ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯುಗಾದಿಯ ಶುಭಾಶಯಗಳು!!!!!

ಎಲ್ಲಾ ಸಂಪದಿಗರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು!!!

ವಿರೋಧಿ ನಾಮ ಸಂವತ್ಸರ ಎಲ್ಲರಿಗೂ ಶುಭವನ್ನುಂಟುಮಾಡಲಿ ಅಂತ ಹಾರೈಸುತ್ತೇನೆ.

ನಾಳೆ ಎಲ್ರೂ (ಎಟ್ ಲೀಸ್ಟ್ ಕೆಲವರಾದ್ರೂ) ಹಬ್ಬದ ತಯಾರಿಯಲ್ಲಿರಬಹುದು/ ಗಡಿಬಿಡಿಯಲ್ಲಿರಬಹುದು,

ಅದಕ್ಕೆ ಮುಂಚಿತವಾಗೇ ಶುಭಾಶಯ ಹೇಳ್ತಾ ಇದ್ದೀನಿ.

:-) :-) :-)

[ಸಂಪದ ಕಾರ್ಯಕ್ರಮ] ಕನ್ನಡದಲ್ಲಿ ತಂತ್ರಜ್ಞಾನ, ವಿಜ್ಞಾನ, ಕೃಷಿ ಬರವಣಿಗೆ - ಚರ್ಚೆ

ಸಂಪದ
ಹಾಗು
ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ

ವತಿಯಿಂದ...

ಚರ್ಚೆ:
ಅಂತರ್ಜಾಲ, ಕನ್ನಡ ಹಾಗು ತಂತ್ರಜ್ಞಾನ:
ತಂತ್ರಾಂಶ ಹಾಗು ಸಂಬಂಧಪಟ್ಟ ತ್ರಂತ್ರಜ್ಞಾನದ ಕುರಿತು ಬರವಣಿಗೆ, ಸ್ವತಂತ್ರ ತಂತ್ರಾಂಶ ಹಾಗು ತಂತ್ರಜ್ಞಾನದ ಕುರಿತು ಅರಿವು ಮೂಡಿಸುವ ಕುರಿತು.

ತಂತ್ರಜ್ಞಾನ, ಅಂತರ್ಜಾಲದ ಸದುಪಯೋಗ, ಹೇಗೆ?
ಕೃಷಿ, ವಿಜ್ಞಾನ, ತಂತ್ರಜ್ಞಾನ ಕುರಿತ ಬರವಣಿಗೆ,

ನಮ್ಮೊಂದಿಗೆ, ಆ ದಿನ: ನಾಗೇಶ ಹೆಗಡೆ, ಎನ್ ಎ ಎಂ ಇಸ್ಮಾಯಿಲ್ ಹಾಗು ಸಂಪದ ತಂತ್ರಜ್ಞರ ತಂಡ.

10.30 AM - 12.30 PM, 2.00 PM - 4.00 PM
ಭಾನುವಾರ, 29 ಮಾರ್ಚ್, 2009

ಸ್ಥಳ:
ದಿ ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ,

ಸ್ವಗತ

ರಾಮ ಕೃಷ್ಣರು ಬೋಧಿಸಿದರು ನಿತ್ಯ
ಧರ್ಮ ನ್ಯಾಯ ನೀತಿ ಕರ್ಮ ಗೀತೆ
ಬುದ್ಧ ಉಪದೇಶಿಸಿದ ಅಹಿಂಸೆ ಸತ್ಯ
ಗಾಂಧೀಜಿಯವರದು ಸತ್ಯಾಗ್ರಹ ಸಂಹಿತೆ

ಬಸವಣ್ಣ ಅಲ್ಲಮ ಅಕ್ಕ ಶರಣರು
ಕಾಯಕದ ಮಂತ್ರ ಜಪಿಸಿದರು
ಹರಿದಾಸ ಪುರಂಧರ ಕನಕರು
ಭಕ್ತಿ ಮಾರ್ಗದಿ ಮುನ್ನಡೆದರು

ಮನುಕುಲ ಮುನ್ನಡೆದಿದೆ ಅದೇ ಹಾದಿಯಲಿ
ಕಲಿಯಲಿಲ್ಲ ಏನೂ ರಕ್ತ ಸಿಕ್ತ ಇತಿಹಾಸದಲಿ

ಮನುಷ್ಯನ ಪಾದ ನೆಕ್ಕಿದ್ದೇ ನೆಪ; ಪುನುಗು ಸೇರಿದ್ದು ಯಮನ ಪಾದಕ್ಕೆ!

