆ ಸೋಮಾರಿಯೊಬ್ಬನ ಯುಗಾದಿಯ ಶುಭಾಕಾಂಕ್ಷೆಗಳು..

ಯುಗಾದಿ

ಯುಗಾದಿಯನ್ನು ನೀವು ಹೇಗೆ ಆಚರಿಸುತ್ತೀರ? ಹಿಂದಿನ ವರ್ಷ ಹೇಗೆ ಆಚರಿಸಿದ್ದಿರಿ? ಈ ವರ್ಷ ಹೇಗೆ ಆಚರಿಸುವ ಯೋಚನೆ ಮಾಡಿದ್ದೀರಿ?