ನಾನು ಈಗ ಇಷ್ಟು ಮಾತ್ರ ಹೇಳಬಲ್ಲೆ. ಕಾರಡಗಿಯ ಜನಗಳು ಮಾನವಂತರಲ್ಲ. ಈ ಘಟನೆಗೆ ಸಂಬಂಧಪಟ್ಟವರನ್ನೆಲ್ಲ ಪೊಲೀಸರು ಒದ್ದು ಒಳ ಹಾಕಬೇಕು; ಅರಣ್ಯ ಇಲಾಖೆ ತನ್ನ ಕಾನೂನಿನ ಅನ್ವಯ ಪ್ರಕರಣ ದಾಖಲಿಸಿ ಇವರಿಗೆಲ್ಲ ಅತಿ ಉಗ್ರ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಅವರು ಹೇಗೆ ಆ ಮೂಕ ಪ್ರಾಣಿಯ ಜೀವ ತೆಗೆಯುವಲ್ಲಿ ನಿರ್ದಯವಾಗಿ ನಡೆದುಕೊಂಡರೋ, ಅದಕ್ಕಿಂತಲೂ ಹೃದಯಹೀನವಾಗಿ ಉಭಯ ಇಲಾಖೆಗಳು ನಡೆದು ತೋರಿಸಬೇಕು. ಆ ರಾಕ್ಷಸರಿಗೆ ‘ಮನುಷ್ಯರು’ ಎಂಬ ಕಾರಣಕ್ಕೆ ಯಾವ ವಿನಾಯಿತಿಯನ್ನೂ ಇಲ್ಲಿ ತೋರಿಸಬಾರದು.

ನನ್ನ ಮನಸ್ಸು ತೀವ್ರ ವಿಚಲಿತಗೊಂಡು ಕ್ಷೋಭೆಗೆ ಒಳಗಾಗಿತ್ತು. ಕೋಪ ಹಾಗು ದು:ಖ ಎರಡೂ ಏಕಕಾಲಕ್ಕೆ ಉಮ್ಮಳಿಸಿ ಬರುತ್ತಿದ್ದವು. ಪೊಲೀಸರು, ಅರಣ್ಯ ಇಲಾಖೆ ಸಾಲದ್ದಕ್ಕೆ ಆ ಊರಿನ ಹಿರಿಯರು ಎಲ್ಲ ವಿಘ್ನಸಂತೋಷಿಗಳು ಎಂದು ಬುದ್ಧಿ ಹಳಿಯುತ್ತಿತ್ತು. ಅವರ ಈ ಪರಿಯ ನಿರ್ಲಿಪ್ತತೆ, ನಿಷ್ಕ್ರೀಯತೆ ಹಾಗು ಕರ್ತವ್ಯದ ಪರ ಉದಾಸೀನತೆ ಈ ಕ್ಷಣಕ್ಕೂ ನನ್ನ ರಕ್ತವನ್ನು ಕುದಿಸುತ್ತಿದೆ. ಮೂಕ ಪಶುವಿನ ಬದುಕನ್ನು ಇಷ್ಟು ಚಿಲ್ಲರೆ ಮಾಡಿದ್ದಕ್ಕೆ ನನಗೆ ಜುಗುಪ್ಸೆ ಮೂಡಿದೆ.

ಹಕ್ಕಿ ಹಾಡು ಚಿಲಿಪಿಲಿ ರಾಗ

ಕಳೆದ ಶನಿವಾರ ಬಸವನಗುಡಿಯ ಬ್ಯೂಗಲ್ ರಾಕ್ ಉದ್ಯಾನವನಕ್ಕೆ ಹೋಗಿದ್ದೆವು.
ಉದ್ಯಾನವನದಲ್ಲಿ ಸಂಜೆ ಹಕ್ಕಿಗಳ ಚಿಲಿಪಿಲಿ ಕೇಳಲು ಸುಮಧುರವಾಗಿತ್ತು. :)

ಆಗ ನನಗೆ ನೆನಪಾದ ಹಾಡು,
’ಹಕ್ಕಿ ಹಾಡು ಚಿಲಿಪಿಲಿ ರಾಗ
ಹರಿವ ನೀರ ಕಲರವ ...(ಮುಂದೆ ನೆನಪಿಲ್ಲ) :(
ಏನೇನೋ ಭಾವನೆ...’

ಈ ಹಾಡನ್ನು ಪಿ.ಸುಶೀಲಾ ಅವರು ತುಂಬಾ ಚೆನ್ನಾಗಿ ಹಾಡಿದ್ದಾರೆ.

ಜಾತ್ರೆ

ಸ೦ಪದಿಗರೆಲ್ಲರಿಗೆ ನಮಸ್ಕಾರ...ಬ್ಲಾಗ್ ನಲ್ಲಿ ಓ೦ಕಾರ..ಬಯಸುವೆ ನಿಮ್ಮ ಪ್ರೀತಿ ಆದರ..
ಮ೦ಗಳದಲ್ಲಿ ಬೆಳಕು ಕ೦ಡ ನನ್ನದೊ೦ದು ಕವನ - ಜಾತ್ರೆಯ ಸಡಗರ..ಪ್ರತಿಕ್ರಿಯೆಗಳ
ಗುಣಾಕಾರ, ಲೆಕ್ಕಾಚಾರ....ಆಗಲಿ ನ೦ತರ..
ಜಾತ್ರೆ...
--------
ಮಕ್ಕಳ ಮಡದಿಯ ಮಾತಿಗೆ ಮಣಿದು
ಊರಿನ ಜಾತ್ರೆಗೆ ಹೊರಟೆವು ಅ೦ದು..
ಎಳೆದಾಡುತ್ತಿರುವ ಎತ್ತರದ ತೇರು..
ನಮ್ಮೂರ ಗು೦ಡನದೇ ಕಾರುಬಾರು..

ಚರ್ಚೆಗಳನ್ನು ಗೆಲ್ಲಲು ಸುಲಭ ಸೂತ್ರಗಳು

ಚರ್ಚೆ ಮಾಡಿ ಗೆಲ್ಲುವುದು ಬಹಳ ಕಷ್ಟ. ಅದರಲ್ಲೂ ನಾವು ನಂಬಿರುವ (ಆದರೆ ತಪ್ಪಾಗಿರುವ)
ವಿಶಯಳಲ್ಲಂತೂ ಇನ್ನು ಕಷ್ಟ. ಆದರೆ ಎಲ್ಲ ಕಷ್ಟಗಳಿಗೂ ಮದ್ದು ಇರುವ ಹಾಗೆ ಇದಕ್ಕೂ ಇದೆ.
ಚರ್ಚೆ ಮಾಡುವಾಗ ಈ ಕೆಳಗಿನ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಆಯಿತು ಅಷ್ಟೇ!

ಕುಂಭಕರ್ಣನ ಡೈರಿಯಿಂದ

ಲೋ ಪಚ್ಚು ನೀನು ಮೂಲತಃ ಯಾವ ಊರಿನವನೋ ??ಬೆಳಿಗ್ಗೆ ಎದ್ದವನೇ ಪ್ರಶಾಂತನಿಗೆ ಕೇಳಿದೆ . ಯಾಕೋ ಏನಾಯ್ತು ?? ಎಂದ. ಏನಿಲ್ಲ ಗುರುವಾರ ರಾತ್ರಿ ನಿದ್ರೆಯಲ್ಲಿ ನೀನು ಕೂಚಿಪುಡಿ ಮಾಡ್ತಾ ಇದ್ದೆ ಆಗ ನೀನು ಆಂಧ್ರದವ ಎಂದುಕೊಂಡೆ .

technical termsಗೆ ಕನ್ನಡದಲ್ಲಿ ಪದಗಳು!

ಇಂಗ್ಲೀಷಿನ technical terms ಗೆ  ಕನ್ನಡದಲ್ಲಿ ಪದಗಳು ಗೊತ್ತಿದ್ರೆ , ನಿಮಗೆ ಹೊಳೆದರೆ ದಯವಿಟ್ಟು ಇಲ್ಲಿ ಬರೆಯಿರಿ.

ತಿಳಿ ಗನ್ನಡ / ಅಚ್ಚಗನ್ನಡ ಮತ್ತು ಸಕ್ಕದ ಮಿಶ್ರಿತವಾದ ಪದಗಳೂ ಓಕೆ .

ಕೆಲವು ಪದಗಳ ಜೊತೆ ನಾನು ಮೊದಲು ಮಾಡ್ತಾ ಇದ್ದೀನಿ.


೧. ಮಿಂಚಂಚೆ / ಮಿನ್ನೋಲೆ -- E mail. ಇಲ್ಲಿ ನೋಡಿ